• English
  • Login / Register

2023 ಹ್ಯುಂಡೈ ವೆನ್ಯು ಪಡೆಯುತ್ತಿದೆ ಕ್ರೆಟಾದ ಡೀಸೆಲ್ ಎಂಜಿನ್ ಟ್ಯೂನ್ ಮತ್ತು ರೂ 25,000 ತನಕದ ಬೆಲೆ ಹೆಚ್ಚಳ

ಹುಂಡೈ ವೆನ್ಯೂ ಗಾಗಿ ansh ಮೂಲಕ ಫೆಬ್ರವಾರಿ 02, 2023 12:41 pm ರಂದು ಪ್ರಕಟಿಸಲಾಗಿದೆ

  • 42 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ವೆನ್ಯೂ ಅಪ್‌ಗ್ರೇಡ್ ಮಾಡಲಾದ ಡೀಸೆಲ್ ಯೂನಿಟ್‌ನೊಂದಿಗೆ ಪಡೆಯುತ್ತಿದೆ ಸಣ್ಣ ಫೀಚರ್ ಪುನರ್‌ವ್ಯವಸ್ಥೆ

Hyundai Venue

  • ಡೀಸೆಲ್ ಯೂನಿಟ್ ಈಗ 116PS ಹಾಗೂ 250Nm ಅನ್ನು ಹೊರತರುತ್ತಿದೆ.

  • ಸೈಡ್ ಏರ್‌ಬ್ಯಾಗ್‌ಗಳು ಈಗ ಮಿಡ್-ಸ್ಪೆಕ್ S (O) ಟ್ರಿಮ್‌ನಿಂದ ಲಭ್ಯವಿದೆ.

  • ಡೀಸೆಲ್ SX ವೇರಿಯೆಂಟ್ ರಿಕ್ಲೈನಿಂಗ್ ಒರಗುವ ಸೀಟ್‌ಗಳನ್ನು ಹೊಂದಿರುವುದಿಲ್ಲ.

  • ಹೊಸ ಬೆಲೆಗಳು ರೂ 7.68 ಲಕ್ಷದಿಂದ ರೂ 13.11 ಲಕ್ಷ (ಎಕ್ಸ್-ಶೋರೂಂ) ತನಕ 

ಸಬ್-ಫೋರ್-ಮೀಟರ್ SUV ವಿಭಾಗದಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ವೆನ್ಯೂ, ಕಳೆದ ವರ್ಷ ಜೂನ್‌ನಲ್ಲಿ ನವೀಕರಣಗೊಂಡಿದ್ದು, ಹ್ಯುಂಡೈ  SUV ಗೆ ಕೆಲವು MY23 ಎಂಜಿನ್ ಅಪ್‌ಗ್ರೇಡ್ ಸೇರಿದಂತೆ ಬೆಲೆ ಹೆಚ್ಚಳದೊಂದಿಗೆ ಸಣ್ಣ ಫೀಚರ್ ಪುನರ್‌ವ್ಯವಸ್ಥೆಯನ್ನು ಮಾಡಿದೆ. ಈ ನವೀಕೃತ ವೆನ್ಯೂ ನಮಗೆ ಏನು ನೀಡುತ್ತದೆ ಎಂಬುದನ್ನು ನೋಡೋಣ

ನವೀಕೃತ ಎಂಜಿನ್

Hyundai Venue Rear

ಈ ವೆನ್ಯೂನ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಕ್ರೆಟಾದಲ್ಲಿರುವ ಎಂಜಿನ್‌ನಂತೆ ಕಾರ್ಯಕ್ಷಮತೆಯನ್ನು ನೀಡಲು ನವೀಕರಿಸಲಾಗಿದೆ. ಆದರೆ ಕ್ರೆಟಾ ತನ್ನ ಡೀಸೆಲ್ ಯೂನಿಟ್‌ಗಳೊಂದಿಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪಡೆಯುತ್ತದೆ ಮತ್ತು ವ್ಯೆನ್ಯೂ ಕೇವಲ ಸಿಕ್ಸ್-ಸ್ಪೀಡ್ ಮ್ಯಾನುವಲ್‌ನೊಂದಿಗೆ ಮಾತ್ರ ಬರುತ್ತದೆ.

ಹ್ಯುಂಡೈ ವೆನ್ಯೂ

ಹಳೆಯ ನಿರ್ದಿಷ್ಟತೆಗಳು

ಹೊಸ ನಿರ್ದಿಷ್ಟತೆಗಳು

ಎಂಜಿನ್

1.5-ಲೀಟರ್ ಡೀಸೆಲ್ ಎಂಜಿನ್

1.5- ಲೀಟರ್ ಡೀಸೆಲ್ ಎಂಜಿನ್

ಟ್ರಾನ್ಸ್‌ಮಿಷನ್

6-ಸ್ಪೀಡ್ MT

6-speed MT

ಪವರ್

100PS

116PS

ಟಾರ್ಕ್

240Nm

250Nm

ಈ ಡೀಸೆಲ್‌ ಎಂಜಿನ್‌ನ ಔಟ್‌ಪುಟ್ ಈಗ 16PS ಮತ್ತು 10Nm ನಷ್ಟು ಹೆಚ್ಚಾಗಿದೆ. ಈ ವೆನ್ಯೂ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: ಒಂದು ಫೈವ್ ಸ್ಪೀಡ್ ಮ್ಯಾನುವಲ್‌ ಜೊತೆಗೆ 83PS ಮತ್ತು 114Nm ಔಟ್‌ಪುಟ್ ಹೊಂದಿರುವ  1.2-ಲೀಟರ್ ಯೂನಿಟ್ ಮತ್ತು ಇನ್ನೊಂದು 1.0-ಲೀಟರ್ ಟರ್ಬೋ  120PS ಮತ್ತು 172Nm ಅನ್ನು ಸಿಕ್ಸ್-ಸ್ಪೀಡ್ iMT ಅಥವಾ ಸೆವೆನ್ –ಸ್ಪೀಡ್ DCT ಜೊತೆಗೆ ಸಂಯೋಜಿಸಲಾಗಿದೆ.

ಫೀಚರ್ ಬದಲಾವಣೆಗಳು

Hyundai Venue Cabin

ಒಂದು ಪ್ರಮುಖ ಬದಲಾವಣೆಯೆಂದರೆ, ಮೊದಲು ಕೇವಲ ಟಾಪ್-ಸ್ಪೆಕ್ SX (O)  ಟ್ರಿಮ್ ಅನ್ನು ಮಾತ್ರ ನೀಡುತ್ತಿದ್ದ ಹ್ಯುಂಡೈ ಈಗ ಮಿಡ್-ಸ್ಪೆಕ್ S (O) ಟ್ರಿಮ್‌ನಿಂದ ಸೈಡ್ ಏರ್‌ಬ್ಯಾಗ್‌ಗಳನ್ನು ನೀಡುತ್ತಿದೆ.  ಸೈಡ್‌ ಏರ್‌ಬ್ಯಾಗ್‌ಗಳು ಈಗ ವೆನ್ಯೂ ಎನ್ ಲೈನ್‌ನ N6 ವೇರಿಯೆಂಟ್‌ನಲ್ಲೂ ಲಭ್ಯವಿದೆ

ಇದನ್ನೂ ಓದಿ: ಹ್ಯುಂಡೈ i20 ಕಳೆದುಕೊಳ್ಳುತ್ತಿದೆ iMT ಆಯ್ಕೆ ಹಾಗೂ ಟರ್ಬೋ ವೇರಿಯೆಂಟ್‌ಗಳನ್ನು ಬೆಲೆಬಾಳುವಂತೆ ಮಾಡುತ್ತಿದೆ

ಅಲ್ಲದೇ, ಡೀಸೆಲ್ ಎಂಜಿನ್‌ನ SX  ವೆರಿಯೆಂಟ್‌ನಲ್ಲಿನ ರಿಯರ್ ಸೀಟ್ ರಿಕೈನರ್ ಮತ್ತು ಆರ್ಮ್‌ರೆಸ್ಟ್ ಹಾಗೂ ಕಪ್‌ ಹೋಲ್ಡರ್ ಅನ್ನು ಈಗ ಟಾಪ್-ಸ್ಪೆಕ್ ಡೀಸೆಲ್ SX (O)ಗೆ ಮಾತ್ರ ಮೀಸಲಿಡಲಾಗಿದೆ. ಇವುಗಳಲ್ಲದೆ, ವೆನ್ಯೂ ಫೀಚರ್ ಲಿಸ್ಟ್‌ನಲ್ಲಿ ಬೇರೆ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ.

ಹೊಸ ಬೆಲೆಗಳು

Hyundai Venue

ಈ ವೆನ್ಯೂ ಈ ವರ್ಷದ ಮೊದಲ ಬೆಲೆ ಹೆಚ್ಚಳವನ್ನು ಪಡೆದಿದೆ. ಇದು ಈಗ ರೂ 7.68 ಲಕ್ಷದಿಂದ ಪ್ರಾರಂಭವಾಗಿ ರೂ 13.11 ಲಕ್ಷ (ಎಕ್ಸ್-ಶೋರೂಂ) ತನಕ ಹೋಗುತ್ತದೆ. ಈ ವೇರಿಯೆಂಟ್-ವಾರು ಬೆಲೆಗಳನ್ನು ಕೆಳಗೆ ನೀಡಲಾಗಿದೆ:

ವೇರಿಯೆಂಟ್

ಹಳೆಯ ಬೆಲೆ

ಹೊಸ ಬೆಲೆ

ವ್ಯಾತ್ಯಾಸ

E

ರೂ 7.62 ಲಕ್ಷ

ರೂ 7.68 ಲಕ್ಷ

ರೂ 6,000

S

ರೂ 8.79 ಲಕ್ಷ

ರೂ 8.90 ಲಕ್ಷ

ರೂ 11,000

S (O)

ರೂ 9.58 ಲಕ್ಷ

ರೂ 9.73 ಲಕ್ಷ

ರೂ 14,000

S (O) ಟರ್ಬೋ iMT

ರೂ 10.15 ಲಕ್ಷ

ರೂ 10.40 ಲಕ್ಷ

ರೂ 25,000

S+ ಡೀಸೆಲ್

ರೂ 10.15 ಲಕ್ಷ

ರೂ 10.15 ಲಕ್ಷ

ಯಾವುದೇ ಬದಲಾವಣೆ ಇಲ್ಲ

SX

ರೂ 10.77 ಲಕ್ಷ

ರೂ 10.89 ಲಕ್ಷ

ರೂ 12,000

SX DT

ರೂ 10.92 ಲಕ್ಷ

ರೂ 11.04 ಲಕ್ಷ

ರೂ 12,000

S (O) ಟರ್ಬೋ DCT

ರೂ 11.11 ಲಕ್ಷ

ರೂ 11.36 ಲಕ್ಷ

ರೂ 25,000

SX ಡೀಸೆಲ್

ರೂ 11.62 ಲಕ್ಷ

ರೂ 11.62 ಲಕ್ಷ

ಯಾವುದೇ ಬದಲಾವಣೆ ಇಲ್ಲ

SX ಡೀಸೆಲ್ DT

ರೂ 11.77 ಲಕ್ಷ

ರೂ 11.77 ಲಕ್ಷ

ಯಾವುದೇ ಬದಲಾವಣೆ ಇಲ್ಲ

SX (O) ಟರ್ಬೋ iMT

ರೂ 12.06 ಲಕ್ಷ

ರೂ 12.31 ಲಕ್ಷ

ರೂ 25,000

SX (O) ಟರ್ಬೋ iMT DT

ರೂ 12.21 ಲಕ್ಷ

ರೂ 12.46 ಲಕ್ಷ

ರೂ 25,000

SX (O) ಡೀಸೆಲ್

ರೂ 12.51 ಲಕ್ಷ

ರೂ 12.51 ಲಕ್ಷ

ಯಾವುದೇ ಬದಲಾವಣೆ ಇಲ್ಲ

SX (O) ಡೀಸೆಲ್ DT

ರೂ 12.66 ಲಕ್ಷ

ರೂ 12.66 ಲಕ್ಷ

ಯಾವುದೇ ಬದಲಾವಣೆ ಇಲ್ಲ

SX (O) ಟರ್ಬೋ DCT

ರೂ 12.71 ಲಕ್ಷ

ರೂ 12.96 ಲಕ್ಷ

ರೂ 25,000

SX (O) ಟರ್ಬೋ DCT DT

ರೂ 12.86 ಲಕ್ಷ

ರೂ 13.11 ಲಕ್ಷ

ರೂ 25,000

1.2-ಲೀಟರ್ ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಗಳನ್ನು ರೂ 14,300 ತನಕ ಹೆಚ್ಚಿಸಲಾಗಿದ್ದು, 1.0-ಲೀಟರ್ ಟರ್ಬೋ –ಪೆಟ್ರೋಲ್ ವೇರಿಯೆಂಟ್‌ಗಳು ರೂ 25,000 ದಷ್ಟು ಏಕರೂಪದ ಬೆಲೆ ಹೆಚ್ಚಳವನ್ನು ಕಂಡಿವೆ ಮತ್ತು ಡೀಸೆಲ್ ವೇರಿಯೆಂಟ್‌ಗಳಲ್ಲಿ ಯಾವುದೇ ಬೆಲೆ ಹೆಚ್ಚಳಗಳಿರುವುದಿಲ್ಲ.

ಪ್ರತಿಸ್ಪರ್ಧಿಗಳು

Hyundai Venue

ನವೀಕೃತ ವೆನ್ಯೂ ಇತರ ಸಬ್-ಫೋರ್-ಮೀಟರ್ ಎಸ್‌ಯುವಿಗಳಾದ ಕಿಯಾ ಸೋನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ XUV300ಮಾರುತಿ ಬ್ರೆಝಾ, ರೆನಾಲ್ಟ್ ಕಿಗರ್ ಮತ್ತು ನಿಸಾನ್ ಮ್ಯಾಗ್ನೈಟ್‌ಗಳಿಗೆ ಇನ್ನೂ ಪ್ರತಿಸ್ಪರ್ಧಿಯಾಗಿಯೇ ಮುಂದುವರಿದಿದೆ.

ಇನ್ನಷ್ಟು ಓದಿ: ವೆನ್ಯೂ ಆನ್‌ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ವೆನ್ಯೂ

1 ಕಾಮೆಂಟ್
1
A
avinash goyal
Mar 2, 2023, 12:04:37 AM

Wait approx ?JAB TAK AAP CAR DELIVER NAA KAR DETE HO??

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience