ಕಾರ್‌ದೇಖೋ ಅಭಿಪ್ರಾಯ: Maruti eVX ಬಿಡುಗಡೆ ಸಮಯದಲ್ಲಿ ಬದಲಾವಣೆ, 2024ರಲ್ಲೇ ರಸ್ತೆಗಿಳಿಯುವ ಸಾಧ್ಯತೆ
ಮಾರುತಿ ಇವಿಎಕ್ಸ್ ಗಾಗಿ sonny ಮೂಲಕ ಡಿಸೆಂಬರ್ 11, 2023 12:26 pm ರಂದು ಪ್ರಕಟಿಸಲಾಗಿದೆ
- 61 Views
- ಕಾಮೆಂಟ್ ಅನ್ನು ಬರೆಯಿರಿ
ಅಟೋ ಎಕ್ಸ್ಪೊ 2023 ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ eVX ಕಾರು ಮೂಲತಃ 2025ರಲ್ಲಿ ಹೊರಬರಲಿದೆ ಎಂದು ನಂಬಲಾಗಿತ್ತು
- ಇದು ಭಾರತದಲ್ಲಿ ಮಾರುತಿಯ ಮೊದಲ EV ಎನಿಸಿದೆ.
- ಮಾರುತಿ eVX ಕಾರಿನ ಅನೇಕ ಸ್ಪೈ ಶಾಟ್ ಗಳು ಆನ್ಲೈನ್ ನಲ್ಲಿ ಕಾಣಸಿಕ್ಕಿವೆ.
- ಸುಮಾರು 550 ಕಿಲೋಮೀಟರ್ ಶ್ರೇಣಿಯೊಂದಿಗೆ 60 kWh ಬ್ಯಾಟರಿ ಪ್ಯಾಕ್ ನೊಂದಿಗೆ ಬರುವ ನಿರೀಕ್ಷೆ ಇದೆ.
- AWD ಜೊತೆಗೆ ಡ್ಯುವಲ್ ಮೋಟರ್ ಸೆಟಪ್ ಇರುವುದು ದೃಢಪಟ್ಟಿದೆ.
- ಮುಂಭಾಗ ಮತ್ತು ಹಿಂಭಾಗದಲ್ಲಿ 3 ಪೀಸ್ LED ಲೈಟಿಂಗ್ ವ್ಯವಸ್ಥೆ ಮತ್ತು ದಪ್ಪನೆಯ ವೀಲ್ ಆರ್ಚ್ ಗಳನ್ನು ಹೊಂದಿರಲಿದೆ.
- ಒಳಗಡೆಗೆ ಇದು ಏಕೀಕೃತ ಡಿಸ್ಪ್ಲೇ ಸೆಟಪ್ ಮತ್ತು ಪವರ್ಡ್ ಡ್ರೈವರ್ ಸೀಟ್ ಅನ್ನು ಪಡೆಯಲಿದೆ.
- ಬೆಲೆಯು ರೂ. 22 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಲಿದೆ.
ಭಾರತದಲ್ಲಿ ಅಗ್ಗದ ಎಲೆಕ್ಟ್ರಿಕ್ ಕಾರ್ ಕ್ಷೇತ್ರದಲ್ಲಿ ಸದ್ಯಕ್ಕೆ ಟಾಟಾ ಸಂಸ್ಥೆಯು ಪ್ರಾಬಲ್ಯವನ್ನು ಮೆರೆಯುತ್ತಿದ್ದು, ಅಟೋಮೊಬೈಲ್ ಕ್ಷೇತ್ರದ ದಿಗ್ಗದ ಮಾರುತಿ ಸುಜುಕಿಯು ಇನ್ನಷ್ಟೇ ಇಲ್ಲಿ ಕಾಲಿಡಬೇಕು. ನಾವು ಭಾರತದಲ್ಲಿ ಮಾರುತಿ ಸಂಸ್ಥೆಯ ಮೊದಲ EV ಯನ್ನು ಅಟೋ ಎಕ್ಸ್ಪೊ 2023 ಕಾರ್ಯಕ್ರಮದಲ್ಲಿ eVX ಪರಿಕಲ್ಪನೆಯ ರೂಪದಲ್ಲಿ ಕಂಡಿದ್ದೆವು. ಮೂಲತಃ ಇದು 2025ರಲ್ಲಿ ಬಿಡುಗಡೆಗೊಳ್ಳಬೇಕಿತ್ತು. ಆದರೆ ಇದು 2024ರಲ್ಲಿಯೇ ಬರುವುದು ಈಗ ನಿಚ್ಚಳಗೊಂಡಿದೆ.
ಬೇಗನೇ ಬಿಡುಗಡೆಯಾಗಲು ಕಾರಣವೇನು?
ಮಾರುತಿ eVX ಎಲೆಕ್ಟ್ರಿಕ್ SUVಯ ಪರೀಕ್ಷಾರ್ಥ ವಾಹನವು ಸಾಕಷ್ಟು ಮರೆಮಾಚಿದ ಸ್ಥಿತಿಯಲ್ಲಿ ಪರೀಕ್ಷೆಯ ವೇಳೆ ಕಂಡುಬಂದಿದೆ. ಆದರೆ ಇದು ಉತ್ಪಾದನೆಗೆ ಸಿದ್ಧಗೊಂಡಿರುವಂತೆ ಕಾಣುತ್ತಿದೆ. ಇದು ಬೇಗನೇ ಬಿಡುಗಡೆಗೊಳ್ಳಲಿದೆ ಎಂದು ನಂಬುವುದಕ್ಕೆ ಇನ್ನೊಂದು ಕಾರಣವಿದೆ. ಸಾಮಾನ್ಯವಾಗಿ ಮಾರುತಿ ಕಾರಿನ ಪರೀಕ್ಷೆಯು ಪ್ರಾರಂಭಗೊಂಡ ಒಂದು ವರ್ಷದೊಳಗೆ ಇದು ಮಾರಾಟಕ್ಕೆ ಲಭಿಸುತ್ತದೆ. eVX ವಾಹನವು ಗುಜರಾತಿನ ಘಟಕದಲ್ಲಿ ಉತ್ಪಾದನೆಯಾಗಲಿದ್ದು 2024-25ರ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನು ಮಾರುತಿ ಸಂಸ್ಥೆಯು ದೃಢೀಕರಿಸಿದೆ.
ಎರಡನೆಯದಾಗಿ ಸುಜುಕಿ ಸಂಸ್ಥೆಯು ಜಪಾನಿನಲ್ಲಿ, ಹೊರಾಂಗಣದ ಹೆಚ್ಚು ವಾಸ್ತವಿಕ ವಿನ್ಯಾಸದೊಂದಿಗೆ eVX SUV ಪರಿಕಲ್ಪನೆಯ ಅತ್ಯಂತ ವಿಕಸಿತ ಆವೃತ್ತಿಯನ್ನು ಅನಾವರಣಗೊಳಿಸಿದೆ.
ಮೂರನೆಯದಾಗಿ, ಟೊಯೊಟಾ ಸಂಸ್ಥೆಯು ಇತ್ತೀಚೆಗೆ ಹೊಸ ಅರ್ಬನ್ SUV ಯ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದು, ಇದರ ಶೈಲಿಯು (ಮುಖ್ಯವಾಗಿ ಪಕ್ಕದ ಪ್ರೊಫೈಲ್ ಮತ್ತು ಹಿಂಭಾಗ) ಸುಜುಕಿ eVX (ಇದು ಸಹ ಸುಜುಕಿ Evಯನ್ನು ಆಧರಿಸಿದೆ) ಅನ್ನು ಹೋಲುತ್ತದೆ. ಈ ಪರಿಕಲ್ಪನೆಯು 2024ರ ಆರಂಭದಲ್ಲಿ ಜಾಗತಿಕವಾಗಿ ಬಿಡುಗಡೆಯಾಗುವುದು ಖಚಿತವಾಗಿದೆ. ಸುಜುಕಿ ಮತ್ತು ಟೊಯೊಟಾ ನಡುವೆ ಚಾಲ್ತಿಯಲ್ಲಿರುವ ಜಾಗತಿಕ ಪಾಲದಾರಿಕೆಯ ಅಂಗವಾಗಿ ಹೊರಬರಲಿರುವ ಇನ್ನೊಂದು ಮಾದರಿ ಇದಾಗಿರಬಹುದು ಎಂದು ನಾವು ಭಾವಿಸಿದ್ದೇವೆ.
eVX ಕಾರು ಭಾರತದಲ್ಲಿ 2023ರ ಆರಂಭದಲ್ಲಿ ಜಾಗತಿಕ ಬಿಡುಗಡೆಯನ್ನು ಕಂಡಿದ್ದು, ಟೊಯೊಟಾದ ಆವೃತ್ತಿಯು ಯಾವುದೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಮೊದಲು ಮಾರುತಿ ಎಲೆಕ್ಟ್ರಿಕ್ SUV ಯು ರಸ್ತೆಗಿಳಿಯುವ ಸಾಧ್ಯತೆ ಇದೆ.
ಇಲ್ಲಿಯತನಕ ನಮಗೇನು ತಿಳಿದಿದೆ?
ಮಾರುತಿ eVX ಕುರಿತು ಹೆಚ್ಚಿನ ತಾಂತ್ರಿಕ ವಿವರಗಳು ಇನ್ನಷ್ಟೇ ಹೊರಬರಬೇಕು. ಪರಿಕಲ್ಪನೆಯ ರೂಪದಿ ಇದು ಅನಾವರಣಗೊಂಡಾಗ ಈ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ SUV ಯು 60 kWh ಬ್ಯಾಟರಿ ಪ್ಯಾಕ್ ಮೂಲಕ ಹೊರಬರಲಿದ್ದು 550 km ಶ್ರೇಣಿಯನ್ನು ಹೊಂದಿರಲಿದೆ ಎಂದು ಹೇಳಲಾಗಿತ್ತು. ಆದರೆ ಇದರ ಕಾರ್ಯಕ್ಷಮತೆಯ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ. ಆದರೆ ಈ eVX ಕಾರು ಡ್ಯುವಲ್ ಮೋಟರ್ ಆಯ್ಕೆ ಮತ್ತು ಅಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಪಡೆಯಲಿದೆ. ಆದರೆ ಈ ವಾಹನವು ಒಂದೇ ಪವರ್ ಟ್ರೇನ್ ಆಯ್ಕೆಗೆ ಸೀಮಿತವಾಗಿರದು. ಏಕೆಂದರೆ ಟೊಯೊಟಾದ ಆವೃತ್ತಿಯು ಅನೇಕ ಬ್ಯಾಟರಿ ಗಾತ್ರಗಳೊಂದಿಗೆ ಫ್ರಂಟ್ ವೀಲ್ ಡ್ರೈವ್ ಮತ್ತು ಅಲ್ ವೀಲ್ ಡ್ರೈವ್ ಗಳನ್ನು ಪಡೆಯಲಿದೆ.
ಒಳಗಡೆ ಮತ್ತು ಹೊರಗಡೆ ಇದು ಹೇಗೆ ಕಾಣಿಸಿಕೊಳ್ಳಲಿದೆ?
ವಿನ್ಯಾಸದ ವಿಚಾರದಲ್ಲಿ, ಅತ್ಯಂತ ಹೊಸ ಸುಜುಕಿ eVX ಕಾರಿನ ಒಳಾಂಗಣ ಮತ್ತು ಹೊರಾಂಗಣದ ಮೇಲೆ ಬೆಳಕು ಹರಿಸೋಣ. ಹೊರಭಾಗದಲ್ಲಿ ಇದು ನುಣುಪಾದ LED ಹೆಡ್ ಲೈಟ್ ಗಳು ಮತ್ತು ತ್ರಿಭುಜಾಕಾರದಲ್ಲಿ ವಿನ್ಯಾಸಗೊಳಿಸಿದ DRL ಗಳು ಮತ್ತು ದಪ್ಪನೆಯ ಬಂಪರ್ ಗಳನ್ನು ಹೊಂದಿರಲಿದೆ. ಅಗಲಗೊಳಿಸಿದ ವೀಲ್ ಆರ್ಚ್ ಗಳು, ಫ್ಲಶ್ ಡೋರ್ ಹ್ಯಾಂಡಲ್ ಗಳು ಮತ್ತು ಸಂಪರ್ಕಿತ LED ಟೇಲ್ ಲ್ಯಾಂಪ್ ಸೆಟಪ್ ಗಳನ್ನು ನಾವು ಹೊರಭಾಗದಲ್ಲಿ ಗಮನಿಸಬಹುದು.
eVX ಕಾರಿನ ಕ್ಯಾಬಿನ್ ನಲ್ಲಿ ಸರಳತೆಯನ್ನು ಉಳಿಸಿಕೊಳ್ಳಲಾಗಿದ್ದು, ಇಂಟಗ್ರೇಟೆಡ್ ಡಿಸ್ಪ್ಲೇ ಸೆಟಪ್, ನೊಗದ ಆಕಾರದ ಸ್ಟೀಯರಿಂಗ್ ವೀಲ್, ಉದ್ದನೆಯ ಲಂಬಾಂತರ AC ವೆಂಟ್ ಗಳು, ಮತ್ತು ಗೇರ್ ಆಯ್ಕೆಗಾಗಿ ಸೆಂಟರ್ ಕನ್ಸೋಲ್ ನಲ್ಲಿರುವ ರೋಟರಿ ನಾಬ್ ಅನ್ನು ಇದರಲ್ಲಿ ಕಾಣಬಹುದು.
ಇದನ್ನು ಸಹ ಓದಿರಿ: 2024 ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಎಂಜಿನ್ ಮತ್ತು ಇಂಧನ ದಕ್ಷತೆ ಅಂಕಿಅಂಶಗಳ ವಿವರಣೆ (ಜಪಾನ್ ಮಾದರಿ)
ನಿರೀಕ್ಷಿತ ವೈಶಿಷ್ಟ್ಯಗಳು
ಡ್ಯುವಲ್ ಡಿಸ್ಪ್ಲೇ ಸೆಟಪ್ ಮತ್ತು ನೊಗದ ಆಕಾರದ ಸ್ಟೀಯರಿಂಗ್ ವೀಲ್ ಮಾತ್ರವಲ್ಲದೆ eVX ವಾಹನವು 360 ಡಿಗ್ರಿ ಕ್ಯಾಮರಾ, ಪವರ್ಡ್ ಡ್ರೈವರ್ ಸೀಟ್ ಮತ್ತು ಅಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಸಹ ಹೊಂದಿರಲಿದೆ. ಇದರ ಸುರಕ್ಷತಾ ಪಟ್ಟಿಯಲ್ಲಿ ಆರು ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ ಗಳನ್ನು ಕಾಣಬಹುದು. ಅಲ್ಲದೆ ಹೆದ್ದಾರಿಯಲ್ಲಿ ಸುರಕ್ಷಿತವಾಗಿ ವಾಹನ ಚಲಾಯಿಸುವುದಕ್ಕಾಗಿ eVX ಕಾರು ADAS ಸೌಲಭ್ಯವನ್ನು ಸಹ ಹೊಂದಿರುವ ಸಾಧ್ಯತೆ ಇದೆ.
ಬೆಲೆಗಳು ಮತ್ತು ಸ್ಪರ್ಧಿಗಳು
ಮಾರುತಿ eVX ಕಾರು ಸುಮಾರು ರೂ. 22 ಲಕ್ಷ ಬೆಲೆಗೆ (ಎಕ್ಸ್-ಶೋರೂಂ) ದೊರೆಯುವ ನಿರೀಕ್ಷೆ ಇದೆ. ಇದು MG ZS EV ಮತ್ತು ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಜೊತೆಗೆ ಸ್ಪರ್ಧಿಸಲಿದ್ದು ಟಾಟಾ ನೆಕ್ಸನ್ EV ಮತ್ತು ಮಹೀಂದ್ರಾ XUV400 ಕಾರುಗಳಿಗೆ ಹೋಲಿಸಿದರೆ ದೊಡ್ಡ ಗಾತ್ರದ ಬದಲ ಆಯ್ಕೆ ಎನಿಸಲಿದೆ.
0 out of 0 found this helpful