• English
  • Login / Register

ಹೋಂಡಾ ಸಿಟಿಯಲ್ಲಿ ಸಣ್ಣ ಬದಲಾವಣೆ, ಮತ್ತು ಹೈಬ್ರಿಡೇತರ ವೇರಿಯೆಂಟ್‌ಗಳಲ್ಲೂ ADAS

ಹೋಂಡಾ ನಗರ ಗಾಗಿ rohit ಮೂಲಕ ಮಾರ್ಚ್‌ 03, 2023 11:31 am ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ಟಾಂಡರ್ಡ್ ಸಿಟಿ ಮತ್ತು ಸಿಟಿ ಹೈಬ್ರಿಡ್ ಎರಡೂ ಹೊಸ ಆರಂಭಿಕ ಹಂತದ ವೇರಿಯೆಂಟ್‌ಗಳನ್ನು ಪಡೆದಿದ್ದು ಅವುಗಳನ್ನು ಕ್ರಮವಾಗಿ– SV ಮತ್ತು V – ಎಂದು ಹೆಸರಿಸಲಾಗಿದೆ.

2023 Honda City and City Hybrid

  • ಹೋಂಡಾ ನವೀಕೃತ ಸಿಟಿಯ ಬೆಲೆಯನ್ನು ರೂ. 11.49 ಲಕ್ಷದಿಂದ ರೂ. 15.97 ಲಕ್ಷಕ್ಕೆ ನಿಗದಿಪಡಿಸಿದೆ.
  •  ಅದೇ ರೀತಿ ಈ ಸಿಟಿ ಹೈಬ್ರಿಡ್ ಅನ್ನು ರೂ. 18.89 ಲಕ್ಷದಿಂದ ರೂ. 20.39 ಲಕ್ಷಗಳ ನಡುವೆ ಮಾರಾಟಕ್ಕೆ ತರುತ್ತಿದೆ.
  • ಫ್ರಂಟ್ ಮತ್ತು ರಿಯರ್ ಪ್ರೊಫೈಲ್‌ಗಳಲ್ಲಿ ಲಘು ಕಾಸ್ಮೆಟಿಕ್ ಟ್ವೀಕ್‌ಗಳನ್ನು ಪಡೆದಿದೆ.
  •  ಮಳೆ-ಸೆನ್ಸಿಂಗ್ ವೈಪರ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆ್ಯಂಬಿಯೆಂಟ್ ಲೈಟಿಂಗ್‌ನಂತಹ ಹೊಸ ಫೀಚರ್‌ಗಳನ್ನು ಪಡೆದಿದೆ.
  •  ಹೋಂಡಾ ತನ್ನ ಈ ಸೆಡಾನ್ ಅನ್ನು ಮೊದಲಿನಂತೆಯೇ 1.5-ಲೀಟರ್ ಪೆಟ್ರೋಲ್ ಮತ್ತು ಪೆಟ್ರೋಲ್-ಹೈಬ್ರಿಡ್ ಇಂಜಿನ್ ಆಯ್ಕೆಯೊಂದಿಗೆ ನೀಡುತ್ತಿದೆ.
  • ಈ ಅಪ್‌ಡೇಟ್‌ನೊಂದಿಗೆ ಡಿಸೇಲ್ ವೇರಿಯೆಂಟ್‌ ಅನ್ನು ಸ್ಥಗಿತಗೊಳಿಸಲಾಗಿದೆ.

ಹೋಂಡಾ ಭಾರತದಲ್ಲಿ ನವೀಕೃತ ಸಿಟಿ ಮತ್ತು ಸಿಟಿ ಹೈಬ್ರಿಡ್ ಅನ್ನು ಬಿಡುಗಡೆಗೊಳಿಸಿದ್ದು ಇವೆರಡೂ ಸಹ ಹೊಸ ಬೇಸ್-ಸ್ಪೆಕ್ ಟ್ರಿಮ್‌ಗಳನ್ನು (ಅನುಕ್ರಮವಾಗಿ SV ಮತ್ತು V) ಮತ್ತು ಕೆಲವು ಹೆಚ್ಚುವರಿ ಫೀಚರ್‌ಗಳನ್ನು ಪಡೆದಿವೆ, ಸಾಮಾನ್ಯ ಸಿಟಿಯು ADAS ನಂತಹ ಅತಿದೊಡ್ಡ ಪ್ರಯೋಜನವನ್ನು ಗಳಿಸಿದೆ. ಹೊಸ ವೇರಿಯೆಂಟ್‌ಗಳು ಮತ್ತು ಬೆಲೆಗಳು ಈ ಕೆಳಗಿನಂತಿವೆ:

ವೇರಿಯೆಂಟ್-ಪ್ರಕಾರ ಬೆಲೆಗಳು

ವೇರಿಯೆಂಟ್

ಹಳೆ ಬೆಲೆ

ಹೊಸ ಬೆಲೆ

ವ್ಯತ್ಯಾಸ

ಸಿಟಿ ಪೆಟ್ರೋಲ್

     

SV

ರೂ 11.49 ಲಕ್ಷ (ಹೊಸ)

V

ರೂ. 11.87 ಲಕ್ಷ

ರೂ 12.37 ಲಕ್ಷ

+ ರೂ 50,000

V CVT

ರೂ 13.27 ಲಕ್ಷ

ರೂ 13.62 ಲಕ್ಷ

+ ರೂ 35,000

VX

ರೂ 13.33 ಲಕ್ಷ

ರೂ 13.49 ಲಕ್ಷ

+ ರೂ 16,000

VX CVT

ರೂ 14.63 ಲಕ್ಷ

ರೂ 14.74 ಲಕ್ಷ

+ ರೂ 11,000

ZX

ರೂ 14.32 ಲಕ್ಷ 

ರೂ 14.72 ಲಕ್ಷ

+ ರೂ 40,000

ZX CVT

ರೂ 15.62 ಲಕ್ಷ

ರೂ 15.97 ಲಕ್ಷ

+ ರೂ 35,000

ಸಿಟಿ ಹೈಬ್ರಿಡ್

     

V

ರೂ 18.89 ಲಕ್ಷ (ಹೊಸ)

ZX

ರೂ 19.89 ಲಕ್ಷ

ರೂ 20.39 ಲಕ್ಷ

+ ರೂ 50,000

ಕಾಂಪ್ಯಾಕ್ಟ್ ಸೆಡಾನ್‌ನ ಸ್ಟ್ಯಾಂಡರ್ಡ್ ಮತ್ತು ಹೈಬ್ರಿಡ್ ವೇರಿಯೆಂಟ್‌ಗಳು ರೂ. 50,000 ದಷ್ಟು ಹೆಚ್ಚು ದುಬಾರಿಯಾಗಿವೆ. ಎರಡೂ ಮಾಡೆಲ್‌ಗಳು ಈಗ ಮೊದಲಿಗಿಂತ ಹೆಚ್ಚು ಕೈಗೆಟಕುವ ಬೆಲೆಗೆ ದೊರಕುತ್ತಿದ್ದು, ಅವುಗಳ ಆಯಾ ಹೊಸ ಟ್ರಿಮ್‌ಗಳಿಗೆ ಧನ್ಯವಾದಗಳು.

ನವೀಕರಣದೊಂದಿಗೆ, ಹೋಂಡಾ ಸಿಟಿಯಲ್ಲಿ ತನ್ನ ಡಿಸೇಲ್ ವೇರಿಯೆಂಟ್‌ಗಳನ್ನು ಕೈಬಿಟ್ಟಿದೆ.

ಡಿಸೈನ್ ಸುಧಾರಣೆಗಳು

2023 Honda City front

ಸಿಟಿಯು ಮುಂಭಾಗದಲ್ಲಿ ಸಣ್ಣ ನವೀಕರಣಗಳನ್ನು ಪಡೆದಿದ್ದು, ಟ್ವೀಕ್ ಆದ ಡಿಸೈನ್‌ನೊಂದಿಗೆ ಪರಿಷ್ಕೃತ ಗ್ರಿಲ್‌ಗಳು, ಹೆಚ್ಚು ಆಕರ್ಷಕವಾದ LED DRLಗಳು ಮತ್ತು ಮರುತಯಾರಿಸಿದ ಬಂಪರ್ ಅನ್ನು ಒಳಗೊಂಡಿದೆ. ಇದರರ್ಥ, ಸ್ವಲ್ಪಮಟ್ಟಿಗೆ ಪರಿಷ್ಕರಿಸಲ್ಪಟ್ಟ ಅಲಾಯ್ ವ್ಹೀಲ್‌ ಡಿಸೈನ್ ಮತ್ತು ಹಿಂಭಾಗದ ಬಂಪರ್ ಅನ್ನು ಹೊರತುಪಡಿಸಿದರೆ ಪ್ರೊಫೈಲ್‌ನಲ್ಲಿ ಮತ್ತು ಹಿಂಭಾಗದಲ್ಲಿ ಈ ಸೆಡಾನ್‌ಗೆ ಯಾವುದೇ ಬದಲಾವಣೆಗಳಿಲ್ಲ.

2023 Honda City cabin

2023 Honda City Hybrid cabin

ಹೋಂಡಾ, ಫ್ರಂಟ್ ಮತ್ತು ರಿಯರ್ ಬಂಪರ್‌ಗಳಲ್ಲಿ ಮತ್ತು ಕ್ಯಾಬಿನ್ ಒಳಗಿನ ಇನ್ಸ್‌ಸ್ಟ್ರುಮೆಂಟ್ ಪ್ಯಾನಲ್ ಸುತ್ತಲೂ ಕಾರ್ಬನ್ ಫೈಬರ್ ತರಹದ ವಿನ್ಯಾಸವನ್ನು ನೀಡಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಪ್ಯಾಲೆಟ್ ಬಣ್ಣದ ಜೊತೆಗೆ ಈ ಸೆಡಾನ್ ಈಗ ಅಬ್ಸಿಡಿಯನ್ ಬ್ಲೂ ಪರ್ಲ್ ಛಾಯೆಯನ್ನು ಪಡೆಯುತ್ತದೆ.

ಹೊಸತೇನಿದೆ?

2023 Honda City wireless phone charging

ವೈರ್‌ಲೆಸ್ ಫೋನ್ ಚಾರ್ಜಿಂಗ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಆ್ಯಂಬಿಯೆಂಟ್ ಲೈಟಿಂಗ್ ಮತ್ತು ಮಳೆ-ಸೆನ್ಸಿಂಗ್ ವೈಪರ್‌ಗಳೊಂದಿಗೆ ಹೋಂಡಾ ತನ್ನ ನವೀಕೃತ ಸಿಟಿಯನ್ನು ಸಜ್ಜುಗೊಳಿಸಿದೆ. ಸುರಕ್ಷತೆಯ ವಿಷಯದಲ್ಲಿ, ಸಿಟಿ ಹೈಬ್ರಿಡ್‌ನಿಂದ ಸುಧಾರಿತ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ಗಳ (ADAS) ದೊಡ್ಡ ನವೀಕರಣವು ಬಂದಿದ್ದು, ಇದು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ-ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್‌ಗಳನ್ನು ಸಹ ಪಡೆದಿದೆ. ಈ ಸೆಡಾನ್‌ನ ಹೈಬ್ರಿಡ್ ಆವೃತ್ತಿಯು ADAS ಅನ್ನು ಪ್ರಮಾಣಿತವಾಗಿ ಪಡೆದಿದೆ.

2023 Honda City ADAS

ADAS ನ ಸುರಕ್ಷತಾ ಮಟ್ಟವನ್ನು ಸಹ ನವೀಕರಿಸಲಾಗಿದ್ದು, ಕಡಿಮೆ ವೇಗದ ಫಾಲೋ (ಹೈಬ್ರಿಡ್ ಮಾತ್ರ) ಮತ್ತು ಲೀಡ್ ಕಾರ್ ಡಿಪಾರ್ಚರ್ ನೋಟಿಫಿಕೇಷನ್ ಸಿಸ್ಟಮ್ ಅನ್ನು ಸೇರಿಸಲು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನ ಸಾಮರ್ಥ್ಯವನ್ನು ವಿಸ್ತರಿಸಲಾಗಿದೆ. ಮೊದಲನೆಯದು ಹಿಂದಿನ ವಾಹನದಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡಿದರೆ, ಎರಡನೆಯದು ಹಿಂದಿನ ವಾಹನವು ಚಲಿಸುವಾಗ ದೃಶ್ಯ (ವಿಷುವಲ್) ಮತ್ತು ಶ್ರವಣ (ಆಡಿಬಲ್) ಅಲರ್ಟ್‌ಗಳೊಂದಿಗೆ ಚಾಲಕನಿಗೆ ಸೂಚನೆಯನ್ನು ನೀಡುತ್ತವೆ.

2023 Honda City Hybrid

ಇದಲ್ಲದೆ, ಹೋಂಡಾ ADAS ಅನ್ನು V ವೇರಿಯೆಂಟ್‌ನಿಂದ (ಬೇಸ್‌ ವೇರಿಯೆಂಟ್‌ನಿಂದ ಮೇಲಿನ) ನೀಡುವ ಮೂಲಕ ಜನಸಾಮಾನ್ಯರಿಗೆ ಸ್ವಲ್ಪ ಮಟ್ಟಿಗೆ ಕೈಗೆಟಕುವಂತೆ ಮಾಡಿದೆ. ಏಕೆಂದರೆ, ಇತರ ಹೆಚ್ಚಿನ ಶ್ರೀಸಾಮಾನ್ಯ ಮಾರುಕಟ್ಟೆ ಬ್ರ್ಯಾಂಡ್‌ಗಳು ಈ ಸುರಕ್ಷತಾ ತಂತ್ರಜ್ಞಾನವನ್ನು ಉನ್ನತ ವೇರಿಯೆಂಟ್‌ಗಳಿಗೆ ಮಾತ್ರ ಸೀಮಿತಗೊಳಿಸುತ್ತವೆ.

ಈ ಹೋಂಡಾ ಸೆಡಾನ್‌ನಲ್ಲಿನ ಇತರ ಫೀಚರ್‌ಗಳೆಂದರೆ, ಎಂಟು-ಇಂಚಿನ ಟಚ್‌ಸ್ಕ್ರೀನ್, ಸನ್‌ರೂಫ್, ಲೇನ್‌ವೀಕ್ಷಣಾ ಕ್ಯಾಮರಾ ಮತ್ತು ಕ್ರೂಸ್ ಕಂಟ್ರೋಲ್. ಇದರ ಸುರಕ್ಷತಾ ಕಿಟ್‌, ಆರು ಏರ್‌ಬ್ಯಾಗ್‌ಗಳು, ರಿಯರ್‌ವ್ಯೂ ಕ್ಯಾಮರಾ EBD ಜೊತೆಗೆ ABS ಅನ್ನು ಒಳಗೊಂಡಿದೆ.

ಪೆಟ್ರೋಲ್ ಚಾಲಿತ ಮಾತ್ರ

ಮಿಡ್‌ಲೈಫ್ ರಿಫ್ರೆಶ್‌ನೊಂದಿಗೆ ಸಿಟಿ ಈಗ ಪೆಟ್ರೋಲ್-ಮಾತ್ರ ಆಯ್ಕೆಯನ್ನು ಹೊಂದಿದ್ದು ಅದರ ಪವರ್‌ಟ್ರೇನ್ ಆಯ್ಕೆಗಳ ನೋಟ ಇಲ್ಲಿದೆ:

ಸ್ಪೆಸಿಫಿಕೇಶನ್

1.5-ಲೀಟರ್ ಪೆಟ್ರೋಲ್

1.5-ಲೀಟರ್ ಪೆಟ್ರೋಲ್ ಹೈಬ್ರಿಡ್

ಪವರ್

121PS

126PS (ಸಂಯೋಜಿತ)

ಟಾರ್ಕ್

145Nm

253Nm (ಸಂಯೋಜಿತ)

ಟ್ರಾನ್ಸ್‌ಮಿಷನ್

6-ಸ್ಪೀಡ್ MT, 7-ಸ್ಟೆಪ್ CVT

e-CVT

ಈ ಸಿಟಿ ಹೈಬ್ರಿಡ್ 0.7kWh ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪಡೆದಿದೆ. ಡಿಸೇಲ್ ಇಂಜಿನ್ ಅನ್ನು ಕೈಬಿಡುವುದರೊಂದಿಗೆ (ಸಿಟಿಯ ವೇರಿಯೆಂಟ್‌ನಿಂದ ಮಾತ್ರವಲ್ಲ, ಸಂಪೂರ್ಣ ವಿಭಾಗದಿಂದಲೇ ಕೈಬಿಡಲಾಗಿದೆ), 20.15kmpl (ನಗರಗಳಲ್ಲಿ) ಮತ್ತು 23.38kmpl (ಹೈವೇಗಳಲ್ಲಿ) ಆರ್ಥಿಕತೆಯನ್ನು ಹೊಂದುವ ಮೂಲಕ ನೈಜ-ಪ್ರಪಂಚದ ಚಾಲನಾ ಪರಿಸ್ಥಿತಿಗಳಲ್ಲಿ ಅತ್ಯಂತ ಮಿತವ್ಯಯದ ಸೆಡಾನ್ ಆಗಿ ಹೊರಹೊಮ್ಮಿದೆ.

 ಪ್ರತಿಸ್ಪರ್ಧಿಗಳಾರು?

2023 Honda City rear

2023 Honda City Hybrid rear

ಹೋಂಡಾದ ಕಾಂಪ್ಯಾಕ್ಟ್ ಸೆಡಾನ್ ತನ್ನ ಪೈಪೋಟಿಯನ್ನು ಫೋಕ್ಸ್‌ವ್ಯಾಗನ್ ವರ್ಚಸ್, ಮಾರುತಿ ಸಿಯಾಜ್, ಸ್ಕೋಡಾ ಸ್ಲೆವಿಯಾ, ಮತ್ತು ಮುಂಬರುವ ಹೊಸ-ಜನರೇಷನ್ ಹ್ಯುಂಡೈ ವರ್ನಾ ಗಳ ಜೊತೆ ತನ್ನ ಸ್ಪರ್ಧೆಯನ್ನು ಕಾಯ್ದಿರಿಸಿಕೊಂಡಿದೆ. ಆದಾಗ್ಯೂ ಹೈಬ್ರಿಡ್ ವೇರಿಯೆಂಟ್‌ನಲ್ಲಿ ಇದು ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ.

 ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ಹೋಂಡಾ ಸಿಟಿ 2023 ಡಿಸೇಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Honda ನಗರ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience