• English
    • Login / Register

    2023 Audi Q5 Limited Edition ಬಿಡುಗಡೆ: 69.72 ಲಕ್ಷ ರೂ. ಬೆಲೆ ನಿಗದಿ

    ಆಡಿ ಕ್ಯೂ5 ಗಾಗಿ rohit ಮೂಲಕ ಸೆಪ್ಟೆಂಬರ್ 18, 2023 06:27 pm ರಂದು ಪ್ರಕಟಿಸಲಾಗಿದೆ

    • 29 Views
    • ಕಾಮೆಂಟ್‌ ಅನ್ನು ಬರೆಯಿರಿ

    ಆಡಿ ಕ್ಯೂ5 ಲಿಮಿಟೆಡ್ ಎಡಿಷನ್ ನ ಹೊರಭಾಗವನ್ನು ಮೈಥೋಸ್ ಬ್ಲ್ಯಾಕ್ ಬಣ್ಣದಿಂದ ಕವರ್ ಮಾಡಿದ್ದರೆ,ಕ್ಯಾಬಿನ್ ಒಕಾಪಿ ಬ್ರೌನ್‌ ಬಣ್ಣವನ್ನು ಪಡೆದಿದೆ.

    Audi Q5 limited edition

    • Q5 ನ ಟೆಕ್ನಾಲಜಿ ವೇರಿಯಂಟ್ ನ ಮೇಲೆ ಆಡಿಯ ಸೀಮಿತ ಆವೃತ್ತಿ ಆಧರಿಸಿದೆ.
    • ಇದು ಆಡಿ ಲೋಗೋ, Q5 ಮಾನಿಕರ್, ರೂಫ್ ರೈಲ್ಸ್ ಮತ್ತು ಗ್ರಿಲ್‌ಗಾಗಿ ಬ್ಲ್ಯಾಕ್ ಸ್ಟೈಲಿಂಗ್ ಪ್ಯಾಕೇಜ್ ನ ವೈಶಿಷ್ಟ್ಯವನ್ನು ಒಳಗೊಂಡಿದೆ.
    • ಸೀಮಿತ ಆವೃತ್ತಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಕ್ಸೆಸ್ಸರಿಗಳ ರೇಂಜ್ ನ್ನು ಗ್ರಾಹಕರು ಆಯ್ಕೆ ಮಾಡಬಹುದು.
    • 10.1-ಇಂಚಿನ ಟಚ್‌ಸ್ಕ್ರೀನ್, 30-ಬಣ್ಣದ ಆಂಬಿಯೆಂಟ್ ಲೈಟಿಂಗ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಎಂಟು ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ.
    • 7-ಸ್ಪೀಡ್ ಡಿಸಿಟಿಗೆ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಜೋಡಿಸಲ್ಪಟ್ಟಿದೆ; 4-ವೀಲ್ ಡ್ರೈವ್ ಟ್ರೈನ್ ನ್ನು ಪಡೆಯಬಹುದು. 

    ಈ ಹಬ್ಬದ ಸಮಯದಲ್ಲಿ ನೀವು ಹೊಸ ಐಷಾರಾಮಿ ಎಸ್ಯುವಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ಹೊಸ Audi Q5 ಸೀಮಿತ ಆವೃತ್ತಿಯನ್ನು ಒಂದು ಆಯ್ಕೆಯಾಗಿ ಪರಿಗಣಿಸಬಹುದು.  ಇದು Q5 ನ 'ಟೆಕ್ನಾಲಜಿ' ಆವೃತ್ತಿಯನ್ನು ಆಧರಿಸಿದೆ ಮತ್ತು ಇದರ ಎಕ್ಸ್ ಶೋರೂಂ ಬೆಲೆ  69.72 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಲಿಮಿಟೆಡ್ ಎಡಿಷನ್ ನಲ್ಲಿನ ಎಲ್ಲಾ ಬದಲಾವಣೆಗಳ ಸಾರಾಂಶ ಇಲ್ಲಿದೆ:

    ಹೊರಭಾಗದಲ್ಲಾದ ಬದಲಾವಣೆಗಳ ಒಂದು ನೋಟ 

    ಆಡಿ Q5 ಲಿಮಿಟೆಡ್ ಎಡಿಷನ್ ಮೈತೋಸ್ ಬ್ಲಾಕ್ ಬಣ್ಣದಲ್ಲಿ ಎಕ್ಸ್‌ಕ್ಲೂಸಿವ್‌ ಆಗಿ ಲಭ್ಯವಿದೆ. ಇದು 'ಆಡಿ' ಲೋಗೋ, 'ಕ್ಯೂ5' ಮಾನಿಕರ್ ಮತ್ತು ಗ್ರಿಲ್‌ಗೆ ಕಪ್ಪು ಬಣ್ಣ ಪಡೆಯಲು ಬ್ಲ್ಯಾಕ್ ಸ್ಟೈಲಿಂಗ್ ಪ್ಯಾಕೇಜ್ ಅನ್ನು ಪಡೆಯುತ್ತದೆ. ಆಡಿಯು ಲಿಮಿಟೆಡ್ ಎಡಿಶನ್‌ನ ಭಾಗವಾಗಿ ಕಪ್ಪು ಛಾವಣಿಯ ಹಳಿಗಳನ್ನು ಮತ್ತು ವಿಂಡೋ ಬೆಲ್ಟ್‌ಲೈನ್‌ಗೆ ಬ್ಲ್ಯಾಕ್‌ ಫಿನಿಶ್‌ ನ್ನು ಸಹ ನೀಡುತ್ತಿದೆ.

    Q5 ಲಿಮಿಟೆಡ್‌ ಎಡಿಷನ್‌ನ್ನು ಆಯ್ಕೆ ಮಾಡುವ ಗ್ರಾಹಕರು ಈ ಎಸ್‌ಯುವಿಗಾಗಿ ವಿವಿಧ ಅಕ್ಸೆಸ್ಸರಿಗಳನ್ನು ಆಯ್ಕೆ ಮಾಡಲು ಅರ್ಹರಾಗಿರುತ್ತಾರೆ, ಇದರಲ್ಲಿ ಪ್ರವೇಶ ಎಲ್‌ಇಡಿ ಆಡಿ ರಿಂಗ್‌ಗಳು, ಸ್ಟೇನ್‌ಲೆಸ್ ಸ್ಟೀಲ್ ಪೆಡಲ್ ಕವರ್‌ಗಳು, ಡೈನಾಮಿಕ್ ಹಬ್ ಕ್ಯಾಪ್‌ಗಳು, ಬೆಳ್ಳಿಯಲ್ಲಿ ಒಆರ್‌ವಿಎಮ್‌ ಹೌಸಿಂಗ್ ಮತ್ತು ಆಡಿ ವಾಲ್ವ್ ಕ್ಯಾಪ್‌ಗಳು ಸೇರಿವೆ.

    ಇದನ್ನೂ ಓದಿ: ಬಿಎಮ್‌ಡಬ್ಲ್ಯೂ 2 ಸರಣಿಯ ಗ್ರ್ಯಾನ್ ಕೂಪೆ ಎಮ್‌ ಪರ್ಫೊರ್ಮೆನ್ಸ್‌ ಆವೃತ್ತಿ ಬಿಡುಗಡೆ

    ಒಳಭಾಗದಲ್ಲಿ ಏನು ಬದಲಾಗಿದೆ?

    Audi Q5 limited edition cabin

    ಆಡಿ Q5 ನ ಸೀಮಿತ ಆವೃತ್ತಿಯು ಒಕಾಪಿ ಬ್ರೌನ್ ಕ್ಯಾಬಿನ್ ಥೀಮ್ ಮತ್ತು ಸೆಮಿ-ಲೆಥೆರೆಟ್ ಅಪ್‌ಹೊಲ್ಸ್‌ಟೆರಿಯನ್ನು ನೀಡುತ್ತದೆ. ಈ ಎಸ್‌ಯುವಿಯು 3-ಜೋನ್‌ ಕ್ಲೈಮೆಟ್‌ ಕಂಟ್ರೋಲ್‌, 10.1-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ರಿವರ್ಸಿಂಗ್ ಕ್ಯಾಮೆರಾ ಮತ್ತು 30-ಬಣ್ಣದ ಆಂಬಿಯೆಂಟ್ ಲೈಟಿಂಗ್ ಅನ್ನು ಪಡೆಯುತ್ತದೆ. ಇದು ವೈರ್‌ಲೆಸ್ ಫೋನ್ ಚಾರ್ಜಿಂಗ್, ಡ್ರೈವರ್‌ಗಾಗಿ ಮೆಮೊರಿ ಕಾರ್ಯದೊಂದಿಗೆ ಚಾಲಿತ ಮುಂಭಾಗದ ಸೀಟುಗಳು, ಎಂಟು ಏರ್‌ಬ್ಯಾಗ್‌ಗಳು ಮತ್ತು 19-ಸ್ಪೀಕರ್ 755W ಬ್ಯಾಂಗ್ ಮತ್ತು ಒಲುಫ್‌ಸೆನ್ ಮ್ಯೂಸಿಕ್ ಸಿಸ್ಟಮ್‌ನೊಂದಿಗೆ ಬರುತ್ತದೆ.

    ಎಂಜಿನ್‌ಗಳ ಬಗ್ಗೆ..

    Audi Q5 2-litre turbo-petrol engine

    Q5 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (265PS/370Nm) ನಿಂದ ಚಾಲಿತವಾಗಿದ್ದು, 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್) ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದು 0 ದಿಂದ 100 ಕಿ.ಮೀ ತಲುಪಲು 6.1 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ ಮತ್ತು 240kmph ಗರಿಷ್ಠ ವೇಗವನ್ನು ಹೊಂದಿದೆ. ಕ್ವಾಟ್ರೊ ಆಲ್-ವೀಲ್-ಡ್ರೈವ್ ಮತ್ತು ಆರು ಡ್ರೈವ್ ಮೋಡ್‌ಗಳೊಂದಿಗೆ ಆಡಿ ನೀಡುತ್ತದೆ. ಅದೆಂದರೆ ಕಂಫರ್ಟ್, ಡೈನಾಮಿಕ್, ಇಂಡಿವಿಜುಯಲ್, ಆಟೋ, ಎಫಿಸೈನ್ಸಿ ಮತ್ತು ಆಫ್-ರೋಡ್. 

    Q5 ಗೆ ಪರ್ಯಾಯಗಳು

    Audi Q5 rear

    ಆಡಿ Q5 ಲಿಮಿಟೆಡ್ ಎಡಿಷನ್ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲದಿದ್ದರೂ, ಈ ಸ್ಟ್ಯಾಂಡರ್ಡ್ ಎಸ್ಯುವಿಯು ಬಿಎಂಡಬ್ಲ್ಯೂ X3, ವೋಲ್ವೋ XC60, ಲೆಕ್ಸಸ್ NX, ಮತ್ತು ಮರ್ಸಿಡೀಸ್-ಬೆಂಜ್ GLC ಗೆ ಪರ್ಯಾಯವಾಗಲಿದೆ. ಮತ್ತು ಅಂತಿಮವಾಗಿ, ಹೆಸರೇ ಸೂಚಿಸುವಂತೆ, ಇದು ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿದೆ.

    ಹೆಚ್ಚು ಓದಿ: Q5 ಆಟೋಮ್ಯಾಟಿಕ್

    was this article helpful ?

    Write your Comment on Audi ಕ್ಯೂ5

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience