Login or Register ಅತ್ಯುತ್ತಮ CarDekho experience ಗೆ
Login

ಕೊಳ್ಳಬೇಕೆ ಅಥವಾ ಕಾಯಬೇಕೆ ಟಾಟಾ ಅಲ್ಟ್ರಾಜ್ ಗಾಗಿ ಅಥವಾ ಪ್ರತಿಸ್ಪರ್ದಿಗಳನ್ನು ಪರಿಗಣಿಸಬೇಕೇ?

published on ಡಿಸೆಂಬರ್ 26, 2019 02:23 pm by sonny for ಟಾಟಾ ಆಲ್ಟ್ರೋಝ್ 2020-2023

ಟಾಟಾ ಅವರ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾಯಲು ಈಗಾಗಲೇ ತ್ವರಿತವಾಗಿ ಲಭ್ಯವಿರುವ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ ಸೂಕ್ತವಾಗಿದೆಯೇ?

ಟಾಟಾ ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗವನ್ನು ಸೇರಲು ತಯಾರಿದೆ ಅಲ್ಟ್ರಾಜ್ ಒಂದಿಗೆ. ಇದನ್ನು 2019- ಮದ್ಯದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದ್ದಿದ್ದರು ಸಹ, ಅಲ್ಟ್ರಾಜ್ ಬಿಡುಗಡೆಯನ್ನು 22 ಜನವರಿ 2020 ಗೆ ಮುಂದೂಡಲಾಗಿದೆ. ಅದರ ಪ್ರತಿಸ್ಪರ್ಧೆ ಮಾರುತಿ ಸುಜುಕಿ ಬಲೆನೊ, ಹುಂಡೈ ಎಲೈಟ್ i20, ಹೋಂಡಾ ಜಾಜ್, ಟೊಯೋಟಾ ಗ್ಲಾನ್ಝ, ಮತ್ತು ವೋಕ್ಸ್ವ್ಯಾಗನ್ ಪೋಲೊ ಗಳೊಂದಿಗೆ. ಪ್ರಶ್ನೆ ನೀವು ಅಲ್ಟೋಜ್ ಗಾಗಿ ಕಾಯುವುದು ಸೂಕ್ತವೇ ಅಥವಾ ಈಗಾಗಲೇ ಲಭ್ಯವಿರುವ ಪ್ರತಿಸ್ಪರ್ದಿಗಳಲ್ಲಿ ಆಯ್ಕೆ ಮಾಡಬೇಕೆ?

ಪ್ರೀಮಿಯಂ ಹ್ಯಾಚ್ ಬ್ಯಾಕ್

ಬೆಲೆ ವ್ಯಾಪ್ತಿ (ಎಕ್ಸ್ ಶೋ ರೂಮ್ ದೆಹಲಿ )

ಟಾಟಾ ಅಲ್ಟ್ರಾಜ್

ರೊ 5.49 ಲಕ್ಷ ದಿಂದ ರೊ 8.49 ಲಕ್ಷ (ನಿರೀಕ್ಷಿತ) ವರೆಗೆ

ಮಾರುತಿ ಸುಜುಕಿ ಬಲೆನೊ

ರೊ 5.59 ಲಕ್ಷ ದಿಂದ ರೊ 8.90 ಲಕ್ಷ ವರೆಗೆ

ಹುಂಡೈ ಎಲೈಟ್ i20

ರೊ 5.53 ಲಕ್ಷ ದಿಂದ ರೊ 9.34 ಲಕ್ಷ ವರೆಗೆ

ಟೊಯೋಟಾ ಗ್ಲಾನ್ಝ

ರೊ 6.98 ಲಕ್ಷ ದಿಂದ ರೊ 8.90 ಲಕ್ಷ ವರೆಗೆ

ಹೋಂಡಾ ಜಾಜ್

ರೊ 7.45 ಲಕ್ಷ ದಿಂದ ರೊ 9.41 ಲಕ್ಷ ವರೆಗೆ

ವೋಕ್ಸ್ವ್ಯಾಗನ್ ಪೋಲೊ

ರೊ 5.82 ಲಕ್ಷ ದಿಂದ ರೊ 9.32 ಲಕ್ಷ ವರೆಗೆ

ಮಾರುತಿ ಸುಜುಕಿ ಬಲೆನೊ: BS6 ಪೆಟ್ರೋಲ್ ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ಜೊತೆಗೆ ಮೈಲ್ಡ್ ಹೈಬ್ರಿಡ್ ಕೊಳ್ಳಬಹುದು.

ಅತಿ ಉತ್ತಮವಾಗಿ ಮಾರಾಟವಾಗುತ್ತಿರುವ ಪ್ರೀಮಿಯಂ ಹ್ಯಾಚ್ ಬ್ಯಾಕ್ ಆಕರ್ಷಕವಾದ ಬೆಲೆ ಪಟ್ಟಿ ಹೊಂದಿದೆ ಮತ್ತು ಅದು ಈ ವಿಭಾಗದಲ್ಲಿ ಮೊದಲಬಾರಿಗೆ BS6 ಪೆಟ್ರೋಲ್ ಪವರ್ ಟ್ರೈನ್ ಕೊಡುತ್ತಿದೆ. ಮಾರುತಿ ಕೊಡುತ್ತಿದೆ ಎರೆಡು BS6 1.2-ಲೀಟರ್ ಪೆಟ್ರೋಲ್ ಎಂಜಿನ್ ಗಳು - ಮೊದಲನೆಯದು ನವೀಕರಣಗೊಂಡ ನಾಚುರಲಿ ಆಸ್ಪಿರೇಟೆಡ್ ಎಂಜಿನ್ ಆಗಿದೆ ಮತ್ತೊಂದು ಹೊಸ ಡುಯಲ್ ಜೆಟ್ VVT ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ಸಿಟಿಎಮ್. ಎರೆಡನ್ನು 5-ಸ್ಪೀಡ್ ಮಾನ್ಯುಯಲ್ ಒಂದಿಗೆ ಸಂಯೋಜಿಸಲಾಗಿದೆ ಆದರೆ ಹೈಬ್ರಿಡ್ ಅಲ್ಲದ ಎಂಜಿನ್ ಪಡೆಯುತ್ತದೆ CVT ಆಟೋಮ್ಯಾಟಿಕ್ ಆಯ್ಕೆ. ಹೈಬ್ರಿಡ್ ಅಲ್ಲದ ಪೆಟ್ರೋಲ್ ಎಂಜಿನ್ ಅಧಿಕೃತ ARAI- ಶಿಫಾರಿಸಿದ ಮೈಲೇಜ್ 21.01kmpl ಮಾನ್ಯುಯಲ್ ವೇರಿಯೆಂಟ್ ನಲ್ಲಿ ಮತ್ತು 19.56kmpl ಆಟೋಮ್ಯಾಟಿಕ್ ನಲ್ಲಿ. ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಕೊಡುತ್ತಿದೆ ಉತ್ತಮಗೊಳಿಸಿದ ಮೈಲೇಜ್ 23.87kmpl. ಹೈಬ್ರಿಡ್ ಎಂಜಿನ್ ಕೊಡುತ್ತದೆ 90PS ಪವರ್ ಬೇರೆಯದು 83PS ಪವರ್ ಕೊಡುತ್ತದೆ, ಆದರೆ ಎರೆಡರಲ್ಲೂ ಒಂದೇ ಸಮನಾದ 115Nm ಟಾರ್ಕ್ ಲಭ್ಯವಿರುತ್ತದೆ.

ಸದ್ಯಕ್ಕೆ, ಬಲೆನೊ ದೊರೆಯುತ್ತಿದೆ BS4 1.3-ಲೀಟರ್ ಡೀಸೆಲ್ ಎಂಜಿನ್ 5-ಸ್ಪೀಡ್ ಮಾನ್ಯುಯಲ್ ಸಂಯೋಜನೆಯೊಂದಿಗೆ ದೊರೆಯುತ್ತದೆ, ಅದು 75PS/190Nm ಜೊತೆಗೆ ಅಧಿಕೃತ ಮೈಲೇಜ್ 27.39kmpl ಒಂದಿಗೆ.

ಮಾರುತಿ ಕೊಡುತ್ತಿದೆ ISOFIX ಚೈಲ್ಡ್ ಸೀಟ್ ಆಂಕರ್ ಗಳು ಸ್ಟ್ಯಾಂಡರ್ಡ್ ಆಗಿ ಮತ್ತು ರೇರ್ ವ್ಯೂ ಕ್ಯಾಮೆರಾ, LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಪುಶ್ ಬಟನ್ ಸ್ಟಾಪ್- ಸ್ಟಾರ್ಟ್, ಆಟೋ AC ಮತ್ತು 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಂಯೋಜನೆಗೆ ಅನುಗುಣವಾಗಿರುವುದು.

ಹುಂಡೈ ಎಲೈಟ್ i20: ಹೆಚ್ಚುವರಿ ಫೀಚರ್ ಗಳಾದ ಸುರಕ್ಷತೆ, ಮತ್ತು ಹೆಚ್ಚು ಶಕ್ತಿಯುತ ಡೀಸೆಲ್ ಎಂಜಿನ್ ಆಯ್ಕೆ ಗಾಗಿ ಕೊಳ್ಳಬಹುದು.

ಹುಂಡೈ ಎಲೈಟ್ i20 ಬಹಳಷ್ಟು ಬಾರಿ ಪ್ರೀಮಿಯಂ ಫೀಚರ್ ಗಳಿಗಾಗಿ ಮೈಲಿಗಲ್ಲು ಸಾಧಿಸಿದೆ ಈ ವಿಭಾಗದಲ್ಲಿ. ಇದರಲ್ಲಿ ಮಾತ್ರವೇ 6 ಏರ್ಬ್ಯಾಗ್ ಗಳು ಹಾಗು ವಯರ್ಲೆಸ್ ಚಾರ್ಜಿನ್ಗ್ ಲಭ್ಯವಿದೆ. i20 ಪಡೆಯುತ್ತದೆ 7.0-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಟೋ ಲಿಂಕ್ ಕನೆಕ್ಟೆಡ್ ಕಾರ್ ತಂತ್ರಜ್ಞಾನ, ಆಟೋ AC ಜೊತೆಗೆ ರೇರ್ AC ವೆಂಟ್ ಗಳು, ಟಿಲ್ಟ್ ಮತ್ತು ಟೆಲೆಸ್ಕೋಪಿಕ್ ಸ್ಟಿಯರಿಂಗ್ ಅಳವಡಿಕೆ ಹಾಗು ಆಟೋಮ್ಯಾಟಿಕ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು.

ಎಲೈಟ್ i20 ಸದ್ಯಕ್ಕೆ ಎರೆಡು BS4 ಎಂಜಿನ್ ಗಳು - ಒಂದು 1.2- ಲೀಟರ್ ಪೆಟ್ರೋಲ್ ಮೋಟಾರ್ (83PS/115Nm) ಮತ್ತು ಒಂದು 1.4-ಲೀಟರ್ ಡೀಸೆಲ್ ಯುನಿಟ್ (90PS/220Nm). ಹುಂಡೈ ನ 1.4-ಲೀಟರ್ ಡೀಸೆಲ್ ಎಂಜಿನ್ ಗರಿಷ್ಟ ಟಾರ್ಕ್ ಕೊಡುವ ಮೋಟಾರ್ ಆಗಿದೆ ಈ ವಿಭಾಗದಲ್ಲಿ. ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ ಮಾನ್ಯುಯಲ್ ಜೊತೆಗೆ CVT ಆಟೋಮ್ಯಾಟಿಕ್ ಆಯ್ಕೆ ಲಭ್ಯವಿದೆ ಮತ್ತು ಡೀಸೆಲ್ ಮೋಟಾರ್ ಕೇವಲ 6-ಸ್ಪೀಡ್ ಮಾನ್ಯುಯಲ್ ಒಂದಿಗೆ ಲಭ್ಯವಿದೆ. ಹುಂಡೈ ಹ್ಯಾಚ್ ಬ್ಯಾಕ್ ಪೀಳಿಗೆಯ ನವೀಕರಣವನ್ನು 2020 ಯಲ್ಲಿ ಪಡೆಯಲಿದೆ ಜೊತೆಗೆ BS6 ಎಂಜಿನ್ ಸಹ ಲಭ್ಯವಿದೆ.

ಟೊಯೋಟಾ ಗ್ಲಾನ್ಝ: ಟೊಯೋಟಾ ಆಫ್ಟರ್ ಸೇಲ್ ಸರ್ವಿಸ್ ಮತ್ತು BS6 ಪೆಟ್ರೋಲ್ ಎಂಜಿನ್ ಗಾಗಿ ಕೊಳ್ಳಿ

ಗ್ಲಾನ್ಝ ಒಂದು ರೀ ಬ್ಯಾಡ್ಜ್ ಪಡೆದಿರುವ ಮಾರುತಿ ಸುಜುಕಿ ಬಲೆನೊ ಆವೃತ್ತಿ ಆಗಿದೆ. ಹೆಚ್ಚಿನ ಬೆಲೆ ಪಟ್ಟಿಗೆ ಇದು ಮದ್ಯ ಸ್ಪೆಕ್ ಸಮಾನತೆಗಳೊಂದಿಗೆ ಪ್ರಾರಂಭವಾಗುವುದು ಕಾರಣವಾಗಿದೆ. ಇದು ಪಡೆಯುತ್ತದೆ ಫೀಚರ್ ಗಳಾದ ಆಟೋ AC, 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎತ್ತರ ಅಳವಡಿಸಬಹುದಾದ ಡ್ರೈವರ್ ಸೀಟ್ ಮತ್ತು ಪುಶ್ ಬಟನ್ ಸ್ಟಾಪ್ -ಸ್ಟಾರ್ಟ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಗ್ಲಾನ್ಝ ತನ್ನ 1.2-ಲೀಟರ್ BS6 ಪೆಟ್ರೋಲ್ ಪವರ್ ಟ್ರೈನ್ ಅನ್ನು ಬಲೆನೊ ಜೊತೆಗೆ ಶೇರ್ ಮಾಡುತ್ತದೆ ಮತ್ತು ಆಯ್ಕೆಯಾಗಿ CVT-ಆಟೋಮ್ಯಾಟಿಕ್ ಸಹ ಹೈಬ್ರಿಡ್ ಅಲ್ಲದ ವೇರಿಯೆಂಟ್ ನಲ್ಲಿ ಲಭ್ಯವಿದೆ. ಗ್ಲಾನ್ಝ ದಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿಲ್ಲ.

ಟೊಯೋಟಾ ಗ್ಲಾನ್ಝ ವನ್ನು ಬಲೆನೊ ಗಿಂತಲೂ ವಿಭಿನ್ನವಾಗಿ ಮಾಡಿದೆ ಮೈಲ್ಡ್ ಹೈಬ್ರಿಡ್ ವೇರಿಯೆಂಟ್ ಅನ್ನು ರೂ 65,000 ಗೆ ಕೊಡುವುದರೊಂದಿಗೆ ಮಾರುತಿ ಸುಜುಕಿ ಗಿಂತಲೂ ಕಡಿಮೆ ಆಗಿ. ಹಾಗು ಅದು ಪಡೆಯುತ್ತದೆ 3- ವರ್ಷ /1-ಲಕ್ಷ km ವಾರಂಟಿ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. 2- ವರ್ಷ /40,000km ವಾರಂಟಿ ಇರುವ ಬಲೆನೊ ಗೆ ಹೋಲಿಸಿದರೆ. ಟೊಯೋಟಾ ಗ್ಲಾನ್ಝ ಜೊತೆಗೆ ಕೊಡುತ್ತಿದೆ 3-ವರ್ಷ ರೋಡ್ ಸೈಡ್ ಸಹಾಯ ಮತ್ತು ಎಕ್ಸ್ಟೆಂಡೆಡ್ ವಾರರಂತಿ ಗ್ಲಾನ್ಝ ಗಾಗಿ 5-ವಾರಂಟಿ /2.2 ಲಕ್ಷ km ಒಂದಿಗೆ.

ಹೋಂಡಾ ಜಾಜ್: ಅದರ ವಿಶಾಲತೆಗಾಗಿ ಕೊಳ್ಳಿರಿ

ಹೋಂಡಾ ಜಾಜ್ ಈ ವಿಭಾಗದಲ್ಲಿ ಹೆಚ್ಚು ಬೆಲೆ ಪಟ್ಟಿ ಹೊಂದಿರುವ ಕೊಡುಗೆ ಆಗಿದೆ ಆದರೂ ಯಾವುದೇ ವಿಶೇಷ ಫೀಚರ್ ಗಳನ್ನು ಕೊಡಲಾಗಿಲ್ಲ ಹೆಚ್ಚಿನ ಬೆಲೆಗೆ ತಕ್ಕಂತೆ. ಆದರೆ, ಅದು ವಿಶಾಲವಾದ ಹಾಗು ಪ್ರೀಮಿಯಂ ಕ್ಯಾಬಿನ್ ಅನುಭವವನ್ನು ಕೊಡುತ್ತದೆ 354-ಲೀಟರ್ ಬೂಟ್ ಈ ವಿಭಾಗದಲ್ಲಿ ಅತಿ ದೊಡ್ಡದಾಗಿದೆ. ಜಾಜ್ ನಲ್ಲಿ ಸಲಕರಣೆಗಳಾದ ಕ್ರೂಸ್ ಕಂಟ್ರೋಲ್, ಆಟೋ AC ಜೊತೆಗೆ ಟಚ್ ಪ್ಯಾನೆಲ್ ಕಂಟ್ರೋಲ್ ಗಳು, LED ಟೈಲ್ ಲ್ಯಾಂಪ್ ಗಳು, 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ , ಹಾಗು ರೇರ್ ಪಾರ್ಕಿಂಗ್ ಕ್ಯಾಮೆರಾ.

ಜಾಜ್ ಸದ್ಯಕ್ಕೆ BS4 ಆವೃತ್ತಿಯ ಎಂಜಿನ್ ಗಳಾದ 1.2- ಲೀಟರ್ ಪೆಟ್ರೋಲ್ ಯುನಿಟ್ (90PS/110Nm) ಮತ್ತು ಒಂದು 1.5- ಲೀಟರ್ ಡೀಸೆಲ್ ಎಂಜಿನ್ (100PS/200Nm) ಒಂದಿಗೆ ಲಭ್ಯವಿರುತ್ತದೆ. ಪೆಟ್ರೋಲ್ ಎಂಇಜಿನೆ ಪಡೆಯುತ್ತದೆ ಆಯ್ಕೆಯಾಗಿ 5- ಸ್ಪೀಡ್ ಮಾನ್ಯುಯಲ್ ಅಥವಾ 7-ಸ್ಟೆಪ್ CVT ಹಾಗು ಡೀಸೆಲ್ ಮೋಟಾರ್ ಕೇವಲ 6-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ ಲಭ್ಯವಿದೆ. ಡೀಸೆಲ್ ಎಂಜಿನ್ ಅಧಿಕೃತ ಮೈಲೇಜ್ 27.3kmpl ಆಗಿರುತ್ತದೆ.

ವೋಕ್ಸ್ವ್ಯಾಗನ್ ಪೋಲೊ: ನೀವು ಡ್ರೈವರ್ ಗಳಿಗೆ ಪ್ರಿಯವಾಗುವ ಮತ್ತು ಪೆಟ್ರೋಲ್ ಆಟೋಮ್ಯಾಟಿಕ್ ಆಯ್ಕೆ ಇರುವ ಕಾರ್ ಬಯಸಿದರೆ ಕೊಳ್ಳಿ

ವೋಕ್ಸ್ವ್ಯಾಗನ್ ಪೋಲೊ ಇತ್ತೀಚಿಗೆ ಚಿಕ್ಕ ಫೇಸ್ ಲಿಫ್ಟ್ ಪಡೆಯಿತು, ಆದರೆ ಈಗಲೂ BS4 ಎಂಜಿನ್ ಗಳಿಂದ ಪವರ್ ಪಡೆಯುತ್ತದೆ. ಎಂಜಿನ್ ಆಯ್ಕೆಯಲ್ಲಿ 1.0-ಲೀಟರ್ ಪೆಟ್ರೋಲ್ ಎಂಜಿನ್ (75PS/90Nm), 1.5- ಲೀಟರ್ ಡೀಸೆಲ್ ಎಂಜಿನ್ (90PS/230Nm) ಮತ್ತು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (105PS/175Nm) GT ಲೈನ್ ಜೊತೆಗೆ. ನಾಚುರಲಿ ಆಸ್ಪಿರೇಟೆಡ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಗಳನ್ನು 5-ಸ್ಪೀಡ್ ಮಾನ್ಯುಯಲ್ ಒಂದಿಗೆ ಸಂಯೋಜಿಸಲಾಗಿದೆ ಹಾಗು ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್ ಪಡೆಯುತ್ತದೆ 7- ಸ್ಪೀಡ್ DSG ಆಟೋಮ್ಯಾಟಿಕ್ ಪಡೆಯುತ್ತದೆ ಅದು ಗರಿಷ್ಟ ಪರಿಷ್ಕೃತ ಪೆಟ್ರೋಲ್ ಆಟೋಮ್ಯಾಟಿಕ್ ಆಯ್ಕೆ ಆಗಿದೆ ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ. GT ಲೈನ್ ಡೀಸೆಲ್ ವೇರಿಯೆಂಟ್ ಕೊಡುತ್ತದೆ ಸ್ವಲ್ಪ ಮಟ್ಟಿಗೆ ಹೆಚ್ಚಿದ ಕಾರ್ಯದಕ್ಷತೆ - 110PS ಮತ್ತು 250Nm.

ಪೋಲೊ ಅಂತರಿಕಗಳು ಗರಿಷ್ಟ ವಿಶಾಲತೆ ಪಡೆದಿಲ್ಲ ಅಥವಾ ಹೆಚ್ಚು ನವೀನತೆ ಪಡೆದಿಲ್ಲ. ವೋಕ್ಸ್ವ್ಯಾಗನ್ ಹ್ಯಾಚ್ ಬ್ಯಾಕ್ ಅದರ ಡ್ರೈವಿಂಗ್ ಅನುಭವದಲ್ಲಿ ವಿಶೇಷತೆ ಪಡೆದಿದೆ. ಅದು ಹೆಚ್ಚು ಫೀಚರ್ ಗಳನ್ನು ಪಡೆದಿದೆ ಕ್ರೂಸ್ ಕಂಟ್ರೋಲ್, ಆಟೋ AC, ಆಟೋ-ಡಿಮ್ಮಿಂಗ್ IRVM, ಮತ್ತು 6.5-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಅದು ರೇರ್ ವೆಂಟ್ ಸಹ ಪಡೆಯುತ್ತದೆ.

ರಿಯಾಯಿತಿಗಳು: ಪ್ರಮುಖವಾಗಿ ಗಮನಿಸಬೇಕಾದ ವಿಷಯವೆಂದರೆ ಮೇಲೆ ಹೇಳಿರುವ ಮಾಡೆಲ್ ಗಳು ಸದ್ಯಕ್ಕೆ ವರ್ಷದ ಕೊನೆಯ ರಿಯಾಯಿತಿಗಳೊಂದಿಗೆ ಲಭ್ಯವಿದೆ.

ಟಾಟಾ ಅಲ್ಟ್ರಾಜ್: ನೋಟಗಳು, ವಿಶಾಲವಾದ ಕ್ಯಾಬಿನ್, ಫ್ಯಾಕ್ಟರಿ ಅಳವಡಿಸಬಹುದಾದ ಆಯ್ಕೆಗಳು

ಟಾಟಾ ಅಲ್ಟ್ರಾಜ್ ಅನ್ನು ಟಾಪ್ ಸ್ಪೆಕ್ ವೇರಿಯೆಂಟ್ ಒಂದಿಗೆ ಅನಾವರಣಗೊಳಿಸಲಾಗಿದೆ ಅದರ ಬಿಡುಗಡೆಗೆ ಮುಂನ್ನ. ಅದನ್ನು ಎರೆಡು BS6 ಎಂಜಿನ್ ಆಯ್ಕೆಗಳು - 1.2- ಲೀಟರ್ ಪೆಟ್ರೋಲ್ ಎಂಜಿನ್ (86PS/113Nm) ಮತ್ತು 1.5- ಲೀಟರ್ ಡೀಸೆಲ್ ಎಂಜಿನ್ (90PS/200Nm) ಒಂದಿಗೆ ಬಿಡುಗಡೆ ಸಮಯಕ್ಕೆ. ಎರೆಡೂ ಎಂಜಿನ್ ಗಳು 5-ಸ್ಪೀಡ್ ಮಾನ್ಯುಯಲ್ ಒಂದಿಗೆ ಸಂಯೋಜಿಸಲಾಗಿದೆ. ಟಾಟಾ ಪೆಟ್ರೋಲ್ -ಆಟೋಮ್ಯಾಟಿಕ್ ವೇರಿಯೆಂಟ್ ಜೊತೆಗೆ ಡುಯಲ್ ಕ್ಲಚ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಬಿಡುಗಡೆ ನಂತರ ಪರಿಚಯಿಸಬಹುದು.

ಅಲ್ಟ್ರಾಜ್ ನಲ್ಲಿ ಫೀಚರ್ ಗಳಾದ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ 7-ಇಂಚು TFT ಡಿಸ್ಪ್ಲೇ, 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋ AC ಜೊತೆಗೆ ರೇರ್ AC ವೆಂಟ್ ಗಳು, ಕ್ರೂಸ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ಮತ್ತು ಐಡಲ್ ಸ್ಟಾಪ್ ಸ್ಟಾರ್ಟ್ ಕೊಡಲಾಗಿದೆ. ಟಾಟಾ ಪ್ರೀಮಿಯಂ ಹ್ಯಾಚ್ ಬ್ಯಾಕ್ ಮೊದಲ ಮಾಡೆಲ್ ಆಗಿದೆ ALFA ARC ವೇದಿಕೆಯಲ್ಲಿ ಮಾಡಲ್ಪಟ್ಟಿರುವುದು ಮತ್ತು ಅದರಲ್ಲಿ ಚಪ್ಪಟೆ ರೇರ್ ಫ್ಲೋರ್ ಮತ್ತು ಡೋರ್ ಗಳು 90-ಡಿಗ್ರಿ ವರೆಗೂ ತೆರೆಯಲ್ಪಡಬಹುದು ಸುಲಭವಾಗಿ ಒಳ ಹೋಗಲು ಹಾಗು ಹೊರ ಬರಲು.

ಟಾಟಾ ಕೊಡುತ್ತಿದೆ ಫ್ಯಾಕ್ಟರಿಯಲ್ಲಿ ಅಳವಡಿಸಬಹುದಾದ ಆಯ್ಕೆಗಳನ್ನು ಅಲ್ಟ್ರಾಜ್ ನಲ್ಲಿ ಈ ವಿಭಾಗದ ಮೊದಲ ಬಾರಿಯ ಫೀಚರ್ ಆಗಿ. ಕಾರ್ ಮೇಕರ್ ಅಲ್ಟ್ರಾಜ್ ಮಾಲೀಕರಿಗೆ ಕೆಳ ಹಂತದ -ಸ್ಪೆಕ್ ವೇರಿಯೆಂಟ್ ನಲ್ಲಿ ಹೆಚ್ಚುವರಿ ಫೀಚರ್ ಅಳವಡಿಸಲು ಅನುಕೂಲ ಮಾಡಿಕೊಟ್ಟಿದೆ. ಆಸಕ್ತಿ ಉಳ್ಳ ಗ್ರಾಹಕರು ತಮಗೆ ಇಷ್ಟವಾದ ಫ್ಯಾಕ್ಟರಿ ಸಂಯೋಜನೆ ಪ್ಯಾಕೇಜ್ ಅನ್ನು ಪ್ರಿ -ಬುಕಿಂಗ್ ಸಮಯದಲ್ಲೂ ಸಹ ಮಾಡಬಹುದು.

s
ಅವರಿಂದ ಪ್ರಕಟಿಸಲಾಗಿದೆ

sonny

  • 23 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಆಲ್ಟ್ರೋಝ್ 2020-2023

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ