Hyundai Alcazar ಫೇಸ್‌ಲಿಫ್ಟ್: ಎಲ್ಲಾ ವೇರಿಯಂಟ್ ಗಳ ಪ್ರತಿಯೊಂದು ಫೀಚರ್ ಗಳ ವಿವರ ಇಲ್ಲಿದೆ
ಹ್ಯುಂಡೈ ಅಲ್ಕಾಜರ್ ಎಕ್ಸಿಕ್ಯುಟಿವ್, ಪ್ರೆಸ್ಟೀಜ್, ಪ್ಲಾಟಿನಮ್ ಮತ್ತು ಸಿಗ್ನೇಚರ್ ಎಂಬ ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿದೆ
ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಅಲ್ಕಾಜರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಬೆಲೆಯು ರೂ 14.99 ಲಕ್ಷದಿಂದ ರೂ 21.55 ಲಕ್ಷದವರೆಗೆ (ಪರಿಚಯಾತ್ಮಕ ಎಕ್ಸ್ ಶೋ ರೂಂ, ನವದೆಹಲಿ) ಇದೆ. ಈ ಸ್ಟೈಲಿಶ್ ಆಗಿರುವ 3-ಸಾಲು ಸೀಟ್ ಇರುವ SUV ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿದೆ: ಎಕ್ಸಿಕ್ಯುಟಿವ್, ಪ್ರೆಸ್ಟೀಜ್, ಪ್ಲಾಟಿನಮ್ ಮತ್ತು ಸಿಗ್ನೇಚರ್. ಪ್ರಿ-ಫೇಸ್‌ಲಿಫ್ಟ್ ಮಾಡೆಲ್ ನಂತೆ ಈ ಅಲ್ಕಾಜರ್ ಅನ್ನು ಕೂಡ ಹಲವಾರು ಫೀಚರ್ ಗಳೊಂದಿಗೆ ಲೋಡ್ ಮಾಡಲಾಗಿದೆ. ನೀವು ಅಲ್ಕಾಜರ್ ಅನ್ನು ಖರೀದಿಸಲು ನೋಡುತ್ತಿದ್ದರೆ, ನಿಮಗಾಗಿ ವೇರಿಯಂಟ್-ವಾರು ಫೀಚರ್ ಗಳನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ.
ಹ್ಯುಂಡೈ ಅಲ್ಕಾಜರ್ ಎಕ್ಸಿಕ್ಯುಟಿವ್
ಬೆಲೆ: ರೂ 14.99 ಲಕ್ಷದಿಂದ ರೂ 15.99 ಲಕ್ಷ
ಬನ್ನಿ, ಹ್ಯುಂಡೈ ಅಲ್ಕಾಜರ್ ತನ್ನ ಎಂಟ್ರಿ ಲೆವೆಲ್ ಎಕ್ಸಿಕ್ಯುಟಿವ್ ವರ್ಷನ್ ನಲ್ಲಿ ಏನೇನು ನೀಡಿದೆ ಎಂದು ನೋಡೋಣ:
ಹೊರಭಾಗ |
ಒಳಭಾಗ |
ಸೌಕರ್ಯ ಮತ್ತು ಅನುಕೂಲತೆ |
ಇನ್ಫೋಟೈನ್ಮೆಂಟ್ |
ಸುರಕ್ಷತೆ |
|
|
|
|
|
ಅಲ್ಕಾಜಾರ್ ಎಕ್ಸಿಕ್ಯುಟಿವ್ ಎಂಟ್ರಿ ಲೆವೆಲ್ ವೇರಿಯಂಟ್ ಆಗಿದ್ದರೂ ಕೂಡ, ಇದರಲ್ಲಿ ಸಾಕಷ್ಟು ಫೀಚರ್ ಗಳನ್ನು ನೀಡಲಾಗಿದೆ. ಇದು ಆಟೋ-LED ಹೆಡ್‌ಲೈಟ್‌ಗಳು, 17-ಇಂಚಿನ ಡ್ಯುಯಲ್-ಟೋನ್ ಅಲೊಯ್ ವೀಲ್ಸ್, ಡ್ಯುಯಲ್-ಝೋನ್ ಆಟೋ AC ಮತ್ತು ಕೂಲ್ಡ್ ಗ್ಲೋವ್‌ಬಾಕ್ಸ್‌ನಂತಹ ಫೀಚರ್ ಗಳೊಂದಿಗೆ ಬರುತ್ತದೆ. ಸುರಕ್ಷತೆಗಾಗಿ ಇದರಲ್ಲಿ 6 ಏರ್‌ಬ್ಯಾಗ್‌ಗಳು, ESC, ಹಿಲ್-ಸ್ಟಾರ್ಟ್ ಅಸಿಸ್ಟ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಂತಹ ಫೀಚರ್ ಗಳನ್ನು ನೀಡಲಾಗಿದೆ.
A ಇದನ್ನು ಕೂಡ ಓದಿ: 2024 ಹ್ಯುಂಡೈ ಅಲ್ಕಾಜರ್ ಈಗ ಡೀಲರ್‌ಶಿಪ್‌ಗಳಲ್ಲಿ ಲಭ್ಯ, ಹತ್ತಿರದ ಶೋ ರೂಮ್ ಗೆ ಹೋಗಿ ನೀವು ಇದನ್ನು ನೋಡಬಹುದು
ಹ್ಯುಂಡೈ ಅಲ್ಕಾಜರ್ ಪ್ರೆಸ್ಟೀಜ್
ಬೆಲೆ: ರೂ. 17.18 ಲಕ್ಷ
ಬೇಸ್ ಗಿಂತ ಒಂದು ಲೆವೆಲ್ ಮೇಲಿರುವ ಪ್ರೆಸ್ಟೀಜ್ ವೇರಿಯಂಟ್ ಎಕ್ಸಿಕ್ಯುಟಿವ್ ವೇರಿಯಂಟ್ ನಲ್ಲಿರುವ ಫೀಚರ್ ಗಳ ಜೊತೆಗೆ ಈ ಕೆಳಗಿನ ಫೀಚರ್ ಗಳೊಂದಿಗೆ ಬರುತ್ತದೆ:
ಹೊರಭಾಗ |
ಒಳಭಾಗ |
ಸೌಕರ್ಯ ಮತ್ತು ಅನುಕೂಲತೆ |
ಇನ್ಫೋಟೈನ್ಮೆಂಟ್ |
ಸುರಕ್ಷತೆ |
|
|
|
|
|
ಹ್ಯುಂಡೈ ಅಲ್ಕಾಜರ್‌ನ ಪ್ರೆಸ್ಟೀಜ್ ವರ್ಷನ್ ಎಕ್ಸಿಕ್ಯೂಟಿವ್ ಟ್ರಿಮ್‌ನಲ್ಲಿ ಇರುವ ಫೀಚರ್ ಗಳ ಜೊತೆಗೆ ಮುಂಭಾಗದಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನರೋಮಿಕ್ ಸನ್‌ರೂಫ್ ನೀಡುತ್ತದೆ. ಇದು 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಕೂಡ ಪಡೆಯುತ್ತದೆ. ಎಕ್ಸಿಕ್ಯೂಟಿವ್ ವರ್ಷನ್ ನಲ್ಲಿ ಇರುವ ಸುರಕ್ಷತಾ ಫೀಚರ್ ಗಳನ್ನು ಇಲ್ಲಿ ಕೂಡ ನೀಡಲಾಗಿದೆ.
ಹ್ಯುಂಡೈ ಅಲ್ಕಾಜರ್ ಪ್ಲಾಟಿನಂ
ಬೆಲೆ: ರೂ. 19.46 ಲಕ್ಷದಿಂದ ರೂ. 21 ಲಕ್ಷ
ಮಿಡ್-ಸ್ಪೆಕ್ ಪ್ಲಾಟಿನಂ ವೇರಿಯಂಟ್ ಪ್ರೆಸ್ಟೀಜ್ ವೇರಿಯಂಟ್ ನಲ್ಲಿರುವ ಫೀಚರ್ ಗಳ ಜೊತೆಗೆ ಈ ಕೆಳಗೆ ನೀಡಲಾದ ಫೀಚರ್ ಗಳನ್ನು ಪಡೆಯುತ್ತದೆ:
ಹೊರಭಾಗ |
ಒಳಭಾಗ |
ಸೌಕರ್ಯ ಮತ್ತು ಅನುಕೂಲತೆ |
ಇನ್ಫೋಟೈನ್ಮೆಂಟ್ |
ಸುರಕ್ಷತೆ |
|
|
|
|
|
ಹ್ಯುಂಡೈ ಅಲ್ಕಾಜರ್‌ನ ಮಿಡ್ ರೇಂಜ್ ವರ್ಷನ್ ಆಗಿರುವ ಪ್ಲಾಟಿನಂ 6-ಸೀಟರ್ ಆಯ್ಕೆಯನ್ನು ನೀಡುತ್ತದೆ, ಹಿಂದಿನ ವರ್ಷನ್ ಗಳಲ್ಲಿ ಕೇವಲ 7-ಸೀಟರ್ ಆಯ್ಕೆ ನೀಡಲಾಗಿತ್ತು. ಇದು ದೊಡ್ಡದಾದ 18-ಇಂಚಿನ ಅಲೊಯ್ ವೀಲ್ಸ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಪಡೆಯುತ್ತದೆ. ಇದು ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಲೆವೆಲ್-2 ADAS ಫೀಚರ್ ಗಳನ್ನು ಕೂಡ ಪಡೆಯುತ್ತದೆ.
ಇದನ್ನು ಕೂಡ ಓದಿ: ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಮೈಲೇಜ್: ಕ್ಲೇಮ್ ಮಾಡಿರುವ ನಂಬರ್ ಇಲ್ಲಿದೆ
ಹ್ಯುಂಡೈ ಅಲ್ಕಾಜರ್ ಸಿಗ್ನೇಚರ್
ಬೆಲೆ: ರೂ. 21.20 ಲಕ್ಷದಿಂದ ರೂ. 21.40 ಲಕ್ಷ
ಟಾಪ್ ಎಂಡ್ ಸಿಗ್ನೇಚರ್ ವೇರಿಯಂಟ್ ಪ್ಲಾಟಿನಂ ನಲ್ಲಿ ಇರುವ ಫೀಚರ್ ಗಳ ಜೊತೆಗೆ ಈ ಕೆಳಗಿನ ಫೀಚರ್ ಗಳೊಂದಿಗೆ ಬರುತ್ತದೆ:
ಹೊರಭಾಗ |
ಒಳಭಾಗ |
ಸೌಕರ್ಯ ಮತ್ತು ಅನುಕೂಲತೆ |
ಇನ್ಫೋಟೈನ್ಮೆಂಟ್ |
ಸುರಕ್ಷತೆ |
|
|
|
|
|
ಸಿಗ್ನೇಚರ್ ವೇರಿಯಂಟ್ ಡ್ರೈವರ್ ಸೀಟ್‌ಗಾಗಿ 2-ಲೆವೆಲ್ ಮೆಮೊರಿ ಫಂಕ್ಷನ್, 8-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಕೋ-ಡ್ರೈವರ್ ಸೀಟ್ ಮತ್ತು ರಿಮೋಟ್ ಕಾರ್ ಅನ್‌ಲಾಕಿಂಗ್ ಅನ್ನು ಪಡೆಯುತ್ತದೆ. ಇದು ಮುಂಭಾಗ ಮತ್ತು ಎರಡನೇ-ಸಾಲಿನ ವೆಂಟಿಲೇಟೆಡ್ ಸೀಟ್ ಗಳನ್ನು (6-ಸೀಟರ್ ಮಾತ್ರ), ಅಡ್ಜಸ್ಟ್ ಮಾಡಬಹುದಾದ ತೊಡೆಯ ಕುಶನ್ ಮತ್ತು ಎರಡನೇ ಸಾಲಿಗೆ (6-ಸೀಟರ್ ಮಾತ್ರ) ಎಲೆಕ್ಟ್ರಿಕ್ ಬಾಸ್ ಮೋಡ್ ಅನ್ನು ಕೂಡ ನೀಡುತ್ತದೆ. ಇದರ ಜೊತೆಗೆ ಇದು ಪ್ಲಾಟಿನಂ ವೇರಿಯಂಟ್ ನಲ್ಲಿ ಇರುವ ಹೊರಭಾಗ, ಒಳಭಾಗ, ಇನ್ಫೋಟೈನ್ಮೆಂಟ್ ಮತ್ತು ಸುರಕ್ಷತಾ ಫೀಚರ್ ಗಳನ್ನು ಪಡೆಯುತ್ತದೆ.
ಪವರ್‌ಟ್ರೇನ್ ಆಯ್ಕೆಗಳು
2024 ಹ್ಯುಂಡೈ ಅಲ್ಕಾಜರ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು ಅದರ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ನೀಡಲಾಗಿದೆ:
ಇಂಜಿನ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
160 PS |
116 PS |
ಟಾರ್ಕ್ |
253 Nm |
250 Nm |
ಟ್ರಾನ್ಸ್‌ಮಿಷನ್* |
6-ಸ್ಪೀಡ್ MT, 7-ಸ್ಪೀಡ್ DCT |
-ಸ್ಪೀಡ್ MT, 6-ಸ್ಪೀಡ್ AT |
* DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್; AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಬೆಲೆ ಮತ್ತು ಪ್ರತಿಸ್ಪರ್ಧಿಗಳು
2024 ಹ್ಯುಂಡೈ SUVಯು MG ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಮಹೀಂದ್ರ XUV700 ನ 6- ಮತ್ತು 7-ಸೀಟರ್ ವೇರಿಯಂಟ್ ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಎಲ್ಲಾ ಬೆಲೆಗಳು ಎಕ್ಸ್ ಶೋರೂಂ, ನವದೆಹಲಿ ಬೆಲೆಯಾಗಿದೆ
2024 ಹ್ಯುಂಡೈ ಅಲ್ಕಾಜರ್ ನ್ ಯಾವ ವರ್ಷನ್ ನಿಮಗೆ ಉತ್ತಮ ಎಂದು ಅನಿಸುತ್ತದೆ? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಹ್ಯುಂಡೈ ಅಲ್ಕಾಜರ್ ಆನ್ ರೋಡ್ ಬೆಲೆ