Login or Register ಅತ್ಯುತ್ತಮ CarDekho experience ಗೆ
Login

BYD Seal EV ಭಾರತದಲ್ಲಿ ಬಿಡುಗಡೆ, ಬೆಲೆಗಳು 41 ಲಕ್ಷ ರೂ.ನಿಂದ ಪ್ರಾರಂಭ

ಬಿವೈಡಿ ಸೀಲ್ ಗಾಗಿ rohit ಮೂಲಕ ಮಾರ್ಚ್‌ 05, 2024 03:31 pm ರಂದು ಪ್ರಕಟಿಸಲಾಗಿದೆ

ಸೀಲ್ ಎಲೆಕ್ಟ್ರಿಕ್ ಸೆಡಾನ್ ಡೈನಾಮಿಕ್ ರೇಂಜ್, ಪ್ರೀಮಿಯಂ ರೇಂಜ್ ಮತ್ತು ಪರ್ಫಾರ್ಮೆನ್ಸ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

  • ಸೀಲ್ ಭಾರತದಲ್ಲಿ BYD ಯ ಮೂರನೇ EV ಮತ್ತು ಬ್ರ್ಯಾಂಡ್‌ನ ಮೊದಲ ಸೆಡಾನ್ ಕೊಡುಗೆಯಾಗಿದೆ.

  • ಭಾರತದಾದ್ಯಂತ ಸೀಲ್‌ನ ಎಕ್ಸ್-ಶೋರೂಮ್ ಬೆಲೆಗಳು 41 ಲಕ್ಷ ರೂ.ನಿಂದ 53 ಲಕ್ಷ ರೂ.ವರೆಗೆ ಇರಲಿದೆ.

  • ಎರಡು ಬ್ಯಾಟರಿ ಪ್ಯಾಕ್‌ಗಳು, ಎರಡು ಡ್ರೈವ್‌ಟ್ರೇನ್‌ಗಳು ಮತ್ತು ಸಿಂಗಲ್ ಮತ್ತು ಡ್ಯುಯಲ್-ಮೋಟರ್ ಸೆಟಪ್‌ಗಳೊಂದಿಗೆ ಬರುತ್ತದೆ.

  • ತಿರುಗುವ 15.6-ಇಂಚಿನ ಟಚ್‌ಸ್ಕ್ರೀನ್, ಎಂಟು ಏರ್‌ಬ್ಯಾಗ್‌ಗಳು ಮತ್ತು ADAS ಗಳನ್ನು ಹೊಂದಿದೆ.

ಭಾರತದಲ್ಲಿ ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಸೆಗ್ಮೆಂಟ್‌ ಈ ಎಲೆಕ್ಟ್ರಿಕ್ ಸೆಡಾನ್‌ನೊಂದಿಗೆ ಹೆಚ್ಚು ವೈವಿಧ್ಯಮಯವಾಗಿದೆ. ಹೌದು, ಅದರ ಹೆಸರೇ BYD ಸೀಲ್. ಈ ಸೆಡಾನ್‌ಗಾಗಿ ಫೆಬ್ರವರಿ 27 ರಿಂದ ಆನ್‌ಲೈನ್ ಮತ್ತು BYD ಯ ಡೀಲರ್‌ಶಿಪ್‌ಗಳಲ್ಲಿ 1 ಲಕ್ಷ ರೂ.ಗೆ ಬುಕ್ಕಿಂಗ್‌ಗಳು ಈಗಾಗಲೇ ತೆರೆದಿವೆ. EV ತಯಾರಕರು ಡೈನಾಮಿಕ್ ರೇಂಜ್, ಪ್ರೀಮಿಯಂ ರೇಂಜ್ ಮತ್ತು ಪರ್ಫಾರ್ಮೆನ್ಸ್ ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಸೀಲ್ ಅನ್ನು ನೀಡುತ್ತಿದ್ದಾರೆ.

ವೇರಿಯಂಟ್-ವಾರು ಬೆಲೆಗಳು

ವೇರಿಯೆಂಟ್‌

ಬೆಲೆ (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ)

ಡೈನಾಮಿಕ್ ರೇಂಜ್

41 ಲಕ್ಷ ರೂ.

ಪ್ರೀಮಿಯಂ ರೇಂಜ್

45.55 ಲಕ್ಷ ರೂ.

ಪರ್ಫಾರ್ಮೆನ್ಸ್

53 ಲಕ್ಷ ರೂ.

ಇದರ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳ ವಿವರಗಳು

BYD ಮೂರು ಎಲೆಕ್ಟ್ರಿಕ್ ಪವರ್‌ಟ್ರೇನ್ ಸಂಯೋಜನೆಗಳ ಆಯ್ಕೆಯೊಂದಿಗೆ ಸೀಲ್ EV ಅನ್ನು ನೀಡುತ್ತಿದೆ:

ವಿಶೇಷಣಗಳು

ಡೈನಾಮಿಕ್ ರೇಂಜ್

ಪ್ರೀಮಿಯಂ ರೇಂಜ್

ಪರ್ಫಾರ್ಮೆನ್ಸ್

ಬ್ಯಾಟರಿ ಪ್ಯಾಕ್

61.4 ಕಿ.ವ್ಯಾಟ್‌

82.5 ಕಿ.ವ್ಯಾಟ್‌

82.5 ಕಿ.ವ್ಯಾಟ್‌

ಎಲೆಕ್ಟ್ರಿಕ್ ಮೋಟಾರ್(ಗಳ) ಸಂಖ್ಯೆ

1 (ಹಿಂಬದಿ)

1 (ಹಿಂಬದಿ)

2 (ಮುಂಭಾಗ ಮತ್ತು ಹಿಂಬದಿ)

ಪವರ್‌

204 ಪಿಎಸ್‌

313 ಪಿಎಸ್‌

530 ಪಿಎಸ್‌

ಟಾರ್ಕ್

310 ಎನ್‌ಎಮ್‌

360 ಎನ್‌ಎಮ್‌

670 ಎನ್‌ಎಮ್‌

ಘೋಷಿಸಿರುವ ರೇಂಜ್‌

510 ಕಿ.ಮೀ

650 ಕಿ.ಮೀ

580 ಕಿ.ಮೀ

ಡ್ರೈವ್‌ಟ್ರೇನ್‌

ರಿಯರ್‌ ವೀಲ್‌ಡ್ರೈವ್‌

ರಿಯರ್‌ ವೀಲ್‌ಡ್ರೈವ್‌

ಆಲ್‌ ವೀಲ್‌ಡ್ರೈವ್‌

ಸೀಲ್ ಎರಡು ಬ್ಯಾಟರಿ ಪ್ಯಾಕ್‌ಗಳು ಮತ್ತು ಒಟ್ಟು ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ, ರಿಯರ್‌ ವೀಲ್‌ಡ್ರೈವ್‌ (RWD) ಮತ್ತು ಆಲ್-ವೀಲ್-ಡ್ರೈವ್ (AWD) ಸೆಟಪ್‌ಗಳೆರಡೂ ಆಫರ್‌ನಲ್ಲಿವೆ.

ಇದರ ಚಿಕ್ಕ ಬ್ಯಾಟರಿ ಪ್ಯಾಕ್ 110 kW DC ವೇಗದ ಚಾರ್ಜಿಂಗ್‌ಗೆ ಸಪೋರ್ಟ್‌ ಆಗುತ್ತದೆ, ಆದರೆ ದೊಡ್ಡ ಬ್ಯಾಟರಿ ಪ್ಯಾಕ್ 150 kW ವರೆಗೆ ಬೆಂಬಲಿಸುತ್ತದೆ.

ಇದು ಯಾವ ತಂತ್ರಜ್ಞಾನವನ್ನು ಪಡೆಯುತ್ತದೆ?

ಎಲೆಕ್ಟ್ರಿಕ್ ಸೆಡಾನ್‌ನಲ್ಲಿರುವ ವೈಶಿಷ್ಟ್ಯಗಳು ತಿರುಗುವ 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಬಿಸಿಯಾದ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳು ಮತ್ತು ಪನೋರಮಿಕ್ ಗ್ಲಾಸ್ ರೂಫ್ ಆನ್ನು ಒಳಗೊಂಡಿದೆ.

ಇದರ ಸುರಕ್ಷತಾ ಜಾಲವು ಎಂಟು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ವೈಶಿಷ್ಟ್ಯಗಳ ಸಂಪೂರ್ಣ ಸೂಟ್ ಅನ್ನು ಒಳಗೊಂಡಿದೆ.

ಇದನ್ನು ಸಹ ಓದಿ: 2024 ರ ಟಾಪ್ 3 ವರ್ಲ್ಡ್ ಕಾರ್ ಫೈನಲಿಸ್ಟ್‌ಗಳು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ

ಪ್ರತಿಸ್ಪರ್ಧಿಗಳ ಕುರಿತು

BYD ಸೀಲ್ ಮಾರುಕಟ್ಟೆಯಲ್ಲಿ Kia EV6, ಹುಂಡೈ Ioniq 5, ಮತ್ತು Volvo XC40 ರೀಚಾರ್ಜ್ ವಿರುದ್ಧ ಸ್ಪರ್ಧಿಸುತ್ತದೆ. ಇದು ಬಿಎಮ್‌ಡಬ್ಲ್ಯೂ i4 ಗೆ ಕೈಗೆಟುಕುವ ಆಯ್ಕೆಯೂ ಆಗಲಿದೆ.

Share via

Write your Comment on BYD ಸೀಲ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ