ಎಷ್ಟಿರಬಹುದು Hyundai Alcazar ಫೇಸ್‌ಲಿಫ್ಟ್ ಮೈಲೇಜ್? ಇಲ್ಲಿದೆ ಕ್ಲೇಮ್ ಮಾಡಿರುವ ಇಂಧನ ದಕ್ಷತೆ
ಮಾನ್ಯುಯಲ್ ಗೇರ್‌ಬಾಕ್ಸ್ ಹೊಂದಿರುವ ಡೀಸೆಲ್ ಎಂಜಿನ್ ಹೆಚ್ಚು ಮೈಲೇಜ್ ಅನ್ನು ನೀಡುತ್ತಿದೆ
-
ಹ್ಯುಂಡೈ ಅಲ್ಕಾಜರ್ 2021 ರಲ್ಲಿ ಪ್ರಾರಂಭವಾದಾಗಿನಿಂದ ಅದರ ಮೊದಲ ದೊಡ್ಡ ಅಪ್ಡೇಟ್ ಅನ್ನು ಪಡೆದುಕೊಂಡಿದೆ.
-
ಟರ್ಬೊ-ಪೆಟ್ರೋಲ್ ವೇರಿಯಂಟ್ ಬೆಲೆ ರೂ 14.99 ಲಕ್ಷದಿಂದ ಪ್ರಾರಂಭವಾಗುತ್ತವೆ; ಡೀಸೆಲ್ ವೇರಿಯಂಟ್ ಬೆಲೆ ರೂ 15.99 ಲಕ್ಷದಿಂದ ಪ್ರಾರಂಭವಾಗುತ್ತವೆ (ಪರಿಚಯಾತ್ಮಕ ಎಕ್ಸ್-ಶೋ ರೂಂ, ಪ್ಯಾನ್-ಇಂಡಿಯಾ)
-
ಇದು ಈ ಮುಂಚೆ ಇದ್ದ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ: 1.5-ಲೀಟರ್ ಟರ್ಬೊ-ಪೆಟ್ರೋಲ್ (160 PS, 253 Nm) ಮತ್ತು 1.5-ಲೀಟರ್ ಡೀಸೆಲ್ (116 PS, 250 Nm).
-
6-ಸ್ಪೀಡ್ ಮಾನ್ಯುಯಲ್ ಇರುವ ಟರ್ಬೊ-ಪೆಟ್ರೋಲ್ ಅತ್ಯಂತ ಕಡಿಮೆ ಮೈಲೇಜ್ ಅನ್ನು ನೀಡುತ್ತದೆ.
-
ಎರಡೂ ಎಂಜಿನ್‌ಗಳ ಆಟೋಮ್ಯಾಟಿಕ್ ವೇರಿಯಂಟ್ ಗಳು ಒಂದೇ ರೀತಿಯ ಮೈಲೇಜ್ ಅನ್ನು ಹೊಂದಿವೆ.
ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಟರ್ಬೊ-ಪೆಟ್ರೋಲ್ ವೇರಿಯಂಟ್ ಗಳ ಬೆಲೆಯು ರೂ. 14.99 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ಡೀಸೆಲ್ ವೇರಿಯಂಟ್ ಗಳು ರೂ. 15.99 ಲಕ್ಷದಿಂದ ಪ್ರಾರಂಭವಾಗುತ್ತವೆ (ಪರಿಚಯಾತ್ಮಕ ಎಕ್ಸ್-ಶೋ ರೂಂ, ಪ್ಯಾನ್-ಇಂಡಿಯಾ). ಈ ಹೊಸ ಅಲ್ಕಾಜರ್ ಪ್ರಿ-ಫೇಸ್‌ಲಿಫ್ಟ್ ಮಾಡೆಲ್ ನಲ್ಲಿರುವ ಅದೇ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಈ ಲಾಂಚ್ ನೊಂದಿಗೆ, ಭಾರತೀಯ ಕಾರು ತಯಾರಕರು ಈಗ ಅದರ ಎಲ್ಲಾ ಎಂಜಿನ್ ಆಯ್ಕೆಗಳಿಗೆ ಮೈಲೇಜ್ ವಿವರಗಳನ್ನು ಹಂಚಿಕೊಂಡಿದ್ದಾರೆ. ಬನ್ನಿ, ಈ ಮೈಲೇಜ್ ಅಂಕಿಅಂಶಗಳನ್ನು ನೋಡೋಣ:
ಪವರ್‌ಟ್ರೇನ್ ಮತ್ತು ಮೈಲೇಜ್ ವಿವರಗಳು
ಇಂಜಿನ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
160 PS |
116 PS |
ಟಾರ್ಕ್ |
253 Nm |
250 Nm |
ಟ್ರಾನ್ಸ್‌ಮಿಷನ್* |
6-ಸ್ಪೀಡ್ MT, 7-ಸ್ಪೀಡ್ DCT |
6- ಸ್ಪೀಡ್ MT, 6- ಸ್ಪೀಡ್ AT |
ಮೈಲೇಜ್ |
17.5 kmpl, 18 kmpl |
20.4 kmpl, 18.1 kmpl |
*DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್;
AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಲಭ್ಯವಿರುವ ಎಂಜಿನ್ ಆಯ್ಕೆಗಳಲ್ಲಿ, ಡೀಸೆಲ್-ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಪ್ರತಿ ಲೀಟರ್ ಗೆ 20 ಕಿ.ಮೀ. ನೀಡುವ ಮೂಲಕ ಅತ್ಯಂತ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ. 6-ಸ್ಪೀಡ್ ಮ್ಯಾನ್ಯುವಲ್ ಹೊಂದಿರುವ ಟರ್ಬೊ-ಪೆಟ್ರೋಲ್ 17.5 kmpl ನಷ್ಟು ಮೈಲೇಜ್ ನೀಡುವ ಮೂಲಕ ಅತ್ಯಂತ ಕಡಿಮೆ ಮೈಲೇಜ್ ಅನ್ನು ನೀಡುತ್ತದೆ. ಟರ್ಬೊ-ಪೆಟ್ರೋಲ್ DCT ಮತ್ತು ಡೀಸೆಲ್-ಆಟೋಮ್ಯಾಟಿಕ್ ಎರಡೂ ವೇರಿಯಂಟ್ ಗಳು ಒಂದೇ ರೀತಿಯ ಮೈಲೇಜ್ ಅನ್ನು ಹೊಂದಿವೆ.
ಈ ಮೈಲೇಜ್ ಸಂಖ್ಯೆಗಳು ARAI (ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ) ನಿಂದ ಬಂದಿವೆ ಎಂಬುದನ್ನು ನೆನಪಿನಲ್ಲಿಡಿ ಮತ್ತು ಡ್ರೈವಿಂಗ್ ಪರಿಸ್ಥಿತಿಗಳು ಮತ್ತು ನೀವು ಹೇಗೆ ಡ್ರೈವ್ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ನಿಜವಾದ ಮೈಲೇಜ್ ಬದಲಾಗಬಹುದು.
ಇದನ್ನು ಕೂಡ ಓದಿ: ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ವೇರಿಯಂಟ್-ವಾರು ಪವರ್‌ಟ್ರೇನ್ ಆಯ್ಕೆಗಳ ವಿವರ ಇಲ್ಲಿದೆ
2024 ಹ್ಯುಂಡೈ ಅಲ್ಕಾಜರ್: ಒಂದು ಸಣ್ಣ ಪರಿಚಯ
ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಬೆಲೆಯು ಈಗ ರೂ 14.99 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತಿದೆ ಮತ್ತು ಇದು ಹೊಸ ಹುಂಡೈ ಕ್ರೆಟಾದಂತೆಯೇ ಡಿಸೈನ್ ಅನ್ನು ಹೊಂದಿದೆ. ಮುಂಭಾಗವು H- ಆಕಾರದ ಡಿಸೈನ್ ನೊಂದಿಗೆ ಕನೆಕ್ಟೆಡ್ LED DRL ಗಳನ್ನು ಹೊಂದಿದೆ ಮತ್ತು ಕ್ರೆಟಾದಲ್ಲಿರುವ ಗ್ರಿಲ್ ಅನ್ನು ನೀಡಲಾಗಿದೆ. ಹಿಂಭಾಗವು ಕನೆಕ್ಟೆಡ್ LED ಟೈಲ್ ಲ್ಯಾಂಪ್ ಗಳು ಮತ್ತು ಡ್ಯುಯಲ್-ಟಿಪ್ ಎಕ್ಸಾಸ್ಟ್ ಅನ್ನು ಒಳಗೊಂಡಿದೆ.
ಒಳಭಾಗದಲ್ಲಿ, ಅಲ್ಕಾಜರ್ ಫೇಸ್‌ಲಿಫ್ಟ್ ಕ್ರೇಟಾದಲ್ಲಿರುವ ಡ್ಯಾಶ್‌ಬೋರ್ಡ್ ಡಿಸೈನ್ ಅನ್ನು ಪಡೆದಿದೆ. ಇದು ಹೊಸ ನೇವಿ ಬ್ಲೂ ಮತ್ತು ಬ್ರೌನ್ ಇಂಟೀರಿಯರ್ ಥೀಮ್‌ನೊಂದಿಗೆ ಬರುತ್ತದೆ ಮತ್ತು 6 ಅಥವಾ 7 ಸೀಟ್ ಗಳ ಆಯ್ಕೆಗಳನ್ನು ನೀಡುತ್ತದೆ. ಇದು ಇನ್ಫೋಟೈನ್‌ಮೆಂಟ್‌ಗಾಗಿ ಡ್ಯುಯಲ್ 10.25-ಇಂಚಿನ ಸ್ಕ್ರೀನ್ ಗಳು ಮತ್ತು ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಡ್ಯುಯಲ್-ಝೋನ್ AC ಮತ್ತು 2-ಲೆವೆಲ್ ಮೆಮೊರಿ ಸೆಟ್ಟಿಂಗ್‌ಗಳೊಂದಿಗೆ 8-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳನ್ನು (ಡ್ರೈವರ್ ಗೆ ಮಾತ್ರ) ಹೊಂದಿದೆ. ಇದು ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನರೋಮಿಕ್ ಸನ್‌ರೂಫ್ ಮತ್ತು ಎರಡನೇ ಸಾಲಿನಲ್ಲಿ ಕುಳಿತವರಿಗೆ ಕಪ್ ಹೋಲ್ಡರ್‌ನೊಂದಿಗೆ ಫೋಲ್ಡ್ ಮಾಡಬಹುದಾದ ಲ್ಯಾಪ್‌ಟಾಪ್ ಟ್ರೇ ಅನ್ನು ಕೂಡ ಒಳಗೊಂಡಿದೆ.
ಸುರಕ್ಷತೆಯ ವಿಷಯದಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಫೀಚರ್ ಗಳು ಸೇರಿವೆ. ಈ SUV ಯು ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್) ನೊಂದಿಗೆ ಬರುತ್ತದೆ.
ಇದನ್ನು ಕೂಡ ಓದಿ: 2024 ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ vs ಹ್ಯುಂಡೈ ಕ್ರೆಟಾ: ಫೋಟೋಗಳ ಮೂಲಕ ಡಿಸೈನ್ ಹೋಲಿಕೆ ಇಲ್ಲಿದೆ
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟರ್ಬೊ-ಪೆಟ್ರೋಲ್ ವೇರಿಯಂಟ್ ಗಳ ಬೆಲೆಗಳು ರೂ 14.99 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ಡೀಸೆಲ್ ವೇರಿಯಂಟ್ ಗಳ ಬೆಲೆಯು ರೂ 15.99 ಲಕ್ಷದಿಂದ ಪ್ರಾರಂಭವಾಗುತ್ತವೆ (ಪರಿಚಯಾತ್ಮಕ ಎಕ್ಸ್-ಶೋ ರೂಂ, ಪ್ಯಾನ್-ಇಂಡಿಯಾ). ಪ್ರತಿ ವೇರಿಯಂಟ್ ಬೆಲೆಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುವ ನಿರೀಕ್ಷೆಯಿದೆ.
ಹುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ MG ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಮಹೀಂದ್ರಾ XUV700 ನ 6/7-ಸೀಟರ್ ವೇರಿಯಂಟ್ ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದರ ಜೊತೆಗೆ, ಇದನ್ನು ಕಿಯಾ ಕ್ಯಾರೆನ್ಸ್ ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾದಂತಹ MPV ಗಳಿಗೆ ಕೂಡ ಪ್ರತಿಸ್ಪರ್ಧಿ ಎಂದು ಪರಿಗಣಿಸಬಹುದು.
2024 ಹ್ಯುಂಡೈ ಅಲ್ಕಾಜರ್‌ನ ಮೈಲೇಜ್ ಬಗ್ಗೆ ನಿಮ್ಮ ಅನಿಸಿಕೆ ಏನು? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ಅಲ್ಕಾಜರ್ ಆನ್ ರೋಡ್ ಬೆಲೆ