Login or Register ಅತ್ಯುತ್ತಮ CarDekho experience ಗೆ
Login

Citroen C5 Aircross ಫೀಲ್ ವೇರಿಯಂಟ್ ನ ವೈಶಿಷ್ಟ್ಯಗಳ ಬಗ್ಗೆ ಒಂದು ಝಲಕ್..

published on ಆಗಸ್ಟ್‌ 16, 2023 10:28 am by shreyash for ಸಿಟ್ರೊನ್ ಸಿ5 ಏರ್‌ಕ್ರಾಸ್‌

ಸಿಟ್ರಾನ್‌ ಸಂಸ್ಥೆಯ ಮಧ್ಯಮ ಗಾತ್ರದ ಪ್ರೀಮಿಯಂ ಎಸ್‌ಯುವಿ ಈಗ ಎರಡು ವೇರಿಯೆಂಟ್ ಗಳಲ್ಲಿ ಲಭ್ಯ

ಸಿಟ್ರಾನ್ ಸಂಸ್ಥೆಯು ಇತ್ತೀಚೆಗೆ C5 ಏರ್‌ ಕ್ರಾಸ್ಎಸ್‌ಯುವಿ ಯ ಪ್ರವೇಶ ಹಂತದ ಫೀಲ್‌ ಟ್ರಿಮ್‌ ಅನ್ನು ಮಾರುಕಟ್ಟೆಗೆ ಮರುಪರಿಚಯಿಸಿದೆ. ಮಧ್ಯಮ ಗಾತ್ರದ ಎಸ್‌ಯುವಿ ವಾಹನವು ಭಾರತದಲ್ಲಿ ಬಿಡುಗಡೆಯಾದ ಸಂದರ್ಭದಲ್ಲಿ ಇದು ದೊರೆಯುತ್ತಿತ್ತು. ಆದರೆ 2022ರಲ್ಲಿ ಮಾರುಕಟ್ಟೆಗೆ ಬಂದ ಪರಿಷ್ಕೃತ ಆವೃತ್ತಿಯು ಇಲ್ಲಿಯತನಕ ದೊರೆಯುತ್ತಿರಲಿಲ್ಲ. ಈ ವಾಹನವನ್ನು ಮತ್ತೆ ಇಲ್ಲಿ ಬಿಡುಗಡೆ ಮಾಡಿರುವ ಕಾರಣ, ಸಿಟ್ರಾನ್‌ ಸಂಸ್ಥೆಯು ಎಸ್‌ಯುವಿಯ ಟಾಪ್‌ ಎಂಡ್‌ ಶೈನ್‌ ವಿಧದ ಬೆಲೆಗಳನ್ನು ಸಹ ಹೆಚ್ಚಿಸಿದೆ. ಒಂದು ವೇಳೆ ನೀವು C5 ಏರ್‌ ಕ್ರಾಸ್‌ ನ ಫೀಲ್‌ ವಾಹನವನ್ನು ಆರಿಸಿಕೊಂಡರೆ ಇದು ಶೈನ್‌ ಆವೃತ್ತಿಗಿಂತ ಸುಮಾರು ರೂ. 76,000 ದಷ್ಟು ಕಡಿಮೆ ಬೆಲೆಗೆ ಲಭ್ಯವಿದ್ದು, ಈ ಕೆಳಗಿನ ಸೌಲಭ್ಯಗಳೊಂದಿಗೆ ನಿಮ್ಮ ಕೈಗೆ ಬರಲಿದೆ.

ಗುಣವೈಶಿಷ್ಟ್ಯಗಳು

ಬಾಹ್ಯ

ಇಂಟೀರಿಯರ್

ಅನುಕೂಲತೆ

ಸುರಕ್ಷತೆ

  • LED DRL ಗಳೊಂದಿಗೆ LED ಪ್ರಾಜೆಕ್ಟರ್‌ ಹೆಡ್‌ ಲೈಟುಗಳು

  • ORVM ಮೌಂಟೆಡ್‌ ಟರ್ನ್‌ ಇಂಡಿಕೇಟರ್‌ ಗಳೊಂದಿಗೆ 3-D LED ಟೇಲ್‌ ಲ್ಯಾಂಪುಗಳು

  • ಮುಂದಿನ LED ಫಾಗ್‌ ಲ್ಯಾಂಪುಗಳು

  • ಅರ್ಬನ್‌ ಬ್ಲ್ಯಾಕ್‌ ಅಲ್ಕಾಂಟರ ಅಫೋಲ್ಸ್ಟರಿ

  • ಆಂಡ್ರಾಯ್ಡ್‌ ಆಟೋ ಮತ್ತು ಆಪಲ್‌ ಕಾರ್‌ ಪ್ಲೇಯೊಂದಿಗಿನ 8 ಇಂಚಿನ ಟಚ್‌ ಸ್ಕ್ರೀನ್

  • 12.3‌ ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇ

  • ವಿಹಂಗಮ ಸನ್‌ ರೂಫ್

  • ಕೀ ಇಲ್ಲದೆಯೇ ಪ್ರವೇಶ ಮತ್ತು ಪುಶ್‌ ಬಟನ್‌ ಸ್ಟಾರ್ಟ್/ಸ್ಟಾಪ್

  • ಹಿಂದುಗಡೆಯ AC ವೆಂಟ್‌ ಗಳೊಂದಿಗೆ ಡ್ಯುವಲ್‌ ಝೋನ್‌ AC

  • ಕ್ರೂಸ್‌ ಕಂಟ್ರೋಲ್

  • ಚಾಲಕನ ಪವರ್ಡ್‌ ಸೀಟ್

  • 6 ಏರ್‌ ಬ್ಯಾಗುಗಳು

  • ಹಿಲ್‌ ಅಸಿಸ್ಟಂಟ್‌ ಜೊತೆಗೆ ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್

  • ಪಾರ್ಕ್‌ ಅಸಿಸ್ಟಂಟ್

  • ಬ್ಲೈಂಡ್‌ ಸ್ಪಾಟ್‌ ಪತ್ತೆ

ಇದೊಂದು ಬೇಸ್‌ ಆಯ್ಕೆ ಆಗಿದ್ದರೂ, ಸಿಟ್ರಾನ್ C5 ಏರ್‌ ಕ್ರಾಸ್ ಎಸ್‌ಯುವಿಯ ದುಬಾರಿ ಫೀಲ್‌ ಆವೃತ್ತಿಯು ಸಾಕಷ್ಟು ಮಟ್ಟಿಗೆ ತಾಂತ್ರಿಕವಾಗಿ ಉನ್ನತ ಮಟ್ಟದ ಮತ್ತು ಸುರಕ್ಷಾ ಸಾಧನಗಳೊಂದಿಗೆ ಬರುತ್ತದೆ. ಇದು ವಿಹಂಗಮ ಸನ್‌ ರೂಫ್‌, ಡ್ಯುವಲ್‌ ಝೋನ್‌ AC ಮತ್ತು ಚಾಲಕನ ಪವರ್ಡ್‌ ಸೀಟು ಮುಂತಾದ ವಿಶೇಷತೆಗಳೊಂದಿಗೆ ಬರುತ್ತದೆ ಮಾತ್ರವಲ್ಲದೆ, ಆರು ಏರ್‌ ಬ್ಯಾಗುಗಳು, ಹಿಲ್‌ ಅಸಿಸ್ಟಂಟ್‌ ಜೊತೆಗೆ ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ESC) ಹಾಗೂ ಬ್ಲೈಂಡ್‌ ಸ್ಪಾಟ್‌ ಪತ್ತೆ ವ್ಯವಸ್ಥೆ ಇತ್ಯಾದಿ ಸುರಕ್ಷಾ ವ್ಯವಸ್ಥೆಗಳನ್ನು ಹೊಂದಿದೆ.

ಇದನ್ನು ಸಹ ಓದಿರಿ: ಈ ಹಬ್ಬದ ಋತುವಿನಲ್ಲಿ ಬೀದಿಗಿಳಿಯಲಿರುವ 5 ಹೊಸ SUV ಗಳು

ಅಷ್ಟೇ ಅಲ್ಲದೆ‌, ಶೈನ್ ಆವೃತ್ತಿಯಲ್ಲಿ ಇರುವ‌ 10 ಇಂಚಿನ ಟಚ್‌ ಸ್ಕ್ರೀನ್ ಗೆ ಹೋಲಿಸಿದರೆ 8 ಇಂಚಿನ ಸಣ್ಣ ಟಚ್‌ ಸ್ಕ್ರೀನ್‌ ಅನ್ನು ಇದು ಹೊಂದಿದೆ. ಆದರೂ ಇದರಲ್ಲಿರುವ ಇನ್ಫೊಟೇನ್‌ ಮೆಂಟ್‌ ಸ್ಕ್ರೀನ್‌, ಆಂಡ್ರಾಯ್ಡ್‌ ಅಟೋ ಮತ್ತು ಆಪಲ್‌ ಕಾರ್‌ ಪ್ಲೇ ಎರಡನ್ನೂ ಆಧರಿಸುತ್ತದೆ. ಅಷ್ಟೇ ಅಲ್ಲದೆ, ಫೀಲ್‌ ಆವೃತ್ತಿಯು ಉನ್ನತ ಶ್ರೇಣಿಯ ಶೈನ್‌ ನಲ್ಲಿ ದೊರೆಯುವ ಡಾರ್ಕ್‌ ಕ್ರೋಮ್‌ ಮತ್ತು ಎನರ್ಜೆಟಿಕ್‌ ಬ್ಲೂ ಮುಂತಾದ ಬಣ್ಣಗಳ ಆಯ್ಕೆಯನ್ನು ಹೊಂದಿಲ್ಲ.

ಜೊತೆಗೆ, ಇದೇ ವರ್ಗದ ಪ್ರತಿಸ್ಪರ್ಧಿಗಳು ನೀಡುವ ವೈರ್‌ ಲೆಸ್‌ ಫೋನ್‌ ಚಾರ್ಜರ್‌ ಮತ್ತು ಪವರ್ಡ್‌ ಟೇಲ್‌ ಗೇಟ್‌ ಓಪನಿಂಗ್‌ ಮುಂತಾದ ಕೆಲವು ವೈಶಿಷ್ಟ್ಯಗಳನ್ನು ಇದು ಹೊಂದಿಲ್ಲ.

ಇದು ಹೇಗೆ ಭಿನ್ನವಾಗಿದೆ?

C5 ಏರ್‌ ಕ್ರಾಸ್‌ ವಾಹನವು, 177PS ಮತ್ತು 400Nm ಉಂಟು ಮಾಡುವ 2 ಲೀಟರ್‌ ಡೀಸೆಲ್‌ ಎಂಜಿನ್‌ ಜೊತೆಗೆ ಬರುತ್ತದೆ. ಈ ಘಟಕವು 8 ಸ್ಪೀನ್‌ ಅಟೊಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಅನ್ನು ಹೊಂದಿದೆ. ಈ SUV ಯು ಯಾವುದೇ ಪೆಟ್ರೋಲ್‌ ಎಂಜಿನ್‌ ಆಯ್ಕೆ ಅಥವಾ ಡೀಸೆಲ್‌ ಘಟಕದ ಜೊತೆಗೆ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಅನ್ನು ಹೊಂದಿಲ್ಲ.

ಪ್ರತಿಸ್ಪರ್ಧಿಗಳು

ಫೀಲ್‌ ವೇರಿಯೆಂಟ್‌ ನ ಮರುಪರಿಚಯದೊಂದಿಗೆ, ಸಿಟ್ರಾನ್‌ C5 ಏರ್‌ ಕ್ರಾಸ್‌ ವಾಹನವು ಸದ್ಯಕ್ಕೆ ರೂ 36.91 ಲಕ್ಷದಿಂದ ರೂ 37.67 ಲಕ್ಷದ ತನಕದ ಬೆಲೆಯಲ್ಲಿ ಲಭ್ಯ (ಎಕ್ಸ್‌ - ಶೋರೂಂ ಪ್ಯಾನ್‌ ಇಂಡಿಯಾ) ಜೀಪ್‌ ಕಂಪಾಸ್, ಹ್ಯುಂಡೈ ಟಕ್ಸನ್ ಮತ್ತು ಫಾಕ್ಸ್‌ ವ್ಯಾಗನ್ ಟೈಗುನ್‌ ಇತ್ಯಾದಿಗಳು ಇದರ ಪ್ರತಿಸ್ಪರ್ಧಿಗಳಾಗಿವೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ : ಸಿಟ್ರಾನ್ C5 ಏರ್‌ ಕ್ರಾಸ್‌ ಡೀಸೆಲ್

s
ಅವರಿಂದ ಪ್ರಕಟಿಸಲಾಗಿದೆ

shreyash

  • 14 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಸಿಟ್ರೊನ್ C5 Aircross

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ