Login or Register ಅತ್ಯುತ್ತಮ CarDekho experience ಗೆ
Login

ಹೊಸ ಅಪ್ಡೇಟ್ ಗಳನ್ನು ಹೊಂದಿರುವ Lexus LM MPV ಯ ಬುಕಿಂಗ್‌ಗಳು ಆರಂಭ

modified on ಆಗಸ್ಟ್‌ 28, 2023 11:47 am by rohit for ಲೆಕ್ಸಸ್ ಎಲ್.ಎಂ

ಹೊಸ ಲೆಕ್ಸಸ್ LM, ಟೊಯೊಟಾ ವೆಲ್‌ಫೈರ್ ಆಧರಿಸಿ ಕೆಲವು ಐಷಾರಾಮಿ ಅಂಶಗಳನ್ನು ಪಡೆದುಕೊಳ್ಳಲಾಗಿದೆ

  • ಲೆಕ್ಸಸ್ ಶೀಘ್ರದಲ್ಲೇ ಭಾರತದಲ್ಲಿ ಹೊಸ ಪೀಳಿಗೆ LM MPV ಅನ್ನು ಬಿಡುಗಡೆ ಮಾಡಲಿದೆ
  • 4-ಮತ್ತು 7-ಸೀಟು ಕಾನ್ಫಿಗರೇಶನ್‌ನಲ್ಲಿ ಲಭ್ಯವಿರಲಿದೆ
  • ಎಕ್ಸ್‌ಟೀರಿಯರ್ ಹೈಲೈಟ್‌ಗಳು ದೊಡ್ಡದಾದ ಸ್ಪಿಂಡಲ್ ಗ್ರಿಲ್ ಮತ್ತು ಡ್ಯಾಪರ್ LED ಲೈಟಿಂಗ್ ಅನ್ನು ಒಳಗೊಂಡಿವೆ
  • ಒಳಗೆ, ಇದು 48-ಇಂಚು TV, 23-ಸ್ಪೀಕರ್ ಸರೌಂಡ್ ಸೌಂಡ್ ಸಿಸ್ಟಮ್ ಮತ್ತು ಹೀಟಡ್ ಒಟ್ಟೋಮನ್ ಸೀಟುಗಳನ್ನು ಪಡೆದಿದೆ
  • ಭಾರತ-ಸ್ಪೆಕ್ ಮಾಡೆಲ್‌ನ ಪವರ್‌ಟ್ರೇನ್ ವಿವರಗಳ ಬಗ್ಗೆ ಇನ್ನೂ ತಿಳಿದುಬಂದಿಲ್ಲ.
  • ಜಾಗತಿಕವಾಗಿ ಎರಡು ಆಯ್ಕೆಗಳಲ್ಲಿ ಲಭ್ಯವಿದೆ: 2.4-ಲೀಟರ್ ಟರ್ಬೋ ಮೈಲ್ಡ್-ಹೈಬ್ರಿಡ್ ಮತ್ತು 2.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಯೂನಿಟ್

ಹೊಸ ಲೆಕ್ಸಸ್ LM, ಪ್ರೀಮಿಯಂ ಮತ್ತು ಐಷಾರಾಮಿ MPVಯ ಸ್ಥಳಕ್ಕೆ ಮತ್ತೊಂದು ಪ್ರತಿಸ್ಪರ್ಧಿಯಾಗಿ ಆಗಮಿಸುತ್ತಿದೆ. ಇದರ ಬೆಲೆಯನ್ನು ನಿರೀಕ್ಷಿಸುತ್ತಿರುವ ಸಂದರ್ಭದಲ್ಲಿ ಈ ಐಷಾರಾಮಿ ಕಾರು ತಯಾರಕರು ಈ MPVಗೆ ಬುಕಿಂಗ್‌ಗಳನ್ನು ತೆರೆದಿದ್ದಾರೆ. ಎರಡನೇ-ಪೀಳಿಗೆ ಲೆಕ್ಸಸ್ LM ಇತ್ತೀಚೆಗೆ ಬಿಡುಗಡೆಯಾದ ಟೊಯೋಟಾ ವೈಲ್‌ಫೈರ್ ಆಧಾರಿತವಾಗಿದೆ

ಅತ್ಯಾಕರ್ಷಕ ನೋಟ

ಇದರ ಮುಂಭಾಗವು ಬೃಹತ್ ಫ್ರಂಟ್ ವಿಂಡ್‌ಶೀಲ್ಡ್ ಮತ್ತು ಮುಂಭಾಗದ ಕೆಳಭಾಗದವರೆಗೆ ವಿಸ್ತರಿಸಿದ ಆಗಾಧವಾದ ಸ್ಪಿಂಡಲ್ ಗ್ರಿಲ್‌ನಿಂದ ಪ್ರತ್ಯೇಕಿಸಲ್ಪಟ್ಟಿದೆ. ಲೆಕ್ಸಸ್ ಇದಕ್ಕೆ ಟ್ರೈ-ಪೀಸ್ LED ಅಂಶಗಳನ್ನು ಹೊಂದಿದ ದಟ್ಟವಾದ LED ಹೆಡ್‌ಲೈಟ್‌ಗಳನ್ನು ಒದಗಿಸಿದೆ.

ಬದಿಗಳಿಂದ ನೋಡುವಾಗ ಈ MPVಯ ಉದ್ದದ ವ್ಹೀಲ್ ಬೇಸ್ ಇದಕ್ಕೆ ದೊಡ್ಡ ಹೆಜ್ಜೆಗುರುತನ್ನು ನೀಡಿದೆ. ಪ್ರೊಫೈಲ್-ಹೈಲೈಟ್‌ಗಳು ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್‌ಗಳು, ಇಲೆಕ್ಟ್ರಾನಿಕ್ ಸ್ಲೈಡಿಂಗ್‌ನ ಹಿಂಭಾಗದ ಡೋರ್‌ಗಳನ್ನು ಒಳಗೊಂಡಿದೆ.

ಅತ್ಯಂತ ವಿಶಿಷ್ಟ ಡಿಸೈನ್ ಅಂಶಗಳು, ಇದನ್ನು ಸುತ್ತುವರಿದ LED ಟೇಲ್‌ಲೈಟ್‌ಗಳು ಮತ್ತು ಉದ್ದದ ಹಿಂಭಾಗದ ವಿಂಡ್‌ಸ್ಕ್ರೀನ್‌ನೊಂದಿಗೆ ಹಿಂಭಾಗವು ಸುಸ್ಪಷ್ಟವಾಗಿದೆ.

ಐಷಾರಾಮಿ ಕ್ಯಾಬಿನ್

ಈ ಲೆಕ್ಸಸ್ ಕ್ರೀಮ್-ಬಣ್ಣದ ಕ್ಯಾಬಿನ್ ಥೀಮ್ ಮತ್ತು ಕನಿಷ್ಠ ಡ್ಯಾಶ್‌ಬೋರ್ಡ್ ಲೇಔಟ್ ಹಾಗೂ ಡ್ರೈವರ್ ಡಿಸ್‌ಪ್ಲೇಗಾಗಿ ಎರಡು ದೊಡ್ಡದಾದ ಸ್ಕ್ರೀನ್‌ಗಳು ಮತ್ತು ಇನ್ಫೋಟೇನ್‌ ಸಿಸ್ಟಮ್‌ನಿಂದ ಸಜ್ಜುಗೊಂಡಿದೆ. ಎರಡನೆಯದು ಆಡಿಯೋ ಮತ್ತು ಕ್ಲೈಮೇಟ್ ಕಂಟ್ರೋಲ್‌ ಎರಡಕ್ಕೂ ಇಂಟೆಗ್ರೇಟಡ್ ಡಯಲ್‌ಗಳನ್ನು ಪಡೆದಿದೆ. ಈ MPV ಜಾಗತಿಕವಾಗಿ – 4-, 6- ಮತ್ತು 7-ಸೀಟು ಲೇಔಟ್‌ಗಳನ್ನು ಹೊಂದಿದ್ದು ಭಾರತೀಯ ಮಾರುಕಟ್ಟೆಗಾಗಿ ಕೇವಲ 4- ಮತ್ತು 6-ಸೀಟು ವೇರಿಯೆಂಟ್‌ಗಳನ್ನು ಮಾತ್ರ ನಿಗದಿಪಡಿಸಲಾಗಿದೆ.

MPVಯು ಎರಡನೇ ಸಾಲಿನಲ್ಲಿ ಎಲ್ಲಾ ಆಕರ್ಷಕ ಫೀಚರ್‌ಗಳನ್ನು ಪಡೆದಿರುವುದು, ಲೆಕ್ಸಸ್ LMನ ಪ್ರಮುಖ ಅಂಶವಾಗಿದೆ. ಇಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗಾಗಿ ವಿಶಾಲವಾದ ಅಟ್ಟೋಮನ್ ಸೀಟುಗಳು, ಸುತ್ತಲೂ ಇರುವ 23-ಸ್ಪೀಕರ್ ಸೌಂಡ್ ಸಿಸ್ಟಮ್, ಪಿಲ್ಲೋ ಶೈಲಿಯ ಹೆಡ್‌ರೆಸ್ಟ್‌ಗಳು, ಮತ್ತು ಕ್ಯಾಬಿನ್‌ನ ಮುಂಭಾಗ ಮತ್ತು ಹಿಂಭಾಗದ ನಡುವಿನ ವಿಭಜನೆಯ ಮೇಲೆ 48-ಇಂಚು ಬೃಹತ್ ಟಿವಿಯನ್ನು ಅಳವಡಿಸಲಾಗಿದೆ. ಅಲ್ಲದೇ 64-ಕಲರ್ ಆ್ಯಂಬಿಯೆಂಟ್ ಲೈಟಿಂಗ್, ಹೀಟಡ್ ಮತ್ತು ವೆಂಟಿಲೇಟಡ್ ಸೀಟುಗಳು ಮತ್ತು ಸಕ್ರಿಯ ಫೀಚರ್‌ಗಳ ಗುಂಪನ್ನೇ ಪಡೆದಿದೆ.

ಈ ಹೊಸ ಪೀಳಿಗೆ LMಗೆ ಲೆಕ್ಸಸ್ ಮೊದಲ ಬಾರಿಗೆ ಹೀಟೆಡ್ ಆರ್ಮ್‌ರೆಸ್ಟ್‌ಗಳು ಮತ್ತು ಒಟ್ಟೋಮನ್‌ಗಳು, ಹಿಂಭಾಗದ ಪವರ್ ಡೋರ್‌ಗಳಿಗೆ ಹೊಸ ಹ್ಯಾಂಡಲ್‌ಗಳು ಮತ್ತು ರೂಫ್‌ನೊಂದಿಗೆ ಸಂಯೋಜಿಸಲಾದ ಹಿಂಭಾಗದ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ನೀಡಿದೆ

ಇದನ್ನೂ ಓದಿ: 2024 ರಿಂದ ಭಾರತ್ NCAPಗೆ ಭಾರತೀಯ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ನಿಯಂತ್ರಣವನ್ನು ಹಸ್ತಾಂತರಿಸಲಿದೆ ಜಾಗತಿಕ NCAP

ಪವರ್‌ಟ್ರೇನ್ ಈಗ ತುಲನಾತ್ಮಕವಾಗಿ ಪರಿಸರಸ್ನೇಹಿ

ಜಾಗತಿಕವಾಗಿ ಲೆಕ್ಸಸ್ ಈ LMಗೆ ಎರಡು ಪವರ್‌ಟ್ರೇನ್ ಆಯ್ಕೆಗಳನ್ನು ನೀಡಿದೆ: ಒಂದು 2.4-ಟರ್ಬೋ ಮೈಲ್ಡ್ ಹೈಬ್ರಿಡ್ ಮತ್ತೊಂದು 2.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್. ಭಾರತ-ಸ್ಪೆಕ್ ಮಾಡೆಲ್‌ಗೆ ಎರಡನೆಯದನ್ನು ನೀಡುವ ಸಾಧ್ಯತೆ ಇದ್ದು ಯಾವುದನ್ನು ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಎಷ್ಟಿರಬಹುದು ಬೆಲೆ?

ಲೆಕ್ಸಸ್ ತನ್ನ ಎರಡನೇ ಪೀಳಿಗೆ LMಗೆ ವೆಲ್‌ಫೈರ್‌ಗಿಂತ ದುಬಾರಿ ಬೆಲೆಯನ್ನು ನಿಗದಿಪಡಿಸಿದ್ದು, ಇದು ರೂ1.20 ಕೋಟಿಯಿಂದ ರೂ 1.30 ಕೋಟಿಯಷ್ಟು (ಎಕ್ಸ್-ಶೋರೂಂ, ದೆಹಲಿ) ಇರಬಹುದೆಂದು ಅಂದಾಜಿಸಲಾಗಿದೆ. ಟೊಯೋಟಾ ವೆಲ್‌ಫೈರ್ ಮಾತ್ರ ಇದರ ನೇರ ಪ್ರತಿಸ್ಪರ್ಧಿಯಾಗಿರಲಿದ್ದು, ಇದು BMW X7 ಮತ್ತು ಮರ್ಸಿಡೀಸ್-ಬೆನ್ಝ್ GLS ಮುಂತಾದ 3-ಸಾಲಿನ ಐಷಾರಾಮಿ SUVಗಳಿಗೆ ಪರ್ಯಾಯವಾಗಲಿದೆ . ಶೀಘ್ರದಲ್ಲೇ ಮರ್ಸಿಡೀಸ್-ಬೆನ್ಝ್‌ V-ಕ್ಲಾಸ್ ಅನ್ನು ನಾವು ಹೊಸ ಅವತಾರದಲ್ಲಿ ನಿರೀಕ್ಷಿಸುತ್ತಿದ್ದು, ಇದು ಲೆಕ್ಸಸ್ LM ಗೆ ಪ್ರತಿಸ್ಪರ್ಧಿಯಾಗಿರಲಿದೆ

ಇದನ್ನೂ ಓದಿ: ಬಂದೇಬಿಡ್ತು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ!

r
ಅವರಿಂದ ಪ್ರಕಟಿಸಲಾಗಿದೆ

rohit

  • 28 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Lexus ಎಲ್.ಎಂ

Read Full News

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ