• English
  • Login / Register

ಕೆಲವು Hyundai ಕಾರುಗಳ ಮೇಲೆ 2 ಲಕ್ಷ ರೂ.ಗಳವರೆಗೆ ಭರ್ಜರಿ ಡಿಸ್ಕೌಂಟ್‌..!

ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗಾಗಿ yashika ಮೂಲಕ ಡಿಸೆಂಬರ್ 12, 2024 07:51 pm ರಂದು ಪ್ರಕಟಿಸಲಾಗಿದೆ

  • 85 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಪಟ್ಟಿಯಲ್ಲಿ ಉಲ್ಲೇಖಿಸಲಾದ 12 ಮಾದರಿಗಳಲ್ಲಿ, ಅವುಗಳಲ್ಲಿ 3 ಮಾತ್ರ ಈ ತಿಂಗಳು ಕಾರ್ಪೊರೇಟ್ ಬೋನಸ್ ಅನ್ನು ಪಡೆಯುತ್ತವೆ

Hyundai December Offers

  • ಹ್ಯುಂಡೈ ಐಯೋನಿಕ್ 5 ಮತ್ತು ಕೋನಾ ಎಲೆಕ್ಟ್ರಿಕ್‌ನೊಂದಿಗೆ ಗರಿಷ್ಠ 2 ಲಕ್ಷ ರೂ.ಗಳ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

  • ಹ್ಯುಂಡೈ ವೆರ್ನಾವನ್ನು ಒಟ್ಟು 80,000 ರೂ.ವರೆಗೆ ಉಳಿತಾಯದೊಂದಿಗೆ ನೀಡಲಾಗುತ್ತಿದೆ.

  • 60,000 ರೂ.ವರೆಗಿನ ಪ್ರಯೋಜನಗಳೊಂದಿಗೆ ಹ್ಯುಂಡೈ ವೆನ್ಯೂ ಹೊಂದಬಹುದು.

  • ಎಲ್ಲಾ ಆಫರ್‌ಗಳು ಈ ವರ್ಷದ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

ವರ್ಷಾಂತ್ಯದ ಮೊದಲು ನಿಮ್ಮ ಮನೆಯ ಪಾರ್ಕಿಂಗ್‌ಗೆ ಹ್ಯುಂಡೈ ಕಾರನ್ನು ಸೇರಿಸಲು ನೀವು ಯೋಜಿಸುತ್ತಿದ್ದರೆ, ಕಾರು ತಯಾರಕರು 2024ರ ಡಿಸೆಂಬರ್ ಆಫರ್‌ಗಳನ್ನು ಘೋಷಿಸಿರುವುದರಿಂದ ಕಾರು ಖರೀದಿಸಲು ಇದೀಗ ಉತ್ತಮ ಸಮಯವಾಗಿದೆ. ಆಫರ್‌ನಲ್ಲಿ ಕ್ಯಾಶ್ ಡಿಸ್ಕೌಂಟ್‌ಗಳು, ಎಕ್ಸ್‌ಚೇಂಜ್ ಬೋನಸ್‌ಗಳು ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳು ಸೇರಿವೆ, ಇದು ಎಕ್ಸ್‌ಟರ್, ವೆನ್ಯೂ, ವೆರ್ನಾ ಮತ್ತು ಅಲ್ಕಾಜರ್‌ನಂತಹ ಆಯ್ದ ಮೊಡೆಲ್‌ಗಳಿಗೆ ಅನ್ವಯಿಸುತ್ತದೆ. ಮಾಡೆಲ್‌ವಾರು ಆಫರ್‌ಗಳ ವಿವರಗಳನ್ನು ನೋಡೋಣ.

ಗ್ರಾಹಕರು ಸರ್ಟಿಫಿಕೇಟ್‌ ಆಫ್‌ ಡಿಪೋಸಿಟ್‌ (COD) ಸಲ್ಲಿಸಿದ ನಂತರ  ಎಕ್ಸ್‌ಚೇಂಜ್‌ ಲಾಭದೊಂದಿಗೆ ಸ್ಕ್ರ್ಯಾಪ್‌ಪೇಜ್ ಬೋನಸ್ ಆಗಿ ಹೆಚ್ಚುವರಿ 5,000 ರೂ.ಅನ್ನು ಪಡೆಯಬಹುದು.

ಹ್ಯುಂಡೈ ಗ್ರ್ಯಾಂಡ್‌ ಐ10 ನಿಯೋಸ್

2023 Hyundai Grand i10 Nios

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

Up to Rs 45,000

ಎಕ್ಸ್‌ಚೇಂಜ್‌ ಬೋನಸ್‌

Rs 20,000

ಕಾರ್ಪೋರೇಟ್‌ ಬೊನಸ್‌

Rs 3,000

ಒಟ್ಟು ಲಾಭಗಳು

Up to Rs 68,000

  • ಮೇಲೆ ತಿಳಿಸಿದ ಒಟ್ಟು ಪ್ರಯೋಜನಗಳು ಹ್ಯುಂಡೈ ಗ್ರಾಂಡ್ ಐ10 ನಿಯೋಸ್‌ನ ರೆಗುಲರ್‌ ಪೆಟ್ರೋಲ್-ಮ್ಯಾನ್ಯುವಲ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

  • ಬೇಸ್-ಸ್ಪೆಕ್ ಎರಾ ಮತ್ತು ಸಿಎನ್‌ಜಿ ವೇರಿಯೆಂಟ್‌ಗಳು ತಲಾ 25,000 ರೂಪಾಯಿಗಳ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯುತ್ತವೆ.

  • ಗ್ರ್ಯಾಂಡ್‌ ಐ10 ನಿಯೋಸ್‌ನ ಎಎಮ್‌ಟಿ ವೇರಿಯೆಂಟ್‌ಗಳನ್ನು ಹುಡುಕುತ್ತಿರುವ ಖರೀದಿದಾರರು 30,000 ರೂಪಾಯಿಗಳ ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯಬಹುದು.

  • ಹ್ಯುಂಡೈ ಎಲ್ಲಾ ವೇರಿಯೆಂಟ್‌ಗಳಲ್ಲಿ ಒಂದೇ ರೀತಿಯ ಎಕ್ಸ್‌ಚೇಂಜ್‌ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ.

  • ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್ ಬೆಲೆ 5.92 ಲಕ್ಷ ರೂ.ನಿಂದ 8.56 ಲಕ್ಷ ರೂ.ವರೆಗೆ ಇದೆ. 

ಹ್ಯುಂಡೈ ಐ20

Hyundai i20

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

50,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.

ಒಟ್ಟು ಲಾಭಗಳು

65,000 ರೂ.ವರೆಗೆ

  • ಹ್ಯುಂಡೈ i20ಯ ಮ್ಯಾನುವಲ್ ವೇರಿಯೆಂಟ್‌ಗಳು ಮೇಲೆ ತಿಳಿಸಿದಂತೆ ಹೆಚ್ಚಿನ ಕ್ಯಾಶ್‌ ಡಿಸ್ಕೌಂಟ್‌ನೊಂದಿಗೆ ಬರುತ್ತವೆ. ಆದರೆ CVT (ಆಟೋಮ್ಯಾಟಿಕ್‌) ವೇರಿಯೆಂಟ್‌ಗಳು 35,000 ರೂ. ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯುತ್ತವೆ.

  • ಹ್ಯುಂಡೈ 15,000 ರೂಪಾಯಿಗಳ ಎಕ್ಸ್‌ಚೇಂಜ್‌ ಬೋನಸ್ ಅನ್ನು ಸಹ ನೀಡುತ್ತಿದೆ, ಇದು ಎಲ್ಲಾ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತದೆ.

  • ದುರದೃಷ್ಟವಶಾತ್, ಹುಂಡೈನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಯಾವುದೇ ಕಾರ್ಪೊರೇಟ್ ರಿಯಾಯಿತಿ ಇಲ್ಲ.

  • ಹ್ಯುಂಡೈ ಐ20 ಬೆಲೆ 7.04 ಲಕ್ಷ ರೂ.ನಿಂದ 11.21 ಲಕ್ಷ ರೂ.ವರೆಗೆ ಇದೆ.

ಹ್ಯುಂಡೈ ಐ20 ಎನ್‌ ಲೈನ್‌

Hyundai i20 N Line Facelift

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

25,000 ರೂ.

ಎಕ್ಸ್‌ಚೇಂಜ್‌ ಬೋನಸ್‌

10,000 ರೂ.

ಒಟ್ಟು ಲಾಭಗಳು

35,000 ರೂ.

  • ಐ20ಯ ಸ್ಪೋರ್ಟಿಯರ್-ಲುಕಿಂಗ್ ಆವೃತ್ತಿಯನ್ನು i20 ಎನ್‌ ಲೈನ್ ಎಂದು ಕರೆಯಲಾಗುತ್ತದೆ, ಯಾವುದೇ ವೇರಿಯೆಂಟ್‌ ಅನ್ನು ಆಯ್ಕೆ ಮಾಡಿದರೂ ಮೇಲೆ ತಿಳಿಸಲಾದ ಎಲ್ಲಾ ಪ್ರಯೋಜನಗಳನ್ನು ನೀಡಲಾಗುತ್ತಿದೆ.

  • i20 N ಲೈನ್‌ನೊಂದಿಗೆ ಯಾವುದೇ ಕಾರ್ಪೊರೇಟ್ ಡಿಸ್ಕೌಂಟ್‌ ಇಲ್ಲ.

  • ಇದರ ಬೆಲೆ 9.99 ಲಕ್ಷ  ರೂ.ನಿಂದ 12.52 ಲಕ್ಷ ರೂ.ವರೆಗೆ ಇದೆ.

ಹ್ಯುಂಡೈ ಔರಾ

Hyundai Aura

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

40,000 ರೂ. ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

10,000 ರೂ.

ಕಾರ್ಪೋರೇಟ್‌ ಬೊನಸ್‌

3,000 ರೂ.

ಒಟ್ಟು ಲಾಭಗಳು

53,000 ರೂ.ವರೆಗೆ

  • ಕೋಷ್ಟಕದಲ್ಲಿ ಉಲ್ಲೇಖಿಸಲಾದ ಎಲ್ಲಾ ಪ್ರಯೋಜನಗಳು ಸಿಎನ್‌ಜಿ ವೇರಿಯೆಂಟ್‌ಗಳಿಗೆ ಮಾತ್ರ ಅನ್ವಯಿಸುತ್ತವೆ, ಆದರೆ ಹ್ಯುಂಡೈ ಔರಾದ ಪ್ರವೇಶ ಮಟ್ಟದ E ವೇರಿಯೆಂಟ್‌ನಲ್ಲಿ ಇದು ಲಭ್ಯವಿರುವುದಿಲ್ಲ. 

  • ಎಲ್ಲಾ ಪೆಟ್ರೋಲ್ ಮತ್ತು E ಸಿಎನ್‌ಜಿ ವೇರಿಯೆಂಟ್‌ಗಳಿಗೆ ನಗದು ರಿಯಾಯಿತಿಯನ್ನು 30,000 ರೂ.ಗೆ ಇಳಿಸಲಾಗಿದೆ. ಆದರೂ, ಎಲ್ಲಾ ವೇರಿಯೆಂಟ್‌ಗಳಿಗೆ ಎಕ್ಸ್‌ಚೇಂಜ್‌ ಬೋನಸ್ ಮತ್ತು ಕಾರ್ಪೊರೇಟ್ ಬೋನಸ್‌ಗಳು ಒಂದೇ ಆಗಿರುತ್ತವೆ.

  • ಹ್ಯುಂಡೈನ ಸಬ್-4ಎಮ್‌ ಸೆಡಾನ್ ಆಗಿರುವ ಔರಾದ ಬೆಲೆಯು 6.49 ಲಕ್ಷ ರೂ.ನಿಂದ 9.05 ಲಕ್ಷ ರೂ.ವರೆಗೆ ಇದೆ.

ಹ್ಯುಂಡೈ ಎಕ್ಸ್‌ಟರ್‌

Hyundai Exter

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

35,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

5,000 ರೂ. 

ಒಟ್ಟು ಲಾಭಗಳು

40,000 ರೂ.ವರೆಗೆ

  • ಲೋವರ್‌-ಸ್ಪೆಕ್ EX ಮತ್ತು EX (O)ನ ಹೊರತುಪಡಿಸಿ, ಹ್ಯುಂಡೈ ಎಕ್ಸ್‌ಟರ್‌ನ ಎಲ್ಲಾ ಪೆಟ್ರೋಲ್ ವೇರಿಯೆಂಟ್‌ಗಳು ಮೇಲೆ ತಿಳಿಸಿದ ಡಿಸ್ಕೌಂಟ್‌ನೊಂದಿಗೆ  ಬರುತ್ತವೆ. ವಾಹನ ತಯಾರಕರು EX ಮತ್ತು EX (O) ವೇರಿಯೆಂಟ್‌ಗಳೊಂದಿಗೆ ಯಾವುದೇ ಆಫರ್‌ಗಳನ್ನು ಒದಗಿಸಿಲ್ಲ.

  • ಎಸ್‌ ಡ್ಯುಯಲ್ ಸಿಎನ್‌ಜಿ ಮತ್ತು ಸಿಂಗಲ್ ಸಿಲಿಂಡರ್ ಸಿಎನ್‌ಜಿಗಾಗಿ ನೋಡುತ್ತಿರುವ ಖರೀದಿದಾರರು 30,000 ರೂ.ಗಳ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯುತ್ತಾರೆ, ಆದರೆ ಎಲ್ಲಾ ಇತರ ಡ್ಯುಯಲ್ ಸಿಎನ್‌ಜಿ ವೇರಿಯೆಂಟ್‌ಗಳು 25,000 ರೂ.ಗಳ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯುತ್ತವೆ.

  • ವಾಹನ ತಯಾರಕರು ಎಕ್ಸ್‌ಟರ್‌ನೊಂದಿಗೆ 52,972 ರೂ.ಮೌಲ್ಯದ ಲೈಫ್‌ಸ್ಟೈಲ್‌ ಆಕ್ಸಸ್ಸರಿ ಕಿಟ್‌ ಅನ್ನು ಸಹ ನೀಡುತ್ತದೆ.

  • ಮೈಕ್ರೋ ಎಸ್‌ಯುವಿಯು ಕಾರ್ಪೊರೇಟ್ ಬೋನಸ್ ಅನ್ನು ಕಳೆದುಕೊಳ್ಳುತ್ತದೆ. ಅದೇ ಸಮಯದಲ್ಲಿ, ಯಾವುದೇ ವೇರಿಯೆಂಟ್‌ಗಳನ್ನು ಆಯ್ಕೆ ಮಾಡಿದರೂ ಎಕ್ಸ್‌ಚೇಂಜ್‌ ಬೋನಸ್ ಒಂದೇ ಆಗಿರುತ್ತದೆ.

  • ಹ್ಯುಂಡೈ ಎಕ್ಸ್‌ಟರ್‌ನ ಬೆಲೆಯು 6 ಲಕ್ಷ ರೂ.ನಿಂದ 10.43 ಲಕ್ಷ ರೂ.ವರೆಗೆ ಇದೆ.

ಹ್ಯುಂಡೈ ವೆನ್ಯೂ

Hyundai Venue

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

45,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

  15,000 ರೂ.

ಒಟ್ಟು ಲಾಭಗಳು

60,000 ರೂ.ವರೆಗೆ

  • ಮೇಲೆ ತಿಳಿಸಿದ ಆಫರ್‌ಗಳು ಹ್ಯುಂಡೈ ವೆನ್ಯೂನ 1-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುಯಲ್ ಮತ್ತು ಡಿಸಿಟಿ ವೇರಿಯೆಂಟ್‌ಗಳಿಗೆ ಮಾತ್ರ ಅನ್ವಯಿಸುತ್ತವೆ.

  • 1.2-ಲೀಟರ್ ಪೆಟ್ರೋಲ್-ಮ್ಯಾನುವಲ್‌ ಸಂಯೋಜನೆಯೊಂದಿಗೆ S ಮತ್ತು S(O) ಮ್ಯಾನುವಲ್‌ ವೇರಿಯೆಂಟ್‌ಗಳ ಕ್ಯಾಶ್‌ ಡಿಸ್ಕೌಂಟ್‌ ಅನ್ನು 40,000 ರೂ.ಗೆ ಇಳಿಸಲಾಗಿದೆ.

  • ಇತರ ಮಿಡ್-ಸ್ಪೆಕ್ ಎಸ್‌+ ಮತ್ತು ಎಸ್‌(ಒಪ್ಶನಲ್‌)+ ಮ್ಯಾನುಯಲ್‌ ವೇರಿಯೆಂಟ್‌ಗಳು 20,000 ರೂ.ಗಳ ಮತ್ತಷ್ಟು ಕಡಿಮೆ ನಗದು ರಿಯಾಯಿತಿಯನ್ನು ಪಡೆಯುತ್ತವೆ.

  • ವಾಹನ ತಯಾರಕರು ಇತರ 1.2-ಲೀಟರ್ ಮ್ಯಾನುವಲ್ ವೇರಿಯೆಂಟ್‌ನೊಂದಿಗೆ 30,000 ರೂ.ಗಳ ಕ್ಯಾಶ್‌ ಡಿಸ್ಕೌಂಟ್‌ ಅನ್ನು ನೀಡುತ್ತಿದ್ದಾರೆ.

  • ಸಬ್-4ಎಮ್‌ ಎಸ್‌ಯುವಿಯಲ್ಲಿ ಯಾವುದೇ ಕಾರ್ಪೊರೇಟ್ ಬೋನಸ್ ಅನ್ನು ನೀಡಲಾಗುತ್ತಿಲ್ಲ. ಆದರೆ, ಎಲ್ಲಾ ವೇರಿಯೆಂಟ್‌ಗಳಲ್ಲಿ ಎಕ್ಸ್‌ಚೇಂಜ್‌ ಬೋನಸ್‌ ಒಂದೇ ಆಗಿರುತ್ತದೆ.

  • 3D ಬೂಟ್ ಮ್ಯಾಟ್, ಪ್ರೀಮಿಯಂ ಡ್ಯುಯಲ್ ಲೇಯರ್ ಮ್ಯಾಟ್ ಮತ್ತು ಫೆಂಡರ್ ಗಾರ್ನಿಶ್ ಅನ್ನು ಒಳಗೊಂಡಿರುವ 75,629 ರೂ. ಮೌಲ್ಯದ ಲೈಫ್‌ಸ್ಟೈಲ್‌ ಆಕ್ಸಸ್ಸರಿ ಕಿಟ್‌ನೊಂದಿಗೆ ವೆನ್ಯೂವನ್ನು ನೀಡಲಾಗುತ್ತಿದೆ.

  • ಹ್ಯುಂಡೈ ಸಬ್-4ಎಮ್‌ ಎಸ್‌ಯುವಿ ಬೆಲೆಯನ್ನು 7.94 ಲಕ್ಷ ರೂ.ನಿಂದ 13.53 ಲಕ್ಷ ರೂ.ಗೆ ನಿಗದಿಪಡಿಸಿದೆ.

ಹ್ಯುಂಡೈ ವೆನ್ಯೂ ಎನ್‌ ಲೈನ್‌

Hyundai Venue N Line

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

40,000 ರೂ.

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.

ಒಟ್ಟು ಲಾಭಗಳು

  55,000 ರೂ.

  • ಹ್ಯುಂಡೈ ವೆನ್ಯೂ ಎನ್ ಲೈನ್‌ನ ಎಲ್ಲಾ ವೇರಿಯೆಂಟ್‌ಗಳು ಮೇಲೆ ತಿಳಿಸಿದ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆಯುತ್ತವೆ.
  • ಇವುಗಳಲ್ಲಿ 40,000 ರೂ. ಕ್ಯಾಶ್‌ ಡಿಸ್ಕೌಂಟ್‌ ಮತ್ತು 15,000 ರೂ. ಎಕ್ಸ್‌ಚೇಂಜ್‌ ಬೋನಸ್ ಸೇರಿವೆ.

  • ಆಫರ್‌ನಲ್ಲಿ ಯಾವುದೇ ಕಾರ್ಪೊರೇಟ್ ರಿಯಾಯಿತಿ ಇಲ್ಲ.

  • ಸ್ಪೋರ್ಟಿಯರ್ ಆಗಿ ಕಾಣುವ ಈ ವೆನ್ಯೂನ ಬೆಲೆ 12.08 ಲಕ್ಷ ರೂ.ನಿಂದ 13.90 ಲಕ್ಷ ರೂ.ವರೆಗೆ ಇದೆ.

ಹ್ಯುಂಡೈ ವೆರ್ನಾ

Verna

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

35,000 ರೂ.

ಎಕ್ಸ್‌ಚೇಂಜ್‌ ಬೋನಸ್‌

25,000  ರೂ.

ಕಾರ್ಪೋರೇಟ್‌ ಡಿಸ್ಕೌಂಟ್‌ಗಳು

20,000  ರೂ.

ಒಟ್ಟು ಲಾಭಗಳು

80,000  ರೂ.

  • ಹ್ಯುಂಡೈ ವೆರ್ನಾದ ಎಲ್ಲಾ ವೇರಿಯೆಂಟ್‌ಗಳು ಒಟ್ಟು 80,000 ರೂ.ರಷ್ಟು ರಿಯಾಯಿತಿಗಳನ್ನು ಹೊಂದಿವೆ.

  • ವೆರ್ನಾದ ಬೆಲೆಗಳು 11 ಲಕ್ಷ ರೂ.ನಿಂದ ಪ್ರಾರಂಭವಾಗಿ 17.48 ಲಕ್ಷ ರೂ.ವರೆಗೆ ಇರಲಿದೆ.

ಫೇಸ್‌ಲಿಫ್ಟ್‌ಗಿಂತ ಹಿಂದಿನ ಹ್ಯುಂಡೈ ಅಲ್ಕಾಜರ್

Hyundai Alcazar

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

30,000 ರೂ.

ಎಕ್ಸ್‌ಚೇಂಜ್‌ ಬೋನಸ್‌

30,000 ರೂ.

ಒಟ್ಟು ಲಾಭಗಳು

60,000 ರೂ.

  • ಹಳೆಯ ಹ್ಯುಂಡೈ ಅಲ್ಕಾಜರ್‌ನ ಎಲ್ಲಾ ವೇರಿಯೆಂಟ್‌ಗಳು ಒಂದೇ ರೀತಿಯ ಕ್ಯಾಶ್‌ ಡಿಸ್ಕೌಂಟ್‌ ಮತ್ತು ಎಕ್ಸ್‌ಚೇಂಜ್‌ ಬೋನಸ್ ಅನ್ನು ಪಡೆಯುತ್ತವೆ. ಆದರೆ ಹಳೆಯ ಹ್ಯುಂಡೈ ಅಲ್ಕಾಜರ್‌ನಲ್ಲಿ ಯಾವುದೇ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿಲ್ಲ. 

  • 3-ಸಾಲಿನ ಹ್ಯುಂಡೈ ಎಸ್‌ಯುವಿಯ ಬೆಲೆ 16.78 ಲಕ್ಷ ರೂ.ನಿಂದ 21.28 ಲಕ್ಷ ರೂ.ವರೆಗೆ ಇರಲಿದೆ.

ಹ್ಯುಂಡೈ ಟಕ್ಸನ್‌

Hyundai Tucson

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

60,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

25,000 ರೂ.

ಒಟ್ಟು ಲಾಭಗಳು

85,000 ರೂ.ವರೆಗೆ

  • ಹ್ಯುಂಡೈ ಟಕ್ಸನ್‌ನ ಡೀಸೆಲ್ ವೇರಿಯೆಂಟ್‌ಗಳು (MY23 ಮತ್ತು MY24 ಎರಡೂ) ಮೇಲಿನ ರಿಯಾಯಿತಿಗಳನ್ನು ಪಡೆಯುತ್ತವೆ, ಆದರೆ ಎಲ್ಲಾ ಪೆಟ್ರೋಲ್ ವೇರಿಯೆಂಟ್‌ಗಳು ರೂ 25,000 ರ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯುತ್ತವೆ.

  • ಕಾರ್ಪೊರೇಟ್ ರಿಯಾಯಿತಿಯೊಂದಿಗೆ ನೀಡಲಾಗುತ್ತಿಲ್ಲ, ಆದರೆ ವಿನಿಮಯ ಬೋನಸ್ ಎಲ್ಲಾ ವೇರಿಯೆಂಗ್‌ಗಳಿಗೆ ಒಂದೇ ಆಗಿರುತ್ತದೆ.

  • ಹ್ಯುಂಡೈ ಟಕ್ಸನ್‌ನ ಬೆಲೆಯು 29.02 ಲಕ್ಷ ರೂ.ನಿಂದ 35.94 ಲಕ್ಷ ರೂ.ವರೆಗೆ ಇರಲಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್

Hyundai Kona Electric

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

2 ಲಕ್ಷ ರೂ.

  • ಬಾಕಿ ಉಳಿದಿರುವ ಸ್ಟಾಕ್‌ಗಳನ್ನು ಖಾಲಿ ಮಾಡುವ ಉದ್ದೇಶದಿಂದ ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ನ ಎಲ್ಲಾ ವೇರಿಯೆಂಟ್‌ಗಳ ಮೇಲೆ 2 ಲಕ್ಷ ರೂಪಾಯಿಗಳ ಕ್ಯಾಶ್‌ ಡಿಸ್ಕೌಂಟ್‌ ಅನ್ನು ಹ್ಯುಂಡೈ ನೀಡುತ್ತಿದೆ.

  • ಇದರ ಕೊನೆಯ ದಾಖಲಾದ ಬೆಲೆ 23.84 ಲಕ್ಷ  ರೂ.ನಿಂದ 24.03 ಲಕ್ಷ ರೂ.ಗಳ ನಡುವೆ ಇತ್ತು.

ಹ್ಯುಂಡೈ ಐಯೋನಿಕ್ 5

Hyundai IONIQ 5

  •  ಮೇಲಿನ ಪ್ರಯೋಜನಗಳು ಹ್ಯುಂಡೈ ಐಯೋನಿಕ್ 5 ನ ಡಾರ್ಕ್‌ ಪೆಬ್ಬಲ್ ಗ್ರೇ ಇಂಟೀರಿಯರ್‌ ಬಣ್ಣದ ಥೀಮ್ ಹೊಂದಿರುವ ವೇರಿಯೆಂಟ್‌ಗಳಿಗೆ ಮಾತ್ರ ಅನ್ವಯಿಸುತ್ತವೆ.

  • ಇದರ ಬೆಲೆ 46.05 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. 

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಆಗಿದೆ

ಗಮನಿಸಿ: ನಿಮ್ಮ ಸ್ಥಳ ಮತ್ತು ಆಯ್ಕೆ ಮಾಡಿದ ವೇರಿಯೆಂಟ್‌ಗಳ ಆಧಾರದ ಮೇಲೆ ಈ ಆಫರ್‌ಗಳು ಭಿನ್ನವಾಗಿರಬಹುದು. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ಹ್ಯುಂಡೈ ಡೀಲರ್‌ಶಿಪ್ ಅನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ.

ವಾಹನ ಜಗತ್ತಿನ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

ಇನ್ನಷ್ಟು ಓದಲು : ಗ್ರ್ಯಾಂಡ್‌ ಐ10 ನಿಯೋಸ್‌ ಎಎಮ್‌ಟಿ

was this article helpful ?

Write your Comment on Hyundai Grand ಐ10 Nios

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience