• English
  • Login / Register

ಹೊಸ ಅಪ್ಡೇಟ್ ಗಳನ್ನು ಹೊಂದಿರುವ Lexus LM MPV ಯ ಬುಕಿಂಗ್‌ಗಳು ಆರಂಭ

ಲೆಕ್ಸಸ್ ಎಲ್.ಎಂ ಗಾಗಿ rohit ಮೂಲಕ ಆಗಸ್ಟ್‌ 28, 2023 11:47 am ರಂದು ಮಾರ್ಪಡಿಸಲಾಗಿದೆ

  • 28 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಲೆಕ್ಸಸ್ LM, ಟೊಯೊಟಾ ವೆಲ್‌ಫೈರ್ ಆಧರಿಸಿ ಕೆಲವು ಐಷಾರಾಮಿ ಅಂಶಗಳನ್ನು ಪಡೆದುಕೊಳ್ಳಲಾಗಿದೆ

2023 Lexus LM

  •  ಲೆಕ್ಸಸ್ ಶೀಘ್ರದಲ್ಲೇ ಭಾರತದಲ್ಲಿ ಹೊಸ ಪೀಳಿಗೆ LM MPV ಅನ್ನು ಬಿಡುಗಡೆ ಮಾಡಲಿದೆ 
  •  4-ಮತ್ತು 7-ಸೀಟು ಕಾನ್ಫಿಗರೇಶನ್‌ನಲ್ಲಿ ಲಭ್ಯವಿರಲಿದೆ
  •  ಎಕ್ಸ್‌ಟೀರಿಯರ್ ಹೈಲೈಟ್‌ಗಳು ದೊಡ್ಡದಾದ ಸ್ಪಿಂಡಲ್ ಗ್ರಿಲ್ ಮತ್ತು ಡ್ಯಾಪರ್ LED ಲೈಟಿಂಗ್ ಅನ್ನು ಒಳಗೊಂಡಿವೆ
  •   ಒಳಗೆ, ಇದು 48-ಇಂಚು TV, 23-ಸ್ಪೀಕರ್ ಸರೌಂಡ್ ಸೌಂಡ್ ಸಿಸ್ಟಮ್ ಮತ್ತು ಹೀಟಡ್ ಒಟ್ಟೋಮನ್ ಸೀಟುಗಳನ್ನು ಪಡೆದಿದೆ
  •  ಭಾರತ-ಸ್ಪೆಕ್ ಮಾಡೆಲ್‌ನ ಪವರ್‌ಟ್ರೇನ್ ವಿವರಗಳ ಬಗ್ಗೆ ಇನ್ನೂ ತಿಳಿದುಬಂದಿಲ್ಲ.
  •  ಜಾಗತಿಕವಾಗಿ ಎರಡು ಆಯ್ಕೆಗಳಲ್ಲಿ ಲಭ್ಯವಿದೆ: 2.4-ಲೀಟರ್ ಟರ್ಬೋ ಮೈಲ್ಡ್-ಹೈಬ್ರಿಡ್ ಮತ್ತು 2.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಯೂನಿಟ್

 ಹೊಸ ಲೆಕ್ಸಸ್ LM, ಪ್ರೀಮಿಯಂ ಮತ್ತು ಐಷಾರಾಮಿ MPVಯ ಸ್ಥಳಕ್ಕೆ ಮತ್ತೊಂದು ಪ್ರತಿಸ್ಪರ್ಧಿಯಾಗಿ ಆಗಮಿಸುತ್ತಿದೆ. ಇದರ ಬೆಲೆಯನ್ನು ನಿರೀಕ್ಷಿಸುತ್ತಿರುವ ಸಂದರ್ಭದಲ್ಲಿ ಈ ಐಷಾರಾಮಿ ಕಾರು ತಯಾರಕರು ಈ MPVಗೆ ಬುಕಿಂಗ್‌ಗಳನ್ನು ತೆರೆದಿದ್ದಾರೆ. ಎರಡನೇ-ಪೀಳಿಗೆ ಲೆಕ್ಸಸ್ LM ಇತ್ತೀಚೆಗೆ ಬಿಡುಗಡೆಯಾದ ಟೊಯೋಟಾ ವೈಲ್‌ಫೈರ್ ಆಧಾರಿತವಾಗಿದೆ 

ಅತ್ಯಾಕರ್ಷಕ ನೋಟ

 ಇದರ ಮುಂಭಾಗವು ಬೃಹತ್ ಫ್ರಂಟ್ ವಿಂಡ್‌ಶೀಲ್ಡ್ ಮತ್ತು ಮುಂಭಾಗದ ಕೆಳಭಾಗದವರೆಗೆ ವಿಸ್ತರಿಸಿದ ಆಗಾಧವಾದ ಸ್ಪಿಂಡಲ್ ಗ್ರಿಲ್‌ನಿಂದ ಪ್ರತ್ಯೇಕಿಸಲ್ಪಟ್ಟಿದೆ. ಲೆಕ್ಸಸ್ ಇದಕ್ಕೆ ಟ್ರೈ-ಪೀಸ್ LED ಅಂಶಗಳನ್ನು ಹೊಂದಿದ ದಟ್ಟವಾದ LED ಹೆಡ್‌ಲೈಟ್‌ಗಳನ್ನು ಒದಗಿಸಿದೆ.

2023 Lexus LM side

ಬದಿಗಳಿಂದ ನೋಡುವಾಗ ಈ MPVಯ ಉದ್ದದ ವ್ಹೀಲ್ ಬೇಸ್ ಇದಕ್ಕೆ ದೊಡ್ಡ ಹೆಜ್ಜೆಗುರುತನ್ನು ನೀಡಿದೆ. ಪ್ರೊಫೈಲ್-ಹೈಲೈಟ್‌ಗಳು ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್‌ಗಳು, ಇಲೆಕ್ಟ್ರಾನಿಕ್ ಸ್ಲೈಡಿಂಗ್‌ನ ಹಿಂಭಾಗದ ಡೋರ್‌ಗಳನ್ನು ಒಳಗೊಂಡಿದೆ.

ಅತ್ಯಂತ ವಿಶಿಷ್ಟ ಡಿಸೈನ್ ಅಂಶಗಳು, ಇದನ್ನು ಸುತ್ತುವರಿದ LED ಟೇಲ್‌ಲೈಟ್‌ಗಳು ಮತ್ತು ಉದ್ದದ ಹಿಂಭಾಗದ ವಿಂಡ್‌ಸ್ಕ್ರೀನ್‌ನೊಂದಿಗೆ ಹಿಂಭಾಗವು ಸುಸ್ಪಷ್ಟವಾಗಿದೆ.

ಐಷಾರಾಮಿ ಕ್ಯಾಬಿನ್

2023 Lexus LM cabin

ಈ ಲೆಕ್ಸಸ್ ಕ್ರೀಮ್-ಬಣ್ಣದ ಕ್ಯಾಬಿನ್ ಥೀಮ್ ಮತ್ತು ಕನಿಷ್ಠ ಡ್ಯಾಶ್‌ಬೋರ್ಡ್ ಲೇಔಟ್ ಹಾಗೂ ಡ್ರೈವರ್ ಡಿಸ್‌ಪ್ಲೇಗಾಗಿ ಎರಡು ದೊಡ್ಡದಾದ ಸ್ಕ್ರೀನ್‌ಗಳು ಮತ್ತು ಇನ್ಫೋಟೇನ್‌ ಸಿಸ್ಟಮ್‌ನಿಂದ ಸಜ್ಜುಗೊಂಡಿದೆ. ಎರಡನೆಯದು ಆಡಿಯೋ ಮತ್ತು ಕ್ಲೈಮೇಟ್ ಕಂಟ್ರೋಲ್‌ ಎರಡಕ್ಕೂ ಇಂಟೆಗ್ರೇಟಡ್ ಡಯಲ್‌ಗಳನ್ನು ಪಡೆದಿದೆ. ಈ MPV ಜಾಗತಿಕವಾಗಿ – 4-, 6- ಮತ್ತು 7-ಸೀಟು ಲೇಔಟ್‌ಗಳನ್ನು ಹೊಂದಿದ್ದು ಭಾರತೀಯ ಮಾರುಕಟ್ಟೆಗಾಗಿ ಕೇವಲ 4- ಮತ್ತು 6-ಸೀಟು ವೇರಿಯೆಂಟ್‌ಗಳನ್ನು ಮಾತ್ರ ನಿಗದಿಪಡಿಸಲಾಗಿದೆ.

2023 Lexus LM 48-inch rear TV

MPVಯು ಎರಡನೇ ಸಾಲಿನಲ್ಲಿ ಎಲ್ಲಾ ಆಕರ್ಷಕ ಫೀಚರ್‌ಗಳನ್ನು ಪಡೆದಿರುವುದು, ಲೆಕ್ಸಸ್ LMನ ಪ್ರಮುಖ ಅಂಶವಾಗಿದೆ. ಇಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗಾಗಿ ವಿಶಾಲವಾದ ಅಟ್ಟೋಮನ್ ಸೀಟುಗಳು, ಸುತ್ತಲೂ ಇರುವ 23-ಸ್ಪೀಕರ್ ಸೌಂಡ್ ಸಿಸ್ಟಮ್, ಪಿಲ್ಲೋ ಶೈಲಿಯ ಹೆಡ್‌ರೆಸ್ಟ್‌ಗಳು, ಮತ್ತು ಕ್ಯಾಬಿನ್‌ನ ಮುಂಭಾಗ ಮತ್ತು ಹಿಂಭಾಗದ ನಡುವಿನ ವಿಭಜನೆಯ ಮೇಲೆ 48-ಇಂಚು ಬೃಹತ್ ಟಿವಿಯನ್ನು ಅಳವಡಿಸಲಾಗಿದೆ. ಅಲ್ಲದೇ 64-ಕಲರ್ ಆ್ಯಂಬಿಯೆಂಟ್ ಲೈಟಿಂಗ್, ಹೀಟಡ್ ಮತ್ತು ವೆಂಟಿಲೇಟಡ್ ಸೀಟುಗಳು ಮತ್ತು ಸಕ್ರಿಯ ಫೀಚರ್‌ಗಳ ಗುಂಪನ್ನೇ ಪಡೆದಿದೆ.

2023 Lexus LM ottoman seats

  ಈ ಹೊಸ ಪೀಳಿಗೆ LMಗೆ ಲೆಕ್ಸಸ್ ಮೊದಲ ಬಾರಿಗೆ ಹೀಟೆಡ್ ಆರ್ಮ್‌ರೆಸ್ಟ್‌ಗಳು ಮತ್ತು ಒಟ್ಟೋಮನ್‌ಗಳು, ಹಿಂಭಾಗದ ಪವರ್ ಡೋರ್‌ಗಳಿಗೆ ಹೊಸ ಹ್ಯಾಂಡಲ್‌ಗಳು ಮತ್ತು ರೂಫ್‌ನೊಂದಿಗೆ ಸಂಯೋಜಿಸಲಾದ ಹಿಂಭಾಗದ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ನೀಡಿದೆ 

 ಇದನ್ನೂ ಓದಿ: 2024 ರಿಂದ ಭಾರತ್ NCAPಗೆ ಭಾರತೀಯ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ನಿಯಂತ್ರಣವನ್ನು ಹಸ್ತಾಂತರಿಸಲಿದೆ ಜಾಗತಿಕ NCAP

ಪವರ್‌ಟ್ರೇನ್ ಈಗ ತುಲನಾತ್ಮಕವಾಗಿ ಪರಿಸರಸ್ನೇಹಿ

ಜಾಗತಿಕವಾಗಿ ಲೆಕ್ಸಸ್ ಈ LMಗೆ ಎರಡು ಪವರ್‌ಟ್ರೇನ್ ಆಯ್ಕೆಗಳನ್ನು ನೀಡಿದೆ: ಒಂದು 2.4-ಟರ್ಬೋ ಮೈಲ್ಡ್ ಹೈಬ್ರಿಡ್ ಮತ್ತೊಂದು 2.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್. ಭಾರತ-ಸ್ಪೆಕ್ ಮಾಡೆಲ್‌ಗೆ ಎರಡನೆಯದನ್ನು ನೀಡುವ ಸಾಧ್ಯತೆ ಇದ್ದು ಯಾವುದನ್ನು ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಎಷ್ಟಿರಬಹುದು ಬೆಲೆ?

2023 Lexus LM rear

ಲೆಕ್ಸಸ್ ತನ್ನ ಎರಡನೇ ಪೀಳಿಗೆ LMಗೆ ವೆಲ್‌ಫೈರ್‌ಗಿಂತ ದುಬಾರಿ ಬೆಲೆಯನ್ನು ನಿಗದಿಪಡಿಸಿದ್ದು, ಇದು ರೂ1.20 ಕೋಟಿಯಿಂದ ರೂ 1.30 ಕೋಟಿಯಷ್ಟು (ಎಕ್ಸ್-ಶೋರೂಂ, ದೆಹಲಿ) ಇರಬಹುದೆಂದು ಅಂದಾಜಿಸಲಾಗಿದೆ. ಟೊಯೋಟಾ ವೆಲ್‌ಫೈರ್ ಮಾತ್ರ ಇದರ ನೇರ ಪ್ರತಿಸ್ಪರ್ಧಿಯಾಗಿರಲಿದ್ದು, ಇದು BMW X7 ಮತ್ತು ಮರ್ಸಿಡೀಸ್-ಬೆನ್ಝ್ GLS ಮುಂತಾದ 3-ಸಾಲಿನ ಐಷಾರಾಮಿ SUVಗಳಿಗೆ ಪರ್ಯಾಯವಾಗಲಿದೆ . ಶೀಘ್ರದಲ್ಲೇ ಮರ್ಸಿಡೀಸ್-ಬೆನ್ಝ್‌ V-ಕ್ಲಾಸ್ ಅನ್ನು ನಾವು ಹೊಸ ಅವತಾರದಲ್ಲಿ ನಿರೀಕ್ಷಿಸುತ್ತಿದ್ದು, ಇದು ಲೆಕ್ಸಸ್ LM ಗೆ ಪ್ರತಿಸ್ಪರ್ಧಿಯಾಗಿರಲಿದೆ  

ಇದನ್ನೂ ಓದಿ: ಬಂದೇಬಿಡ್ತು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ!

was this article helpful ?

Write your Comment on Lexus ಎಲ್.ಎಂ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience