BYD Seal ವರ್ಸಸ್ Hyundai Ioniq 5, Kia EV6, Volvo XC40 Recharge, ಮತ್ತು BMW i4: ವಿಶೇಷಣಗಳ ಹೋಲಿಕೆ
BYD ಸೀಲ್ ಈ ಸೆಗ್ಮೆಂಟ್‌ನಲ್ಲಿ ಅತ್ಯಂತ ಕೈಗೆಟುಕುವ ಕಾರು ಮಾತ್ರವಲ್ಲದೆ, ಈ ಹೋಲಿಕೆಯಲ್ಲಿ ಇದು ಅತ್ಯಂತ ಶಕ್ತಿಶಾಲಿ EV ಆಗಿದೆ
BYD ಸೀಲ್ ಎಲೆಕ್ಟ್ರಿಕ್ ಸೆಡಾನ್ ಈಗ ಈ ವಾಹನ ತಯಾರಕರ ಮೂರನೇ ಕೊಡುಗೆಯಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಎಲೆಕ್ಟ್ರಿಕ್ ಸೆಡಾನ್ ಹ್ಯುಂಡೈ Ioniq 5, Kia EV6, Volvo XC40 ರೀಚಾರ್ಜ್ ಮತ್ತು BMW i4 ನಂತಹ ಮೊಡೆಲ್‌ಗಳೊಂದಿಗೆ ಸ್ಪರ್ಧಿಸುತ್ತದೆ. ಆದ್ದರಿಂದ ಅವುಗಳ ಬೆಲೆಗಳಿಂದ ಪ್ರಾರಂಭವಾಗಿ, ವಿಶೇಷಣಗಳ ಕುರಿತ ವಿವರವಾದ ಹೋಲಿಕೆ ಇಲ್ಲಿದೆ:
ಮೊದಲಿಗೆ, ಈ EV ಗಳ ಬೆಲೆಗಳನ್ನು ನೋಡೋಣ:
BYD ಸೀಲ್ |
ಹುಂಡೈ ಐಯೋನಿಕ್ 5 |
ಕಿಯಾ EV6 |
ವೋಲ್ವೋ XC40 ರಿಚಾರ್ಜ್ |
ಬಿಎಮ್‌ಡಬ್ಲ್ಯೂ i4 |
41 ಲಕ್ಷ ರೂ.ನಿಂದ 53 ಲಕ್ಷ ರೂ. |
46.05 ಲಕ್ಷ ರೂ. |
60.95 ಲಕ್ಷ ರೂ.ನಿಂದ 65.95 ಲಕ್ಷ ರೂ. |
57.90 ಲಕ್ಷ ರೂ. |
72.50 ಲಕ್ಷ ರೂ.ನಿಂದ 77.50 ಲಕ್ಷ ರೂ. |
-
ಈ ಹೋಲಿಕೆಯಲ್ಲಿ BYD ಸೀಲ್ ಅತ್ಯಂತ ಕೈಗೆಟುಕುವ ಮೊಡೆಲ್ ಆಗಿದೆ. ಇದರ ಪ್ರವೇಶ ಮಟ್ಟದ ಆವೃತ್ತಿಯು ಹುಂಡೈ ಐಯೊನಿಕ್ 5 ಗಿಂತ 5 ಲಕ್ಷ ರೂ.ವರೆಗೆ ಕಡಿಮೆ ಬೆಲೆಯನ್ನು ಹೊಂದಿದೆ. ಇದರ ಟಾಪ್-ಸ್ಪೆಕ್ AWD ಆವೃತ್ತಿಯು ಇಲ್ಲಿ ಅತ್ಯಂತ ಕೈಗೆಟುಕುವ ಕಾರ್ಯಕ್ಷಮತೆಯ ಆಯ್ಕೆಯಾಗಿದೆ, ವೋಲ್ವೋದ AWD ಎಲೆಕ್ಟ್ರಿಕ್ ಆವೃತ್ತಿಯು ಇದಕ್ಕಿಂತ ಸುಮಾರು 5 ಲಕ್ಷ ರೂ.ವರೆಗೆ ದುಬಾರಿಯಾಗಿದೆ.
ಆಯಾಮಗಳು
ಮೊಡೆಲ್‌ಗಳು |
BYD ಸೀಲ್ |
ಹುಂಡೈ ಐಯೋನಿಕ್ 5 |
ಕಿಯಾ EV6 |
ವೋಲ್ವೋ XC40 ರಿಚಾರ್ಜ್ |
ಬಿಎಮ್‌ಡಬ್ಲ್ಯೂ i4 |
ಉದ್ದ |
4800 ಮಿ.ಮೀ |
4635 ಮಿ.ಮೀ |
4695 ಮಿ.ಮೀ |
4440 ಮಿ.ಮೀ |
4783 ಮಿ.ಮೀ |
ಅಗಲ |
1875 ಮಿ.ಮೀ |
1890 ಮಿ.ಮೀ |
1890 ಮಿ.ಮೀ |
1863 ಮಿ.ಮೀ |
1852 ಮಿ.ಮೀ |
ಎತ್ತರ |
1460ಮಿ.ಮೀ |
1625 ಮಿ.ಮೀ |
1570 ಮಿ.ಮೀ |
1647 ಮಿ.ಮೀ |
1448 ಮಿ.ಮೀ |
ವೀಲ್‌ಬೇಸ್ |
2920 ಮಿ.ಮೀ |
3000 ಮಿ.ಮೀ |
2900 ಮಿ.ಮೀ |
2702 ಮಿ.ಮೀ |
2856 ಮಿ.ಮೀ |
-
ಬಿವೈಡಿ ಸೀಲ್ ಈ ಪಟ್ಟಿಯಲ್ಲಿ ಅತಿ ಉದ್ದದ ಎಲೆಕ್ಟ್ರಿಕ್ ಕಾರು. ಆದಾಗಿಯೂ, ಅಗಲದ ವಿಷಯಕ್ಕೆ ಬಂದಾಗ, Ioniq 5 ಮತ್ತು EV6 ಅಗಲವಾಗಿವೆ.
-
ವೋಲ್ವೋ XC40 ರೀಚಾರ್ಜ್, ಅದರ 'ಸರಿಯಾದ SUV' ನಿಲುವಿನಿಂದಾಗಿ, ಈ ಹೋಲಿಕೆಯಲ್ಲಿ ಅತಿ ಎತ್ತರದ EV ಆಗಿದೆ.
-
ಆದಾಗಿಯೂ, ಹ್ಯುಂಡೈ Ioniq 5 ಗರಿಷ್ಠ ವೀಲ್‌ಬೇಸ್ ಅನ್ನು ಹೊಂದಿದೆ.
ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್
ವಿಶೇಷಣಗಳು |
BYD ಸೀಲ್ |
ಹುಂಡೈ ಅಯೋನಿಕ್ 5 |
ಕಿಯಾ EV6 |
ವೋಲ್ವೋ XC40 ರೀಚಾರ್ಜ್ |
ಬಿಎಮ್‌ಡಬ್ಲ್ಯೂ i4 |
||||
ಬ್ಯಾಟರಿ ಪ್ಯಾಕ್ |
6 61.44 ಕಿ.ವ್ಯಾಟ್ |
882.56 ಕಿ.ವ್ಯಾಟ್ |
82.56 ಕಿ.ವ್ಯಾಟ್ |
72.6 ಕಿ.ವ್ಯಾಟ್ |
7 77.4 ಕಿ.ವ್ಯಾಟ್ |
78 ಕಿ.ವ್ಯಾಟ್ |
770.2 ಕಿ.ವ್ಯಾಟ್ |
83.9 ಕಿ.ವ್ಯಾಟ್ |
|
ಡ್ರೈವ್ ಪ್ರಕಾರ |
ರಿಯರ್ ವೀಲ್‌ಡ್ರೈವ್ |
ರಿಯರ್ ವೀಲ್‌ಡ್ರೈವ್ |
ಆಲ್ ವೀಲ್‌ಡ್ರೈವ್ |
ರಿಯರ್ ವೀಲ್‌ಡ್ರೈವ್ |
ರಿಯರ್ ವೀಲ್‌ಡ್ರೈವ್ |
ಆಲ್ ವೀಲ್‌ಡ್ರೈವ್ |
ಆಲ್ ವೀಲ್‌ಡ್ರೈವ್ |
ರಿಯರ್ ವೀಲ್‌ಡ್ರೈವ್ |
ರಿಯರ್ ವೀಲ್‌ಡ್ರೈವ್ |
ಪವರ್ |
204 ಪಿಎಸ್ |
313 ಪಿಎಸ್ |
530 ಪಿಎಸ್ |
217 ಪಿಎಸ್ |
229 ಪಿಎಸ್ |
325 ಪಿಎಸ್ |
408 ಪಿಎಸ್ |
286 ಪಿಎಸ್ |
340 ಪಿಎಸ್ |
ಟಾರ್ಕ್ |
310 ಎನ್‌ಎಮ್ |
360 ಎನ್‌ಎಮ್ |
670 ಎನ್‌ಎಮ್ |
350 ಎನ್‌ಎಮ್ |
350 ಎನ್‌ಎಮ್ |
605 ಎನ್‌ಎಮ್ |
660 ಎನ್‌ಎಮ್ |
430 ಎನ್‌ಎಮ್ |
430 ಎನ್‌ಎಮ್ |
ಘೋಷಿಸಿರುವ ರೇಂಜ್ |
510 ಕಿ.ಮೀ |
650 ಕಿ.ಮೀ |
580 ಕಿ.ಮೀ |
631 ಕಿ.ಮೀ |
708 ಕಿ.ಮೀ ವರೆಗೆ |
419 ಕಿ.ಮೀ |
590 ಕಿ.ಮೀ ವರೆಗೆ |
-
ಬಿವೈಡಿ ಸೀಲ್ ಹೆಚ್ಚಿನ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ಕಿಯಾ EV6 ಮತ್ತು ಬಿಎಮ್‌ಡಬ್ಲ್ಯೂ i4 ಸಹ ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತವೆ ಆದರೆ Ioniq 5 ಮತ್ತು XC40 ರೀಚಾರ್ಜ್ ಒಂದನ್ನು ಮಾತ್ರ ಪಡೆಯುತ್ತವೆ.
-
ಸೀಲ್‌ನ ಆಲ್-ವೀಲ್-ಡ್ರೈವ್ (AWD) ಆವೃತ್ತಿಯು ಇಲ್ಲಿ ಅತ್ಯಂತ ಶಕ್ತಿಶಾಲಿಯಾಗಿದೆ. ಆದಾಗ್ಯೂ, Kia EV6 ಅತಿ ಹೆಚ್ಚು ಕ್ಲೈಮ್ ಮಾಡಲಾದ 708 ಕಿಮೀ (ARAI-ರೇಟೆಡ್) ಚಾಲನಾ ಶ್ರೇಣಿಯನ್ನು ನೀಡುತ್ತದೆ.
-
ಹ್ಯುಂಡೈ ಐಯೋನಿಕ್ 5 ಮತ್ತು ಬಿಎಮ್‌ಡಬ್ಲ್ಯೂ i4 ಭಾರತೀಯ ಖರೀದಿದಾರರಿಗೆ AWD ಡ್ರೈವ್‌ಟ್ರೇನ್‌ಗಳನ್ನು ನೀಡುವುದಿಲ್ಲ.
ಬಿಎಮ್‌ಡಬ್ಲ್ಯೂ i4, ದೊಡ್ಡದಾದ 83.9 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದರೂ ಹಿಂದಿನ ಚಕ್ರ-ಡ್ರೈವ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ, ಇದು ಸೀಲ್, Ioniq 5 ಮತ್ತು EV6 ಗಿಂತ ಕಡಿಮೆ ರೇಂಜ್ ಅನ್ನು ನೀಡುತ್ತದೆ.
ಇದನ್ನು ಸಹ ಓದಿ: BYD Seal ಭಾರತದಲ್ಲಿರುವ ಎಲ್ಲಾ ಪ್ರೀಮಿಯಂ EV ಪ್ರತಿಸ್ಪರ್ಧಿಗಳ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ..!
ಚಾರ್ಜಿಂಗ್
ವಿಶೇಷಣಗಳು |
BYD ಸೀಲ್ |
ಹುಂಡೈ ಅಯೋನಿಕ್ 5 |
ಕಿಯಾ EV6 |
ವೋಲ್ವೋ XC40 ರೀಚಾರ್ಜ್ |
ಬಿಎಮ್‌ಡಬ್ಲ್ಯೂ i4 |
||||
ಬ್ಯಾಟರಿ ಪ್ಯಾಕ್ |
661.44 ಕಿ.ವ್ಯಾಟ್ |
82.56 ಕಿ.ವ್ಯಾಟ್ |
82.56 ಕಿ.ವ್ಯಾಟ್ |
72.6 ಕಿ.ವ್ಯಾಟ್ |
77.4 ಕಿ.ವ್ಯಾಟ್ |
78 ಕಿ.ವ್ಯಾಟ್ |
70.2 ಕಿ.ವ್ಯಾಟ್ |
83.9 ಕಿ.ವ್ಯಾಟ್ |
|
AC ಚಾರ್ಜರ್ |
7 7 ಕಿ.ವ್ಯಾಟ್ |
7 ಕಿ.ವ್ಯಾಟ್ |
7 ಕಿ.ವ್ಯಾಟ್ |
11 ಕಿ.ವ್ಯಾಟ್ |
7.2 ಕಿ.ವ್ಯಾಟ್ |
11 ಕಿ.ವ್ಯಾಟ್ |
11ಕಿ.ವ್ಯಾಟ್ |
11ಕಿ.ವ್ಯಾಟ್ |
|
DC ಫಾಸ್ಟ್ ಚಾರ್ಜರ್ |
1110 ಕಿ.ವ್ಯಾಟ್ |
150 ಕಿ.ವ್ಯಾಟ್ |
150 ಕಿ.ವ್ಯಾಟ್ |
50 ಕಿ.ವ್ಯಾಟ್ ,150 ಕಿ.ವ್ಯಾಟ್ |
50 ಕಿ.ವ್ಯಾಟ್, 350 ಕಿ.ವ್ಯಾಟ್ |
150 ಕಿ.ವ್ಯಾಟ್ |
180 ಕಿ.ವ್ಯಾಟ್ |
205 ಕಿ.ವ್ಯಾಟ್ |
-
ಕಿಯಾ EV6 350 ಕಿ.ವ್ಯಾಟ್‌ವರೆಗಿನ ಅತಿ ಹೆಚ್ಚು ಚಾರ್ಜಿಂಗ್ ಸಾಮರ್ಥ್ಯವನ್ನು ಬೆಂಬಲಿಸುತ್ತದೆ, ಆದ್ದರಿಂದ ಅದರ ಬ್ಯಾಟರಿಯನ್ನು ಕೇವಲ 18 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ರೀಚಾರ್ಜ್ ಮಾಡಬಹುದು. BYD ಸೀಲ್, ಮತ್ತೊಂದೆಡೆ, 150 ಕಿ.ವ್ಯಾಟ್ ವರೆಗಿನ ವೇಗದ ಚಾರ್ಜಿಂಗ್ ಸಾಮರ್ಥ್ಯಗಳನ್ನು ಬೆಂಬಲಿಸುತ್ತದೆ, ಆದರೆ ಅದರ ಚಿಕ್ಕ ಬ್ಯಾಟರಿ ಪ್ಯಾಕ್ ಆವೃತ್ತಿಯು 110 ಕಿ.ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಮಾತ್ರ ಬೆಂಬಲಿಸುತ್ತದೆ.
ವೈಶಿಷ್ಟ್ಯದಲ್ಲಿನ ಪ್ರಮುಖಾಂಶಗಳು
ಮೊಡೆಲ್‌ಗಳು |
BYD ಸೀಲ್ |
ಹುಂಡೈ ಅಯೋನಿಕ್ 5 |
ಕಿಯಾ EV6 |
ವೋಲ್ವೋ XC40 ರೀಚಾರ್ಜ್ |
ಬಿಎಮ್‌ಡಬ್ಲ್ಯೂ i4 |
ಎಕ್ಷ್‌ಟಿರೀಯರ್ |
|
|
|
|
|
ಇಂಟಿರೀಯರ್ |
|
|
|
|
|
ಸೌಕರ್ಯ ಮತ್ತು ಅನುಕೂಲತೆ |
|
|
|
|
|
ಇನ್ಫೋಟೈನ್ಮೆಂಟ್ |
|
|
|
|
|
ಸುರಕ್ಷತೆ |
|
|
|
|
|
-
ವೈಶಿಷ್ಟ್ಯಗಳ ವಿಷಯಕ್ಕೆ ಬಂದಾಗ, ಇಲ್ಲಿ ಎಲ್ಲಾ ಐದು ಎಲೆಕ್ಟ್ರಿಕ್ ಕಾರುಗಳು ಸೌಕರ್ಯಗಳು ಮತ್ತು ತಂತ್ರಜ್ಞಾನಗಳ ವ್ಯಾಪಕ ಪಟ್ಟಿಯನ್ನು ನೀಡುತ್ತವೆ.
-
BYD ಸೀಲ್ ಇಲ್ಲಿ ಅತಿದೊಡ್ಡ 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ ಮತ್ತು ಇದು ಪೋಟ್ರೇಟ್ ಮತ್ತು ಲ್ಯಾಂಡ್‌ಸ್ಕೇಪ್ ಓರಿಯಂಟೇಶನ್ ನಡುವೆ ತಿರುಗಬಲ್ಲ ಏಕೈಕ ಡಿಸ್‌ಪ್ಲೇ ಆಗಿದೆ. ಸೀಲ್ ನಂತರ, ಇದು 14.9-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆಯುವುದು ಬಿಎಮ್‌ಡಬ್ಲ್ಯೂ i4 ಆಗಿದೆ.
-
ಸೀಲ್ ಎಲೆಕ್ಟ್ರಿಕ್ ಸೆಡಾನ್ ORVM ಗಳಿಗೆ ಮೆಮೊರಿ ಫಂಕ್ಷನ್ ಅನ್ನು ಸಹ ಪಡೆಯುತ್ತದೆ, ಇದನ್ನು ಯಾವುದೇ ಇತರ EVಗಳು ನೀಡುವುದಿಲ್ಲ.
-
ವೋಲ್ವೋ XC40 ರೀಚಾರ್ಜ್ ಚಿಕ್ಕ 9-ಇಂಚಿನ ಪೋಟ್ರೇಟ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಆನ್ನು ಹೊಂದಿದೆ. ಇದು ಆಂಡ್ರಾಯ್ಡ್ ಆಟೋ ಕನೆಕ್ಟ್ ಅನ್ನು ಹೊಂದಿರದಿದ್ದರೂ, ಅದರ ಇನ್ಫೋಟೈನ್‌ಮೆಂಟ್ ಸಿಸ್ಟಂ ಗೂಗಲ್ ನಿಂದ ಚಾಲಿತವಾಗಿದೆ ಆದ್ದರಿಂದ ನೀವು ಇನ್-ಬಿಲ್ಟ್ Google ನಕ್ಷೆಗಳಂತಹ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ವಾಸ್ತವವಾಗಿ, ಈ ಸಿಸ್ಟಮ್ ಆಪಲ್ ಕಾರ್‌ಪ್ಲೇಗಾಗಿ ವೈರ್‌ಲೆಸ್ ಸಂಪರ್ಕವನ್ನು ಸಹ ನೀಡುವುದಿಲ್ಲ.
-
ಬಿಎಮ್‌ಡಬ್ಲ್ಯೂ i4 ಎಲ್ಲಾ ಇತರ ಇವಿಗಳಲ್ಲಿ ಅತ್ಯುತ್ತಮ 17-ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್ ಅನ್ನು ಹೊಂದಿದೆ. XC40 ರೀಚಾರ್ಜ್ ಕಡಿಮೆ ಸ್ಪೀಕರ್‌ಗಳೊಂದಿಗೆ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ. ಮತ್ತೊಂದೆಡೆ ಸೀಲ್ 12-ಸ್ಪೀಕರ್ ಡೈನಾಡಿಯೊ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತದೆ.
-
ಬಿಎಮ್‌ಡಬ್ಲ್ಯೂ i4 ಮತ್ತು ವೋಲ್ವೋ ಎಕ್ಸ್‌ಸಿ40 ರೀಚಾರ್ಜ್‌ನ ಹೊರತುಪಡಿಸಿ, ಇಲ್ಲಿರುವ ಎಲ್ಲಾ ಇತರ EVಗಳು ವೆಹಿಕಲ್-ಟು-ಲೋಡ್ (V2L) ಕಾರ್ಯನಿರ್ವಹಣೆಯೊಂದಿಗೆ ಬರುತ್ತವೆ. ಈ ವೈಶಿಷ್ಟ್ಯದ ಮೂಲಕ, ನಿಮ್ಮ ಕಾರಿನ ಬ್ಯಾಟರಿ ಪವರ್‌ಅನ್ನು ಬಳಸಿಕೊಂಡು ನಿಮ್ಮ ಬೇರೆ ಡಿವೈಸ್‌ಗಳನ್ನು ನೀವು ಪವರ್ ಮಾಡಬಹುದು.
ಇದನ್ನೂ ಪರಿಶೀಲಿಸಿ: ಹ್ಯುಂಡೈ ಅಯೋನಿಕ್ 5 ಫೇಸ್‌ಲಿಫ್ಟ್ ಅನಾವರಣ : 7 ಪ್ರಮುಖ ಬದಲಾವಣೆಗಳನ್ನು ವಿವರಿಸಲಾಗಿದೆ
-
ಈ ಹೋಲಿಕೆಯಲ್ಲಿ ಹಿಂದಿನ ಆಕ್ಸಲ್ ಮೌಂಟೆಡ್ ಏರ್ ಸಸ್ಪೆನ್ಷನ್‌ನೊಂದಿಗೆ ಬರುವುದು BMW i4 ಮಾತ್ರ ಆಗಿದೆ. ಇದರಲ್ಲಿ, ಸುಗಮ ಸವಾರಿ ಗುಣಮಟ್ಟವನ್ನು ಒದಗಿಸುವ ಸಲುವಾಗಿ ಸಸ್ಪೆನ್ಸನ್ ಆಟೋಮ್ಯಾಟಿಕ್ ಆಗಿ ರಸ್ತೆಯ ಮೇಲ್ಮೈಯನ್ನು ಅವಲಂಬಿಸಿ ಸವಾರಿಯ ಎತ್ತರವನ್ನು ಸರಿಹೊಂದಿಸಬಹುದು.
-
ಅಲ್ಲದೆ, i4 ತ್ರಿ-ಝೋನ್ ಕ್ಲೈಮೇಟ್ ಕಂಟ್ರೋಲ್ ವೈಶಿಷ್ಟ್ಯವನ್ನು ನೀಡುವ ಏಕೈಕ EV ಆಗಿದೆ, ಆದರೆ ಎಲ್ಲಾ ಇತರ EVಗಳು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್‌ನೊಂದಿಗೆ ಬರುತ್ತವೆ.
-
ಸುರಕ್ಷತೆಯ ವಿಷಯದಲ್ಲಿ, BYD ಸೀಲ್ ಮತ್ತೆ ಮೊದಲನೇ ಸ್ಥಾನವನ್ನು ಪಡೆಯಲಿದ್ದು, ಇದು ಹೆಚ್ಚು ಏರ್‌ಬ್ಯಾಗ್‌ಗಳನ್ನು (ಒಟ್ಟು 9) ಪಡೆಯುತ್ತದೆ , ಆದರೆ Ioniq 5 ಮತ್ತು BMW i4 ಕೇವಲ 6 ಏರ್‌ಬ್ಯಾಗ್‌ಗಳೊಂದಿಗೆ ಬರುತ್ತವೆ.
-
BMW i4 ನ ಹೊರತುಪಡಿಸಿ, ಇಲ್ಲಿರುವ ಎಲ್ಲಾ EVಗಳು 360-ಡಿಗ್ರಿ ಕ್ಯಾಮರಾ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ತಂತ್ರಜ್ಞಾನದ ಸಂಪೂರ್ಣ ಸೂಟ್‌ನೊಂದಿಗೆ ಸುಸಜ್ಜಿತವಾಗಿವೆ.
BYD ಸೀಲ್ ಎಲ್ಲಾ ಇತರ ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತದೆ ಮತ್ತು ಈ ಹೋಲಿಕೆಯಲ್ಲಿ ಹಣಕ್ಕಾಗಿ ಹೆಚ್ಚು ಮೌಲ್ಯದ ಆಯ್ಕೆಯಾಗಿ ಹೊರಹೊಮ್ಮುತ್ತದೆ. ಇದು ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುತ್ತದೆ ಮಾತ್ರವಲ್ಲದೆ 650 ಕಿಮೀ ವರೆಗಿನ ಪ್ರಭಾವಶಾಲಿ ಡ್ರೈವಿಂಗ್ ರೇಂಜ್ ಅನ್ನು ಸಹ ಹೊಂದಿದೆ. ಮತ್ತೊಂದೆಡೆ, BMW i4 ಯ ಕೊಡುಗೆಗಳನ್ನು ಗಮನಿಸಿದಾಗಲೂ ಇದು ಸ್ವಲ್ಪ ದುಬಾರಿ ಆಯ್ಕೆಯಾಗಿದೆ ಎಂದು ತೋರುತ್ತದೆ, ಆದರೆ ಅದು ಬಹುಶಃ ಅದರ ಐಷಾರಾಮಿ ಬ್ಯಾಡ್ಜ್‌ನ ಕಾರಣದಿಂದಾಗಿರಬಹುದು. ಹಾಗಾದರೆ, ಇವುಗಳಲ್ಲಿ ಯಾವುದು ಉತ್ತಮ ಎಂದು ನೀವು ಭಾವಿಸುತ್ತೀರಿ ಮತ್ತು ಏಕೆ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಇನ್ನಷ್ಟು ಓದಿ: ಸೀಲ್ ಆಟೋಮ್ಯಾಟಿಕ್
Write your Comment on BYD ಸೀಲ್
It is a fantastic job you have done, to give everyone a complete overview of all electric cars on the Indian roads. BMW I4 is the most expensive, because the German companies are basi Fantastic car.