• English
  • Login / Register

ಭಾರತದಲ್ಲಿ 1000 ಬುಕಿಂಗ್‌ಗಳನ್ನು ದಾಟಿದ BYD Seal

ಬಿವೈಡಿ ಸೀಲ್ ಗಾಗಿ dipan ಮೂಲಕ ಮೇ 22, 2024 08:01 pm ರಂದು ಪ್ರಕಟಿಸಲಾಗಿದೆ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ಬಿವೈಡಿ ಸೀಲ್ ಅನ್ನು ಮೂರು ಆವೃತ್ತಿಗಳಲ್ಲಿ ನೀಡಲಾಗುತ್ತದೆ ಮತ್ತು ಅದರ ಬುಕಿಂಗ್ ಅನ್ನು 1.25 ಲಕ್ಷ ರೂಪಾಯಿಯಿಂದ ಮಾಡಬಹುದು

BYD Seal crosses 1000 bookings

  • BYD ಭಾರತದಲ್ಲಿ ಸೀಲ್ ಎಲೆಕ್ಟ್ರಿಕ್ ಸೆಡಾನ್ ಅನ್ನು 2024ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿತು.
  • 2024ರ ಫೆಬ್ರವರಿಯಲ್ಲಿ ಬುಕಿಂಗ್ ಅನ್ನು ಪ್ರಾರಂಭಿಸಲಾಯಿತು ಮತ್ತು ಇದು ಮಾರ್ಚ್ ಅಂತ್ಯದ ವೇಳೆಗೆ 500 ಆರ್ಡರ್‌ಗಳನ್ನು ಪಡೆದಿದೆ.
  • ಇದನ್ನು ಡೈನಾಮಿಕ್, ಪ್ರೀಮಿಯಂ ಮತ್ತು ಪರ್ಪಾರ್ಮೆನ್ಸ್‌ ಎಂಬ ಮೂರು ಆವೃತ್ತಿಗಳಲ್ಲಿ ನೀಡಲಾಗುತ್ತದೆ.
  • 61.44 kWh ಮತ್ತು 82.56 kWh ನಡುವೆ ಬ್ಯಾಟರಿ ಪ್ಯಾಕ್  ಆಯ್ಕೆಯನ್ನು ನೀಡುತ್ತದೆ
  • ಬಿವೈಡಿ 61.44 kWh ಬ್ಯಾಟರಿ ಪ್ಯಾಕ್‌ನೊಂದಿಗೆ 650 ಕಿ.ಮೀ.ವರೆಗೆ ಮತ್ತು ದೊಡ್ಡ 82.56 kWh ಯುನಿಟ್‌ನೊಂದಿಗೆ 580 ಕಿ.ಮೀ. ವ್ಯಾಪ್ತಿಯನ್ನು ಕ್ಲೈಮ್‌ ಮಾಡುತ್ತದೆ.
  • ಬೆಲೆಗಳು 41 ಲಕ್ಷ ರೂ.ನಿಂದ 53 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ.

 BYD Seal ಎಲೆಕ್ಟ್ರಿಕ್ ಸೆಡಾನ್ ಅನ್ನು ಭಾರತದಲ್ಲಿ 2024ರ ಮಾರ್ಚ್‌ನಲ್ಲಿ ಸಂಪೂರ್ಣವಾಗಿ ಆಮದು ಮಾಡಿಕೊಂಡ ಕೊಡುಗೆಯಾಗಿ ಪರಿಚಯಿಸಲಾಯಿತು. ಮಾರ್ಚ್ ಅಂತ್ಯದ ವೇಳೆಗೆ 500 ಬುಕಿಂಗ್‌ಗಳನ್ನು ಗಳಿಸಿದ ನಂತರ, ಬಿವೈಡಿ ಇತ್ತೀಚೆಗೆ ಮತ್ತೊಂದು 500 ಆರ್ಡರ್‌ಗಳನ್ನು ನೋಂದಾಯಿಸಿದೆ, ಈಗ ಈ ಸಂಖ್ಯೆಯನ್ನು 1,000 ಬುಕಿಂಗ್‌ಗಳ ಗಡಿ ದಾಟಿಸಿದೆ. ಬಿವೈಡಿ ಶೋರೂಮ್‌ಗಳಲ್ಲಿ ಮತ್ತು ಅದರ ವೆಬ್‌ಸೈಟ್‌ನಲ್ಲಿ 1.25 ಲಕ್ಷ ರೂ.ಗಳಿಗೆ ಬುಕಿಂಗ್‌ಗಳು ಲಭ್ಯವಿದೆ.

BYD Seal side profile

BYD ಸೀಲ್ ಬಗ್ಗೆ ಇನ್ನಷ್ಟು

ಬಿವೈಡಿ ಇದನ್ನು ಡೈನಾಮಿಕ್, ಪ್ರೀಮಿಯಂ ಮತ್ತು ಪರ್ಪಾರ್ಮೆನ್ಸ್‌ ಎಂಬ ಮೂರು ಆವೃತ್ತಿಗಳಲ್ಲಿ ನೀಡಲಾಗುತ್ತದೆ. ಈ ಮೊಡೆಲ್‌ಗಳ ಬೆಲೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

ವೇರಿಯೆಂಟ್‌

ಬೆಲೆ ( ಎಕ್ಸ್‌-ಶೋರೂಮ್‌)

ಡೈನಾಮಿಕ್‌  

41 ಲಕ್ಷ ರೂ.

ಪ್ರಿಮಿಯಂ

  45.55 ಲಕ್ಷ ರೂ.

ಪರ್ಫಾರ್ಮೆನ್ಸ್‌

53 ಲಕ್ಷ ರೂ.

ಇದನ್ನು ಸಹ ಓದಿ: BYD Seal ಪ್ರೀಮಿಯಂ ರೇಂಜ್ ವರ್ಸಸ್‌ Hyundai Ioniq 5: ವಿಶೇಷಣಗಳ ಹೋಲಿಕೆ

ಪರ್ಫಾರ್ಮೆನ್ಸ್ 

BYD ಸೀಲ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ: 61.44 kWh ಯುನಿಟ್‌ ಮತ್ತು ದೊಡ್ಡದಾದ 82.56 kWh ಯುನಿಟ್‌. ವಿಶೇಷಣಗಳು ಈ ಕೆಳಗಿನಂತಿವೆ:

ವೇರಿಯೆಂಟ್‌

ಬ್ಯಾಟರಿ ಗಾತ್ರ

ಪವರ್‌

ಟಾರ್ಕ್

ಕ್ಲೈಮ್ ಮಾಡಲಾದ ರೇಂಜ್‌

ಡೈನಾಮಿಕ್ (ಹಿಂಬದಿ ಚಕ್ರ ಡ್ರೈವ್)

61.44 ಕಿ.ವ್ಯಾಟ್‌

204 ಪಿಎಸ್‌

310 ಎನ್‌ಎಮ್‌

510 ಕಿ.ಮೀ

ಪ್ರೀಮಿಯಂ (ಹಿಂಬದಿ ಚಕ್ರ ಡ್ರೈವ್)

82.56 ಕಿ.ವ್ಯಾಟ್‌

313 ಪಿಎಸ್‌

360 ಎನ್‌ಎಮ್‌

650 ಕಿ.ಮೀ

ಪರ್ಫಾರ್ಮೆನ್ಸ್ (ಆಲ್-ವೀಲ್ ಡ್ರೈವ್)

82.56 ಕಿ.ವ್ಯಾಟ್‌

530 ಪಿಎಸ್‌

670 ಎನ್‌ಎಮ್‌

580 ಕಿ.ಮೀ

ಆಲ್-ವೀಲ್-ಡ್ರೈವ್ (AWD) ಸೆಟಪ್‌ನೊಂದಿಗೆ 3.8 ಸೆಕೆಂಡುಗಳಲ್ಲಿ 0 ರಿಂದ 100 kmph ವರೆಗೆ ಸ್ಪ್ರಿಂಟ್ ಮಾಡಬಹುದು ಎಂದು BYD ಹೇಳುತ್ತದೆ. ಸೀಲ್ 150 ಕಿ.ವ್ಯಾಟ್‌ವರೆಗೆ DC ಫಾಸ್ಟ್‌ ಚಾರ್ಜಿಂಗ್ ಅನ್ನು ಸಹ ಸಪೋರ್ಟ್‌ ಅಗುತ್ತದೆ, ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಕೇವಲ 26 ನಿಮಿಷಗಳಲ್ಲಿ 30 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಲು ಅನುಮತಿಸುತ್ತದೆ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ

BYD ಸೀಲ್ ತಿರುಗುವ 15.6-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, 10.25-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಎರಡು ವೈರ್‌ಲೆಸ್ ಫೋನ್ ಚಾರ್ಜರ್‌ಗಳು ಮತ್ತು ವೆಂಟಿಲೇಟೆಡ್‌ ಮತ್ತು ಬಿಸಿಯಾದ ಮುಂಭಾಗದ ಸೀಟ್‌ಗಳನ್ನು ಹೊಂದಿದೆ. ಇದು ಮೆಮೊರಿ ಕಾರ್ಯದೊಂದಿಗೆ 8-ವೇ ಚಾಲಿತ ಡ್ರೈವರ್ ಸೀಟ್, ಡ್ರೈವರ್ ಸೀಟಿಗೆ 4-ವೇ ಲುಂಬರ್ ಪವರ್ ಎಡ್ಜಸ್ಟ್‌ಮೆಂಟ್‌ ಮತ್ತು 6-ವೇ ಪವರ್ಡ್‌ ಸಹ-ಚಾಲಕನ ಆಸನವನ್ನುಸೀಟ್‌ ಅನ್ನು ಸಹ ಒಳಗೊಂಡಿದೆ.

BYD Seal interior

ಸುರಕ್ಷತೆಯ ಕಿಟ್‌ನಲ್ಲಿ, ಇದು ಒಂಬತ್ತು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಶ್ರೇಣಿಯನ್ನು ಹೊಂದಿದೆ.

BYD Seal ADAS

ಪ್ರತಿಸ್ಪರ್ಧಿಗಳು

BYD ಸೀಲ್ ಭಾರತದಲ್ಲಿ ಹುಂಡೈ ಐಯೋನಿಕ್ 5, ಕಿಯಾ ಇವಿ6 ಮತ್ತು ವೋಲ್ವೋ ಸಿ40 ರೀಚಾರ್ಜ್‌ನೊಂದಿಗೆ ಸ್ಪರ್ಧಿಸುತ್ತದೆ. ಇದು  ಬಿಎಮ್‌ಡಬ್ಲ್ಯೂ i4 ಗೆ ಕೈಗೆಟುಕುವ ಆಯ್ಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ.

ಇನ್ನಷ್ಟು ಓದಿ : BYD ಸೀಲ್ ಆಟೋಮ್ಯಾಟಿಕ್ 

was this article helpful ?

Write your Comment on BYD ಸೀಲ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience