• English
  • Login / Register

ಭಾರತ್ NCAP- ಸುರಕ್ಷಿತ ಕಾರುಗಳಿಗಾಗಿ ಹೊಸ ಉಪಕ್ರಮ: ಕಾರು ತಯಾರಕರು ಏನಂತಾರೆ

ಆಗಸ್ಟ್‌ 25, 2023 08:12 am ರಂದು rohit ಮೂಲಕ ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಭಾರತದ ಪ್ರಮುಖ ಕಾರು ತಯಾರಕರ ಹೊರತಾಗಿ, ಅನೇಕ ಅಂತರರಾಷ್ಟ್ರೀಯ ಕಂಪನಿಗಳು ಈ ಪಟ್ಟಿಯಲ್ಲಿವೆ, ಎಲ್ಲಾ ಕಂಪನಿಗಳು ಭಾರತದಲ್ಲಿ ಸುರಕ್ಷಿತ ಕಾರುಗಳನ್ನು ಬೆಂಬಲಿಸುತ್ತವೆ.

Carmakers on Bharat NCAP

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಇತ್ತೀಚೆಗೆ ಭಾರತ್ NCAP ಎಂಬ ದೇಶದ ಸ್ವಂತ ಕ್ರ್ಯಾಶ್ ಟೆಸ್ಟ್ ಮತ್ತು ಸುರಕ್ಷತಾ ರೇಟಿಂಗ್ ಏಜೆನ್ಸಿಯನ್ನು ಪ್ರಾರಂಭಿಸಿದೆ. ಸ್ವಯಂಪ್ರೇರಿತ ಪ್ರೋಗ್ರಾಂ ಆಗಿ, ಎಲ್ಲಾ ಬೆಲೆ ಶ್ರೇಣಿಗಳ ಕಾರುಗಳ ಸುರಕ್ಷತೆಯನ್ನು ಸುಧಾರಿಸಲು ಕಾರು ಕಂಪನಿಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಭಾರತ್ NCAP ಕುರಿತು ಆಟೋ ಪ್ರಪಂಚದ ಹಲವು ಪ್ರಮುಖ ಕಾರು ಕಂಪನಿಗಳು ತಮ್ಮ ಪ್ರತಿಕ್ರಿಯೆಗಳನ್ನು ನೀಡಿವೆ, BNCAP ಯ ಪರಿಚಯದ ಕುರಿತು ಉನ್ನತ ಬ್ರ್ಯಾಂಡ್‌ಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳೋಣ:

  

ಮಾರುತಿ

"ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳು ಸರ್ಕಾರವು ನಿಗದಿಪಡಿಸಿದ ಕಡ್ಡಾಯ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರುತ್ತವೆ. ಸುರಕ್ಷತೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಬಯಸುವವರಿಗೆ, ಭಾರತ್ NCAP ವ್ಯವಸ್ಥೆಯು ಒಂದು ಅಧಿಕೃತ ಮತ್ತು ವಸ್ತುನಿಷ್ಠ ರೇಟಿಂಗ್ ಸಿಸ್ಟಮ್ ಆಗಿದೆ, ಅದು ಗ್ರಾಹಕರಿಗೆ ಸೂಕ್ತವಾದ ಆಯ್ಕೆಯನ್ನು ಮಾಡಲು ನೆರವಾಗುತ್ತದೆ" ಎನ್ನುತ್ತಾರೆ ಮಾರುತಿ ಸುಜುಕಿ ಇಂಡಿಯಾದ ಕಾರ್ಪೊರೇಟ್ ವ್ಯವಹಾರಗಳ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಭಾರ್ತಿ.

"ಮಾರುತಿಯು ಸರ್ಕಾರದ ಈ ಉಪಕ್ರಮವನ್ನು ಸ್ವಾಗತಿಸುತ್ತದೆ ಮತ್ತು ಭಾರತ್ NCAP ಪರೀಕ್ಷೆಗೆ ಕನಿಷ್ಠ ಮೂರು ಮಾಡೆಲ್‌ಗಳನ್ನು ಮೊದಲ ಹಂತದಲ್ಲಿಯೇ ಕಳುಹಿಸುತ್ತದೆ" ಎಂದು ಅವರು ಹೇಳಿದರು.

Maruti Grand Vitara

ಕಂಪನಿಯು ಕ್ರ್ಯಾಶ್ ಟೆಸ್ಟ್‌ಗೆ ಯಾವ ಮೂರು ಕಾರುಗಳನ್ನು ಕಳುಹಿಸುತ್ತದೆ ಎಂಬ ಮಾಹಿತಿಯನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ. ಆದರೆ ಇದು ಗ್ರ್ಯಾಂಡ್ ವಿಟಾರಾ ಮತ್ತು ಬ್ರೆಝಾದಂತಹ ಎಸ್‌ಯುವಿ ಕಾರುಗಳನ್ನು ಒಳಗೊಂಡಿರುತ್ತದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ.

 

ಟಾಟಾ

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಮಾತನಾಡಿ, "ಭಾರತದಲ್ಲಿ ವಾಹನ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿರುವ ಭಾರತ್ NCAP ಬಿಡುಗಡೆಯ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ. ಕಾರಿನ ಸುರಕ್ಷತೆಯು ನಮಗೆ ಎಂದಿಗೂ ಅತ್ಯಂತ ಮಹತ್ವದ್ದಾಗಿದೆ ಮತ್ತು ಈ ಉಪಕ್ರಮವು ನಮ್ಮ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುವ ವಾಹನಗಳನ್ನು ತಯಾರಿಸುವ ನಮ್ಮ ಬದ್ಧತೆಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ." ಎಂದು ಹೇಳಿದರು.

"ಹೊಸ ಸುರಕ್ಷತಾ ಮಾನದಂಡಗಳನ್ನು ಹೊಂದಿಸುವಲ್ಲಿ ಸರ್ಕಾರ, ರೆಗ್ಯುಲೇಟರಿ ಸಂಸ್ಥೆಗಳು ಮತ್ತು ವಾಹನ ಉದ್ಯಮದ ಸಹಯೋಗದ ಪ್ರಯತ್ನಗಳನ್ನು ನಾವು ಶ್ಲಾಘಿಸುತ್ತೇವೆ. ಟಾಟಾ ಮೋಟಾರ್ಸ್ ಆಧುನಿಕ ಸುರಕ್ಷತಾ ಫೀಚರ್‌ಗಳನ್ನು ಹೊಂದಿರುವ ವಾಹನಗಳನ್ನು ತಯಾರಿಸಲು ಮತ್ತು ಎಲ್ಲಾ ರಸ್ತೆ ಬಳಕೆದಾರರಿಗೆ ಸಾಧ್ಯವಾದಷ್ಟು ಉತ್ತಮವಾದ ಸುರಕ್ಷತೆಯನ್ನು ಒದಗಿಸಲು ಸಮರ್ಪಿತವಾಗಿದೆ." ಎಂದೂ ಅವರು ಹೇಳಿದರು.

Tata Punch

ಟಾಟಾ ಪ್ರಸ್ತುತ ತನ್ನ ಅಗ್ಗದ ಕಾರುಗಳಾದ ಪಂಚ್ ಮತ್ತು ನೆಕ್ಸಾನ್‌ ಗಳಲ್ಲಿ ಎರಡಕ್ಕಿಂತ ಹೆಚ್ಚು ಏರ್‌ಬ್ಯಾಗ್‌ಗಳನ್ನು ನೀಡದಿದ್ದರೂ, ಅವರು ಈ ಹಿಂದಿನ GNCAP ಕ್ರ್ಯಾಶ್ ಟೆಸ್ಟ್ ಪ್ರೋಟೋಕಾಲ್‌ಗಳ ಪ್ರಕಾರ 5-ಸ್ಟಾರ್ ಸುರಕ್ಷತಾ ರೇಟಿಂಗ್‌ಗಳನ್ನು ಗಳಿಸಿದ್ದಾರೆ.

 

ಮಹೀಂದ್ರಾ

“ಸುರಕ್ಷತೆ ಯಾವಾಗಲೂ ನಮ್ಮ ಮೊದಲ ಆದ್ಯತೆಯಾಗಿದೆ, ಇದು ಜಾಗತಿಕ NCAPಯಲ್ಲಿ ನಮ್ಮ ಕಾರುಗಳು ನಿರಂತರವಾಗಿ ಪಡೆಯುತ್ತಿರುವ 5-ಸ್ಟಾರ್ ಮತ್ತು 4-ಸ್ಟಾರ್ ರೇಟಿಂಗ್‌ಗಳಿಂದ ಸ್ಪಷ್ಟವಾಗುತ್ತದೆ. ಭಾರತ್ NCAP ಅನ್ನು ಪ್ರಾರಂಭಿಸುವ ಸರ್ಕಾರದ ಉಪಕ್ರಮ ಶ್ಲಾಘನೀಯವಾಗಿದೆ. ಇದು ಭಾರತದಲ್ಲಿ ವಾಹನ ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನಾವು ನಂಬುತ್ತೇವೆ." ಎಂದು ಮಹೀಂದ್ರಾ ಮತ್ತು ಮಹೀಂದ್ರಾ ಆಟೋಮೋಟಿವ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜೆ ನಕ್ರಾ ಹೇಳಿದರು.

Mahindra Scorpio N

ಮಹೀಂದ್ರಾ ಇತ್ತೀಚೆಗೆ ಬಿಡುಗಡೆಮಾಡಿರುವ ಎರಡು ಹೊಸ ಎಸ್‌ಯುವಿಗಳಾದ ಎಕ್ಸ್‌ಯುವಿ700 ಮತ್ತು  ಸ್ಕಾರ್ಪಿಯೋ N, GNCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್‌ಗಳನ್ನು ಗಳಿಸಿವೆ.

 

ಹುಂಡೈ

“ಭಾರತ ಸರ್ಕಾರದ BNCAP ಸುರಕ್ಷತಾ ಉಪಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರದ ಈ ಉಪಕ್ರಮವು ಸುರಕ್ಷತಾ ಮಾನದಂಡಗಳನ್ನು ಬಲಪಡಿಸುತ್ತದೆ, ಜನರು ಸರಿಯಾದ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಎಲ್ಲರಿಗೂ ಭಾರತೀಯ ರಸ್ತೆಗಳನ್ನು ಸುರಕ್ಷಿತವಾಗಿಸುತ್ತದೆ ಎಂದು ನಮಗೆ ವಿಶ್ವಾಸವಿದೆ. ಹುಂಡೈ ಮೋಟಾರ್ ಇಂಡಿಯಾದಲ್ಲಿ, ಅತ್ಯುನ್ನತ ಸುರಕ್ಷತಾ ಮಾನದಂಡಗಳೊಂದಿಗೆ ಕಾರುಗಳನ್ನು ತಯಾರಿಸಲು ನಾವು ಬದ್ಧರಾಗಿದ್ದೇವೆ.” ಎಂದು ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಉನ್ಸೂ ಕಿಮ್ ಹೇಳಿದರು.

Hyundai Creta

 ಹುಂಡೈ ಮಾರಾಟದ ವಿಷಯದಲ್ಲಿ ಭಾರತದಲ್ಲಿ ಎರಡನೇ ಅತ್ಯಂತ ಜನಪ್ರಿಯ ಕಾರು ಬ್ರಾಂಡ್ ಆಗಿದೆ, ಆದರೂ ಅದರ  ಗ್ರ್ಯಾಂಡ್ i10 ನಿಯೋಸ್, ವೆನ್ಯೂ ಮತ್ತು ಕ್ರೆಟಾದಂತಹ ಭಾರತಕ್ಕೆ ನಿರ್ದಿಷ್ಟವಾದ ಮಾಡೆಲ್‌ಗಳು ಇನ್ನೂ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿಲ್ಲ.

ಸಂಬಂಧಿತ:  ಭಾರತ್ NCAP ಈಗಾಗಲೇ ಉತ್ತಮ ಸುರಕ್ಷತೆಗಾಗಿ ಕ್ರ್ಯಾಶ್ ಟೆಸ್ಟ್ ಮಾನದಂಡಗಳನ್ನು ಅಪ್‌ಡೇಟ್ ಮಾಡುವ ಯೋಜನೆಗಳನ್ನು ಹೊಂದಿದೆ 

 

ಟೊಯೋಟಾ

“ಭಾರತ-NCAP ಮೌಲ್ಯಮಾಪನ ಕಾರ್ಯಕ್ರಮವನ್ನು ಪ್ರಾರಂಭಿಸುವ ಸರ್ಕಾರದ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಇದು ಸರಿಯಾದ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆ ಎಂದು ನಂಬುತ್ತೇವೆ. ಗ್ರಾಹಕರು ತಮ್ಮ ಕಾರುಗಳಲ್ಲಿ ಸುರಕ್ಷತೆ ಉತ್ತಮವಾಗಿರಬೇಕು ಎಂದು ಬಯಸುತ್ತಿರುವಾಗ ಮತ್ತು ಸುರಕ್ಷಿತ ವಾಹನಗಳ ಹುಡುಕಾಟದಲ್ಲಿರುವ ಸಮಯದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಗ್ರಾಹಕರನ್ನು ಸಬಲೀಕರಣಗೊಳಿಸುವುದರ ಜೊತೆಗೆ, ಹೆಚ್ಚಿನ ಅರಿವು ಮತ್ತು ಮತ್ತಷ್ಟು ಪಾರದರ್ಶಕತೆಯನ್ನು ಹೊಂದಲು ಸಹಾಯ ಮಾಡುವುದರೊಂದಿಗೆ ಆಫರ್‌ನಲ್ಲಿರುವ ವಿವಿಧ ಪ್ರಾಡಕ್ಟ್‌ಗಳ ತುಲನಾತ್ಮಕ ಸುರಕ್ಷತಾ ಅಂಶಗಳನ್ನು ತಿಳಿದುಕೊಳ್ಳಲು ಅವರಿಗೆ ಅವಕಾಶ ನೀಡುತ್ತದೆ.

Toyota Innova Hycross

TKM ಗೆ ಸಂಬಂಧಿಸಿದಂತೆ, ಮಾನವ ಜೀವ ಅತ್ಯಂತ ಮುಖ್ಯವಾದವು ಮತ್ತು ಸುರಕ್ಷತೆಯನ್ನು ಎಂದಿಗೂ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಸುರಕ್ಷತೆಗೆ ಸಂಬಂಧಿಸಿದಂತೆ ನಾವು ಯಾವಾಗಲೂ ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸುಧಾರಿತ ಫೀಚರ್‌ಗಳನ್ನು ಹೊಂದಿರುವ ಸುರಕ್ಷಿತ ಕಾರುಗಳ ತಯಾರಿಕೆ ಮತ್ತು ಸುರಕ್ಷತಾ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುವುದನ್ನು ಒಳಗೊಂಡಿರುವ ಸಮಗ್ರ ವಿಧಾನವನ್ನು ಅನುಸರಿಸುವುದನ್ನು ನಾವು ಭವಿಷ್ಯದಲ್ಲಿಯೂ ಮುಂದುವರಿಸುತ್ತೇವೆ,” ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಕಂಟ್ರಿ ಹೆಡ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಪ್ರತಿಕ್ರಿಯಿಸಿದ್ದಾರೆ.

 

ಕಿಯಾ

Kia Seltos

“ಭಾರತ್ NCAP ರಸ್ತೆ ಸುರಕ್ಷತೆಯ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯಾಗಿದೆ. ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ಯುನಿಟ್‌ಗಳನ್ನು ಸೇರಿಸುವ ಮೂಲಕ ಸುರಕ್ಷತೆಯ ಕಡೆಗೆ ಭಾರತ ಸರ್ಕಾರದ ಈ ದೂರದೃಷ್ಟಿಯ ವಿಧಾನವನ್ನು ನಾವು ತುಂಬು ಹೃದಯದಿಂದ ಪ್ರಶಂಸಿಸುತ್ತೇವೆ. ಭಾರತ ಸರ್ಕಾರದ ಆತ್ಮನಿರ್ಭರ್  ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಕ್ರಮವು ಈಗ ಹೊರಗೆ ವಾಹನಗಳನ್ನು ಪರೀಕ್ಷಿಸುವ ಅವಶ್ಯಕತೆ ಮತ್ತು ವೆಚ್ಚವನ್ನು ಕಡಿಮೆಮಾಡುವಲ್ಲಿ ಸಹಾಯ ಮಾಡುತ್ತದೆ. ಇದು ಉತ್ತಮ ರೇಟಿಂಗ್‌ಗಳೊಂದಿಗೆ ವಿಶ್ವದಾದ್ಯಂತ ಭಾರತದ ಕಾರುಗಳ ಜಾಗತಿಕ ಖ್ಯಾತಿಯನ್ನು ಹೆಚ್ಚಿಸುತ್ತದೆ" ಎಂದು ಕಿಯಾ ಇಂಡಿಯಾದ ಮುಖ್ಯ ಮಾರಾಟ ಮತ್ತು ವ್ಯವಹಾರ ಅಧಿಕಾರಿ ಮ್ಯುಂಗ್ ಸಿಕ್ ಸೊಹ್ನ್ ಪ್ರತಿಕ್ರಿಯಿಸಿದ್ದಾರೆ.

ಇಲ್ಲಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ, ಭಾರತ್ NCAP ಹೊಂದಿರುವ ಕಾರಿನ ಕ್ರ್ಯಾಶ್ ಟೆಸ್ಟಿಂಗ್‌ನ ಸಂಭವನೀಯ ವೆಚ್ಚ ಸುಮಾರು 60 ಲಕ್ಷ ರೂಪಾಯಿ ಆಗಬಹುದು, ಇದನ್ನು ಅಂತರರಾಷ್ಟ್ರೀಯ ಮಟ್ಟದ ಕ್ರ್ಯಾಶ್ ಟೆಸ್ಟಿಂಗ್‌ ಅಂದಾಜು ವೆಚ್ಚಕ್ಕೆ ಹೋಲಿಸಬಹುದಾಗಿದೆ ಮತ್ತು ಅದು ಸುಮಾರು 2.5 ಕೋಟಿ ರೂಪಾಯಿಗಳಾಗಿದೆ.

ಇದನ್ನೂ ಓದಿ:  ಭಾರತ್ NCAP vs ಜಾಗತಿಕ NCAP: ಸಾಮ್ಯತೆಗಳು ಮತ್ತು ವ್ಯತ್ಯಾಸಗಳ ವಿವರಣೆ

 

ಸ್ಕೋಡಾ

“ಭಾರತ ಸರ್ಕಾರವು ಕಾರಿನ ಸುರಕ್ಷತೆಯನ್ನು ಸುಧಾರಿಸುವ ಸುರಕ್ಷತಾ ನಿಯಮಗಳು ಮತ್ತು ಪಾಲಿಸಿಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ನಾವು ಪ್ರಶಂಸಿಸುತ್ತೇವೆ. BNCAP ಯ ಪರಿಚಯವು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ಸುರಕ್ಷತೆಯು ಒಂದು ಪ್ರಮುಖ ಅಂಶವಾಗಿದೆ ಮತ್ತು ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ಫೀಚರ್‌ಗಳು, ಕಾರಿನ ರಚನೆಯೊಂದಿಗೆ ಚಾಲಕ ಮತ್ತು ಅವರ ಕುಟುಂಬವನ್ನು ಸುರಕ್ಷಿತವಾಗಿರಿಸುತ್ತದೆ. ಸ್ಕೋಡಾ ಫ್ಯಾಮಿಲಿ ಬ್ರ್ಯಾಂಡ್ ಆಗಿದ್ದು, ಎಲ್ಲಾ ಗ್ರಾಹಕರ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಸ್ಕೋಡಾವು ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಅನ್ನು ಮತ್ತಷ್ಟು ಬೆಳೆಸಲು ಸುರಕ್ಷತೆಯ ಮೇಲೆ ಕೇಂದ್ರೀಕರಿಸುವುದನ್ನು ಮುಂದುವರಿಸುತ್ತದೆ" ಎಂದು ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಪೀಟರ್ ಸೋಲ್ಕ್ ತಿಳಿಸಿದರು.

 

Skoda Slavia

ಪ್ರಸ್ತುತ, ಸ್ಕೋಡಾ-ವೋಕ್ಸ್‌ವ್ಯಾಗನ್ ಇಂಡಿಯಾವು ಜಾಗತಿಕ NCAPಯಿಂದ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಉತ್ತಮ ಸುರಕ್ಷತಾ ರೇಟಿಂಗ್‌ಗಳನ್ನು ಪಡೆದುಕೊಂಡಿರುವ ವಿಶಾಲ ಶ್ರೇಣಿಯ ಕಾರುಗಳನ್ನು ಹೊಂದಿದೆ, ಇದರಲ್ಲಿ  ಫೋಕ್ಸ್‌ವ್ಯಾಗನ್ ಟೈಗನ್,  ಫೋಕ್ಸ್‌ವ್ಯಾಗನ್ ವರ್ಟೆಸ್, ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಸೇರಿವೆ.

 

ರೆನಾಲ್ಟ್

Renault Kiger

“ಭಾರತ ಸರ್ಕಾರದಿಂದ ಭಾರತ್ NCAPಯ ಸಕಾಲಿಕ ಮತ್ತು ಐತಿಹಾಸಿಕ ಪರಿಚಯವು ತನ್ನ ನಾಗರಿಕರನ್ನು ರಕ್ಷಿಸಲು ಮತ್ತು ರಸ್ತೆ ಸುರಕ್ಷತೆಯನ್ನು ಮುಂದುವರಿಸಲು ಅದರ ಸಮರ್ಪಣೆಯನ್ನು ತೋರಿಸುತ್ತದೆ. ರೆನಾಲ್ಟ್ ಇಂಡಿಯಾ ಈ ಉಪಕ್ರಮವನ್ನು ತುಂಬು ಹೃದಯದಿಂದ ಬೆಂಬಲಿಸುತ್ತದೆ ಮತ್ತು ಅಪಘಾತಗಳನ್ನು ಕಡಿಮೆ ಮಾಡಲು ಮತ್ತು ಎಲ್ಲರಿಗೂ ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸಲು ನಮ್ಮ ಕೊಡುಗೆ ನೀಡಲು ಎದುರು ನೋಡುತ್ತಿದೆ" ಎಂದು ರೆನಾಲ್ಟ್ ಇಂಡಿಯಾ ಕಾರ್ಯಾಚರಣೆಗಳ ಕಂಟ್ರಿ ಸಿಇಒ ಮತ್ತು ಎಂಡಿ ವೆಂಕಟರಾಮ್ ಮಾಮಿಲ್ಲಾಪಲ್ಲೆ ಪ್ರತಿಕ್ರಿಯಿಸಿದ್ದಾರೆ.

ಭಾರತ್ NCAP ಯ ತ್ವರಿತ ಅವಲೋಕನ

ಅಕ್ಟೋಬರ್ 1, 2023 ರಂದು ಜಾರಿಗೆ ಬರಲಿರುವ ಭಾರತ್ NCAP, ಫ್ರಂಟಲ್ ಆಫ್‌ಸೆಟ್, ಸೈಡ್ ಇಂಪ್ಯಾಕ್ಟ್ ಮತ್ತು ಪೋಲ್ ಸೈಡ್ ಇಂಪ್ಯಾಕ್ಟ್ ಸೇರಿದಂತೆ ಗ್ಲೋಬಲ್ NCAPಯಂತೆಯೇ ಬಹುತೇಕ ಅದೇ ಮಾನದಂಡಗಳನ್ನು ಬಳಸಿ ಕಾರುಗಳನ್ನು ಪರೀಕ್ಷಿಸಲಿದೆ. ರೇಟಿಂಗ್ ವ್ಯವಸ್ಥೆ, ಕಾರು ಆಯ್ಕೆಯ ಮಾನದಂಡ ಮತ್ತು ವಾಹನದ ವಿಧಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು  ನಮ್ಮ ಪ್ರಮುಖ ಲೇಖನ  ಒಳಗೊಂಡಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

1 ಕಾಮೆಂಟ್
1
S
sunny
Aug 23, 2023, 3:08:35 PM

Suzuki need to need all the arena cars for crash testing project.

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience