• English
  • Login / Register

Hyundai Alcazar ಫೇಸ್‌ಲಿಫ್ಟ್‌: ಎಲ್ಲಾ ವೇರಿಯಂಟ್ ಗಳ ಪ್ರತಿಯೊಂದು ಫೀಚರ್ ಗಳ ವಿವರ ಇಲ್ಲಿದೆ

published on ಸೆಪ್ಟೆಂಬರ್ 12, 2024 09:12 pm by dipan for ಹುಂಡೈ ಅಲ್ಕಝರ್

  • 40 Views
  • ಕಾಮೆಂಟ್‌ ಅನ್ನು ಬರೆಯಿರಿ

ಹ್ಯುಂಡೈ ಅಲ್ಕಾಜರ್ ಎಕ್ಸಿಕ್ಯುಟಿವ್, ಪ್ರೆಸ್ಟೀಜ್, ಪ್ಲಾಟಿನಮ್ ಮತ್ತು ಸಿಗ್ನೇಚರ್ ಎಂಬ ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿದೆ

Hyundai Alcazar Facelift variant-wise features explained

 ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಅಲ್ಕಾಜರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಬೆಲೆಯು ರೂ 14.99 ಲಕ್ಷದಿಂದ ರೂ 21.55 ಲಕ್ಷದವರೆಗೆ (ಪರಿಚಯಾತ್ಮಕ ಎಕ್ಸ್ ಶೋ ರೂಂ, ನವದೆಹಲಿ) ಇದೆ. ಈ ಸ್ಟೈಲಿಶ್ ಆಗಿರುವ 3-ಸಾಲು ಸೀಟ್ ಇರುವ SUV ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿದೆ: ಎಕ್ಸಿಕ್ಯುಟಿವ್, ಪ್ರೆಸ್ಟೀಜ್, ಪ್ಲಾಟಿನಮ್ ಮತ್ತು ಸಿಗ್ನೇಚರ್. ಪ್ರಿ-ಫೇಸ್‌ಲಿಫ್ಟ್ ಮಾಡೆಲ್ ನಂತೆ ಈ ಅಲ್ಕಾಜರ್ ಅನ್ನು ಕೂಡ ಹಲವಾರು ಫೀಚರ್ ಗಳೊಂದಿಗೆ ಲೋಡ್ ಮಾಡಲಾಗಿದೆ. ನೀವು ಅಲ್ಕಾಜರ್ ಅನ್ನು ಖರೀದಿಸಲು ನೋಡುತ್ತಿದ್ದರೆ, ನಿಮಗಾಗಿ ವೇರಿಯಂಟ್-ವಾರು ಫೀಚರ್ ಗಳನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ.

ಹ್ಯುಂಡೈ ಅಲ್ಕಾಜರ್ ಎಕ್ಸಿಕ್ಯುಟಿವ್

2024 Hyundai Alcazar front look

 ಬೆಲೆ: ರೂ 14.99 ಲಕ್ಷದಿಂದ ರೂ 15.99 ಲಕ್ಷ

 ಬನ್ನಿ, ಹ್ಯುಂಡೈ ಅಲ್ಕಾಜರ್ ತನ್ನ ಎಂಟ್ರಿ ಲೆವೆಲ್ ಎಕ್ಸಿಕ್ಯುಟಿವ್ ವರ್ಷನ್ ನಲ್ಲಿ ಏನೇನು ನೀಡಿದೆ ಎಂದು ನೋಡೋಣ:

ಹೊರಭಾಗ

 ಒಳಭಾಗ

 ಸೌಕರ್ಯ ಮತ್ತು ಅನುಕೂಲತೆ

 ಇನ್ಫೋಟೈನ್ಮೆಂಟ್

 ಸುರಕ್ಷತೆ

  • ಆಟೋ LED ಹೆಡ್ ಲೈಟ್ ಗಳು

  • ಕನೆಕ್ಟೆಡ್ LED DRL ಗಳು ಮತ್ತು H- ಆಕಾರದ ಲೈಟಿಂಗ್ ಎಲಿಮೆಂಟ್ ಗಳು

  • ಡೈನಾಮಿಕ್ LED ಟರ್ನ್ ಇಂಡಿಕೇಟರ್ ಗಳು

  • ORVM ಗಳಲ್ಲಿ LED ಟರ್ನ್ ಇಂಡಿಕೇಟರ್ ಗಳು

  • LED ಟೈಲ್ ಲೈಟ್‌ಗಳು

  • 17-ಇಂಚಿನ ಡ್ಯುಯಲ್-ಟೋನ್ ಅಲೊಯ್ ವೀಲ್ಸ್ 

  • ಬ್ಲಾಕ್ ಬಾಡಿ ಕ್ಲಾಡಿಂಗ್

  • ಬಾಡಿ-ಕಲರ್ ಡೋರ್ ಹ್ಯಾಂಡಲ್ ಗಳು ಮತ್ತು ORVM ಗಳು

  • ಟ್ವಿನ್-ಟಿಪ್ ಎಕ್ಸಾಸ್ಟ್

  • ಮುಂಭಾಗ ಮತ್ತು ಹಿಂಭಾಗದ ಸ್ಕೀಡ್ ಪ್ಲೇಟ್‌ಗಳು

  • ಹಿಂಭಾಗದ ಸ್ಪಾಯ್ಲರ್

  • ರೂಫ್ ರೈಲ್ ಗಳು

  •  ಡ್ಯುಯಲ್-ಟೋನ್ ಇಂಟೀರಿಯರ್

  • ಸೀಟ್ ಗಳ ಮೇಲೆ ಫ್ಯಾಬ್ರಿಕ್ ಅಪ್ಹೋಲಿಸ್ಟ್ರೀ

  • ಲೆಥೆರೆಟ್ ಸುತ್ತಿದ ಸ್ಟೀರಿಂಗ್ ವೀಲ್ ಮತ್ತು ಗೇರ್ ಲಿವರ್

  • ಒಳಗಿನ ಡೋರ್ ಹ್ಯಾಂಡಲ್ ಗಳಲ್ಲಿ ಮೆಟಲ್ ಫಿನಿಷ್

  • ಡೋರ್ ಸ್ಕಫ್ ಪ್ಲೇಟ್‌ಗಳು

  • ಆಂಬಿಯೆಂಟ್ ಲೈಟಿಂಗ್

  • ಎಲ್ಲಾ ಸೀಟ್ ಗಳಿಗೆ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು

  • ಮುಂಭಾಗದ ಸೀಟ್‌ಬ್ಯಾಕ್ ಟ್ರೇ ಮತ್ತು ಕಪ್ ಹೋಲ್ಡರ್

  • 2 ನೇ ಸಾಲಿನ ಸೆಂಟರ್ ಆರ್ಮ್‌ರೆಸ್ಟ್ (ಕೇವಲ 7-ಸೀಟರ್ ಎಡಿಷನ್ ನಲ್ಲಿ ಮಾತ್ರ)

  • ಸ್ಟೋರೇಜ್ ಸ್ಥಳದೊಂದಿಗೆ ಸ್ಲೈಡಿಂಗ್ ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್

  • ಮುಂದಿನ ಸಾಲಿನ ಪ್ರಯಾಣಿಕರಿಗೆ ಸ್ಲೈಡಿಂಗ್ ಸನ್‌ವೈಸರ್

  • ಸನ್‌ಗ್ಲಾಸ್ ಹೋಲ್ಡರ್

  • MID ಯೊಂದಿಗೆ ಸೆಮಿ-ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ
  • ಎರಡನೇ ಮತ್ತು ಮೂರನೇ ಸಾಲುಗಳಿಗಾಗಿ ಹಿಂಬದಿಯ ವೆಂಟ್ ಗಳೊಂದಿಗೆ ಡ್ಯುಯಲ್-ಝೋನ್ ಆಟೋ AC (ಮೂರನೇ ಸಾಲಿಗೆ 3-ಲೆವೆಲ್ ಫ್ಯಾನ್ ಕಂಟ್ರೋಲ್)

  • ಕೂಲ್ಡ್ ಗ್ಲೋವ್‌ಬಾಕ್ಸ್

  • ಎಲೆಕ್ಟ್ರಿಕ್ ಬೂಟ್ ರಿಲೀಸ್

  • ಮಾನ್ಯುಯಲ್ ಆಗಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಸ್ಲೈಡಿಂಗ್ ಮತ್ತು ರಿಕ್ಲೈನ್ ಆಗುವ ಎರಡನೇ ಸಾಲಿನ ಸೀಟ್ ಗಳು

  • ರಿಕ್ಲೈನ್ ಆಗುವ ಮೂರನೇ ಸಾಲಿನ ಸೀಟ್ ಗಳು

  • ಪುಶ್-ಬಟನ್ ಸ್ಟಾರ್ಟ್/ಸ್ಟಾಪ್

  • ರಿಮೋಟ್ ಎಂಜಿನ್ ಸ್ಟಾರ್ಟ್

  • ಹಿಂಭಾಗದ ವಿಂಡೋ ಸ್ಯಾನ್ ಶೇಡ್

  • ಸ್ಟೀರಿಂಗ್ ವೀಲ್ ಗೆ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಅಡ್ಜಸ್ಟ್ಮೆಂಟ್

  • ಕ್ರೂಸ್ ಕಂಟ್ರೋಲ್

  • ಆಟೋ-ಫೋಲ್ಡ್ ಫಂಕ್ಷನ್‌ನೊಂದಿಗೆ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಮತ್ತು ಫೋಲ್ಡ್ ಮಾಡಬಹುದಾದ ORVM ಗಳು

  • ಎಲ್ಲಾ ಮೂರು ಸಾಲುಗಳಿಗೆ ಟೈಪ್-C ಚಾರ್ಜಿಂಗ್ ಪೋರ್ಟ್ (ಮೂರನೇ ಸಾಲಿಗೆ x1)

  • ಮುಂಭಾಗದಲ್ಲಿ 12V ಪವರ್ ಸಾಕೆಟ್

  • ಎಲ್ಲಾ ನಾಲ್ಕು ಪವರ್ ವಿಂಡೋಗಳು

  • ಡೇ/ನೈಟ್ IRVM

  • ಬೂಟ್ ಲ್ಯಾಂಪ್

  •  ಯಾವುದೂ ಇಲ್ಲ

  •  6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ)

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

  • ಹಿಲ್-ಸ್ಟಾರ್ಟ್ ಅಸಿಸ್ಟ್

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

  • ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು

  • ಹಿಂಭಾಗದ ವೈಪರ್ ಮತ್ತು ವಾಷರ್

  • ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು

  • ಟೈಮರ್ ಜೊತೆಗೆ ಹಿಂಭಾಗದ ಡಿಫಾಗರ್

  • ಎತ್ತರ-ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟ್ ಬೆಲ್ಟ್‌ಗಳು

  • ISOFIX ಚೈಲ್ಡ್ ಸೀಟ್ ಆಂಕರ್ ಗಳು

  • ಸೀಟ್‌ಬೆಲ್ಟ್ ರಿಮೈಂಡರ್‌ಗಳೊಂದಿಗೆ ಎಲ್ಲಾ ಸೀಟ್ ಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್

 ಅಲ್ಕಾಜಾರ್‌ ಎಕ್ಸಿಕ್ಯುಟಿವ್ ಎಂಟ್ರಿ ಲೆವೆಲ್ ವೇರಿಯಂಟ್ ಆಗಿದ್ದರೂ ಕೂಡ, ಇದರಲ್ಲಿ ಸಾಕಷ್ಟು ಫೀಚರ್ ಗಳನ್ನು ನೀಡಲಾಗಿದೆ. ಇದು ಆಟೋ-LED ಹೆಡ್‌ಲೈಟ್‌ಗಳು, 17-ಇಂಚಿನ ಡ್ಯುಯಲ್-ಟೋನ್ ಅಲೊಯ್ ವೀಲ್ಸ್, ಡ್ಯುಯಲ್-ಝೋನ್ ಆಟೋ AC ಮತ್ತು ಕೂಲ್ಡ್ ಗ್ಲೋವ್‌ಬಾಕ್ಸ್‌ನಂತಹ ಫೀಚರ್ ಗಳೊಂದಿಗೆ ಬರುತ್ತದೆ. ಸುರಕ್ಷತೆಗಾಗಿ ಇದರಲ್ಲಿ 6 ಏರ್‌ಬ್ಯಾಗ್‌ಗಳು, ESC, ಹಿಲ್-ಸ್ಟಾರ್ಟ್ ಅಸಿಸ್ಟ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಂತಹ ಫೀಚರ್ ಗಳನ್ನು ನೀಡಲಾಗಿದೆ.

A ಇದನ್ನು ಕೂಡ ಓದಿ: 2024 ಹ್ಯುಂಡೈ ಅಲ್ಕಾಜರ್ ಈಗ ಡೀಲರ್‌ಶಿಪ್‌ಗಳಲ್ಲಿ ಲಭ್ಯ, ಹತ್ತಿರದ ಶೋ ರೂಮ್ ಗೆ ಹೋಗಿ ನೀವು ಇದನ್ನು ನೋಡಬಹುದು

ಹ್ಯುಂಡೈ ಅಲ್ಕಾಜರ್ ಪ್ರೆಸ್ಟೀಜ್

2024 Hyundai Alcazar side look

 ಬೆಲೆ: ರೂ. 17.18 ಲಕ್ಷ

 ಬೇಸ್ ಗಿಂತ ಒಂದು ಲೆವೆಲ್ ಮೇಲಿರುವ ಪ್ರೆಸ್ಟೀಜ್ ವೇರಿಯಂಟ್ ಎಕ್ಸಿಕ್ಯುಟಿವ್ ವೇರಿಯಂಟ್ ನಲ್ಲಿರುವ ಫೀಚರ್ ಗಳ ಜೊತೆಗೆ ಈ ಕೆಳಗಿನ ಫೀಚರ್ ಗಳೊಂದಿಗೆ ಬರುತ್ತದೆ:

 ಹೊರಭಾಗ

 ಒಳಭಾಗ

 ಸೌಕರ್ಯ ಮತ್ತು ಅನುಕೂಲತೆ

 ಇನ್ಫೋಟೈನ್ಮೆಂಟ್

 ಸುರಕ್ಷತೆ


  •  

  • ಕ್ರೋಮ್ ಹೊರಗಿನ ಡೋರ್ ಹ್ಯಾಂಡಲ್ ಗಳು

  • ಶಾರ್ಕ್ ಫಿನ್ ಆಂಟೆನಾ

  •  ಯಾವುದೂ ಇಲ್ಲ

  • ಆಟೋ ಡಿಮ್ಮಿಂಗ್ IRVM

  • ಮುಂಭಾಗದ ಪ್ರಯಾಣಿಕರಿಗೆ ವೈರ್‌ಲೆಸ್ ಫೋನ್ ಚಾರ್ಜರ್

  • ಸ್ಟೀರಿಂಗ್-ಮೌಂಟೆಡ್ ಆಡಿಯೋ ಮತ್ತು ಕಾಲ್ ಕಂಟ್ರೋಲ್ ಗಳು

  • ವಾಯ್ಸ್ ಅಸ್ಸಿಸ್ಟಡ್ ಪನರೋಮಿಕ್ ಸನ್‌ರೂಫ್ (ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ)

  • ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್

  • 6 ಸ್ಪೀಕರ್‌ಗಳು (ಎರಡು ಟ್ವೀಟರ್‌ಗಳು ಸೇರಿದಂತೆ)

  • ಕನೆಕ್ಟೆಡ್ ಕಾರ್ ಟೆಕ್ನಾಲಜಿ

  • ಅಲೆಕ್ಸಾ ಕನೆಕ್ಷನ್

  •  ಯಾವುದೂ ಇಲ್ಲ

 ಹ್ಯುಂಡೈ ಅಲ್ಕಾಜರ್‌ನ ಪ್ರೆಸ್ಟೀಜ್ ವರ್ಷನ್ ಎಕ್ಸಿಕ್ಯೂಟಿವ್ ಟ್ರಿಮ್‌ನಲ್ಲಿ ಇರುವ ಫೀಚರ್ ಗಳ ಜೊತೆಗೆ ಮುಂಭಾಗದಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನರೋಮಿಕ್ ಸನ್‌ರೂಫ್ ನೀಡುತ್ತದೆ. ಇದು 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಕೂಡ ಪಡೆಯುತ್ತದೆ. ಎಕ್ಸಿಕ್ಯೂಟಿವ್ ವರ್ಷನ್ ನಲ್ಲಿ ಇರುವ ಸುರಕ್ಷತಾ ಫೀಚರ್ ಗಳನ್ನು ಇಲ್ಲಿ ಕೂಡ ನೀಡಲಾಗಿದೆ.

 ಹ್ಯುಂಡೈ ಅಲ್ಕಾಜರ್ ಪ್ಲಾಟಿನಂ

2024 Hyundai Alcazar gets connected LED tail lights

 ಬೆಲೆ: ರೂ. 19.46 ಲಕ್ಷದಿಂದ ರೂ. 21 ಲಕ್ಷ

 ಮಿಡ್-ಸ್ಪೆಕ್ ಪ್ಲಾಟಿನಂ ವೇರಿಯಂಟ್ ಪ್ರೆಸ್ಟೀಜ್ ವೇರಿಯಂಟ್ ನಲ್ಲಿರುವ ಫೀಚರ್ ಗಳ ಜೊತೆಗೆ ಈ ಕೆಳಗೆ ನೀಡಲಾದ ಫೀಚರ್ ಗಳನ್ನು ಪಡೆಯುತ್ತದೆ:

 ಹೊರಭಾಗ

 ಒಳಭಾಗ

 ಸೌಕರ್ಯ ಮತ್ತು ಅನುಕೂಲತೆ

 ಇನ್ಫೋಟೈನ್ಮೆಂಟ್

 ಸುರಕ್ಷತೆ

  • 18-ಇಂಚಿನ ಡ್ಯುಯಲ್-ಟೋನ್ ಅಲೊಯ್ ವೀಲ್ಸ್

  • ಬ್ಲಾಕ್-ಕಲರ್ ORVM ಗಳು

  • ಬ್ಲಾಕ್ ರೂಫ್

  • ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ

  • ಲೆಥೆರೆಟ್ ಸುತ್ತಿದ ಡೋರ್ ಆರ್ಮ್‌ರೆಸ್ಟ್‌ಗಳು

  • ವಿಂಗ್-ಟೈಪ್ ಹೆಡ್‌ರೆಸ್ಟ್‌ಗಳೊಂದಿಗೆ ಕ್ಯಾಪ್ಟನ್ ಸೀಟ್‌ಗಳ ಆಯ್ಕೆ

  •  10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

  • ಪ್ಯಾಡಲ್ ಶಿಫ್ಟರ್‌ಗಳು ಮತ್ತು ಡ್ರೈವ್ ಮೋಡ್‌ಗಳು: ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ (ಆಟೋಮ್ಯಾಟಿಕ್ ವೇರಿಯಂಟ್ ಗಳೊಂದಿಗೆ ಮಾತ್ರ ಲಭ್ಯ)

  • 8-ವೇ ಎಲೆಕ್ಟ್ರಿಕಲ್ ಆಗಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಎರಡನೇ ಸಾಲಿನ ಸೀಟುಗಳಿಗೆ ವೈರ್‌ಲೆಸ್ ಫೋನ್ ಚಾರ್ಜರ್

  • ಮೂರನೇ ಸಾಲಿನ ಪ್ರಯಾಣಿಕರಿಗೆ ಎರಡು USB-C ಪೋರ್ಟ್‌ಗಳು

  • 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್

  • ಹಿಲ್-ಡಿಸೆಂಟ್ ಕಂಟ್ರೋಲ್

  • ಮುಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು

  • ರೈನ್-ಸೆನ್ಸಿಂಗ್ ವೈಪರ್‌ಗಳು

  • ಲೆವೆಲ್-2 ADAS (ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್)

  • ಆಟೋ ಹೋಲ್ಡ್ ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

  • ಟ್ರಾಕ್ಷನ್ ಕಂಟ್ರೋಲ್ ಮೋಡ್ ಗಳು: ಸ್ನೋ, ಮಡ್ ಮತ್ತು ಸ್ಯಾಂಡ್ (ಆಟೋಮ್ಯಾಟಿಕ್ ವೇರಿಯಂಟ್ ಗಳೊಂದಿಗೆ ಮಾತ್ರ)

 ಹ್ಯುಂಡೈ ಅಲ್ಕಾಜರ್‌ನ ಮಿಡ್ ರೇಂಜ್ ವರ್ಷನ್ ಆಗಿರುವ ಪ್ಲಾಟಿನಂ 6-ಸೀಟರ್ ಆಯ್ಕೆಯನ್ನು ನೀಡುತ್ತದೆ, ಹಿಂದಿನ ವರ್ಷನ್ ಗಳಲ್ಲಿ ಕೇವಲ 7-ಸೀಟರ್ ಆಯ್ಕೆ ನೀಡಲಾಗಿತ್ತು. ಇದು ದೊಡ್ಡದಾದ 18-ಇಂಚಿನ ಅಲೊಯ್ ವೀಲ್ಸ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಪಡೆಯುತ್ತದೆ. ಇದು ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಲೆವೆಲ್-2 ADAS ಫೀಚರ್ ಗಳನ್ನು ಕೂಡ ಪಡೆಯುತ್ತದೆ.

 ಇದನ್ನು ಕೂಡ ಓದಿ: ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಮೈಲೇಜ್: ಕ್ಲೇಮ್ ಮಾಡಿರುವ ನಂಬರ್ ಇಲ್ಲಿದೆ

ಹ್ಯುಂಡೈ ಅಲ್ಕಾಜರ್ ಸಿಗ್ನೇಚರ್

2024 Hyundai Alcazar gets a Creta-like dashboard design

 ಬೆಲೆ: ರೂ. 21.20 ಲಕ್ಷದಿಂದ ರೂ. 21.40 ಲಕ್ಷ 

 ಟಾಪ್ ಎಂಡ್ ಸಿಗ್ನೇಚರ್ ವೇರಿಯಂಟ್ ಪ್ಲಾಟಿನಂ ನಲ್ಲಿ ಇರುವ ಫೀಚರ್ ಗಳ ಜೊತೆಗೆ ಈ ಕೆಳಗಿನ ಫೀಚರ್ ಗಳೊಂದಿಗೆ ಬರುತ್ತದೆ:

 ಹೊರಭಾಗ

 ಒಳಭಾಗ

 ಸೌಕರ್ಯ ಮತ್ತು ಅನುಕೂಲತೆ

 ಇನ್ಫೋಟೈನ್ಮೆಂಟ್

 ಸುರಕ್ಷತೆ

  •  ಡ್ಯುಯಲ್ ಟೋನ್ ಪೇಂಟ್ ಆಯ್ಕೆ

  •  ಯಾವುದೂ ಇಲ್ಲ

  •  ಎರಡು ಲೆವೆಲ್ ಮೆಮೊರಿ ಫಂಕ್ಷನ್ ಹೊಂದಿರುವ ಡ್ರೈವರ್ ಸೀಟ್

  • 8-ವೇ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಕೋ-ಡ್ರೈವರ್ ಸೀಟ್

  • ರಿಮೋಟ್ ಕಾರ್ ಅನ್‌ಲಾಕಿಂಗ್

  • ಮುಂಭಾಗದ ವೆಂಟಿಲೇಟೆಡ್ ಸೀಟ್ ಗಳು

  • ಎರಡನೇ ಸಾಲಿನ ವೆಂಟಿಲೇಟೆಡ್ ಸೀಟ್ ಗಳು (6-ಸೀಟರ್ ವೇರಿಯಂಟ್ ನಲ್ಲಿ ಮಾತ್ರ)

  • ತೊಡೆಯ ಕೆಳಗೆ ಅಡ್ಜಸ್ಟ್ ಮಾಡಬಹುದಾದ ಕುಶನ್

  • 2 ನೇ ಸಾಲಿನ ಪ್ರಯಾಣಿಕರಿಗೆ ಎಲೆಕ್ಟ್ರಿಕ್ ಬಾಸ್ ಮೋಡ್ (6-ಸೀಟರ್ ವೇರಿಯಂಟ್ ನಲ್ಲಿ ಮಾತ್ರ)

  •  ಯಾವುದೂ ಇಲ್ಲ

  •  ಯಾವುದೂ ಇಲ್ಲ

2024 Hyundai Alcazar gets powered front seats

 ಸಿಗ್ನೇಚರ್ ವೇರಿಯಂಟ್ ಡ್ರೈವರ್ ಸೀಟ್‌ಗಾಗಿ 2-ಲೆವೆಲ್ ಮೆಮೊರಿ ಫಂಕ್ಷನ್, 8-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಕೋ-ಡ್ರೈವರ್ ಸೀಟ್ ಮತ್ತು ರಿಮೋಟ್ ಕಾರ್ ಅನ್‌ಲಾಕಿಂಗ್ ಅನ್ನು ಪಡೆಯುತ್ತದೆ. ಇದು ಮುಂಭಾಗ ಮತ್ತು ಎರಡನೇ-ಸಾಲಿನ ವೆಂಟಿಲೇಟೆಡ್ ಸೀಟ್ ಗಳನ್ನು (6-ಸೀಟರ್ ಮಾತ್ರ), ಅಡ್ಜಸ್ಟ್ ಮಾಡಬಹುದಾದ ತೊಡೆಯ ಕುಶನ್ ಮತ್ತು ಎರಡನೇ ಸಾಲಿಗೆ (6-ಸೀಟರ್ ಮಾತ್ರ) ಎಲೆಕ್ಟ್ರಿಕ್ ಬಾಸ್ ಮೋಡ್ ಅನ್ನು ಕೂಡ ನೀಡುತ್ತದೆ. ಇದರ ಜೊತೆಗೆ ಇದು ಪ್ಲಾಟಿನಂ ವೇರಿಯಂಟ್ ನಲ್ಲಿ ಇರುವ ಹೊರಭಾಗ, ಒಳಭಾಗ, ಇನ್ಫೋಟೈನ್ಮೆಂಟ್ ಮತ್ತು ಸುರಕ್ಷತಾ ಫೀಚರ್ ಗಳನ್ನು ಪಡೆಯುತ್ತದೆ.

 ಪವರ್‌ಟ್ರೇನ್ ಆಯ್ಕೆಗಳು

2024 Hyundai Alcazar engine

 2024 ಹ್ಯುಂಡೈ ಅಲ್ಕಾಜರ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು ಅದರ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ನೀಡಲಾಗಿದೆ:

 ಇಂಜಿನ್

 1.5-ಲೀಟರ್ ಟರ್ಬೊ-ಪೆಟ್ರೋಲ್

 1.5-ಲೀಟರ್ ಡೀಸೆಲ್

 ಪವರ್

160 PS

116 PS

 ಟಾರ್ಕ್

253 Nm

250 Nm

 ಟ್ರಾನ್ಸ್‌ಮಿಷನ್‌*

 6-ಸ್ಪೀಡ್ MT, 7-ಸ್ಪೀಡ್ DCT

 -ಸ್ಪೀಡ್ MT, 6-ಸ್ಪೀಡ್ AT

 * DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌; AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌

 ಬೆಲೆ ಮತ್ತು ಪ್ರತಿಸ್ಪರ್ಧಿಗಳು

2024 Hyundai Alcazar

 2024 ಹ್ಯುಂಡೈ SUVಯು MG ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಮಹೀಂದ್ರ XUV700 ನ 6- ಮತ್ತು 7-ಸೀಟರ್ ವೇರಿಯಂಟ್ ಗಳಿಗೆ ಪ್ರತಿಸ್ಪರ್ಧಿಯಾಗಿದೆ.

 ಎಲ್ಲಾ ಬೆಲೆಗಳು ಎಕ್ಸ್ ಶೋರೂಂ, ನವದೆಹಲಿ ಬೆಲೆಯಾಗಿದೆ

 2024 ಹ್ಯುಂಡೈ ಅಲ್ಕಾಜರ್ ನ್ ಯಾವ ವರ್ಷನ್ ನಿಮಗೆ ಉತ್ತಮ ಎಂದು ಅನಿಸುತ್ತದೆ? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

 ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್  ಚಾನಲ್ ಅನ್ನು ಫಾಲೋ ಮಾಡಿ.

 ಇನ್ನಷ್ಟು ಓದಿ: ಹ್ಯುಂಡೈ ಅಲ್ಕಾಜರ್ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ಅಲ್ಕಝರ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience