• English
  • Login / Register

6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯಲಿರುವ Skoda Slavia ಮತ್ತು Kushaq

ಸ್ಕೋಡಾ ಸ್ಲಾವಿಯಾ ಗಾಗಿ shreyash ಮೂಲಕ ಮೇ 02, 2024 12:02 pm ರಂದು ಪ್ರಕಟಿಸಲಾಗಿದೆ

  • 32 Views
  • ಕಾಮೆಂಟ್‌ ಅನ್ನು ಬರೆಯಿರಿ

ಬೆಲೆ ಹೆಚ್ಚಳದಿಂದ ಸ್ಲಾವಿಯಾ ಮತ್ತು ಕುಶಾಕ್‌ನ ಬೇಸ್-ಸ್ಪೆಕ್ ಆಕ್ಟಿವ್ ಮತ್ತು ಮಿಡ್-ಸ್ಪೆಕ್ ಆಂಬಿಷನ್ ವೇರಿಯಂಟ್ ಗಳ ಬೆಲೆಗಳಲ್ಲಿ ಏರಿಕೆಯಾಗಲಿದೆ

Skoda Slavia And Skoda Kushaq

ಸ್ಕೋಡಾ ಸ್ಲಾವಿಯಾ ಮತ್ತು ಸ್ಕೋಡಾ ಕುಶಾಕ್ ನ ಎಲ್ಲಾ ವೇರಿಯಂಟ್ ಗಳಲ್ಲಿ ಈಗ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಆದರೆ, ಈ ಸುರಕ್ಷತಾ ಅಪ್ಡೇಟ್ ನಿಂದಾಗಿ, ಸ್ಲಾವಿಯಾ ಮತ್ತು ಕುಶಾಕ್ ಬೆಲೆಗಳು ರೂ. 35,000 ವರೆಗೆ ಹೆಚ್ಚಾಗಿದೆ. ಹೆಚ್ಚಿನ ವಿವರಗಳನ್ನು ಪಡೆಯುವ ಮೊದಲು, ಎರಡೂ ಕಾರುಗಳ ಪರಿಷ್ಕೃತ ಬೆಲೆಗಳನ್ನು ನೋಡೋಣ.

 ಸ್ಕೋಡಾ ಸ್ಲಾವಿಯಾ 

ವೇರಿಯಂಟ್

 ಹಳೆ ಬೆಲೆ

 ಹೊಸ ಬೆಲೆ

 ವ್ಯತ್ಯಾಸ

 1-ಲೀಟರ್ ಟರ್ಬೊ-ಪೆಟ್ರೋಲ್ ಮಾನ್ಯುಯಲ್

 ಆಕ್ಟಿವ್

 ರೂ. 11.53 ಲಕ್ಷ

 ರೂ. 11.63 ಲಕ್ಷ

 + ರೂ. 10,000

 ಆಂಬಿಷನ್

 ರೂ. 13.43 ಲಕ್ಷ

 ರೂ. 13.68 ಲಕ್ಷ

 + ರೂ. 35,000

 ಸ್ಟೈಲ್

 ರೂ. 15.63 ಲಕ್ಷ

 ರೂ. 15.63 ಲಕ್ಷ

 ಯಾವುದೇ ಬದಲಾವಣೆ ಇಲ್ಲ

 1-ಲೀಟರ್ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್

 ಆಂಬಿಷನ್

 ರೂ. 14.73 ಲಕ್ಷ

 ರೂ. 15.08 ಲಕ್ಷ

 + ರೂ. 35,000

 ಸ್ಟೈಲ್

 ರೂ. 16.93 ಲಕ್ಷ

 ರೂ. 16.93 ಲಕ್ಷ

 ಯಾವುದೇ ಬದಲಾವಣೆ ಇಲ್ಲ

1.5-ಲೀಟರ್ ಟರ್ಬೊ-ಪೆಟ್ರೋಲ್ ಮಾನ್ಯುಯಲ್

 ಸ್ಟೈಲ್

 ರೂ. 17.43 ಲಕ್ಷ

 ರೂ. 17.43 ಲಕ್ಷ

 ಯಾವುದೇ ಬದಲಾವಣೆ ಇಲ್ಲ

 1.5-ಲೀಟರ್ ಟರ್ಬೊ-ಪೆಟ್ರೋಲ್ DCT

 ಸ್ಟೈಲ್

 ರೂ. 18.83 ಲಕ್ಷ

 ರೂ. 18.83 ಲಕ್ಷ

 ಯಾವುದೇ ಬದಲಾವಣೆ ಇಲ್ಲ

 ಸ್ಕೋಡಾ ಕುಶಾಕ್

ವೇರಿಯಂಟ್

 ಹಳೆ ಬೆಲೆ

ಹೊಸ ಬೆಲೆ

 ವ್ಯತ್ಯಾಸ

 1-ಲೀಟರ್ ಟರ್ಬೊ-ಪೆಟ್ರೋಲ್ ಮಾನ್ಯುಯಲ್

 ಆಕ್ಟಿವ್

 ರೂ. 11.89 ಲಕ್ಷ

 ರೂ. 11.99 ಲಕ್ಷ

 + ರೂ. 10,000

 ಓನಿಕ್ಸ್

 ರೂ. 12.79 ಲಕ್ಷ

 ರೂ. 12.89 ಲಕ್ಷ

 + ರೂ. 10,000

 ಆಂಬಿಷನ್

 ರೂ. 14.19 ಲಕ್ಷ

 ರೂ. 14.54 ಲಕ್ಷ

 + ರೂ. 35,000

 ಸ್ಟೈಲ್

 ರೂ. 16.59 ಲಕ್ಷ

 ರೂ. 16.59 ಲಕ್ಷ

 ಯಾವುದೇ ಬದಲಾವಣೆ ಇಲ್ಲ

 1-ಲೀಟರ್ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್

 ಆಂಬಿಷನ್

 ರೂ. 15.49 ಲಕ್ಷ

 ರೂ. 15.84 ಲಕ್ಷ

 + ರೂ. 35,000

 ಸ್ಟೈಲ್

 ರೂ. 17.89 ಲಕ್ಷ

 ರೂ. 17.89 ಲಕ್ಷ

 ಯಾವುದೇ ಬದಲಾವಣೆ ಇಲ್ಲ

 1.5-ಲೀಟರ್ ಟರ್ಬೊ-ಪೆಟ್ರೋಲ್ ಮಾನ್ಯುಯಲ್

 ಸ್ಟೈಲ್

 ರೂ. 18.39 ಲಕ್ಷ

 ರೂ. 18.39 ಲಕ್ಷ

 ಯಾವುದೇ ಬದಲಾವಣೆ ಇಲ್ಲ

 1.5-ಲೀಟರ್ ಟರ್ಬೊ-ಪೆಟ್ರೋಲ್ DCT

 ಸ್ಟೈಲ್

 ರೂ. 19.79 ಲಕ್ಷ

 ರೂ. 19.79 ಲಕ್ಷ

 ಯಾವುದೇ ಬದಲಾವಣೆ ಇಲ್ಲ

 ಈ ಸುರಕ್ಷತಾ ಫೀಚರ್ ಗಳ ಸೇರ್ಪಡೆಯೊಂದಿಗೆ, ಸ್ಕೋಡಾ ಸ್ಲಾವಿಯಾ ಮತ್ತು ಸ್ಕೋಡಾ ಕುಶಾಕ್ ಎರಡರ ಬೇಸ್-ಸ್ಪೆಕ್ ಆಕ್ಟಿವ್ ವೇರಿಯಂಟ್ ಗಳು ಈಗ ರೂ. 10,000 ಹೆಚ್ಚು ದುಬಾರಿಯಾಗಿದೆ, ಹಾಗೆಯೇ ಎರಡೂ ಕಾರುಗಳ ಮಿಡ್-ಸ್ಪೆಕ್ ಆಂಬಿಷನ್ ವೇರಿಯಂಟ್ ಗಳು ಈಗ ರೂ 35,000 ಹೆಚ್ಚು ದುಬಾರಿಯಾಗಿದೆ. ಎರಡೂ ಕಾರುಗಳ ಟಾಪ್-ಸ್ಪೆಕ್ ಸ್ಟೈಲ್ ವೇರಿಯಂಟ್ ಗಳಲ್ಲಿ 6 ಏರ್‌ಬ್ಯಾಗ್‌ಗಳು ಈಗಾಗಲೇ ಇರುವುದರಿಂದ ಅವುಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

 ಇದನ್ನು ಕೂಡ ಓದಿ: ಮೇ 2024 ರಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇರುವ 3 ಹೊಸ ಕಾರುಗಳು

 ನೀಡಲಾಗಿರುವ ಇತರ ಫೀಚರ್ ಗಳು

 ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ ಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ AC ಮತ್ತು ಸನ್‌ರೂಫ್‌ ಫೀಚರ್ ಗಳನ್ನು ನೀಡಲಾಗಿದೆ. ಅವುಗಳಿಗೆ ಪವರ್ಡ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಕೂಡ ನೀಡಲಾಗಿದೆ.

 ಸುರಕ್ಷತೆಗಾಗಿ ಎರಡೂ ಕಾರುಗಳಿಗೆ ಹಿಲ್ ಹೋಲ್ಡ್ ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS), ಮತ್ತು ಹಿಂಬದಿಯ ಕ್ಯಾಮರಾವನ್ನು ನೀಡಲಾಗಿದೆ. ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಎರಡೂ ಕೂಡ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಈಗಾಗಲೇ 5 ಸ್ಟಾರ್‌ಗಳನ್ನು ಪಡೆದಿವೆ.

 ಪವರ್‌ಟ್ರೇನ್ ಆಯ್ಕೆಗಳು

 ಸ್ಲಾವಿಯಾ ಮತ್ತು ಕುಶಾಕ್, ಎರಡೂ ಕೂಡ ಎರಡು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತವೆ.

 ಎಂಜಿನ್

 1-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಟರ್ಬೊ-ಪೆಟ್ರೋಲ್

 ಪವರ್

115 PS

150 PS

 ಟಾರ್ಕ್

178 Nm

250 Nm

 ಟ್ರಾನ್ಸ್‌ಮಿಷನ್

 6-ಸ್ಪೀಡ್ MT, 6-ಸ್ಪೀಡ್ AT

 6-ಸ್ಪೀಡ್ MT, 6-ಸ್ಪೀಡ್ DCT

 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಕ್ಟಿವ್ ಸಿಲಿಂಡರ್ ಡಿಆಕ್ಟಿವೇಷನ್ ಟೆಕ್ನೋಲೊಜಿಯೊಂದಿಗೆ ಬರುತ್ತದೆ, ಇದು ಹೆಚ್ಚು ಶಕ್ತಿಯ ಅಗತ್ಯವಿಲ್ಲದಿದ್ದಾಗ ಅದರ ನಾಲ್ಕು ಸಿಲಿಂಡರ್‌ಗಳಲ್ಲಿ ಎರಡನ್ನು ಆಫ್ ಮಾಡುತ್ತದೆ, ಆ ಮೂಲಕ ಇಂಧನವನ್ನು ಉಳಿಸುತ್ತದೆ.

 ಪ್ರತಿಸ್ಪರ್ಧಿಗಳು

 ಸ್ಕೋಡಾ ಸ್ಲಾವಿಯಾ ಹೋಂಡಾ ಸಿಟಿ, ಫೋಕ್ಸ್‌ವ್ಯಾಗನ್ ವರ್ಟಸ್, ಹ್ಯುಂಡೈ ವೆರ್ನಾ ಮತ್ತು ಮಾರುತಿ ಸಿಯಾಜ್‌ಗಳೊಂದಿಗೆ ಸ್ಪರ್ಧಿಸುತ್ತದೆ, ಹಾಗೆಯೇ ಕುಶಾಕ್ ವೋಕ್ಸ್‌ವ್ಯಾಗನ್ ಟೈಗುನ್, ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಹೋಂಡಾ ಎಲಿವೇಟ್ ಮತ್ತು ಸಿಟ್ರೊನ್ C3 ಏರ್ಕ್ರಾಸ್ ಗೆ ಪ್ರತಿಸ್ಪರ್ಧಿಯಾಗಿದೆ.

 ಇನ್ನಷ್ಟು ಓದಿ: ಸ್ಕೋಡಾ ಸ್ಲಾವಿಯಾ ಆಟೋಮ್ಯಾಟಿಕ್

 

was this article helpful ?

Write your Comment on Skoda ಸ್ಲಾವಿಯಾ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience