2024 ರಿಂದ ಭಾರತ್ NCAPಗೆ ಭಾರತೀಯ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ನಿಯಂತ್ರಣವನ್ನು ಹಸ್ತಾಂತರಿಸಲಿದೆ ಜಾಗತಿಕ NCAP
NCAP ಯು ಭಾರತ್ NCAP ಪ್ರಾಧಿಕಾರಕ್ಕೆ ಬೆಂಬಲ ನೀಡುವುದನ್ನು ಮತ್ತು ತಾಂತ್ರಿಕ ಜ್ಞಾನ ಹಂಚಿಕೊಳ್ಳುವುದನ್ನು ಮುಂದುವರಿಸುತ್ತದೆ
-
ಭಾರತ್ NCAP ಅಕ್ಟೋಬರ್ 1, 2023 ರಿಂದ ಕಾರುಗಳ ಪರೀಕ್ಷೆಯನ್ನು ಪ್ರಾರಂಭಿಸುತ್ತದೆ.
-
2011 ರಲ್ಲಿ ಪ್ರಾರಂಭವಾದ ಜಾಗತಿಕ NCAP, 2014 ರಲ್ಲಿ #SaferCarsForIndia ಅಭಿಯಾನವನ್ನು ಪ್ರಾರಂಭಿಸಿತು.
-
ಇದು ಇಲ್ಲಿಯವರೆಗೆ 50 ಕ್ಕೂ ಹೆಚ್ಚು ಮಾಡೆಲ್‌ಗಳ ಕ್ರ್ಯಾಶ್ ಪರೀಕ್ಷೆಯನ್ನು ನಡೆಸಿ 0 ರಿಂದ ಸಂಪೂರ್ಣ 5 ಸ್ಟಾರ್‌ಗಳವರೆಗೆ ಸ್ಕೋರ್‌ಗಳನ್ನು ನೀಡಿದೆ.
-
ಮಹೀಂದ್ರಾ ಎಕ್ಸ್‌ಯುವಿ700, ಟಾಟಾ ಪಂಚ್ ಮತ್ತು ಸ್ಕೋಡಾ ಕುಶಾಕ್‌ನಂತಹ ಕಾರುಗಳು ಕ್ರ್ಯಾಶ್ ಪರೀಕ್ಷೆಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿವೆ.
ಚಂದ್ರಯಾನ 3 ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡಿಂಗ್ (ವಿಶ್ವ ದಾಖಲೆ) ಮತ್ತು ಭಾರತ್ NCAP (ಹೊಸ ಕಾರು ಅಸೆಸ್‌ಮೆಂಟ್ ಕಾರ್ಯಕ್ರಮ) ) ಪ್ರಾರಂಭಿಸುವ ಮೂಲಕ ನಮ್ಮ ದೇಶವು ಎರಡು ಐತಿಹಾಸಿಕ ದಾಖಲೆಗಳನ್ನು ಸೃಷ್ಟಿಸಿರುವುದರಿಂದ ಪ್ರತಿಯೊಬ್ಬ ಭಾರತೀಯನೂ ತನ್ನ ದೇಶದ ಬಗ್ಗೆ ಹೆಮ್ಮೆಪಡುತ್ತಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ತಾಂತ್ರಿಕ ಪ್ರಗತಿಯಿಂದಾಗಿ ಈ ಎರಡೂ ಕ್ಷೇತ್ರಗಳಲ್ಲಿ ಯಶಸ್ಸು ಸಾಧ್ಯವಾಗಿದೆ.
View this post on Instagram
ಜಾಗತಿಕ NCAP ಅನುಸರಿಸುವ ಸುರಕ್ಷತಾ ಮಾನದಂಡಗಳು ಮತ್ತು ಪ್ರೋಟೋಕಾಲ್‌ಗಳನ್ನೇ ಭಾರತ್ NCAP ಕೂಡ ಆಧರಿಸಿದೆ. ಹಾಗಾಗಿ, ಜಾಗತಿಕ NCAP ಯು 2024 ರಿಂದ ಭಾರತೀಯ ಮಾಡೆಲ್‌ಗಳ ಕ್ರ್ಯಾಶ್ ಪರೀಕ್ಷೆಗಳನ್ನು ನಡೆಸದಿರಲು ನಿರ್ಧರಿಸಿದೆ ಮತ್ತು ನ್ಯೂ ಇಂಡಿಯಾ ವೆಹಿಕಲ್ ಸೇಫ್ಟಿ ಪ್ರೋಗ್ರಾಂ (ಹೊಸ ಭಾರತೀಯ ವಾಹನ ಸುರಕ್ಷತಾ ಕಾರ್ಯಕ್ರಮ)ನಲ್ಲಿ ತನ್ನ ನಂಬಿಕೆಯನ್ನು ತೋರಿಸಿದೆ. ಭಾರತ್ NCAP ನಮ್ಮ ದೇಶದಲ್ಲಿ ಮಾರಾಟವಾಗುವ ಪ್ರತಿಯೊಂದು ಕಾರಿಗೆ ಸುರಕ್ಷತಾ ರೇಟಿಂಗ್ ಅನ್ನು ನೀಡುವ ಮೂಲಕ ಖರೀದಿದಾರರಿಗೆ ಸುರಕ್ಷಿತ ಮಾಡೆಲ್ ಅನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ.
ಜಾಗತಿಕ NCAP ಯ ಈ ನಿರ್ಧಾರಕ್ಕೆ ಕಾರಣವೇನು?
“ನಮ್ಮ ಬಳಿ ಇನ್ನೂ ಕ್ರ್ಯಾಶ್ ಪರೀಕ್ಷೆಗೆ ಒಳಪಡಿಸಬೇಕಿರುವ ಅಂದಾಜು 10 ಮಾಡೆಲ್‌ಗಳಿವೆ. ಭಾರತ್ NCAPಗೆ ಪ್ರತಿಸ್ಪರ್ಧಿಯಾಗಲು ನಾವು ಖಂಡಿತವಾಗಿಯೂ ಬಯಸುವುದಿಲ್ಲ. ಇದು ಗ್ರಾಹಕರಿಗೆ ತುಂಬಾ ಗೊಂದಲವನ್ನುಂಟು ಮಾಡುತ್ತದೆ ಮತ್ತು ಇದು ಯಾರ ಹಿತಾಸಕ್ತಿಗಳನ್ನು ಪೂರೈಸುವುದಿಲ್ಲ” ಎಂದು ET ಆಟೋಗೆ ನೀಡಿದ ಸಂದರ್ಶನದಲ್ಲಿ, ಜಾಗತಿಕ NCAPಯ ಕಾರ್ಯನಿರ್ವಾಹಕ ಅಧ್ಯಕ್ಷ ಡೇವಿಡ್ ವಾರ್ಡ್ ತಿಳಿಸಿದರು.
ಇದನ್ನೂ ಓದಿ: ಭಾರತ್ NCAP- ಸುರಕ್ಷಿತ ಕಾರುಗಳಿಗಾಗಿ ಹೊಸ ಉಪಕ್ರಮ: ಕಾರು ತಯಾರಕರು ಏನಂತಾರೆ
ಭವಿಷ್ಯದ ಯೋಜನೆಗಳು
ಜಾಗತಿಕ ಸುರಕ್ಷತಾ ಪ್ರಾಧಿಕಾರದೊಂದಿಗಿನ ನಮ್ಮ ಸಹಯೋಗವು ಸಂಪೂರ್ಣವಾಗಿ ನಿಲ್ಲುವುದಿಲ್ಲ, ಏಕೆಂದರೆ ಅಂತರಾಷ್ಟ್ರೀಯ ಸಂಸ್ಥೆಯು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ(MoRTH) ತಾಂತ್ರಿಕ ಕಾರ್ಯದರ್ಶಿಯಾಗಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಫಾರ್ ರೋಡ್ ಟ್ರಾನ್ಸ್‌ಪೋರ್ಟ್ (CIRT) ಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ. MoU ಭಾಗವಾಗಿ, ಜಾಗತಿಕ NCAP ಭಾರತ್ NCAP ಪ್ರಾಧಿಕಾರಕ್ಕೆ ಬೆಂಬಲ ನೀಡುವುದನ್ನು ಮತ್ತು ತಾಂತ್ರಿಕ ಜ್ಞಾನವನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತದೆ.
ಇದನ್ನೂ ಓದಿ: ಭಾರತ್ NCAP vs ಜಾಗತಿಕ NCAP: ಸಾಮ್ಯತೆಗಳು ಮತ್ತು ವ್ಯತ್ಯಾಸಗಳ ವಿವರಣೆ
ಇಲ್ಲಿಯವರೆಗೆ ಭಾರತದ ಮೇಲೆ ಜಾಗತಿಕ NCAP ಯ ಪ್ರಭಾವ
2011 ರಲ್ಲಿ ಜಾರಿಗೆ ಬಂದ ಜಾಗತಿಕ NCAP 2014 ರಲ್ಲಿ #SaferCarsForIndia ಅಭಿಯಾನವನ್ನು ಪ್ರಾರಂಭಿಸಿತು, ಇದು ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಂದ ಉಂಟಾಗುವ ಹೆಚ್ಚಿನ ಸಂಖ್ಯೆಯ ಸಾವುಗಳನ್ನು ತಡೆಗಟ್ಟಲು ಭಾರತದಲ್ಲಿ ಮಾರಾಟವಾದ ಕಾರುಗಳ ಸುರಕ್ಷತಾ ಅಸೆಸ್‌ಮೆಂಟ್‌ಗಳನ್ನು ಪ್ರಾರಂಭಿಸಿತು. ಇದು ಇಲ್ಲಿಯವರೆಗೆ 50 ಕ್ಕೂ ಹೆಚ್ಚು ಮಾಡೆಲ್‌ಗಳ ಕ್ರ್ಯಾಶ್ ಪರೀಕ್ಷೆಯನ್ನು ಮಾಡಿದೆ, ಇದರಲ್ಲಿ ಕಾರುಗಳು 0 ರಿಂದ 5 ಸ್ಟಾರ್‌ಗಳವರೆಗಿನ ರೇಟಿಂಗ್‌ಗಳನ್ನು ಪಡೆದುಕೊಂಡಿವೆ. ಜಾಗತಿಕ NCAP ಕ್ರ್ಯಾಶ್ ಪರೀಕ್ಷೆಗಳ ಮೊದಲ ಬ್ಯಾಚ್‌ನ ಫಲಿತಾಂಶಗಳು ಸಾಕಷ್ಟು ಚಿಂತೆಗೆ ಕಾರಣವಾದರೂ, ಇದು ಶ್ರೀಸಾಮಾನ್ಯ ಮಾರುಕಟ್ಟೆ ಕಾರು ಬ್ರ್ಯಾಂಡ್‌ಗಳನ್ನು ಧೃಡವಾದ ಮತ್ತು ಸುರಕ್ಷಿತ ಕಾರುಗಳನ್ನು ತಯಾರಿಸಲು ಪ್ರೇರೇಪಿಸಿತು.
ಜಾಗತಿಕ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ ಮಹೀಂದ್ರಾ ಎಕ್ಸ್‌ಯುವಿ700, ಟಾಟಾ ಪಂಚ್, and ಸ್ಕೋಡಾ ಸ್ಲಾವಿಯಾ -ಫೋಕ್ಸ್‌ವ್ಯಾಗನ್ ವರ್ಟೆಸ್, ಕುಶಾಕ್-ಫೋಕ್ಸ್‌ವ್ಯಾಗನ್ ಟೈಗನ್ ನಂತಹ ಕಾರುಗಳ ಕಾರ್ಯಕ್ಷಮತೆ ಶ್ಲಾಘನೀಯವಾಗಿದೆ. ಈ ಎಲ್ಲಾ ಕಾರುಗಳು ಕ್ರ್ಯಾಶ್ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ.
ಭಾರತ್ NCAP ವಿವರಗಳು
ಹೊಸ ಭಾರತ್ NCAP ಅಸೆಸ್‌ಮೆಂಟ್‌ಗಳು ಅಕ್ಟೋಬರ್ 1, 2023 ರಿಂದ ಜಾರಿಗೆ ಬರಲಿವೆ. ಇವುಗಳನ್ನು, ಜಾಗತಿಕ NCAPಯ ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಕಾರುಗಳ ಫ್ರಂಟಲ್ ಆಫ್‌ಸೆಟ್, ಸೈಡ್ ಇಂಪ್ಯಾಕ್ಟ್ ಮತ್ತು ಪೋಲ್ ಸೈಡ್ ಇಂಪ್ಯಾಕ್ಟ್‌ನಂತಹ ಸುರಕ್ಷತಾ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
ಆಕರ