• English
  • Login / Register

Hyundai Creta Electricನ ಇಂಟೀರಿಯರ್ ಅನಾವರಣ, ಪ್ರಮುಖ ಫೀಚರ್‌ಗಳ ಬಹಿರಂಗ

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಗಾಗಿ anonymous ಮೂಲಕ ಜನವರಿ 07, 2025 08:04 pm ರಂದು ಪ್ರಕಟಿಸಲಾಗಿದೆ

  • 16 Views
  • ಕಾಮೆಂಟ್‌ ಅನ್ನು ಬರೆಯಿರಿ

ಸಂಪೂರ್ಣ ಎಲೆಕ್ಟ್ರಿಕ್ ಆಗಿರುವ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕೆಲವು ಮಾರ್ಪಾಡುಗಳೊಂದಿಗೆ ರೆಗುಲರ್‌ ಕ್ರೆಟಾ ಮೊಡೆಲ್‌ನಂತೆಯೇ ಅದೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಎರವಲು ಪಡೆಯುತ್ತದೆ

Hyundai Creta Electric Interior Revealed

  • ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಇಂಧನ-ಚಾಲಿತ ಮೊಡೆಲ್‌ನಂತೆಯೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ.

  • ಇದು ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್, ಕಪ್ಪು ಮತ್ತು ಬಿಳಿ ಕ್ಯಾಬಿನ್ ಥೀಮ್ ಜೊತೆಗೆ ನೇರಳೆ ಆಂಬಿಯೆಂಟ್ ಲೈಟಿಂಗ್ ಅನ್ನು ಪಡೆಯುತ್ತದೆ.

  • ಟಾಪ್ ಫೀಚರ್‌ಗಳಲ್ಲಿ 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು, ಡಿಜಿಟಲ್ ಕೀ, ಬೋಸ್ ಸೌಂಡ್ ಸಿಸ್ಟಮ್ ಮತ್ತು ಪನರೋಮಿಕ್‌ ಸನ್‌ರೂಫ್ ಸೇರಿವೆ.

  • ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಲೆವೆಲ್-2 ಎಡಿಎಎಸ್ ಮೂಲಕ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ.

  • ಕ್ರೆಟಾ ಎಲೆಕ್ಟ್ರಿಕ್ ಸ್ಟ್ಯಾಂಡರ್ಡ್ ರೇಂಜ್ ಮತ್ತು ಲಾಂಗ್ ರೇಂಜ್ ಆವೃತ್ತಿಗಳೊಂದಿಗೆ, ಕ್ರಮವಾಗಿ 135 ಪಿಎಸ್ ಮತ್ತು 171 ಪಿಎಸ್ ಇ-ಮೋಟರ್‌ಗಳನ್ನು ಪಡೆಯುತ್ತದೆ.

  • ಜನವರಿ 17 ರಂದು ಆಟೋ ಎಕ್ಸ್‌ಪೋ 2025 ರಲ್ಲಿ ಬೆಲೆಗಳನ್ನು ಘೋಷಿಸಲಾಗುವುದು.

 ಹ್ಯುಂಡೈ ಇಂಡಿಯಾವು ಜನವರಿ 17 ರಂದು ಆಟೋ ಎಕ್ಸ್‌ಪೋ 2025 ನಲ್ಲಿ ಬಿಡುಗಡೆ ಮಾಡುವ ಮೊದಲು ಮುಂಬರುವ ಕ್ರೆಟಾ ಎಲೆಕ್ಟ್ರಿಕ್‌ನ ಇಂಟೀರಿಯರ್‌ನ ಫಸ್ಟ್‌ ಲುಕ್‌ ಅನ್ನು ನೀಡಿದೆ. ಇಂಟೀರಿಯರ್‌ನ ಅನಾವರಣದ ಜೊತೆಗೆ, ಹ್ಯುಂಡೈ ಇಂಡಿಯಾ ಹೆಚ್ಚು ನಿರೀಕ್ಷಿತ ಎಲೆಕ್ಟ್ರಿಕ್ ಎಸ್‌ಯುವಿಯ ಉನ್ನತ ಫೀಚರ್‌ಗಳು ಮತ್ತು ಮೋಟಾರ್‌ನ ಅಂಕಿ-ಅಂಶಗಳನ್ನು ಸಹ ಬಹಿರಂಗಪಡಿಸಿದೆ. ನೀವು ಇದನ್ನು ನಿಮ್ಮ ಮನೆಯ ಸದಸ್ಯರನ್ನಾಗಿ ಮಾಡಲು ಬಯಸುವುದಾದದರೆ, ಹುಂಡೈ ಇಂಡಿಯಾವು ಹ್ಯುಂಡೈ ಕ್ರೆಟಾ ಇವಿಗಾಗಿ ಬುಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದೆ, ಮತ್ತು ಇದು ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ.

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್: ಇಂಟೀರಿಯರ್‌ನ ವಿವರಗಳು

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ನ ಡ್ಯಾಶ್‌ಬೋರ್ಡ್ ವಿನ್ಯಾಸವು ICE-ಚಾಲಿತ ಮೊಡೆಲ್‌ನಲ್ಲಿ ನೀಡಲಾದ ಡ್ಯಾಶ್‌ಬೋರ್ಡ್‌ ವಿನ್ಯಾಸಕ್ಕೆ ಹೆಚ್ಚು ಕಡಿಮೆ ಹೋಲುತ್ತದೆ. ಇನ್ಫೋಟೈನ್‌ಮೆಂಟ್ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಪ್ರಮುಖ ಫಂಕ್ಷನ್‌ಗಳನ್ನು ನಿಯಂತ್ರಿಸಲು ಡ್ಯಾಶ್‌ಬೋರ್ಡ್ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು ಮತ್ತು ಫಿಸಿಕಲ್ ನಾಬ್‌ಗಳೊಂದಿಗೆ ಆಧುನಿಕವಾಗಿ ಕಾಣುವುದರಿಂದ ಇದು ಉತ್ತಮ ವಿಷಯವಾಗಿದೆ. ಆದರೆ, ಇದು ಎಲೆಕ್ಟ್ರಿಕ್ ಆವೃತ್ತಿಯಾಗಿರುವುದರಿಂದ ಅದನ್ನು ಪ್ರತ್ಯೇಕಿಸಲು ಕೆಲವು ವ್ಯತ್ಯಾಸಗಳಿವೆ.

Hyundai Creta Electric Interior Revealed, Top Features Announced

ಸ್ಪಷ್ಟ ವ್ಯತ್ಯಾಸವೆಂದರೆ ಸ್ಟೀರಿಂಗ್ ಕಾಲಮ್‌ನಲ್ಲಿ ಇರಿಸಲಾದ ಡ್ರೈವ್ ಸೆಲೆಕ್ಟರ್‌ನೊಂದಿಗೆ ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್ ಆಗಿದೆ. ಸೆಂಟರ್ ಕನ್ಸೋಲ್‌ನ ಕೆಳಗಿನ ಭಾಗವನ್ನು ಮರುವಿನ್ಯಾಸಗೊಳಿಸಲಾಗಿದೆ ಮತ್ತು ಈಗ ಡ್ರೈವ್ ಮೋಡ್ ಸೆಲೆಕ್ಟರ್, ಕಪ್ ಹೋಲ್ಡರ್‌ಗಳು ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ಗಾಗಿ ಸ್ವಿಚ್ ಅನ್ನು ಹೊಂದಿದೆ. ಕೊನೆಯದಾಗಿ, ಎಲೆಕ್ಟ್ರಿಕ್ ಕ್ರೆಟಾದಲ್ಲಿನ ಡ್ಯಾಶ್‌ಬೋರ್ಡ್ ಅನ್ನು ಕಪ್ಪು ಮತ್ತು ಬಿಳಿ ಬಣ್ಣದ ಥೀಮ್‌ನೊಂದಿಗೆ ನೇರಳೆ ಆಂಬಿಯೆಂಟ್ ಲೈಟಿಂಗ್‌ನೊಂದಿಗೆ ಫಿನಿಶ್‌ ಮಾಡಲಾಗಿದೆ, ಇದು ICE ಮೊಡೆಲ್‌ನ ಬೂದು ಮತ್ತು ಬಿಳಿ ಬಣ್ಣ ಮತ್ತು ಅಂಬರ್ ಆಂಬಿಯೆಂಟ್ ಲೈಟಿಂಗ್‌ಗೆ ವಿರುದ್ಧವಾಗಿದೆ.

ಹ್ಯುಂಡೈ ಕ್ರೆಟಾ ಇಲೆಕ್ಟ್ರಿಕ್: ಟಾಪ್‌ ಫೀಚರ್‌ಗಳ ವಿವರಗಳು 

Hyundai Creta Electric Infotainment

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ನ ಫೀಚರ್‌ಗಳ ಪಟ್ಟಿಯು ಹೆಚ್ಚು-ಕಡಿಮೆ ICE-ಚಾಲಿತ ಕಾರಿಗೆ ಹೋಲುತ್ತದೆ. ಹೈಲೈಟ್‌ಗಳಲ್ಲಿ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ ಮತ್ತು ಟಚ್‌ಸ್ಕ್ರೀನ್‌ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು  ಒಳಗೊಂಡಿರುವ 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಕನೆಕ್ಟೆಡ್‌ ಕಾರ್ ಟೆಕ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್‌, ಚಾಲಿತ ಡ್ರೈವರ್ ಸೀಟ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್‌ ಮತ್ತು ಆಂಬಿಯೆಂಟ್‌ ಲೈಟಿಂಗ್‌ ಅನ್ನು ಒಳಗೊಂಡಿದೆ.

Hyundai Creta Electric Digital Key

ಈ ಎಲ್ಲದರ ಜೊತೆಗೆ, ಕ್ರೆಟಾ ಎಲೆಕ್ಟ್ರಿಕ್ ಕಾರಿನಲ್ಲಿ ಪೇಮೆಂಟ್‌ನಂತಹ ಕೆಲವು ಹೊಸ ಅನುಕೂಲಕರ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ, ಅಲ್ಲಿ ನೀವು ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ನ ಸಹಾಯದಿಂದ ವಾಹನದ ಚಾರ್ಜಿಂಗ್‌ಗೆ ಪೇ ಮಾಡಬಹುದು. ಇದು ಡಿಜಿಟಲ್ ಕೀಲಿಯೊಂದಿಗೆ ಬರುತ್ತದೆ, ಅಲ್ಲಿ ನೀವು ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ವಾಹನವನ್ನು ಲಾಕ್ ಮಾಡಬಹುದು ಅಥವಾ ಅನ್‌ಲಾಕ್ ಮಾಡಬಹುದು.

Hyundai Creta Electric Safety Features

ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮೂಲಕ ಕಾಳಜಿ ವಹಿಸಲಾಗುತ್ತದೆ. ಇದರ ಜೊತೆಯಲ್ಲಿ, ಇದು ಲೆವೆಲ್-2 ADAS ನೊಂದಿಗೆ ಸಹ ಬರುತ್ತದೆ, ಇದು ರೇಡಾರ್ ಅನ್ನು ಬಳಸಿಕೊಂಡು ಮುಂದೆ ಇರುವ ವಾಹನದಿಂದ ಆಟೋಮ್ಯಾಟಿಕ್‌ ಆಗಿ ನಿಧಾನವಾಗುವುದರೊಂದಿಗೆ ಲಿಂಕ್ ಮಾಡಲಾದ ರಿಜನರೇಟಿವ್‌ ಬ್ರೇಕಿಂಗ್ ಅನ್ನು ಸಹ ಪಡೆಯುತ್ತದೆ.

ಇದರ ಬಗ್ಗೆ ಇನ್ನಷ್ಟು ಓದಲು: ಆಟೋ ಎಕ್ಸ್‌ಪೋದ ಮುಂಚಿತವಾಗಿಯೇ Hyundai Creta EV ಅನಾವರಣ; ವಿನ್ಯಾಸ, ಬ್ಯಾಟರಿ ಪ್ಯಾಕ್ ಮತ್ತು ರೇಂಜ್‌ ಬಹಿರಂಗ

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್: ಮೋಟಾರ್‌ನ ಅಂಕಿ-ಅಂಶಗಳು ಬಹಿರಂಗ 

Hyundai Creta Electric Powertrain

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಅನ್ನು 42 ಕಿ.ವ್ಯಾಟ್‌ ಮತ್ತು 51.4 ಕಿ.ವ್ಯಾಟ್‌ ಪ್ಯಾಕ್‌ಗಳ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ನೀಡಲಾಗುವುದು. ಮೊದಲನೆಯದು, 390 ಕಿಮೀ ARAI-ರೇಟೆಡ್ ರೇಂಜ್‌ ಅನ್ನು ಹೊಂದಿರುವ 42 ಕಿ.ವ್ಯಾಟ್‌ ಪ್ಯಾಕ್ ಮತ್ತು ಏರಡನೆಯದು, 473 ಕಿಮೀ ಕ್ಲೈಮ್ ಮಾಡಬಹುದಾದ ದೊಡ್ಡದಾದ 51.4 ಕಿ.ವ್ಯಾಟ್‌ ಪ್ಯಾಕ್ ಆಗಿದೆ. ವಿವರವಾದ ವಿಶೇಷಣಗಳು ಇಲ್ಲಿವೆ:

 

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಸ್ಟ್ಯಾಂಡರ್ಡ್ ರೇಂಜ್

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಲಾಂಗ್ ರೇಂಜ್

ಪವರ್‌ (PS)

135 ಪಿಎಸ್‌

171 ಪಿಎಸ್‌

ಬ್ಯಾಟರಿ ಪ್ಯಾಕ್‌

42 ಕಿ.ವ್ಯಾಟ್‌

51.4ಕಿ.ವ್ಯಾಟ್‌

ARAI ಕ್ಲೈಮ್‌ ಮಾಡಲಾದ ರೇಂಜ್‌ 

390 ಕಿ.ಮೀ. 

473 ಕಿ.ಮೀ. 

ಹ್ಯುಂಡೈ ಕ್ರೆಟಾ ಇವಿ ಫಾಸ್ಟ್‌ ಚಾರ್ಜಿಂಗ್ ಸಾಮರ್ಥ್ಯಗಳನ್ನು ಬೆಂಬಲಿಸುತ್ತದೆ ಮತ್ತು ಡಿಸಿ ಚಾರ್ಜರ್ ಅನ್ನು ಬಳಸಿಕೊಂಡು ಕೇವಲ 58 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್‌ ಮಾಡಬಹುದು. 11 ಕಿ.ವ್ಯಾಟ್‌ ಹೋಮ್ ಬಾಕ್ಸ್ ಚಾರ್ಜರ್ ಮೂಲಕ ಚಾರ್ಜ್‌ ಮಾಡಿದರೆ, ಅದು 10 ರಿಂದ 100 ಪ್ರತಿಶತದಷ್ಟು ರೀಚಾರ್ಜ್ ಮಾಡಲು ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್: ಬೆಲೆ ಮತ್ತು ಪ್ರತಿಸ್ಪರ್ಧಿಗಳು

Hyundai Creta Electric Rivals

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ನ ಬೆಲೆಗಳು 17 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು. ಇದು ಮಹೀಂದ್ರಾ  ಬಿಇ 6, ಎಮ್‌ಜಿ ಜೆಡ್‌ಎಸ್‌ ಇವಿ, ಟಾಟಾ ಕರ್ವ್‌ ಇವಿ ಮತ್ತು ಮುಂಬರುವ ಮಾರುತಿ ಇ ವಿಟಾರಾಗೆ ಪ್ರತಿಸ್ಪರ್ಧಿಯಾಗಲಿದೆ.

ಇದಕ್ಕೆ ಸಂಬಂಧಿತ: Hyundai Creta ಇವಿ ಬುಕಿಂಗ್‌ಗಳು ಪ್ರಾರಂಭ, ವೇರಿಯೆಂಟ್‌-ವಾರು ಪವರ್‌ಟ್ರೇನ್ ಮತ್ತು ಬಣ್ಣ ಆಯ್ಕೆಗಳು ವಿವರ

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Hyundai ಕ್ರೆಟಾ ಎಲೆಕ್ಟ್ರಿಕ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience