• English
  • Login / Register

ನವೀಕೃತ ಹೋಂಡಾ ಸಿಟಿ ಔಪಚಾರಿಕ ಪಾದಾರ್ಪಣೆಗೆ ಮುಂಚಿತವಾಗಿ ಡೀಲರ್‌ಶಿಪ್‌ಗಳಲ್ಲಿ ಕಾಯ್ದಿರಿಸಬಹುದಾಗಿದೆ

ಹೋಂಡಾ ನಗರ ಗಾಗಿ shreyash ಮೂಲಕ ಫೆಬ್ರವಾರಿ 22, 2023 04:07 pm ರಂದು ಪ್ರಕಟಿಸಲಾಗಿದೆ

  • 50 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ನವೀಕೃತ ಹೋಂಡಾ ಸೆಡಾನ್ ಸಣ್ಣ ವಿನ್ಯಾಸ ಬದಲಾವಣೆಗಳನ್ನು ಹೊಂದುತ್ತದೆ ಮತ್ತು ಸುಧಾರಿತ ಸುರಕ್ಷತಾ ಫೀಚರ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ. 

Honda City facelift

  • ಈ ನವೀಕೃತ ಸೆಡಾನ್‌ಗೆ ಈಗ ಕೇವಲ ಡೀಲರ್‌ಶಿಪ್‌ಗಳಲ್ಲಿ ಮಾತ್ರ ಬುಕಿಂಗ್‌ಗಳು ತೆರೆದಿವೆ, 

  • ಇದು ಸಣ್ಣ ಡಿಸೈನ್ ವ್ಯತ್ಯಾಸಗಳು ಮತ್ತು ನವೀಕೃತ ಸುರಕ್ಷತಾ ಕಿಟ್‌ ಅನ್ನು ಹೊಂದಿರುತ್ತದೆ.

  • ಈ ಸೆಡಾನ್ ಆದೇ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಬಳಸುತ್ತದೆ, ಹಾಗೂ ಹೊಸ ಎಮಿಶನ್ ಮಾನದಂಡಗಳಿಗೆ ತಕ್ಕಂತೆ ಇದನ್ನು ನವೀಕರಿಸಲಾಗುತ್ತದೆ.

  • ಈ 2023 ಹೋಂಡಾ ಸಿಟಿ ನವೀಕರಣವು ಮಾರ್ಚ್ 2, 2023ರಿಂದ ಮಾರಾಟಕ್ಕೆ ಇರುತ್ತದೆ.

  • ಇದರ ನಿರೀಕ್ಷಿತ ಬೆಲೆ ರೂ 12 ಲಕ್ಷ (ಎಕ್ಸ್-ಶೋರೂಂ) ಎಂದು ಅಂದಾಜಿಸಲಾಗಿದೆ.

ಭಾರತದ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಕಠಿಣ ಸ್ಪರ್ಧೆಯನ್ನು ಎದುರುನೋಡುತ್ತಿರುವ ಹೋಂಡಾ ತನ್ನ ಐದನೇ ಪೀಳಿಗೆ ಸಿಟಿಗೆ ಸಣ್ಣ ಬದಲಾವಣೆ ನೀಡಲಿದೆ. ಬಿಡುಗಡೆಯು ಹತ್ತಿರ ಬರುತ್ತಿರುವಂತೆ, ಜನಪ್ರಿಯ ಬೇಡಿಕೆಯಿಂದಾಗಿ ಅಧಿಕೃತ ಪಾದಾರ್ಪಣೆಗೂ ಮೊದಲೇ ಆಯ್ದ ಹೋಂಡಾ ಡೀಲರ್‌ಶಿಪ್‌ಗಳು ಈಗ ಮುಂಗಡ ಕಾಯ್ದಿರಿಸುವಿಕೆಯನ್ನು ಸ್ವೀಕರಿಸುತ್ತಿವೆ. ಬುಕಿಂಗ್ ಮೊತ್ತವು ಡೀಲರ್‌ಶಿಪ್‍ ಅವಲಂಬಿಸಿ ರೂ 5,000 ಹಾಗೂ ರೂ 21,000 ದ ನಡುವೆ ಎಷ್ಟಾದರೂ ಆಗಿರಬಹುದು.

ನವೀಕೃತ ಹೋಂಡಾ ಸೆಡಾನ್‌ನಿಂದ ನೀವು ಏನನ್ನು ನಿರೀಕ್ಷಿಸಬಹುದಾಗಿದೆ ಎಂಬುದರ ವಿವರ ಇಲ್ಲಿದೆ

ಸಣ್ಣ ವಿನ್ಯಾಸ ಬದಲಾವಣೆಗಳು

Honda City 2023 Front

ನವೀಕೃತ ಹೋಂಡಾ ಸಿಟಿಯ ಸೋರಿಕೆಯಾದ ಚಿತ್ರದಲ್ಲಿ ಕಾಣುವಂತೆ, ಡಿಸೈನ್ ವಿಷಯದಲ್ಲಿ ಕೇವಲ ಕೆಲವೇ ಗಮನಾರ್ಹ ಬದಲಾವಣೆಗಳಾಗಿವೆ. ಇವುಗಳೆಂದರೆ, ಹೊಸ ಫ್ರಂಟ್ ಬಂಪರ್‌ನೊಂದಿಗೆ ಸೂಕ್ಷ್ಮವಾಗಿ ಸರಿಹೊಂದಿಸಿದ ಹೆಚ್ಚು ಪ್ರಕಾಶಮಾನವಾದ ಎಲ್ಇಡಿ ಡಿಆರ್‌ಎಲ್.

ಇದನ್ನು ಓದಿ: ಮಾರುತಿ ಗ್ರ್ಯಾಂಡ್ ವಿಟಾರಾಗೆ ಪ್ರತಿಸ್ಪರ್ಧಿಯಾಗಿರುವ ಹೋಂಡಾದ ಹೊಚ್ಚ ಹೊಸ ಎಸ್‌ಯುವಿ ಮೊದಲ ಬಾರಿಗೆ ಭಾರತೀಯ ರಸ್ತೆಯಗಳಲ್ಲಿ ಕಂಡುಬಂದಿದೆ

Honda City facelift Infotainment System

ಈ ಸೆಡಾನ್‌ನ ಒಳಗೆ ಅದೇ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಲೇಔಟ್ ಇದ್ದು, ಇದು ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇನೊಂದಿಗೆ ಅದೇ ಎಂಟು-ಇಂಚಿನ ಟಚ್‌ಸ್ಕ್ರೀನ್ ಯೂನಿಟ್ ಅನ್ನು ಹೊಂದಿದೆ. ಇದಲ್ಲದೇ, ಈ ನವೀಕೃತ ಸಿಟಿ ವೈರ್‌ಲೆಸ್ ಫೋನ್ ಚಾರ್ಜಿಂಗ್, ವಾತಾಯನದ ಫ್ರಂಟ್ ಸೀಟ್‌ಗಳು ಮತ್ತು ಹೆಚ್ಚು ಸಂಪರ್ಕಿತ ಕಾರ್‌ ಟೆಕ್ ಮುಂತಾದ ಹೆಚ್ಚುವರಿ ಫೀಚರ್‌ಗಳನ್ನು ಹೊಂದಿರಬಹುದು.

ಇದನ್ನೂ ಓದಿ: ಕಾರ್‌ದೇಖೋ ಗುಂಪಿನ ಸಿಇಓ ಮತ್ತು ಶಾರ್ಕ್ ಟ್ಯಾಂಕ್ ಹೂಡಿಕೆದಾರ ಅಮಿತ್ ಜೈನ್ ಯಾವುದನ್ನು ಡ್ರೈವ್ ಮಾಡುತ್ತಾರೆ ಮತ್ತು ಏಕೆ ಎಂಬುದು ಇಲ್ಲಿದೆ

ಸುಧಾರಿತ ಸುರಕ್ಷಾ ಕಿಟ್

Honda City Hybrid Instrument Cluster

ಸುರಕ್ಷತಾ ವಿಷಯಕ್ಕೆ ಬಂದರೆ, ಈ ನವೀಕೃತ ಸಿಟಿಯು ಸ್ಟಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳು, ಇದರೊಂದಿಗೆ ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಸ್ಟಾರ್ಟ್ ಅಸಿಸ್ಟ್, ISOFIX ಚೈಲ್ಡ್-ಸೀಟ್ ಆ್ಯಂಕರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಹೊಂದಿರುವ ನಿರೀಕ್ಷೆ ಇದೆ.

ತನ್ನ e:HEV ಹೈಬ್ರಿಡ್ ವೇರಿಯೆಂಟ್‌ನಂತೆ, ಇದು ADAS ತಂತ್ರಜ್ಞಾನದ ಸಂಪೂರ್ಣ ಸೂಟ್ ಅನ್ನು ಹೊಂದಿದ್ದು, ಇದು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರ್ಯೂಸ್ ಕಂಟ್ರೋಲ್, ಕೊಲಿಶನ್ ಮಿಟಿಗೇಶ್ ಬ್ರೇಕಿಂಗ್, ಹೈ ಬೀಮ್ ಅಸಿಸ್ಟ್ ಮತ್ತು ಲೇನ್ ಕೀಪ್ ಅಸಿಸ್ಟ್ ಅನ್ನು ಒಳಗೊಂಡಿರುತ್ತದೆ.

ನವೀಕೃತ ಇಂಜಿನ್

Honda City Engine

ಈ ನವೀಕೃತ ಹೋಂಡಾ ಸಿಟಿ ಅದೇ 1.5-ಲೀಟರ್ ಪೆಟ್ರೋಲ್ ಇಂಜಿನ್ (121PS ಮತ್ತು 145Nm) ಅನ್ನು ಹೊಂದಿದ್ದು ಸಿಕ್ಸ್-ಸ್ಪೀಡ್ ಮ್ಯಾನುವಲ್ ಅಥವಾ CVT ಆಟೋಮ್ಯಾಟಿಕ್‌ಗೆ ಜೋಡಿಸಲಾಗುತ್ತದೆ. ಇದನ್ನು RDE ಮತ್ತು BS6 ಹಂತ II ನಿಯಮಾವಳಿಗಳಿಗೆ ತಕ್ಕಂತೆ ನವೀಕರಿಸಲಾಗುತ್ತದೆ ಮತ್ತು E20 ಇಂಧನದಲ್ಲಿ ಕಾರ್ಯನಿರ್ವಹಿಸುವಂತೆ ಅನುಸರಣೆ ಮಾಡಲಾಗುವುದು.

ಹೋಂಡಾವು ಸಿಟಿಯಿಂದ 1.5-ಲೀಟರ್ ಡೀಸೆಲ್ ಇಂಜಿನ್ ಆಯ್ಕೆಯನ್ನು ಕ್ರಮೇಣ ಸ್ಥಗಿತಗೊಳಿಸಲಿದೆ ಮತ್ತು ಈ ನವೀಕೃತ ಆವೃತ್ತಿಯು ಪ್ರವೇಶ ಹಂತದ ವೇರಿಯೆಂಟ್‌ಗಳಲ್ಲಿ eHEV (ಸ್ಟ್ರಾಂಗ್-ಹೈಬ್ರಿಡ್) ಪವರ್‌ಟ್ರೇನ್‌ಗಳನ್ನು ಹೊಂದಿರಲಿದ್ದು, ಇದು ಇನ್ನಷ್ಟು ಕೈಗೆಟುವಂತೆ ಮಾಡುತ್ತದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

Honda City facelift rear

ಈ 2023 ಹೋಂಡಾ ಸಿಟಿ ಸ್ಕೋಡಾ ಸ್ಲಾವಿಯಾ, ಫೋಕ್ಸ್‌ವಾಗನ್ ವರ್ಟಸ್ ಮತ್ತು ಹೊಸ-ಪೀಳಿಗೆ ಹ್ಯುಂಡೈ ವರ್ನಾಗೆ  ಪ್ರತಿಸ್ಪರ್ಧಿಯಾಗಿ ಮುಂದುವರಿಯಲಿದೆ. ಇದು ಮಾರ್ಚ್ 2 ರಂದು ಮಾರಾಟವಾಗಲಿದ್ದು, ರೂ 12 ಲಕ್ಷದಿಂದ (ಎಕ್ಸ್-ಶೋರೂಂ) ಬೆಲೆ ನಿರೀಕ್ಷಿಸಲಾಗಿದೆ. 

ಇನ್ನಷ್ಟು ಓದಿ : ಸಿಟಿ ಡೀಸೆಲ್

 

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Honda ನಗರ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience