• English
  • Login / Register

BYD ಸೀಲ್ ಬುಕಿಂಗ್ ಓಪನ್, ಭಾರತದ ಸ್ಪೆಸಿಫಿಕೇಷನ್ ಗಳನ್ನು ಬಹಿರಂಗ

ಬಿವೈಡಿ ಸೀಲ್ ಗಾಗಿ ansh ಮೂಲಕ ಫೆಬ್ರವಾರಿ 28, 2024 05:50 pm ರಂದು ಮಾರ್ಪಡಿಸಲಾಗಿದೆ

  • 27 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಲೆಕ್ಟ್ರಿಕ್ ಸೆಡಾನ್ ಅನ್ನು ಎರಡು ಬ್ಯಾಟರಿ ಪ್ಯಾಕ್ ಮತ್ತು ರಿಯರ್-ವೀಲ್-ಡ್ರೈವ್ ಅಥವಾ ಆಲ್-ವೀಲ್-ಡ್ರೈವ್ ಆಯ್ಕೆಗಳೊಂದಿಗೆ ನೀಡಲಾಗುವುದು  

BYD Seal Bookings Open, India Specifications Revealed

  •  BYD ಸೀಲ್ ಅನ್ನು ಮಾರ್ಚ್ 5 ರ ಬಿಡುಗಡೆ ದಿನಾಂಕದ ಮೊದಲು ರೂ 1 ಲಕ್ಷದ ಟೋಕನ್ ಮೊತ್ತಕ್ಕೆ ಬುಕ್ ಮಾಡಬಹುದು.
  •  ಭಾರತದಲ್ಲಿ, ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ: 61.4 kWh ಮತ್ತು 82.5 kWh.    
  •  ಇದು 570 ಕಿಮೀ ವರೆಗಿನ WLTP-ಕ್ಲೈಮ್ ಮಾಡಿದ ರೇಂಜ್ ನೊಂದಿಗೆ ರಿಯರ್-ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಎರಡೂ ಸೆಟಪ್‌ಗಳನ್ನು ಪಡೆಯುತ್ತದೆ.      
  •  ಭಾರತದಲ್ಲಿ, ಇದನ್ನು ಮೂರು ವೇರಿಯಂಟ್ ಗಳಲ್ಲಿ ನೀಡಲಾಗುವುದು: ಡೈನಾಮಿಕ್ ರೇಂಜ್, ಪ್ರೀಮಿಯಂ ರೇಂಜ್ ಮತ್ತು ಪರ್ಫಾರ್ಮೆನ್ಸ್.
  •  ಇದರ ಬೆಲೆಯು ರೂ 55 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.

 BYD ಸೀಲ್ ಅನ್ನು ಭಾರತದಲ್ಲಿ ಮಾರ್ಚ್ 5 ರಂದು ಬಿಡುಗಡೆ ಮಾಡಲಾಗುವುದು ಮತ್ತು ಅದರ ಆರ್ಡರ್ ಬುಕ್ ಈಗಾಗಲೇ ಓಪನ್ ಆಗಿದೆ. ನೀವು ಸೀಲ್‌ ಅನ್ನು ಖರೀದಿಸಲು ಆಸಕ್ತಿ ಹೊಂದಿದ್ದರೆ, 1 ಲಕ್ಷ ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಈ ಎಲೆಕ್ಟ್ರಿಕ್ ಸೆಡಾನ್ ಅನ್ನು ಬುಕ್ ಮಾಡಬಹುದು ಮತ್ತು ಅದರ ಡೆಲಿವರಿಯು ಏಪ್ರಿಲ್ 2024 ರಿಂದ ಪ್ರಾರಂಭವಾಗಬಹುದು. ಇದರ ಸ್ಪೆಸಿಫಿಕೇಷನ್ ಗಳನ್ನು ನೀವು ಇಲ್ಲಿ ನೋಡಬಹುದು.

 ಡೈಮೆನ್ಷನ್ಸ್

 ಉದ್ದ

 4800 ಮಿ.ಮೀ

 ಅಗಲ

 1875 ಮಿ.ಮೀ

 ಎತ್ತರ

 1460 ಮಿ.ಮೀ

 ವೀಲ್ ಬೇಸ್

 2920 ಮಿ.ಮೀ

 ಬೂಟ್ ಸ್ಪೇಸ್

 400 ಲೀಟರ್

 ಫ್ರಂಕ್

 50 ಲೀಟರ್

 BYD ಸೀಲ್ ಉದ್ದದಲ್ಲಿ ಟೊಯೋಟಾ ಕ್ಯಾಮ್ರಿಯನ್ನು ಹೋಲುತ್ತದೆ. EV ಆಗಿರುವ ಕಾರಣ, ಇದು ಫ್ರಂಕ್ (ಮುಂಭಾಗದ ಟ್ರಂಕ್) ಸ್ಟೋರೇಜ್ ನೊಂದಿಗೆ ಬರುತ್ತದೆ ಮತ್ತು 400 ಲೀಟರ್ ಬೂಟ್ ಸ್ಪೇಸ್ ಅನ್ನು ಕೂಡ ಪಡೆಯುತ್ತದೆ.

 ಬ್ಯಾಟರಿ ಪ್ಯಾಕ್ ಮತ್ತು ರೇಂಜ್

BYD Seal Battery Pack

 ಭಾರತದಲ್ಲಿ, BYD ಸೀಲ್ ಅನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಮತ್ತು ವೇರಿಯಂಟ್ ಅನ್ನು ವಿಭಿನ್ನ ಮಟ್ಟದ ಪರ್ಫಾರ್ಮೆನ್ಸ್ ಆಧಾರದ ಮೇಲೆ ನೀಡಲಾಗುತ್ತದೆ. ಈ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ವಿವರಿಸಲಾಗಿದೆ:

 ಬ್ಯಾಟರಿ ಪ್ಯಾಕ್

61.4 kWh

82.5 kWh

82.5 kWh

 ವಿದ್ಯುತ್ ಮೋಟಾರ್

Single

ಸಿಂಗಲ್

Single

ಸಿಂಗಲ್

Dual

ಡ್ಯುಯಲ್

 ಪವರ್

204 PS

313 PS

560 PS

 ಟಾರ್ಕ್

310 Nm

360 Nm

670 Nm

 ಕ್ಲೇಮ್ ಮಾಡಿರುವ ರೇಂಜ್ (WLTC)

 460 ಕಿ.ಮೀ

 570 ಕಿ.ಮೀ

 520 ಕಿ.ಮೀ

 0-100 ಕಿ.ಮೀ ಪ್ರತಿ ಗಂಟೆಗೆ   

 7.5 ಸೆಕೆಂಡುಗಳು

 5.9 ಸೆಕೆಂಡುಗಳು

 3.8 ಸೆಕೆಂಡುಗಳು

 ಸೀಲ್ 150 kW ವರೆಗಿನ DC ಸ್ಪೀಡ್ ಚಾರ್ಜಿಂಗ್ ಅನ್ನು ಸಹ ಸಪೋರ್ಟ್ ಮಾಡುತ್ತದೆ, ಇದನ್ನು ಬಳಸಿಕೊಂಡು ಅದರ ಬ್ಯಾಟರಿ ಪ್ಯಾಕ್ ಅನ್ನು ಕೇವಲ 26 ನಿಮಿಷಗಳಲ್ಲಿ 30 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.

 ಫೀಚರ್ ಗಳು ಮತ್ತು ಸುರಕ್ಷತೆ

BYD Seal Cabin

 BYD ಸೀಲ್ ಭಾರತದಲ್ಲಿ ಈ ಕಾರು ತಯಾರಕರ ಮೂರನೇ ಕೊಡುಗೆಯಾಗಿದೆ ಮತ್ತು BYD ಆಟ್ಟೋ 3 ಎಲೆಕ್ಟ್ರಿಕ್ SUV ಯಲ್ಲಿ ನಮ್ಮ ಗಮನ ಸೆಳೆದ ಕೆಲವು ವಿಶಿಷ್ಟ ಫೀಚರ್ ಗಳನ್ನು ಪಡೆಯಲಿದೆ. ಸೀಲ್ ನ ಒಳಭಾಗದಲ್ಲಿ, ತಿರುಗುವ 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದೆ ಮತ್ತು ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಅನ್ನು ಸಪೋರ್ಟ್ ಮಾಡುತ್ತದೆ. ಇದು 10.25-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಎರಡು ವೈರ್‌ಲೆಸ್ ಫೋನ್ ಚಾರ್ಜರ್‌ಗಳು, ಮೆಮೊರಿ ಫಂಕ್ಷನ್ ನೊಂದಿಗೆ 8-ವೇ ಪವರ್ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಹೆಡ್ಸ್-ಅಪ್ ಡಿಸ್ಪ್ಲೇ, ಹೀಟೆಡ್ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟ್‌ಗಳು ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಕೂಡ ಪಡೆಯುತ್ತದೆ.

 ಇದನ್ನೂ ಓದಿ: ಸ್ಕೋಡಾ ಇಂಡಿಯಾ ಸಬ್ -4m SUV 2025 ರಲ್ಲಿ ಬರುವುದನ್ನು ದೃಢಪಡಿಸಲಾಗಿದೆ

 ಸೀಲ್ ಪ್ಯಾಸೆಂಜರ್ ಗಳ ಸುರಕ್ಷತೆಗಾಗಿ, 8 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಹಿಲ್ ಹೋಲ್ಡ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಅನ್ನು ಒಳಗೊಂಡಿರುವ ADAS ಫೀಚರ್ ಗಳ ಸಂಪೂರ್ಣ ಕಿಟ್ ಅನ್ನು ಹೊಂದಿದೆ. BYD ಸೀಲ್ ಯುರೋ NCAP ಮತ್ತು ANCAP ನಿಂದ 5-ಸ್ಟಾರ್ ಕ್ರ್ಯಾಶ್ ಟೆಸ್ಟ್ ಸುರಕ್ಷತಾ ರೇಟಿಂಗ್ ಅನ್ನು ಕೂಡ ಪಡೆದುಕೊಂಡಿದೆ.

 ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

BYD Seal

 BYD ಸೀಲ್‌ನ ಬೆಲೆಯು ರೂ 55 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋ ರೂಂ) ಮತ್ತು ಇದು BMW i4 ಗೆ ಹೋಲಿಸಿದರೆ ಕೈಗೆಟುಕುವ ಬೆಲೆಯ ಪ್ರತಿಸ್ಪರ್ಧಿಯಾಗಿದೆ. ಇದು ಹ್ಯುಂಡೈ ಐಯೋನಿಕ್ 5, ಕಿಯಾ EV6 ಮತ್ತು ವೋಲ್ವೋ C40 ರೀಚಾರ್ಜ್‌ಗೆ ಪರ್ಯಾಯ ಆಯ್ಕೆಯಾಗಲಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on BYD ಸೀಲ್

Read Full News

explore ಇನ್ನಷ್ಟು on ಬಿವೈಡಿ ಸೀಲ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience