2025ರಲ್ಲಿ ಮಾರಾಟವಾಗಬಹುದಾದ ಎಲ್ಲಾ ಟಾಟಾ ಕಾರುಗಳ ಮಾಹಿತಿ ಇಲ್ಲಿದೆ
ಟಾಟಾ ಸಿಯೆರಾ ಇವಿ ಗಾಗಿ dipan ಮೂಲಕ ಡಿಸೆಂಬರ್ 30, 2024 04:35 pm ರಂದು ಪ್ರಕಟಿಸಲಾಗಿದೆ
- 38 Views
- ಕಾಮೆಂಟ್ ಅನ್ನು ಬರೆಯಿರಿ
2025ರಲ್ಲಿ, ಐಕಾನಿಕ್ ಎಸ್‌ಯುವಿಯಾಗಿರುವ ಸಿಯೆರಾದ ವಾಪಸಾತಿಯೊಂದಿಗೆ ಟಾಟಾ ಕಾರುಗಳ ಜನಪ್ರಿಯ ICE ಆವೃತ್ತಿಗಳು ತಮ್ಮ EV ಕೌಂಟರ್‌ಪಾರ್ಟ್‌ಗಳನ್ನು ಪಡೆಯಲಿವೆ
ಟಾಟಾ ಮೋಟಾರ್ಸ್ ಆಕ್ಷನ್-ಭರಿತ 2025ಕ್ಕೆ ಸಜ್ಜಾಗುತ್ತಿರುವಂತೆ ತೋರುತ್ತಿದೆ, ಒಟ್ಟು ಏಳು ಮಾಡೆಲ್‌ಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಇವುಗಳಲ್ಲಿ ಹೆಚ್ಚು ನಿರೀಕ್ಷಿತ ಮೊಡೆಲ್‌ಗಳೆಂದರೆ ಟಾಟಾ ಸಿಯೆರಾ ಮತ್ತು ಟಾಟಾ ಹ್ಯಾರಿಯರ್ ಇವಿ. ಈ ಕಾರುಗಳ ಪಟ್ಟಿಯು ಇತ್ತೀಚೆಗೆ ಪರೀಕ್ಷೆಯಲ್ಲಿ ಗುರುತಿಸಲ್ಪಟ್ಟ ಮೊಡೆಲ್‌ಗಳನ್ನು ಸಹ ಒಳಗೊಂಡಿದೆ ಮತ್ತು ಇತರವುಗಳನ್ನು ಹಿಂದಿನ ಪರಿಕಲ್ಪನೆಗಳಾಗಿ ಪ್ರದರ್ಶಿಸಲಾಯಿತು. 2025ರಲ್ಲಿ ಟಾಟಾ ಬಿಡುಗಡೆ ಮಾಡಲು ನಾವು ನಿರೀಕ್ಷಿಸುವ ಕಾರುಗಳ ಸಂಪೂರ್ಣ ಪಟ್ಟಿಯನ್ನು ವಿವರವಾಗಿ ತಿಳಿಯೋಣ.
ಟಾಟಾ ಸಿಯೆರಾ(ICE + ಇವಿ)
ನಿರೀಕ್ಷಿತ ಬಿಡುಗಡೆ: ಜನವರಿ 17, 2025
ನಿರೀಕ್ಷಿತ ಬೆಲೆ: 11 ಲಕ್ಷ ರೂ. (ಐಸಿಇ) ಮತ್ತು 20 ಲಕ್ಷ ರೂ.(ಇವಿ)
ಟಾಟಾ ಸಿಯೆರಾ, ಮೊದಲು ಆಟೋ ಎಕ್ಸ್‌ಪೋ 2020 ನಲ್ಲಿ ಪರಿಕಲ್ಪನೆಯಾಗಿ ಬಹಿರಂಗವಾಯಿತು ಮತ್ತು ನಂತರ ಆಟೋ ಎಕ್ಸ್‌ಪೋ 2023ನಲ್ಲಿ ಹೆಚ್ಚು ವಿಕಸನಗೊಂಡ ಆವೃತ್ತಿಯಾಗಿ ಪ್ರದರ್ಶಿಸಲಾಯಿತು, 2025 ರಲ್ಲಿ ಮತ್ತೊಂದು ಚೊಚ್ಚಲ ಪ್ರವೇಶವನ್ನು ನಿರೀಕ್ಷಿಸಲಾಗಿದೆ. ಟಾಟಾ ಮೋಟಾರ್ಸ್ ಉತ್ಪಾದನೆಗೆ ಸಿದ್ಧವಾಗಿರುವ ಸಿಯೆರಾವನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಲು ಯೋಜಿಸಿದೆ, ICE (ಇಂಧನ ಚಾಲಿತ ಎಂಜಿನ್) ಮತ್ತು EV (ಎಲೆಕ್ಟ್ರಿಕ್ ವೆಹಿಕಲ್) ಆವೃತ್ತಿಗಳು ಆಫರ್‌ನಲ್ಲಿವೆ.
ಇವಿ ಆವೃತ್ತಿಯು 60-80 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಂಡಿರುವ ಸಾಧ್ಯತೆಯಿದೆ, ಇದು 500 ಕಿ.ಮೀ.ಗಿಂತಲೂ ಹೆಚ್ಚಿನ ಕ್ಲೈಮ್ ಮಾಡಬಹುದಾದ ರೇಂಜ್ ಅನ್ನು ನೀಡಬಹುದು. ಅದರ ವೇರಿಯೆಂಟ್‌ಗಳಾದ್ಯಂತ ವಿಭಿನ್ನ ವಿದ್ಯುತ್ ಉತ್ಪಾದನೆಗಳೊಂದಿಗೆ ಒಂದೇ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ICE ಆವೃತ್ತಿಗಾಗಿ, ಸಿಯೆರಾ ಹೊಸ 1.5-ಲೀಟರ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸಬಹುದಾಗಿದ್ದು, 170 ಪಿಎಸ್ ಮತ್ತು 280 ಎನ್‌ಎಮ್‌ನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಮೊದಲು ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಲಾಯಿತು. ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳಿಗೆ ಶಕ್ತಿ ನೀಡುವಂತೆಯೇ 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಸಹ ಇದರಲ್ಲಿ ನೀಡಬಹುದು.
ಟಾಟಾ ಹ್ಯಾರಿಯರ್ ಇವಿ
ನಿರೀಕ್ಷಿತ ಬೆಲೆ: ಜನವರಿ 17, 2025
ನಿರೀಕ್ಷಿತ ಬೆಲೆ: 25 ಲಕ್ಷ ರೂ
ಹ್ಯಾರಿಯರ್ ಇವಿಯನ್ನು 2024-2025 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ಬಹುಶಃ ಮಾರ್ಚ್ 2025 ರ ವೇಳೆಗೆ ಬಿಡುಗಡೆ ಮಾಡಲಾಗುವುದು ಎಂದು ಟಾಟಾ ಮೋಟಾರ್ಸ್ ದೃಢಪಡಿಸಿತು. ಪ್ರೊಡಕ್ಷನ್-ಸ್ಪೆಕ್ ಹ್ಯಾರಿಯರ್ ಇವಿಯನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ನಲ್ಲಿ ಪ್ರದರ್ಶಿಸುವ ಸಾಧ್ಯತೆಯಿದೆ.
ಹ್ಯಾರಿಯರ್ ಇವಿಯು ಡ್ಯುಯಲ್-ಮೋಟಾರ್ ಸೆಟಪ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ, ಇದು ಆಲ್-ವೀಲ್ ಡ್ರೈವ್ (AWD) ಸಾಮರ್ಥ್ಯಗಳನ್ನು ಸಕ್ರಿಯಗೊಳಿಸುತ್ತದೆ. ಆದರೆ, ಇದರ ಎಂಟ್ರಿ-ಲೆವೆಲ್ ವೇರಿಯೆಂಟ್‌ಗಳು ಸಿಂಗಲ್-ಮೋಟಾರ್ ಕಾನ್ಫಿಗರೇಶನ್ ಅನ್ನು ನೀಡಬಹುದು. ಅದರ ಬ್ಯಾಟರಿ ಪ್ಯಾಕ್ ಬಗ್ಗೆ ವಿವರಗಳು ಸೀಮಿತವಾಗಿದ್ದರೂ, ಹ್ಯಾರಿಯರ್ EV 550 ಕಿಮೀ ರೇಂಜ್‌ನೊಂದಿಗೆ ಕರ್ವ್ ಇವಿ ಮತ್ತು ನೆಕ್ಸಾನ್ ಇವಿಗಿಂತ ದೊಡ್ಡ ಬ್ಯಾಟರಿಯನ್ನು ಹೊಂದಬಹುದೆಂದು ನಿರೀಕ್ಷಿಸಲಾಗಿದೆ.
ಟಾಟಾ ಸಫಾರಿ ಇವಿ
ನಿರೀಕ್ಷಿತ ಬಿಡುಗಡೆ: ಫೆಬ್ರವರಿ 2025
ನಿರೀಕ್ಷಿತ ಬೆಲೆ: 32 ಲಕ್ಷ ರೂ.
ಮುಂಬರುವ ಹ್ಯಾರಿಯರ್ ಇವಿಯ ದೊಡ್ಡಣ್ಣ ಸಫಾರಿ ಇವಿ ಕೂಡ 2025ರಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಹ್ಯಾರಿಯರ್ ಇವಿಯಂತೆಯೇ, ಸಫಾರಿ ಇವಿಅನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಪ್ರದರ್ಶಿಸಬಹುದು. ಇದು ಹ್ಯಾರಿಯರ್ ಇವಿಯಂತೆಯೇ ಅದೇ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ, ಇದು 500 ಕಿಮೀಗಿಂತ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡಬಹುದು.
ಟಾಟಾ ಪಂಚ್ ಫೇಸ್ ಲಿಫ್ಟ್
ನಿರೀಕ್ಷಿತ ಬಿಡುಗಡೆ: ಸೆಪ್ಟೆಂಬರ್ 2025
ನಿರೀಕ್ಷಿತ ಬೆಲೆ: 6 ಲಕ್ಷ ರೂ.
ಫೇಸ್‌ಲಿಫ್ಟೆಡ್ ಟಾಟಾ ಪಂಚ್‌ನ ಸ್ಪೈ ಶಾಟ್‌ಗಳು ಕೆಲಸಮಯಗಳಿಂದ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದು, 2025ರ ಸಂಭವನೀಯ ಬಿಡುಗಡೆಯ ಸುಳಿವು ನೀಡುತ್ತಿವೆ. ಫೇಸ್‌ಲಿಫ್ಟೆಡ್ ಪಂಚ್ ಸ್ಟೈಲಿಂಗ್ ಸೂಚನೆಗಳನ್ನು ಪಂಚ್ ಇವಿಯಿಂದ ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ, ಇದು ಒಳಗೆ ಮತ್ತು ಹೊರಗೆ ಎರಡೂ ರಿಫ್ರೆಶ್ ಲುಕ್ ಅನ್ನು ಒಳಗೊಂಡಿದೆ. ಆಪ್‌ಡೇಟ್‌ಗಳು ಮರುವಿನ್ಯಾಸಗೊಳಿಸಲಾದ ಮುಂಭಾಗ, ಪರಿಷ್ಕರಿಸಿದ ಕ್ಯಾಬಿನ್ ಮತ್ತು ಕೆಲವು ಹೊಸ ಫೀಚರ್‌ಗಳ ಸೇರ್ಪಡೆಗಳನ್ನು ಒಳಗೊಂಡಿರಬಹುದು. ಆದರೆ, ಇದು ತನ್ನ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ, ಇದು 88 ಪಿಎಸ್ ಮತ್ತು 115 ಎನ್‌ಎಮ್‌ಅನ್ನು ನೀಡುತ್ತದೆ, ಇದು 5-ಸ್ಪೀಡ್ ಮ್ಯಾನ್ಯುವಲ್ ಅಥವಾ ಎಎಮ್‌ಟಿ (ಆಟೋಮೆಟೆಡ್ ಮ್ಯಾನ್ಯುವಲ್) ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲ್ಪಟ್ಟಿದೆ.
ಟಾಟಾ ಹ್ಯಾರಿಯರ್ ಪೆಟ್ರೋಲ್
ನಿರೀಕ್ಷಿತ ಬಿಡುಗಡೆ: ಜೂನ್ 2025
ನಿರೀಕ್ಷಿತ ಬೆಲೆ: 14 ಲಕ್ಷ ರೂ.
ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಲಾದ 1.5-ಲೀಟರ್ ಪೆಟ್ರೋಲ್ ಎಂಜಿನ್ ಟಾಟಾ ಹ್ಯಾರಿಯರ್‌ನಲ್ಲಿಯೂ ಸಹ ಪ್ರಾರಂಭಗೊಳ್ಳಲಿದೆ. ಟಾಟಾ ಸಿಯೆರಾದೊಂದಿಗೆ ಎಂಜಿನ್ ಅನ್ನು ಪರಿಚಯಿಸಿದ ನಂತರ ಈ ಮಧ್ಯಮ ಗಾತ್ರದ ಎಸ್‌ಯುವಿಯು ಆಪ್‌ಡೇಟ್ ಅನ್ನು ಸ್ವೀಕರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಹೊಸ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ (ಡಿಸಿಟಿ) ಆಯ್ಕೆಯೊಂದಿಗೆ ನೀಡಬಹುದು. ಈ ಪೆಟ್ರೋಲ್ ಆಯ್ಕೆಯು ಹ್ಯಾರಿಯರ್‌ನ ಆರಂಭಿಕ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಪ್ರಸ್ತುತ-ಸ್ಪೆಕ್ ಎಂಟ್ರಿ-ಲೆವೆಲ್‌ನ ವೇರಿಯೆಂಟ್‌ಗಿಂತ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.
ಟಾಟಾ ಟಿಯಾಗೊ ಮತ್ತು ಟಿಗೊರ್ ಫೇಸ್‌ಲಿಫ್ಟ್
ನಿರೀಕ್ಷಿತ ಬಿಡುಗಡೆ: ಡಿಸೆಂಬರ್ 2025
ನಿರೀಕ್ಷಿತ ಬೆಲೆ: 5.2 ಲಕ್ಷ ರೂ.(ಟಿಯಾಗೊ) ಮತ್ತು 6.2 ಲಕ್ಷ ರೂ.(ಟಿಗೊರ್)
ಟಾಟಾ ಟಿಯಾಗೊ ಮತ್ತು ಟಿಗೊರ್‌ನ ಪರೀಕ್ಷಾರ್ಥ ಆವೃತ್ತಿಗಳು ಇತ್ತೀಚೆಗೆ ಕಾಣಿಸಿಕೊಂಡಿದ್ದು, ಇದು ಈ ಮೊಡೆಲ್‌ಗಳಿಗೆ ಸಂಭವನೀಯ ಫೇಸ್‌ಲಿಫ್ಟ್‌ನ ಸುಳಿವು ನೀಡಿವೆ. ಗಮನಾರ್ಹವಾಗಿ, ಈ ಎಂಟ್ರಿ-ಲೆವೆಲ್‌ನ ಟಾಟಾ ಕಾರುಗಳು ಸಮಗ್ರವಾದ ಆಪ್‌ಡೇಟ್ ಅನ್ನು ಸ್ವೀಕರಿಸಿ ನಾಲ್ಕು ವರ್ಷಗಳಾಗಿದ್ದು, 2025 ಅನ್ನು ಅವುಗಳ ರಿಫ್ರೆಶ್‌ಗಾಗಿ ಸಂಭವನೀಯ ವರ್ಷವನ್ನಾಗಿ ಮಾಡುತ್ತದೆ. ಫೇಸ್‌ಲಿಫ್ಟ್ ಹೊಸ ಫೀಚರ್‌ಗಳ ಸೇರ್ಪಡೆಯೊಂದಿಗೆ ಒಳಗೆ ಮತ್ತು ಹೊರಗೆ ಆಪ್‌ಡೇಟ್ ಮಾಡಿದ ವಿನ್ಯಾಸಗಳನ್ನು ತರುವ ನಿರೀಕ್ಷೆಯಿದೆ. ಆದರೆ, ಅಸ್ತಿತ್ವದಲ್ಲಿರುವ ಪವರ್‌ಟ್ರೇನ್ ಆಯ್ಕೆಗಳು ಪೇಸ್‌ಲಿಫ್ಟೆಡ್ ಮೊಡೆಲ್‌ಗಳಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಟಿಯಾಗೋ ಮತ್ತು ಟಿಗೊರ್‌ನ ಪೇಸ್‌ಲಿಫ್ಟ್ ನಂತರ, ಅವುಗಳ ಇವಿ ಆವೃತ್ತಿಗಳು ಸಹ ಇದೇ ರೀತಿಯ ಆಪ್‌ಡೇಟ್‌ಗಳನ್ನು ಸ್ವೀಕರಿಸುವ ಸಾಧ್ಯತೆಯಿದೆ.
ಗಮನಿಸಿ: ಚಿತ್ರವನ್ನು ಮಾಹಿತಿಯ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ
ಇವುಗಳಲ್ಲಿ ಯಾವ ಟಾಟಾ ಕಾರುಗಳ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿದ್ದೀರಿ? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ