BYD ಸೀಲ್ ಕಲರ್ ಆಯ್ಕೆಗಳ ವಿವರ ಇಲ್ಲಿದೆ
ಬಿವೈಡಿ ಸೀಲ್ ಗಾಗಿ rohit ಮೂಲಕ ಮಾರ್ಚ್ 08, 2024 06:02 pm ರಂದು ಪ್ರಕಟಿಸಲಾಗಿದೆ
- 25 Views
- ಕಾಮೆಂಟ್ ಅನ್ನು ಬರೆಯಿರಿ
ಎಲ್ಲಾ ನಾಲ್ಕು ಕಲರ್ ಆಯ್ಕೆಗಳು ಪ್ರೀಮಿಯಂ ಎಲೆಕ್ಟ್ರಿಕ್ ಸೆಡಾನ್‌ನ ಎಲ್ಲಾ ಮೂರು ವೇರಿಯಂಟ್ ಗಳಲ್ಲಿ ಲಭ್ಯವಿದೆ
- ಆಟೋ ಎಕ್ಸ್‌ಪೋ 2023 ರಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾದ ಸೀಲ್, BYD ಯ ಮೂರನೇ EV ಕೊಡುಗೆಯಾಗಿದೆ.
- ಇದು ಆರ್ಕ್ಟಿಕ್ ವೈಟ್, ಅರೋರಾ ವೈಟ್, ಅಟ್ಲಾಂಟಿಸ್ ಗ್ರೇ ಮತ್ತು ಕಾಸ್ಮೊಸ್ ಬ್ಲ್ಯಾಕ್ ಕಲರ್ ಗಳ ಆಯ್ಕೆಗಳಲ್ಲಿ ಲಭ್ಯವಿದೆ.
- ಸೀಲ್ ಎರಡು ಬ್ಯಾಟರಿ ಪ್ಯಾಕ್‌ಗಳು, ಎರಡು ಡ್ರೈವ್‌ಟ್ರೇನ್‌ಗಳು ಮತ್ತು ಸಿಂಗಲ್ ಮತ್ತು ಡ್ಯುಯಲ್-ಮೋಟರ್ ಸೆಟಪ್‌ಗಳನ್ನು ಪಡೆಯುತ್ತದೆ.
- ಕ್ಯಾಬಿನ್ ಪ್ರತಿಯೊಂದು ವೇರಿಯಂಟ್ ನಲ್ಲಿ ಕೂಡ, ಗ್ರೇ-ಬ್ಲಾಕ್ ಕ್ಯಾಬಿನ್ ಥೀಮ್ ಅನ್ನು ಹೊಂದಿದೆ.
- BYD EV ಬೆಲೆಯು ರೂ 41 ಲಕ್ಷದಿಂದ ಶುರುವಾಗಿ ರೂ 53 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ.
BYD ಸೀಲ್ ಇದೀಗ ಭಾರತೀಯ EV ಮಾರುಕಟ್ಟೆಗೆ ಪ್ರವೇಶ ಮಾಡಿದೆ ಮತ್ತು ಇದನ್ನು ಮೂರು ವೇರಿಯಂಟ್ ಗಳಲ್ಲಿ ನೀಡಲಾಗುತ್ತಿದೆ: ಡೈನಾಮಿಕ್ ರೇಂಜ್, ಪ್ರೀಮಿಯಂ ರೇಂಜ್ ಮತ್ತು ಪರ್ಫಾರ್ಮೆನ್ಸ್. ಎಲೆಕ್ಟ್ರಿಕ್ ಸೆಡಾನ್ ಅನ್ನು ರೂ 1.25 ಲಕ್ಷ ಪಾವತಿಸಿ ಬುಕ್ಕಿಂಗ್‌ಗಳು ಮಾಡಬಹುದು ಮತ್ತು ಮಾರ್ಚ್ 2024 ರ ಅಂತ್ಯದವರೆಗೆ ಮಾಡಿದ ಎಲ್ಲಾ ಬುಕಿಂಗ್‌ಗಳ ಮೇಲೆ 7 kW ಚಾರ್ಜರ್ ಅನ್ನು ಮನೆಯಲ್ಲಿ ಇನ್ಸ್ಟಾಲ್ ಮಾಡುವುದರ ಜೊತೆಗೆ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ನೀವು ಇದನ್ನು ಬುಕ್ ಮಾಡಲು ನೋಡುತ್ತಿದ್ದರೆ, BYD ಸೀಲ್‌ನಲ್ಲಿ ಲಭ್ಯವಿರುವ ನಾಲ್ಕು ಕಲರ್ ಆಯ್ಕೆಗಳನ್ನು ನೋಡೋಣ:
ಆರ್ಕ್ಟಿಕ್ ಬ್ಲೂ
-
ಅರೋರಾ ವೈಟ್
-
ಅಟ್ಲಾಂಟಿಸ್ ಗ್ರೇ
-
ಕಾಸ್ಮೊಸ್ ಬ್ಲಾಕ್
BYD ತನ್ನ ಸೀಲ್ EV ಅನ್ನು ಡ್ಯುಯಲ್-ಟೋನ್ ಪೇಂಟ್ ಆಯ್ಕೆಗಳೊಂದಿಗೆ ನೀಡುತ್ತಿಲ್ಲ. ಈ ಕಲರ್ ಗಳೆಲ್ಲ ಸುರಕ್ಷಿತ ಆಯ್ಕೆಗಳಾಗಿವೆ, ಮತ್ತು ಜನಸಂದಣಿಯಲ್ಲಿ ಗಮನವನ್ನು ಸೆಳೆಯದೆಯೇ ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಆದರೆ, BYD ಸೀಲ್‌ನ ಸ್ಪೋರ್ಟಿ ಶೇಪ್ ನ ಡಿಸೈನ್ ಮತ್ತು ಸ್ಟೈಲಿಂಗ್ ಇಲ್ಲಿ ಖಂಡಿತ ಗಮನವನ್ನು ಸೆಳೆಯುತ್ತದೆ. ಡಾರ್ಕ್ ಶೇಡ್‌ನ 19 ಇಂಚಿನ ಅಲೊಯ್ ವೀಲ್ಸ್ ನೊಂದಿಗೆ ಬರುವ ಕಾಸ್ಮೊಸ್ ಬ್ಲಾಕ್ ಕಲರ್ ನ ಸೀಲ್, ಅತ್ಯಂತ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.
BYD ಸೀಲ್ ಎಲೆಕ್ಟ್ರಿಕ್ ಪವರ್‌ಟ್ರೇನ್ ವಿವರಗಳು
BYD ಸೀಲ್ EV ಮೂರು ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಿದೆ:
ಸ್ಪೆಸಿಫಿಕೇಷನ್ |
ಡೈನಾಮಿಕ್ ರೇಂಜ್ |
ಪ್ರೀಮಿಯಂ ರೇಂಜ್ |
ಪರ್ಫಾರ್ಮೆನ್ಸ್ |
ಬ್ಯಾಟರಿ ಪ್ಯಾಕ್ |
61.4 kWh |
82.5 kWh |
82.5 kWh |
ಎಲೆಕ್ಟ್ರಿಕ್ ಮೋಟಾರ್ ಮತ್ತು ಡ್ರೈವ್ ಟ್ರೈನ್ |
ಸಿಂಗಲ್ ಮೋಟಾರ್ (RWD) |
ಸಿಂಗಲ್ ಮೋಟಾರ್ (RWD) |
ಡುಯಲ್ ಮೋಟಾರ್ (AWD) |
ಪವರ್ |
204 PS |
313 PS |
530 PS |
ಟಾರ್ಕ್ |
310 Nm |
360 Nm |
670 Nm |
ಕ್ಲೇಮ್ ಮಾಡಿರುವ ರೇಂಜ್ |
510 ಕಿ.ಮೀ |
650 ಕಿ.ಮೀ |
580 ಕಿ.ಮೀ |
ಈ ಎಲೆಕ್ಟ್ರಿಕ್ ಸೆಡಾನ್ ಭಾರತದಲ್ಲಿ 1 ಕೋಟಿಗಿಂತ ಕಡಿಮೆ ಬೆಲೆಯ ಅತ್ಯಂತ ಸ್ಪೋರ್ಟಿ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ ಮತ್ತು ಅದರ ಕ್ಲೈಮ್ ಮಾಡಲಾದ ರೇಂಜ್ ಅದರ ಬೆಲೆಗೆ ಹತ್ತಿರವಿರುವ ಇತರ ಪ್ರೀಮಿಯಂ EV ಗಳಿಗೆ ಹೋಲಿಸಿದರೆ ಆಕರ್ಷಕವಾಗಿದೆ.
ಸಂಬಂಧಿತ ಲೇಖನ: BYD ಸೀಲ್ ಭಾರತದಲ್ಲಿರುವ ಎಲ್ಲಾ ಪ್ರೀಮಿಯಂ EV ಪ್ರತಿಸ್ಪರ್ಧಿಗಳ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ!
BYD ಸೀಲ್ EV ಫೀಚರ್ ಗಳು ಮತ್ತು ಸುರಕ್ಷತಾ ಕಿಟ್
BYD ಸೀಲ್ ಗೆ ತಿರುಗುವ 15.6-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜಿಂಗ್ ಪ್ಯಾಡ್‌ಗಳು, ಪನರೋಮಿಕ್ ಗ್ಲಾಸ್ ರೂಫ್, ವೆಂಟಿಲೇಟೆಡ್ ಮತ್ತು ಹೀಟೆಡ್ ಫ್ರಂಟ್ ಸೀಟ್ ಗಳು ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ನೀಡಲಾಗಿದೆ.
ಸೀಲ್‌ನ ಸುರಕ್ಷತಾ ಫೀಚರ್ ಗಳ ಬಗ್ಗೆ ನೋಡಿದರೆ, ಒಂಬತ್ತು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳ ಸೂಟ್ (ADAS) ಅನ್ನು ಒಳಗೊಂಡಿದೆ.
BYD ಸೀಲ್ ಬೆಲೆ ಮತ್ತು ಸ್ಪರ್ಧಿಗಳು
BYD ಸೀಲ್ ಬೆಲೆಯು 41 ಲಕ್ಷದಿಂದ 53 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ. ಇದು ಕಿಯಾ EV6, ಹ್ಯುಂಡೈ ಐಯೋನಿಕ್ 5, ಮತ್ತು ವೋಲ್ವೋ XC40 ರೀಚಾರ್ಜ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ, ಹಾಗೂ BMW i4 ಗೆ ಹೋಲಿಸಿದರೆ ಕೈಗೆಟುಕುವ ಬೆಲೆಯ ವಿದ್ಯುತ್ ಸೆಡಾನ್ ಆಯ್ಕೆಯಾಗಿದೆ.
ಇನ್ನಷ್ಟು ಓದಿ: ಸೀಲ್ ಆಟೋಮ್ಯಾಟಿಕ್