ಈ ಹಬ್ಬದ ಋತುವಿಗಾಗಿ ಸಿಟ್ರನ್ C3 ಬೆಲೆಗಳಲ್ಲಿ ಇಳಿಕೆ; ʻಕೇರ್ ಫೆಸ್ಟಿವಲ್ʼ ಸರ್ವಿಸ್ ಕ್ಯಾಂಪ್ ನಡೆಸುತ್ತಿರುವ ಸಿಟ್ರನ್
ಸಿಟ್ರೊನ್ ಸಿ3 ಗಾಗಿ shreyash ಮೂಲಕ ಅಕ್ಟೋಬರ್ 24, 2023 01:44 pm ರಂದು ಪ್ರಕಟಿಸಲಾಗಿದೆ
- 56 Views
- ಕಾಮೆಂಟ್ ಅನ್ನು ಬರೆಯಿರಿ
ಸಿಟ್ರನ್ C3 ಹ್ಯಾಚ್ ಬ್ಯಾಕ್ ಕಾರಿನ ಹಬ್ಬದ ಋತುವಿನ ಬೆಲೆಗಳು ಅಕ್ಟೋಬರ್ 31ರ ತನಕ ಮಾಡುವ ಡೆಲಿವರಿಗಳಿಗೆ ಮಾತ್ರವೇ ಅನ್ವಯವಾಗುತ್ತವೆ
- C3 ಹ್ಯಾಚ್ ಬ್ಯಾಕ್ ವಾಹನದಲ್ಲಿ ರೂ. 57,000 ತನಕ ಬೆಲೆ ಇಳಿಕೆ ಮಾಡಲಾಗಿದೆ.
- ಗ್ರಾಹಕರು C3 ಅನ್ನು ಈಗ ಖರೀದಿಸಿ 2024ರಿಂದ EMI ಗಳನ್ನು ಪಾವತಿಸಲು ಪ್ರಾರಂಭಿಸಬಹುದು.
- ಈ ಕಾರು ತಯಾರಕ ಸಂಸ್ಥೆಯು ಅಕ್ಟೋಬರ್ 17ರಿಂದ ನವೆಂಬರ್ 4ರ ತನಕ ʻಕೇರ್ ಫೆಸ್ಟಿವಲ್ʼ ಸರ್ವಿಸ್ ಕ್ಯಾಂಪ್ ಅನ್ನು ನಡೆಸಲಿದೆ.
- ಸರ್ವಿಸ್ ಕ್ಯಾಂಪ್ ವೇಳೆ ಗ್ರಾಹಕರು 40 ಅಂಶಗಳ ವಾಹನ ಆರೋಗ್ಯ ತಪಾಸಣೆ ಪ್ಯಾಕೇಜ್ ಅನ್ನು ಪಡೆಯಲಿದ್ದಾರೆ.
- ಈ ಕಾರು ತಯಾರಕ ಸಂಸ್ಥೆಯು ಕಾರಿನ ಆರೈಕೆ ಉತ್ಪನ್ನಗಳ ಮೇಲೆ 15 ಶೇಕಡಾ ಮತ್ತು ಆಯ್ದ ಆಕ್ಸೆಸರಿಗಳು ಮತ್ತು ಕಾರ್ಮಿಕ ವೆಚ್ಚದ ಮೇಲೆ 10 ಶೇಕಡಾ ರಿಯಾಯಿತಿಯನ್ನು ನೀಡುತ್ತಿದೆ.
ಸಿಟ್ರನ್ ಸಂಸ್ಥೆಯು ಈ ಹಬ್ಬದ ಅವಧಿಯಲ್ಲಿ ರಾಷ್ಟ್ರವ್ಯಾಪಿ ʻಕೇರ್ ಫೆಸ್ಟಿವಲ್ʼ ಅನ್ನು ನಡೆಸುತ್ತಿದ್ದು, ಇದು ಭಾರತದಲ್ಲಿರುವ ಇದರ ಅಧಿಕೃತ ಡೀಲರ್ ಶಿಪ್ ಗಳಲ್ಲಿ ದೊರೆಯಲಿದೆ. ಈ ಶಿಬಿರವು ಅಕ್ಟೋಬರ್ 17ರಂದು ಪ್ರಾರಂಭವಾಗಿದ್ದು ನವೆಂಬರ್ 4ರ ತನಕ ನಡೆಯಲಿದೆ. ಈ ಫ್ರೆಂಚ್ ಕಾರು ತಯಾರಕ ಸಂಸ್ಥೆಯು ಸೀಮಿತ ಅವಧಿಗೆC3 ಹ್ಯಾಚ್ ಬ್ಯಾಕ್ ಕಾರಿನ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಇದರ ಖರೀದಿಯ ಮೇಲೆ ದೊಡ್ಡ ಮಟ್ಟದ ಉಳಿತಾಯವನ್ನು ನೀಡುತ್ತಿದೆ. ಈ ಹ್ಯಾಚ್ ಬ್ಯಾಕ್ ಕಾರಿನ ವೇರಿಯಂಟ್ ಗಳಿಗೆ ಅನುಗುಣವಾಗಿ ಬೆಲೆಗಳ ವಿವರವನ್ನು ನಾವು ಈ ಕೆಳಗೆ ನೀಡಿದ್ದೇವೆ:
ವೇರಿಯಂಟ್ |
ಸಾಮಾನ್ಯ ಬೆಲೆ |
ಕೊಡುಗೆಯ ಬೆಲೆ |
ವ್ಯತ್ಯಾಸ |
ಲೈವ್ |
ರೂ 6.16 ಲಕ್ಷ |
ರೂ 5.99 ಲಕ್ಷ |
(-) ರೂ. 17,000 |
ಫೀ |
ರೂ 7.08 ಲಕ್ಷ |
ರೂ 6.53 ಲಕ್ಷ |
(-) ರೂ. 55,000 |
ಶೈನ್ |
ರೂ 7.60 ಲಕ್ಷ |
ರೂ 7.03 ಲಕ್ಷ |
(-) ರೂ. 57,000 |
ಫೀಲ್ ಟರ್ಬೊ |
ರೂ 8.28 ಲಕ್ಷ |
ರೂ 7.79 ಲಕ್ಷ |
(-) ರೂ. 49,000 |
ಶೈನ್ ಟರ್ಬೊ |
ರೂ 8.80 ಲಕ್ಷ |
ರೂ 8.29 ಲಕ್ಷ |
(-) ರೂ. 51,000 |
ಹ್ಯಾಚ್ ಬ್ಯಾಕ್ ನಲ್ಲಿ ರೂ. 57,000 ದಷ್ಟು ಇಳಿಕೆ ಉಂಟಾಗಿದ್ದರೆ, ಟಾಪ್-ಸ್ಪೆಕ್ ಶೈನ್ ವೇರಿಯಂಟ್ ಗಳಲ್ಲಿ ಅತ್ಯಧಿಕ ಬೆಲೆ ಇಳಿಕೆ ಉಂಟಾಗಿದೆ. ಆದರೆ ಈ ಬೆಲೆಗಳು ಅಕ್ಟೋಬರ್ 31ರ ತನಕ ಮಾಡುವ ಡೆಲಿವರಿಗಳಿಗೆ ಮಾತ್ರವೇ ಅನ್ವಯವಾಗುತ್ತವೆ.
ಈ C3 ಹ್ಯಾಚ್ ಬ್ಯಾಕ್ ಕಾರಿನ ಮೇಲೆ 5 ವರ್ಷ ಅಥವಾ 50,000 km ನಿರ್ವಹಣೆ ಕಾರ್ಯಕ್ರಮ ಮತ್ತು 5 ವರ್ಷ ಅಥವಾ 100,000 km ತನಕದ ವಿಸ್ತರಿತ ವಾರಂಟಿಯನ್ನು ಸಹ ನೀಡಲಾಗುತ್ತದೆ. ನೀವು C3 ಹ್ಯಾಚ್ ಬ್ಯಾಕ್ ಅನ್ನು ಈಗ ಖರೀದಿಸಿದರೆ, 2024ರಿಂದ EMI ಅನ್ನು ಪಾವತಿಸಲು ಪ್ರಾರಂಭಿಸಬಹುದು. ಈ ಎಲ್ಲಾ ಕೊಡುಗೆಗಳನ್ನು ಸಂಯೋಜಿಸಿದರೆ C3 ಹ್ಯಾಚ್ ಬ್ಯಾಕ್ ಮೇಲೆ ರೂ. 99,000 ದಷ್ಟು ಒಟ್ಟು ಲಾಭ ದೊರೆಯುತ್ತದೆ.
ಇದನ್ನು ಸಹ ಓದಿರಿ: ಸಿಟ್ರಾನ್ C3 ಏರ್ ಕ್ರಾಸ್ vs ಪ್ರತಿಸ್ಪರ್ಧಿಗಳು ಬೆಲೆಗಳ ಹೋಲಿಕೆ
ಕೇರ್ ಫೆಸ್ಟಿವಲ್ ಲಾಭಗಳು
ಸರ್ವಿಸ್ ಅಭಿಯಾನದ ವೇಳೆ ಸಿಟ್ರಾನ್ ಕಾರಿನ ಗ್ರಾಹಕರು 40 ಅಂಶಗಳ ಉಚಿತ ವಾಹನ ಆರೋಗ್ಯ ತಪಾಸಣೆ ಪ್ಯಾಕೇಜ್ ಅನ್ನು ಪಡೆಯಲಿದ್ದಾರೆ. ಈ ಸರ್ವಿಸ್ ಅನ್ನು ಆಯ್ದುಕೊಂಡಿರುವ ಗ್ರಾಹಕರು ಕಾರಿನ ಆರೈಕೆ ಉತ್ಪನ್ನಗಳ ಮೇಲೆ 15 ಶೇಕಡಾ ಮತ್ತು ಆಯ್ದ ಆಕ್ಸೆಸರಿಗಳ ಮೇಲೆ 10 ಶೇಕಡಾ ಮತ್ತು ಕಾರ್ಮಿಕ ವೆಚ್ಚದ ಮೇಲೆ 10 ಶೇಕಡಾದಷ್ಟು ರಿಯಾಯಿತಿಯನ್ನು ಪಡೆಯಲಿದ್ದಾರೆ.
ಇದನ್ನು ಸಹ ನೋಡಿರಿ: ಚಾಲಕರಹಿತ ಎಲೆಕ್ಟ್ರಿಕ್ ಶಟಲ್ ವಾಹನಗಳನ್ನು ಕ್ಯಾಂಪಸ್ ನಲ್ಲಿ ನಿಯೋಜಿಸಿದ TiHAN IIT ಹೈದರಾಬಾದ್
ಸಿಟ್ರಾನ್ ಸಂಸ್ಥೆಯ ಭಾರತದಲ್ಲಿ ಸದ್ಯಕ್ಕೆ C3 ಹ್ಯಾಚ್ ಬ್ಯಾಕ್, eC3 ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್, C3 ಏರ್ ಕ್ರಾಸ್ ಕಾಂಪ್ಯಾಕ್ಟ್ SUV, ಮತ್ತು C5 ಏರ್ ಕ್ರಾಸ್ ಮಿಡ್ ಸೈಝ್ SUV - ಈ ನಾಲ್ಕು ಕಾರಗಳನ್ನು ಮಾರಾಟ ಮಾಡುತ್ತಿದೆ. ಈ ಕಾರು ತಯಾರಕ ಸಂಸ್ಥೆಯು ಇತ್ತೀಚೆಗೆ ಯೂರೋಪಿಗೆ ಸೀಮಿತವಾದ eC3 ವಾಹನವನ್ನು ಬಿಡುಗಡೆ ಮಾಡಿದ್ದು, ಇದು ಭಾರತಕ್ಕೆ ಸೀಮಿತವಾದ ಆವೃತ್ತಿಗಿಂತ ಹೇಗೆ ಭಿನ್ನವಾಗಿದೆ ಎನ್ನುವ ಮಾಹಿತಿ ಇಲ್ಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸಿಟ್ರಾನ್ C3 ಕಾರಿನ ಆನ್ ರೋಡ್ ಬೆಲೆ