ಕಿಯಾ ಸೆಲ್ಟೋಸ್ ಬಳಿಕ ಈಗ ಆರು ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ಹೊಂದಿರುವ ಎರಡನೇ ಕಾಂಪಾಕ್ಟ್ ಎಸ್‌ಯುವಿ ಹ್ಯುಂಡೈ ಕ್ರೆಟಾ
ಹುಂಡೈ ಕ್ರೆಟಾ 2020-2024 ಗಾಗಿ tarun ಮೂಲಕ ಫೆಬ್ರವಾರಿ 03, 2023 02:23 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಈ ಜನಪ್ರಿಯ ಕಾಂಪಾಕ್ಟ್ ಎಸ್‌ಯುವಿ ಅನೇಕ ಸುರಕ್ಷತಾ ಫೀಚರ್‌ಗಳನ್ನು ಸ್ಟಾಂಡರ್ಡ್ ಆಗಿ ಹೊಂದಿದೆ
ಕ್ರೆಟಾ, ಅಲ್ಕಾಝರ್ ಮತ್ತು ವೆನ್ಯೂ ಅನ್ನು ಮುಂಬರುವ ಎಮಿಷನ್ ನಿಯಮಗಳಿಗೆ ಅನುಗುಣವಾಗಿ ಸುರಕ್ಷಿತ ಮತ್ತು ಅನುಸರಣೆ ಮಾಡುವ ಮೂಲಕ ಹ್ಯುಂಡೈ ತನ್ನ SUV ಶ್ರೇಣಿಯನ್ನು 2023 ಕ್ಕೆ ನವೀಕರಿಸಿದೆ. ಈ ಅಪ್‌ಡೇಟ್‌ಗಳು ಪ್ರೀಮಿಯಂನಲ್ಲಿ ಬರುತ್ತದೆ ಆದರೆ ನಾವು ಈಗಾಗಲೇ ವೆನ್ಯೂ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಂಡಿದ್ದೇವೆ, ಈಗ ನಾವು ಕ್ರೆಟಾ ಮತ್ತು ಅಲ್ಕಝಾರ್‌ನ ಬದಲಾವಣೆಗಳನ್ನು ದೃಢೀಕರಿಸಿದ್ದೇವೆ:
ಹ್ಯುಂಡೈ ಕ್ರೆಟಾ
ಕ್ರೆಟಾ ಈಗ ಆರು ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್, ಹಿಲ್ ಹೋಲ್ಡ್ ಅಸಿಸ್ಟ್, ರಿಯರ್ ಡಿಸ್ಕ್ ಬ್ರೇಕ್‌ಗಳು, ಸೀಟ್‌ಬೆಲ್ಟ್ ಹೈಟ್ ಅಡ್ಜಸ್ಟ್‌ಮೆಂಟ್ ಮತ್ತು ISOFIX ಆ್ಯಂಕೋರೇಜಸ್ ಅನ್ನು ಎಲ್ಲಾ ವೇರಿಯೆಂಟ್‌ಗಳಲ್ಲಿ ಸ್ಟಾಂಡರ್ಡ್ ಆಗಿ ಪಡೆದಿದೆ. ರಿಯರ್ ಪಾರ್ಕಿಂಗ್, ಇಲೆಕ್ಟ್ರೋಕ್ರೋಮಿಕ್ IRVM, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳಂತಹ ಫೀಚರ್‌ಗಳು ಹೈಯರ್ ವೇರಿಯಂಟ್‌ಗಳಲ್ಲಿ ಲಭ್ಯವಿದೆ.
ಹ್ಯುಂಡೈ ಕ್ರೆಟಾವನ್ನು ಐಡ್ಲ್-ಎಂಜಿನ್ ಸ್ಟಾಪ್ ಆ್ಯಂಡ್ ಗೋ ಫೀಚರ್‌ನಿಂದಲೂ ನವೀಕರಣಗೊಳಿಸಿದೆ. ಅದು ಈಗ BS6 ಫೇಸ್ 2-ಕಂಪ್ಲಾಯೆಂಟ್ ಮತ್ತು E20 (20 ಪ್ರತಿಶತ ಎಥನಾಲ್ ಮಿಶ್ರಣ) ರೆಡಿ ಎಂಜಿನ್‌ಗಳನ್ನು ಹೊಂದಿದೆ. ಕಾಂಪ್ಯಾಕ್ಟ್ SUV 115PS 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು ಮತ್ತು 140PS 1.4-ಲೀಟರ್ ಟರ್ಬೋ-ಪೆಟ್ರೋಲ್, ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ ಪಡೆದಿದೆ.
ನವೀಕೃತ ಕ್ರೆಟಾದ ಹೊಸ ಬೆಲೆಗಳು ರೂ 10.84 ಲಕ್ಷದಿಂದ ರೂ 19.13 ಲಕ್ಷ (ಎಕ್ಸ್-ಶೋರೂಂ ದೆಹಲಿ) ತನಕ ಇದೆ.
ಇದನ್ನೂ ಓದಿ: ಈ 20 ಚಿತ್ರಗಳಲ್ಲಿ ಪರಿಶೀಲಿಸಿ ನ್ಯೂ ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್
ಹ್ಯುಂಡೈ ಅಲ್ಕಾಝಾರ್
ಈ ಅಲ್ಕಾಝಾರ್ ESC ಯೊಂದಿಗೆ ಆರು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರಿಯರ್ ಡಿಸ್ಕ್ ಬ್ರೇಕ್‌ಗಳು, ಎಲ್ಇಡಿ ಫಾಗ್ ಲ್ಯಾಂಪ್‌ಗಳು ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನು ತನ್ನ ನವೀಕೃತ ಪಟ್ಟಿಯ ಸ್ಟಾಂಡರ್ಡ್ ಉಪಕರಣವಾಗಿ ಹೊಂದಿದೆ. ಹೈಯರ್ ವೇರಿಯೆಂಟ್‌ಗಳು ಫ್ರಂಟ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಬೈಂಡ್ ವೀವ್ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮರಾವನ್ನು ಪಡೆದುಕೊಂಡಿದೆ.
ಅಲ್ಕಾಝಾರ್‌ಗೆ ಶಕ್ತಿ ನೀಡುವುದು 150PS 2-ಲೀಟರ್ ಪೆಟ್ರೋಲ್ ಮತ್ತು 115PS 1.5-ಲೀಟರ್ ಡೀಸೆಲ್ ಎಂಜಿನ್‌ಗಳು, ಇದರೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ಗಳು ಹಾಗೂ ಅಲ್ಲದೇ ಎಮಿಶನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಣಗಳನ್ನು ಒಳಗೊಂಡಿದೆ. ಈ ಮೂರು -ರೋ SUV ಬೆಲೆ ರೂ 16.10 ಲಕ್ಷದಿಂದ ರೂ 21.10 ಲಕ್ಷ (ಎಕ್ಸ್-ಶೋರೂಂ ದೆಹಲಿ) ತನಕ ಇದೆ. ಇದು ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಮತ್ತು ಮಹೀಂದ್ರಾ XUV700 ಗಳಿಗೆ ಪ್ರತಿಸ್ಪರ್ಧಿಯಾಗಿ ಮುಂದುವರೆದಿದೆ.
ಅಲ್ಲದೇ ಗ್ರ್ಯಾಂಡ್ i10 ನಿಯೋಸ್ ಮತ್ತು ಔರಾದ ಇತ್ತೀಚೆಗೆ ಪರಿಚಯಿಸಲಾದ ನವೀಕರಣಗಳು ಕೂಡಾ ಹೆಚ್ಚಿನ ಸೇಫ್ಟಿ ಕಿಟ್ ಅನ್ನು ಸ್ಟಾಂಡರ್ಡ್ ಆಗಿ ಪಡೆದುಕೊಂಡಿವೆ. MY2023 ಅಪ್‌ಡೇಟ್‌ಗಾಗಿ ಬಾಕಿ ಉಳಿದಿರುವ ಏಕೈಕ ಹ್ಯುಂಡೈ ಮಾಡೆಲ್‌ಗಳು, i20 ಮತ್ತು ವೆರ್ನಾ, ಆದ್ದರಿಂದ ಅವುಗಳನ್ನು ತಿಳಿಯಲು ಭೇಟಿ ನೀಡುತ್ತಿರಿ.
ಈ ಕುರಿತು ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾದ ಆನ್ ರೋಡ್ ಬೆಲೆ