Honda Elevate, City ಮತ್ತು Amazeನ ಬೆಲೆಗಳಲ್ಲಿ ಏರಿಕೆ, ಎಲಿವೇಟ್ ಮತ್ತು ಸಿಟಿಯಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಲಭ್ಯ
ಹೋಂಡಾ ಸಿಟಿ ಗಾಗಿ sonny ಮೂಲಕ ಏಪ್ರಿಲ್ 04, 2024 05:25 pm ರಂದು ಪ್ರಕಟಿಸಲಾಗಿದೆ
- 47 Views
- ಕಾಮೆಂಟ್ ಅನ್ನು ಬರೆಯಿರಿ
ಹೋಂಡಾ ಎಲಿವೇಟ್ ಅತಿದೊಡ್ಡ ಬೆಲೆ ಏರಿಕೆಯನ್ನು ಪಡೆಯುತ್ತದೆ, ಹಾಗೆಯೇ ಹೆಚ್ಚಿನ ವೈಶಿಷ್ಟ್ಯದ ಪರಿಷ್ಕರಣೆಗಳನ್ನು ಪಡೆಯುತ್ತದೆ
- ಹೋಂಡಾ ಎಲಿವೇಟ್ ಮತ್ತು ಸಿಟಿಗಾಗಿ ವೇರಿಯಂಟ್-ವಾರು ವೈಶಿಷ್ಟ್ಯಗಳನ್ನು ಪರಿಷ್ಕರಿಸಿದೆ, ಆದರೆ ಸಿಟಿ ಹೈಬ್ರಿಡ್ ಮತ್ತು ಅಮೇಜ್‌ಗಾಗಿ ವೇರಿಯಂಟ್ ಪಟ್ಟಿಯನ್ನು ನವೀಕರಿಸಿದೆ.
- ಹೋಂಡಾ ಎಲಿವೇಟ್ ಎಸ್‌ಯುವಿ ಈಗ ಎಕ್ಸ್ ಶೋರೂಂ ಬೆಲೆಯನ್ನು ಈಗ 11.91 ಲಕ್ಷದಿಂದ 16.43 ಲಕ್ಷ ರೂ.ವರೆಗೆ ಹೊಂದಿದೆ.
- ಹೋಂಡಾ ಸಿಟಿ ಸೆಡಾನ್ ಎಕ್ಸ್ ಶೋರೂಂ ಬೆಲೆ ಈಗ 12.08 ಲಕ್ಷ ರೂ.ನಿಂದ 16.35 ಲಕ್ಷ ರೂ. ಆಗಿದೆ.
- ಹೋಂಡಾ ಸಿಟಿ ಹೈಬ್ರಿಡ್ ಎಂಟ್ರಿ ಲೆವೆಲ್‌ನ ವಿ ವೇರಿಯೆಂಟ್ ಅನ್ನು ಕಳೆದುಕೊಳ್ಳುತ್ತದೆ, ಈಗ ಟಾಪ್ ವೇರಿಯಂಟ್‌ನ ಎಕ್ಸ್-ಶೋರೂಂ ಬೆಲೆ 20.55 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.
- ಹೋಂಡಾ ಅಮೇಜ್ ಸಹ ಎಂಟ್ರಿ ಲೆವೆಲ್‌ನ ವೇರಿಯೆಂಟ್ ಅನ್ನು ಕಳೆದುಕೊಳ್ಳುತ್ತದೆ ಮತ್ತು ಇದರ ಎಕ್ಸ್ ಶೋರೂಂ ಬೆಲೆಗಳು 7.93 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.
ಹೊಸ ಹಣಕಾಸು ವರ್ಷದ ಆರಂಭಕ್ಕೆ ಹೋಂಡಾ ಲೈನ್‌ಅಪ್‌ನ ಕಾರುಗಳು ಬೆಲೆ ಏರಿಕೆಯನ್ನು ಪಡೆದುಕೊಂಡಿದ್ದು, ಎಲ್ಲಾ ಮೊಡೆಲ್‌ಗಳ ಎಂಟ್ರಿ-ಲೆವೆಲ್‌ನ ಬೆಲೆಯನ್ನು ಹೆಚ್ಚಿಸಿದೆ. ಹೆಚ್ಚುವರಿಯಾಗಿ, ಹೋಂಡಾ ಎಲಿವೇಟ್ ಮತ್ತು ಹೋಂಡಾ ಸಿಟಿ ಈಗ ಹೆಚ್ಚಿನ ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತವೆ, ಆದರೆ ಹೋಂಡಾ ಅಮೇಜ್ ಸುರಕ್ಷತಾ ಕಿಟ್‌ಗೆ ಸಣ್ಣ ನವೀಕರಣವನ್ನು ನೀಡಲಾಗಿದೆ. ಪರಿಷ್ಕೃತ ಬೆಲೆಗಳು ಮತ್ತು ಪ್ರತಿ ಮೊಡೆಲ್‌ನ ವೈಶಿಷ್ಟ್ಯಗಳ ಸೆಟ್‌ಗೆ ನಿಡಲಾಗಿರುವ ಬದಲಾವಣೆಗಳನ್ನು ವಿವರವಾಗಿ ನೋಡೋಣ.
ಹೋಂಡಾದ ಹೊಸ ಬೆಲೆಗಳು ಮತ್ತು ವೈಶಿಷ್ಟ್ಯದ ಆಪ್‌ಡೇಟ್‌ಗಳು
ಹೊಂಡಾ ಎಲಿವೇಟ್
ವೇರಿಯೇಂಟ್ |
ಹೊಸ ಬೆಲೆ |
ಹಳೆಯ ಬೆಲೆ |
ವ್ಯತ್ಯಾಸ |
ಎಸ್‌ವಿ |
11.91 ಲಕ್ಷ ರೂ. |
11.58 ಲಕ್ಷ ರೂ. |
33,000 ರೂ. |
ವಿ |
12.71 ಲಕ್ಷ ರೂ. |
12.31 ಲಕ್ಷ ರೂ. |
40,000 ರೂ. |
ವಿಎಕ್ಸ್ |
14.10 ಲಕ್ಷ ರೂ. |
13.71 ಲಕ್ಷ ರೂ. |
40,000 ರೂ. |
ಜೆಡ್‌ಎಕ್ಸ್ |
15.41 ಲಕ್ಷ ರೂ. |
15.10 ಲಕ್ಷ ರೂ. |
31,000 ರೂ. |
ಆಟೋಮ್ಯಾಟಿಕ್ |
|
|
|
ವಿ ಸಿವಿಟಿ |
13.71 ಲಕ್ಷ ರೂ |
13.41 ಲಕ್ಷ ರೂ. |
30,000 ರೂ. |
ವಿಎಕ್ಸ್ ಸಿವಿಟಿ |
15.10 ಲಕ್ಷ ರೂ |
14.80 ಲಕ್ಷ ರೂ. |
30,000 ರೂ. |
ಜೆಡ್ ಎಕ್ಸ್ ಸಿವಿಟಿ |
16.43 ಲಕ್ಷ ರೂ |
16.20 ಲಕ್ಷ ರೂ. |
23,000 ರೂ. |
ಎಲಿವೇಟ್ 40,000 ರೂ.ವರೆಗೆ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಇದು ಈಗ ಕಾಂಪ್ಯಾಕ್ಟ್ SUV ಸೆಗ್ಮೆಂಟ್‌ನಲ್ಲಿ ಅತ್ಯಂತ ದುಬಾರಿ ಎಂಟ್ರಿ ಲೆವೆಲ್ ಆವೃತ್ತಿಯನ್ನು ಹೊಂದಿದೆ, ಇದು ಬೆಲೆಯಲ್ಲಿ ಸ್ಕೋಡಾ ಕುಶಾಕ್‌ಗಿಂತಲೂ ಸ್ವಲ್ಪ ದುಬಾರಿಯಾಗಿದೆ.
ಕಾಂಪ್ಯಾಕ್ಟ್ ಎಸ್‌ಯುವಿಯು ಈಗ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ, ಈ ಹಿಂದೆ ಇದನ್ನು ಟಾಪ್ ಮೊಡೆಲ್ ಆದ ZX ಆವೃತ್ತಿಯಲ್ಲಿ ಮಾತ್ರ ನೀಡಲಾಗುತ್ತಿತ್ತು. ಇದರ ಇತರ ವೈಶಿಷ್ಟ್ಯದ ನವೀಕರಣಗಳು ಸೀಟ್‌ಬೆಲ್ಟ್ ರಿಮೈಂಡರ್ ಮತ್ತು ಎಲ್ಲಾ ಐದು ಆಸನಗಳಿಗೆ ಹೊಂದಿಸಬಹುದಾದ ಹೆಡ್‌ರೆಸ್ಟ್‌ಗಳನ್ನು ಒಳಗೊಂಡಿವೆ. ವೇರಿಯಂಟ್-ವಾರು ವೈಶಿಷ್ಟ್ಯಗಳಿಗೆ ಬದಲಾವಣೆಗಳು 7-ಇಂಚಿನ TFT ಜೊತೆಗೆ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ವ್ಯಾನಿಟಿ ಮಿರರ್ ಮತ್ತು ಮುಚ್ಚಳವನ್ನು ಹೊಂದಿರುವ ಫ್ರಂಟ್ ವೈಸರ್‌ಗಳನ್ನು ಈಗ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. ಮುಂಭಾಗದ ಎಸಿ ವೆಂಟ್ ನಾಬ್ ಮತ್ತು ಫ್ಯಾನ್ ಸ್ಪೀಡ್ ಮತ್ತು ಟೆಂಪರೇಚರ್‌ಗಾಗಿ ಆಟೋ ಕ್ಲೈಮೇಟ್ ಕಂಟ್ರೋಲ್ ಈಗ ಸಿಲ್ವರ್ ಪೇಂಟ್ ಫಿನಿಶ್ ಪಡೆಯಲಿದೆ.
ಹೊಂಡಾ ಸಿಟಿ
ವೇರಿಯೇಂಟ್ |
ಹೊಸ ಬೆಲೆ |
ಹಳೆಯ ಬೆಲೆ |
ವ್ಯತ್ಯಾಸ |
ಎಸ್‌ವಿ |
12.08 ಲಕ್ಷ ರೂ. |
11.71 ಲಕ್ಷ ರೂ. |
37,000 ರೂ. |
ವಿ |
12.85 ಲಕ್ಷ ರೂ. |
12.59 ಲಕ್ಷ ರೂ. |
26,000 ರೂ. |
ವಿಎಕ್ಸ್ |
13.92 ಲಕ್ಷ ರೂ. |
13.71 ಲಕ್ಷ ರೂ. |
21,000 ರೂ. |
ಜೆಡ್‌ಎಕ್ಸ್ |
15.10 ಲಕ್ಷ ರೂ. |
14.94 ಲಕ್ಷ ರೂ. |
16,000 ರೂ. |
ಆಟೋಮ್ಯಾಟಿಕ್ |
|
|
|
ವಿ ಸಿವಿಟಿ |
14.10 ಲಕ್ಷ ರೂ. |
13.84 ಲಕ್ಷ ರೂ. |
26,000 ರೂ. |
ವಿಎಕ್ಸ್ ಸಿವಿಟಿ |
15.17 ಲಕ್ಷ ರೂ. |
14.96 ಲಕ್ಷ ರೂ. |
21,000 ರೂ. |
ಜೆಡ್ ಎಕ್ಸ್ ಸಿವಿಟಿ |
16.35 ಲಕ್ಷ ರೂ. |
16.19 ಲಕ್ಷ ರೂ. |
16,000 ರೂ. |
ಹೋಂಡಾವು ಸಿಟಿ ಸೆಡಾನ್‌ನ ಬೆಲೆಯನ್ನು 37,000 ರೂ.ವರೆಗೆ ಹೆಚ್ಚಿಸಿದೆ
ಇದು ಈಗ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ, ಹಿಂದೆ VX ಮತ್ತು ಅದಕ್ಕಿಂತ ಟಾಪ್ ಮೊಡೆಲ್‌ಗಳಿಗೆ ಮಾತ್ರ ಸೀಮಿತವಾಗಿತ್ತು, ಹಾಗೆಯೇ ಎಲ್ಲಾ ಐದು ಆಸನಗಳಿಗೆ ಸೀಟ್‌ಬೆಲ್ಟ್ ರಿಮೈಂಡರ್‌ಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಬೇಸ್ ವೇರಿಯೆಂಟ್ ಗೇಜ್ ಕ್ಲಸ್ಟರ್‌ನಲ್ಲಿ 4.2-ಇಂಚಿನ MID ಅನ್ನು ಪಡೆಯುತ್ತದೆ ಮತ್ತು VX ಆವೃತ್ತಿಯು ಈಗ ಹಿಂಭಾಗದ ಸನ್‌ಶೇಡ್ ಮತ್ತು 8-ಸ್ಪೀಕರ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ.
ಹೋಂಡಾ ಸಿಟಿ ಹೈಬ್ರಿಡ್
ವೇರಿಯೇಂಟ್ |
ಹೊಸ ಬೆಲೆ |
ಹಳೆಯ ಬೆಲೆ |
ವ್ಯತ್ಯಾಸ |
ವಿ |
N.A. |
18.89 ಲಕ್ಷ ರೂ. |
N.A. |
ಜೆಡ್‌ಎಕ್ಸ್ |
20.55 ಲಕ್ಷ ರೂ |
20.39 ಲಕ್ಷ ರೂ. |
16,000 ರೂ |
ಕಡಿಮೆ ಬೇಡಿಕೆಯ ಕಾರಣದಿಂದ ಹೋಂಡಾ ಎಂಟ್ರಿ-ಲೆವೆಲ್‌ನ ಸಿಟಿ ಹೈಬ್ರಿಡ್ ವೇರಿಯೆಂಟ್ ಅನ್ನು ನಿಲ್ಲಿಸಿದೆ ಅಥವಾ ಇದನ್ನು ನಿಲ್ಲಿಸಲಿದೆ ಎಂದು ತೋರುತ್ತದೆ. ಇಲ್ಲಿಯೂ ಸಹ, ಎಲ್ಲಾ ಐದು ಆಸನಗಳು ಈಗ ಸೀಟ್‌ಬೆಲ್ಟ್ ರಿಮೈಂಡರ್‌ನೊಂದಿಗೆ ಬರುತ್ತವೆ ಎಂಬುದು ಒಂದೇ ಆಪ್‌ಡೇಟ್ ಆಗಿದೆ.
ಹೋಂಡಾ ಅಮೇಜ್
ವೇರಿಯೇಂಟ್ |
ಹೊಸ ಬೆಲೆ |
ಹಳೆಯ ಬೆಲೆ |
ವ್ಯತ್ಯಾಸ |
ಇ |
N.A. |
7.16 ಲಕ್ಷ ರೂ. |
N.A. |
ಎಸ್ |
7.93 ಲಕ್ಷ ರೂ |
7.84 ಲಕ್ಷ ರೂ. |
11,000 ರೂ. |
ವಿಎಕ್ಸ್ |
9.04 ಲಕ್ಷ ರೂ |
8.95 ಲಕ್ಷ ರೂ. |
9,000 ರೂ. |
ಆಟೋಮ್ಯಾಟಿಕ್ |
|
|
|
ಎಸ್ |
8.83 ಲಕ್ಷ ರೂ |
8.73 ಲಕ್ಷ ರೂ |
10,000 ರೂ |
ವಿಎಕ್ಸ್ |
9.86 ಲಕ್ಷ ರೂ |
9.77 ಲಕ್ಷ ರೂ |
9,000 ರೂ |
ಎಂಟ್ರಿ ಲೆವೆಲ್‌ನ ಹೋಂಡಾ ಅಮೇಜ್‌ನ ಬೆಲೆಗಳು ರೂ 11,000 ವರೆಗೆ ಹೆಚ್ಚಾಗಿದೆ. ಇದು ಈಗ ಎಲ್ಲಾ ಐದು ಸೀಟ್‌ಗಳಿಗೆ ಸೀಟ್‌ಬೆಲ್ಟ್ ರಿಮೈಂಡರ್‌ಗಳೊಂದಿಗೆ ಬರುತ್ತದೆ. ಇಲ್ಲಿಯೂ ಸಹ, ಅಮೇಜ್‌ನ ಬೇಸ್ ಮೊಡೆಲ್ ಶೀಘ್ರದಲ್ಲೇ ಸ್ಥಗಿತಗೊಳ್ಳಬಹುದು ಎಂದು ತೋರುತ್ತದೆ.
2024 ಗಾಗಿ ಹೋಂಡಾ ಲೈನ್‌ಆಪ್‌ನ ಆಪ್‌ಡೇಟ್‌ಗಳು ಮತ್ತು ಪರಿಷ್ಕೃತ ಬೆಲೆಗಳು ಇವು. ಎಲಿವೇಟ್ ಎಸ್‌ಯುವಿಗಾಗಿ ವೇರಿಯಂಟ್-ವೈಸ್ ಫೀಚರ್ ಪಟ್ಟಿ ಪರಿಷ್ಕರಣೆಗಳ ಬಗ್ಗೆ ನಿಮಗೆ ಏನು ಅನಿಸುತ್ತದೆ? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಮೇಲೆ ತಿಳಿಸಲಾದ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ
ಇಲ್ಲಿ ಇನ್ನಷ್ಟು ಓದಿ: ಸಿಟಿ ಆನ್‌ರೋಡ್ ಬೆಲೆ