2025 ರಲ್ಲಿ ಭಾರತಕ್ಕೆ ಸಬ್-4ಎಮ್‌ ಎಸ್‌ಯುವಿ ಆಗಮಿಸುವುದನ್ನು ದೃಢಪಡಿಸಿದ Skoda

published on ಫೆಬ್ರವಾರಿ 28, 2024 08:17 pm by rohit for skoda sub 4 meter suv

 • 39 Views
 • ಕಾಮೆಂಟ್‌ ಅನ್ನು ಬರೆಯಿರಿ

ಭಾರತಕ್ಕೆ ಸ್ಕೋಡಾದ ಮೊದಲ ಇವಿ, ಎನ್ಯಾಕ್ iVಯನ್ನು 2024ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುವುದೆಂದು ದೃಢಪಡಿಸಲಾಗಿದೆ

Skoda India's future plans announced

 • ಹೊಸ ಸಬ್-4ಎಮ್‌ ಎಸ್‌ಯುವಿಯನ್ನು ಮಾರ್ಚ್ 2025 ರೊಳಗೆ ಬಿಡುಗಡೆ ಮಾಡಲಾಗುವುದೆಂದು ದೃಢಪಡಿಸಲಾಗಿದೆ; ಮೊದಲ ಡಿಸೈನ್ ಸ್ಕೆಚ್ ಟೀಸರ್ ಬಿಡುಗಡೆಯಾಗಿದೆ.
 • ಸ್ಕೋಡಾ ಕರೀಕ್, ಸ್ಕೋಡಾ ಕ್ವಿಕ್, ಮತ್ತು ಸ್ಕೋಡಾ ಕೈರೋಕ್ ಸೇರಿದಂತೆ ಕೆಲವು ಹೆಸರುಗಳನ್ನು ಇದಕ್ಕೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ.
 • ಕುಶಾಕ್ ಎಕ್ಸ್‌ಪ್ಲೋರರ್ ಕಾನ್ಸೆಪ್ಟ್‌ ಅನ್ನು ಸಹ ಪ್ರದರ್ಶಿಸಲಾಯಿತು; ಅಧಿಕೃತ ಉತ್ಪನ್ನವಾಗಿ ಬಿಡುಗಡೆ ಮಾಡಲಾಗುವುದಿಲ್ಲ.

 'ಇಂಡಿಯಾ 2.0' ಯೋಜನೆಯ ಭಾಗವಾಗಿ ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾವನ್ನು ಪರಿಚಯಿಸಿದ ನಂತರ, ಜೆಕ್ ಮೂಲದ ಈ ಕಾರು ತಯಾರಕರು ಈಗ ನಮ್ಮ ಮಾರುಕಟ್ಟೆಯ ಮುಂದಿನ ಹಂತದ ಮಾರ್ಗಸೂಚಿಯನ್ನು ಬಹಿರಂಗಪಡಿಸಿದ್ದಾರೆ. ಸ್ಕೋಡಾ ಭಾರತದಲ್ಲಿ ತೀವ್ರವಾಗಿ ಬೇಡಿಕೆ ಇರುವ ಸಬ್-4ಎಮ್‌ ಎಸ್‌ಯುವಿ ಸೆಗ್ಮೆಂಟ್‌ಗೆ   ಪ್ರವೇಶಿಸಲು ತಯಾರಿಯಲ್ಲಿದೆ, ಪ್ರಸ್ತುತ ಟಾಟಾ ನೆಕ್ಸಾನ್ ಮತ್ತು ಮಾರುತಿ ಬ್ರೆಜ್ಜಾ ಈ ಸೆಗ್ಮೆಂಟ್‌ನಲ್ಲಿ ಪ್ರಾಬಲ್ಯ ಹೊಂದಿದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತಕ್ಕಾಗಿ ಸ್ಕೋಡಾ ಏನನ್ನು ಕಾಯ್ದಿರಿಸಿದೆ ಎಂಬುದನ್ನು ನೋಡೋಣ:

ಹೊಸ ಸಬ್-4ಎಮ್‌ ಎಸ್‌ಯುವಿ

Skoda's new sub-4m SUV design sketch teaser

 ಸ್ಕೋಡಾದ ಇತ್ತೀಚಿನ ಪ್ರಕಟಣೆಯಿಂದ ತಿಳಿದುಬಂದಂತೆ, ನಿಸ್ಸಂಶಯವಾಗಿ ಅತ್ಯಂತ ರೋಮಾಂಚಕಾರಿ ಸುದ್ದಿಯಾಗಿ ಹೊಸ ಸಬ್-4ಎಮ್‌ ಎಸ್‌ಯುವಿಯನ್ನು ಪರಿಚಯಿಸುವುದು  ಸ್ಪಷ್ಟವಾಗಿದೆ. ಇದು ಸ್ಕೋಡಾ ಪ್ರಕಾರ, ಇದು "ಕೈಗೆಟಕುವ ಬೆಲೆಯಲ್ಲಿ" ಇರುತ್ತದೆ.  2025 ರ ಮಾರ್ಚ್ ವೇಳೆಗೆ ಸ್ಕೋಡಾ ತೀವ್ರ ಸ್ಪರ್ಧೆಯ ಸೆಗ್ಮೆಂಟ್‌ಗೆ ಪ್ರವೇಶಿಸುವ ಸಾಧ್ಯತೆ ಇದೆ.  ಇನ್ನೂ ಹೆಸರಿಡದ ಈ ಎಸ್‌ಯುವಿಯು MQB-A0-IN ಪ್ಲಾಟ್‌ಫಾರ್ಮ್‌ನ್ನು ಆಧಾರಿಸಿರಬಹುದು, ಕುಶಾಕ್ ನಂತ ಕಾಂಪ್ಯಾಕ್ಟ್ ಎಸ್‌ಯುವಿ ಗಾತ್ರಕ್ಕೆ ಇದು ಹೊಂದಿಕೊಳ್ಳುತ್ತದೆ. ಇದು ಪ್ರೀಮಿಯಂ ವಿನ್ಯಾಸದ ವಿವರಗಳು ಮತ್ತು ಪಂಚಿ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ವೈಶಿಷ್ಟ್ಯಭರಿತ ಕೊಡುಗೆಯಾಗಿರಬೇಕು.

ಈ ಹೊಸ SUV ಯ ಹೆಸರನ್ನು ಇನ್ನೂ ನಿರ್ಧರಿಸಲಾಗಿಲ್ಲ ಮತ್ತು ಸಾರ್ವಜನಿಕರು ಮತದಾನದ ಮೂಲಕ ಹೊಸ ಹೆಸರನ್ನು ಶಿಫಾರಸು ಮಾಡುವ ಅವಕಾಶವನ್ನು ಪಡೆಯುತ್ತಾರೆ. ಕಾರು ತಯಾರಕರು ಶಾರ್ಟ್‌ಲಿಸ್ಟ್ ಮಾಡಿದ ಕೆಲವು ಹೆಸರುಗಳು ಈ ಕೆಳಗಿನಂತಿವೆ.

 • ಸ್ಕೋಡಾ ಕಾರಿಕ್ 

 • ಸ್ಕೋಡಾ ಕ್ವಿಕ್, 

 • ಸ್ಕೋಡಾ ಕೈಲಾಕ್

 • ಸ್ಕೋಡಾ ಕೈಮಾಕ್ 

 • ಸ್ಕೋಡಾ ಕೈರೋಕ್.

ಆದಾಗಿಯೂ, ವಿನ್ಯಾಸದ ಟೀಸರ್ ಸ್ಕೆಚ್‌ಗೆ ನಾವು ಧನ್ಯವಾದ ಹೇಳಲೇಬೇಕು, ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್‌ನೊಂದಿಗೆ ಮಸ್ಕ್ಯುಲರ್ ಸ್ಟೈಲಿಂಗ್‌ನಲ್ಲಿ ಸುಳಿವು ನೀಡುವ ಮೂಲಕ ಮುಂಬರುವ ಸ್ಕೋಡಾ ಸಬ್-4ಎಮ್‌ ಎಸ್‌ಯುವಿನಲ್ಲಿ ನಾವು ನಮ್ಮ ಮೊದಲ ನೋಟವನ್ನು ಪಡೆದುಕೊಂಡಿದ್ದೇವೆ.

ಭಾರತಕ್ಕೆ ಸ್ಕೋಡಾದ ಮೊದಲ EV 2024ರಲ್ಲಿ ಆಗಮನ

Skoda Enyaq iV

ಭಾರತಕ್ಕೆ ತನ್ನ ಮೊದಲ ಇವಿ ಎನ್ಯಾಕ್ iV ಆಗಿರುತ್ತದೆ ಎಂದು ಸ್ಕೋಡಾ ದೃಢಪಡಿಸಿದೆ, ಇದು ಈ ವರ್ಷದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದು ಸಂಪೂರ್ಣವಾಗಿ ಬಿಲ್ಟ್-ಅಪ್ ಯುನಿಟ್ (CBU) ಕೊಡುಗೆಯಾಗಿರುವುದರಿಂದ, ಸ್ಕೋಡಾ EV ಸುಮಾರು 60 ಲಕ್ಷ ರೂ (ಎಕ್ಸ್ ಶೋ ರೂಂ) ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ. ಸ್ಕೋಡಾ 2022ರಿಂದಲೇ ಭಾರತದಲ್ಲಿ EV ಅನ್ನು ಪರೀಕ್ಷಿಸುತ್ತಿದೆಯಾದರೂ, ನಮ್ಮ ಮಾರುಕಟ್ಟೆಗೆ ಅದರ ನಿಖರವಾದ ವಿಶೇಷಣಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಇದನ್ನು ಸಹ ಓದಿ: Facelifted Skoda Octavia ಜಾಗತಿಕವಾಗಿ ಪಾದರ್ಪಣೆ, ಇನ್ನಷ್ಟು ಪ್ರಬಲವಾದ ಆರ್‌ಎಸ್ ಅವತಾರರದಲ್ಲಿ 265 ಪಿಎಸ್ ಉತ್ಪಾದನೆ

ಕುಶಾಕ್ ಎಕ್ಸ್‌ಪ್ಲೋರರ್ ಆವೃತ್ತಿಯ ಅನಾವರಣ 

Skoda Kushaq Explorer concept

ಈ ದೊಡ್ಡ ಪ್ರಕಟಣೆಗಳ ಜೊತೆಗೆ, ಸ್ಕೋಡಾ ಇಂಡಿಯಾ ಕುಶಾಕ್ ಎಕ್ಸ್‌ಪ್ಲೋರರ್ ಪರಿಕಲ್ಪನೆಯನ್ನು ಸಹ ಪ್ರದರ್ಶಿಸಿತು. ಇದು 5-ಸ್ಪೋಕ್ ಕಪ್ಪು ರಿಮ್‌ಗಳಲ್ಲಿ ಅಳವಡಿಸಲಾಗಿರುವ ದೃಢವಾದ ಆಲ್-ಟೆರೈನ್ ಟೈರ್‌ಗಳು ಮತ್ತು ರೂಫ್ ರ್ಯಾಕ್ ನಂತಹ ವಿಶಿಷ್ಟವಾದ ಆಫ್-ರೋಡ್ ವಿನ್ಯಾಸ ಮಾರ್ಪಾಡುಗಳನ್ನು ಹೊಂದಿದೆ. ಇದು ಹೊರಭಾಗದಲ್ಲಿ ಆರೆಂಜ್‌ ಹೈಲೈಟ್‌ಗಳೊಂದಿಗೆ ಮ್ಯಾಟ್ ಗ್ರೀನ್‌ ಫಿನಿಶ್‌ ಅನ್ನು ಹೊಂದಿದೆ. ಹೆಚ್ಚಿನ ಕ್ರೋಮ್ ಅಂಶಗಳನ್ನು ಬ್ಲ್ಯಾಕ್‌ ಎಕ್ಸೆಂಟ್‌ಗಳೊಂದಿಗೆ ಬದಲಾಯಿಸಲಾಗಿದೆ. ಪ್ರದರ್ಶಿಸಲಾದ ಮೊಡೆಲ್‌ ಕಾಂಪ್ಯಾಕ್ಟ್ ಎಸ್‌ಯುವಿಯ 1.5-ಲೀಟರ್ ಟರ್ಬೊ-ಪೆಟ್ರೋಲ್ ವೇರಿಯೆಂಟ್‌ಅನ್ನು ಆಧರಿಸಿದೆ.  ಇದನ್ನು ಅಧಿಕೃತ ಉತ್ಪನ್ನವಾಗಿ ಪ್ರಾರಂಭಿಸುವುದು ಅಸಂಭವವಾಗಿದೆ, ಆದರೆ ಬಹುಶಃ ನಾವು ವೋಕ್ಸ್‌ವ್ಯಾಗನ್ ಟೈಗನ್ ಟ್ರಯಲ್ ಆವೃತ್ತಿಯಲ್ಲಿ ಗಮನಿಸಿದಂತೆ ಕಡಿಮೆ ತೀವ್ರವಾದ ವಿಸುವಲ್‌ ಮಾರ್ಪಾಡುಗಳೊಂದಿಗೆ ವಿಶೇಷ ಎಡಿಷನ್‌ನ ಆವೃತ್ತಿಯನ್ನು ನಿರೀಕ್ಷಿಸಬಹುದು.

ಇನ್ನೇನು ಹಂಚಿಕೊಳ್ಳಲಾಗಿದೆ?

ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ತನ್ನ ಕಾರುಗಳ ಮಾರಾಟವು 1-ಲಕ್ಷದ ಗಡಿ ದಾಟಿದೆ ಎಂದು ಸ್ಕೋಡಾ ಬಹಿರಂಗಪಡಿಸಿದೆ. 2025 ರಲ್ಲಿ ಹೊಸ ಸಬ್ -4ಎಮ್‌ ಎಸ್‌ಯುವಿಯ ಬಿಡುಗಡೆಗೆ ಮುಂಚಿತವಾಗಿ, ಕಾರು ತಯಾರಕರು ಈಗಾಗಲೇ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಸುಮಾರು 30 ಪ್ರತಿಶತದಷ್ಟು ಹೆಚ್ಚಿಸಿದ್ದಾರೆ. ಅಲ್ಲದೆ, ಭಾರತವು ತನ್ನ ಅಗ್ರ ಐದು ಜಾಗತಿಕ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ಈಗ ಜೆಕ್ ಗಣರಾಜ್ಯದ ಹೊರಗೆ ತಯಾರಿಸಲಾದ ಸ್ಕೋಡಾ ಕಾರುಗಳಲ್ಲಿ ಸುಮಾರು 50 ಪ್ರತಿಶತವು ಭಾರತದಲ್ಲಿ ತಯಾರಿಸಿದ ಮೊಡೆಲ್‌ಗಳಾಗಿವೆ.

ಹೊಸ ಸ್ಕೋಡಾ ಸಬ್-4ಎಮ್‌ ಎಸ್‌ಯುವಿಯಲ್ಲಿ ನೀವು ಏನನ್ನು ನೋಡಲು ನಿರೀಕ್ಷಿಸುತ್ತಿದ್ದೀರಿ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಸ್ಕೋಡಾ Sub 4 Meter ಎಸ್‌ಯುವಿ

Read Full News

explore similar ಕಾರುಗಳು

ಕಾರು ಸುದ್ದಿ

 • ಟ್ರೆಂಡಿಂಗ್ ಸುದ್ದಿ
 • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

 • ಪಾಪ್ಯುಲರ್
 • ಉಪಕಮಿಂಗ್
×
We need your ನಗರ to customize your experience