ಪ್ಲಾಟಿನಂ ಆವೃತ್ತಿ ಪಡೆಯಲಿರುವ ಆಡಿ S5 ಸ್ಪೋರ್ಟ್ ಬ್ಯಾಕ್, ಬೆಲೆ ರೂ. 81.57 ಲಕ್ಷ
ಆಡಿ ಎಸ್5 ಸ್ಪೋರ್ಟ್ಬ್ಯಾಕ್ ಗಾಗಿ shreyash ಮೂಲಕ ಅಕ್ಟೋಬರ್ 17, 2023 10:07 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಆಡಿ S5 ಕಾರಿನ ವಿಶೇಷ ಆವೃತ್ತಿಯು ಎರಡು ವಿಶಿಷ್ಟ ಹೊರಾಂಗಣ ಛಾಯೆಗಳಲ್ಲಿ ಹೊರಬರಲಿದ್ದು, ಒಳಗಡೆ ಮತ್ತು ಹೊರಗಡೆಗೆ ಇನ್ನಷ್ಟು ಸೌಂದರ್ಯವರ್ಧನೆಗೆ ಒಳಗಾಗಲಿದೆ.
- ಆಡಿಯು S5 ಮಾದರಿಯ ಪ್ಲಾಟಿನಂ ಆವೃತ್ತಿಯನ್ನು ಎರಡು ಬಣ್ಣಗಳಲ್ಲಿ ಹೊರತರಲಿದೆ: ಡಿಸ್ಟಿಂಕ್ಟ್ ಗ್ರೀನ್ ಮತ್ತು ಮಿಥೋಸ್ ಬ್ಲ್ಯಾಕ್
- ಹೊರಾಂಗಣದಲ್ಲಿ ಲೇಸರ್ ಲೈಟ್ ತಂತ್ರಜ್ಞಾನದೊಂದಿಗೆ ಮ್ಯಾಟ್ರಿಕ್ಸ್ LED, ಕಪ್ಪಗಿನ ಗ್ರಿಲ್ ಮತ್ತು ವಿಂಡೋಲೈನ್, ಮತ್ತು ‘S’ ಲಾಂಛನದೊಂದಿಗೆ ಕೆಂಪು ಬ್ರೇಕ್ ಕ್ಯಾಲಿಪರ್ ಗಳನ್ನು ಕಾಣಬಹುದು.
- ಒಳಭಾಗದಲ್ಲಿ ಆಡಿ S5 ಕಾರಿನ ವಿಶೇಷ ಆವೃತ್ತಿಯು ಮ್ಯಾಗ್ಮಾ ರೆಡ್ ಸೀಟ್ ಅಫೋಲ್ಸ್ಟರಿಯನ್ನು ಪಡೆಯಲಿದೆ.
- 354PS ಮತ್ತು 500Nm ಉಂಟು ಮಾಡುವ ಅದೇ 3 ಲೀಟರ್ V6 ಟರ್ಬೋ ಪೆಟ್ರೋಲ್ ಎಂಜಿನ್ ಮೂಲಕ ಇದಕ್ಕೆ ಶಕ್ತಿ ನೀಡಲಾಗುತ್ತದೆ.
ಆಡಿ S5 ಸ್ಪೋರ್ಟ್ ಬ್ಯಾಕ್ ಮಾದರಿಯು ಈ ಹಬ್ಬದ ಸಮಯದಲ್ಲಿ ಸೀಮಿತ ಅವಧಿಯ ʻಪ್ಲಾಟಿನಂ ಆವೃತ್ತಿʼಯನ್ನು ಹೊರತರಲಿದ್ದು ಬೆಲೆಯನ್ನು ರೂ. 81.57 ಲಕ್ಷಕ್ಕೆ (ಎಕ್ಸ್-ಶೋರೂಂ) ನಿಗದಿಪಡಿಸಲಾಗಿದೆ. ಆಡಿ Q5 ಮತ್ತು ಆಡಿ Q8 ಐಷಾರಾಮಿ SUV ಗಳ ನಂತರ ಇತ್ತೀಚಿನ ವಾರಗಳಲ್ಲಿ ವಿಶೇಷ ಆವೃತ್ತಿಯನ್ನು ಕಂಡ ಮೂರನೇ ಆಡಿ ಮಾದರಿಯು ಇದಾಗಿದೆ. ಈ ವಿಶೇಷ ಆವೃತ್ತಿಯು ಎರಡು ವಿಶಿಷ್ಟ ಹೊರಾಂಗಣ ಛಾಯೆಗಳಲ್ಲಿ ದೊರೆಯಲಿದೆ: ಡಿಸ್ಟಿಂಕ್ಟ್ ಗ್ರೀನ್ ಮತ್ತು ಮಿಥೋಸ್ ಬ್ಲ್ಯಾಕ್ ಈ ಆಡಿ S5 ಸ್ಪೋರ್ಟ್ ಬ್ಯಾಕ್ ಪ್ಲಾಟಿನಂ ಆವೃತ್ತಿಯು ಏನೆಲ್ಲ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ನೋಡೋಣ.
ಹೊರಾಂಗಣಗಳ ವೈಶಿಷ್ಟ್ಯ
ಆಡಿ S5 ಸ್ಪೋರ್ಟ್ ಬ್ಯಾಕ್ ಮಾದರಿನ ಪ್ಲಾಟಿನಂ ಆವೃತ್ತಿಯು ಲೇಸರ್ ಲೈಟ್ ತಂತ್ರಜ್ಞಾನದೊಂದಿಗೆ ಮ್ಯಾಟ್ರಿಕ್ಸ್ LED ಹೆಡ್ ಲೈಟ್ ಗನ್ನು ಹೊಂದಿದ್ದು, ಸುಧಾರಿತ ಗೋಚರತೆಗಾಗಿ ಹೈ ಬೀಮ್ ತ್ರೋ ಅನ್ನು ವೃದ್ಧಿಸಿದೆ. ಇದು ಆಡಿಯ ಬ್ಲ್ಯಾಕ್ ಸ್ಟೈಲಿಂಗ್ ಪ್ಯಾಕೇಜ್ ಪ್ಲಸ್ ಅನ್ನು ಹೊಂದಿದ್ದು, ಗ್ರಿಲ್ ಮತ್ತು ವಿಂಡೋ ಲೈನ್ ಗಳಲ್ಲಿ ಬ್ಲ್ಯಾಕ್ ಇನ್ಸರ್ಟ್ ಗಳನ್ನು ಕಾಣಬಹುದು. ಆಡಿ ಸಂಸ್ಥೆಯು ಈ ಸ್ಪೋರ್ಟ್ಸ್ ಸೆಡಾನ್ ಕಾರಿನ ವಿಶೇಷ ಆವೃತ್ತಿಯ ಬ್ರೇಕ್ ಕ್ಯಾಲಿಪರ್ ಗಳನ್ನು ‘S’ ಲಾಂಛನವನ್ನು ಅಳವಡಿಸಿದೆ.
ಈ ವಿಶೇಷತೆಗಳನ್ನು ಹೊರತುಪಡಿಸಿ, S5 ಸ್ಪೋರ್ಟ್ ಬ್ಯಾಕ್ ಪ್ಲಾಟಿನಂ ಆವೃತ್ತಿಯು ಹೊರಗಡೆಯಿಂದ ತನ್ನ ಎಂದಿನ ಆವೃತ್ತಿಯನ್ನೇ ಹೋಲುತ್ತದೆ.
ಇದನ್ನು ಸಹ ನೋಡಿರಿ: 2023 ಆಡಿ Q5 ಸೀಮಿತ ಆವೃತ್ತಿ ರೂ. 69.72 ಲಕ್ಷಕ್ಕೆ ಬಿಡುಗಡೆ
ವಿಶೇಷ ಒಳಾಂಗಣಗಳು
ಒಳಭಾಗದಲ್ಲಿ ಆಡಿ S5 ಸ್ಪೋರ್ಟ್ ಬ್ಯಾಕ್ ಮಾದರಿಯ ಸೀಮಿತ ಆವೃತ್ತಿಯು ಹೆಚ್ಚಿನ ಆರಾಮಕ್ಕಾಗಿ ಸೈಡ್ ಬೋಲ್ಸ್ಟರ್ ಗಳು, ಸೊಂಟದ ಆಸರೆ ಮತ್ತು ಮಸಾಜ್ ಫಂಕ್ಷನ್ ಗಳಿಗಾಗಿ ನ್ಯುಮಾಟಿಕ್ ಹೊಂದಾಣಿಕೆಗಳನ್ನು ಹೊಂದಿದೆ. ಈ ಸೀಟುಗಳಿಗೆ ಮ್ಯಾಗ್ಮಾ ರೆಡ್ ನ್ಯಾಪ್ಪ ಲೆದರ್ ನಿಂದ ಹೊದಿಸಲಾಗಿದ್ದು, ಒಳಾಂಗಣಕ್ಕೆ ಆಕರ್ಷಕ ನೋಟವನ್ನು ನೀಡುತ್ತವೆ. ಇದು ಕಾರ್ಬನ್ ಫೈಬರ್ ಇನ್ಸರ್ಟ್ ಗಳು, ಮತ್ತು ‘S’ ಲೋಗೋ ಪ್ರೊಜೆಕ್ಷನ್ ಜೊತೆಗೆ ಬಾಗಿಲ ಪ್ರವೇಶದ LED ಲೈಟುಗಳನ್ನು ಹೊಂದಿದೆ.
ವೈಶಿಷ್ಟ್ಯಗಳ ಪಟ್ಟಿ
ಆಡಿ S5 ಸ್ಪೋರ್ಟ್ ಬ್ಯಾಕ್ ಪ್ಲಾಟಿನಂ ಆವೃತ್ತಿಯು 10 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, 12.3 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, ಮತ್ತು 6 ಆಂಪ್ಲಿಫೈರ್ ಗಳ ಜೊತೆಗೆ 180W 6-ಸ್ಪೀಕರ್ ಆಡಿಯೋ ಸಿಸ್ಟಂ ಅನ್ನು ಹೊಂದಿದೆ. ಜೊತೆಗೆ 3 ಝೋನ್ ಕ್ಲೈಮೇಟ್ ಕಂಟ್ರೋಲ್, ಪ್ಯಾನೊರಾಮಿಕ್ ಗ್ಲಾಸ್ ರೂಫ್ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಇದರಲ್ಲಿ ಕಾಣಬಹುದು.
ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲ
ಆಡಿ ಸಂಸ್ಥೆಯು S5 ಸ್ಪೋರ್ಟ್ ಬ್ಯಾಕ್ ಮಾದರಿಯ ಪ್ಲಾಟಿನಂ ಆವೃತ್ತಿಗೆ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಿಲ್ಲ. ಇದು 354PS ಮತ್ತು 500Nm ಉಂಟು ಮಾಡುವ 3 ಲೀಟರ್ V6 ಟರ್ಬೋ ಪೆಟ್ರೋಲ್ ಎಂಜಿನ್ ಅನ್ನೇ ಬಳಸಲಿದೆ. ಕ್ವಾಟ್ರೊ (ಆಲ್ ವೀಲ್ ಡ್ರೈವ್, ರಿಯರ್ ಬಯಾಸ್ಡ್) ಸಿಸ್ಟಂ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ರವಾನಿಸುವ 8 ಸ್ಪೀಡ್ ಅಟೊಮ್ಯಾಟಿಕ್ ಟ್ರಾನ್ಸ್ ಮಿಶನ್ ಜೊತೆಗೆ ಈ ಎಂಜಿನ್ ಅನ್ನು ಹೊಂದಿಸಲಾಗಿದೆ. ಇದು ಕ್ರಮವಾಗಿ ಮುಂದಿನ ಮತ್ತು ಹಿಂದಿನ ಆಕ್ಸಿಲ್ ಗಳಿಗೆ 40:60 ಅನುಪಾತದಲ್ಲಿ ಶಕ್ತಿಯನ್ನು ಹಂಚುವ ಸೆಲ್ಫ್ ಲಾಕಿಂಗ್ ಸೆಂಟರ್ ಡಿಫೆರೆನ್ಶಿಯಲ್ ಅನ್ನು ಹೊಂದಿದೆ. ಇದು 4.8 ಸೆಕೆಂಡುಗಳಲ್ಲಿ 100kmph ವೇಗವನ್ನು ಪಡೆಯಬಲ್ಲದು.
ಸ್ಪೋರ್ಟಿಯರ್ ನಿರ್ವಹಣೆಗಾಗಿ, ರಸ್ತೆಯ ಜೊತೆಗೆ ಇನ್ನೂ ಹೆಚ್ಚಿನ ನೇರ ಸಂಪರ್ಕವನ್ನು ಸಾಧಿಸಲು S5 ಸ್ಪೋರ್ಟ್ ಬ್ಯಾಕ್ ಅನ್ನು ಡ್ಯಾಂಪರ್ ಕಂಟ್ರೋಲ್ ಜೊತೆಗೆ S ಸ್ಪೋರ್ಟ್ಸ್ ಸಸ್ಪೆನ್ಶನ್ ಅನ್ನು ಅಳವಡಿಸಲಾಗಿದೆ.
ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು
ಈ ಆಡಿ S5 ಕಾರು ಈಗ ರೂ. 75.74 ರಿಂದ ರೂ. 81.57 ಲಕ್ಷದ ವರೆಗಿನ (ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ) ಬೆಲೆಯಲ್ಲಿ ದೊರೆಯಲಿದೆ. ಭಾರತದಲ್ಲಿ ಇದು ನೇರವಾಗಿ BMW M340i ಮಾದರಿಯ ಜೊತೆಗೆ ಸ್ಪರ್ಧಿಸುತ್ತಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಆಡಿ S5 ಸ್ಪೋರ್ಟ್ ಬ್ಯಾಕ್ ಅಟೋಮ್ಯಾಟಿಕ್