• English
  • Login / Register

ಇಲ್ಲಿದೆ ಆರು ಏರ್‌ಬ್ಯಾಗ್‌ಗಳು ಮತ್ತು ಹೊಸ ನೋಟವನ್ನೊಳಗೊಂಡ ನವೀಕೃತ ಗ್ರ್ಯಾಂಡ್ i10 ನಿಯೋಸ್

ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗಾಗಿ tarun ಮೂಲಕ ಜನವರಿ 23, 2023 12:29 pm ರಂದು ಮಾರ್ಪಡಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಈಗ ಅಪ್‌ಡೇಟ್‌ ಆದ ಗ್ರ್ಯಾಂಡ್ i10 ನಿಯೋಸ್ ತನ್ನ ಪ್ರಮುಖ ಪ್ರತಿಸ್ಪರ್ಧಿ ಮಾರುತಿ ಸ್ವಿಫ್ಟ್‌ಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ

2023 Hyundai Grand i10 Nios

  • ಅಪ್‌ಡೇಟ್ ಆದ ಗ್ರ್ಯಾಂಡ್ i10 ನಿಯೋಸ್‌ನ ಬೆಲೆ ರೂ. 5.69 ಲಕ್ಷಗಳಿಂದ.

  • ಹೊಸ 15-ಇಂಚಿನ ಅಲಾಯ್ ವ್ಹೀಲ್‌ಗಳು ಮತ್ತು ಸಂಪರ್ಕಿತ ಎಲ್‌ಇಡಿ ಟೈಲ್‌ ಲ್ಯಾಂಪ್‌ಗಳನ್ನೊಳಗೊಂಡಂತೆ ಮರುವಿನ್ಯಾಸಗೊಳಿಸಿದ ಮುಂಭಾಗವನ್ನು ಪಡೆಯಿರಿ.

  • ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್, ಸೂಕ್ಷ್ಮವಾಗಿ ಹೊಂದಿಸಲಾದ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜರ್ ಇವು ಹೊಸದಾಗಿ ಸೇರ್ಪಡೆಯಾದ ವೈಶಿಷ್ಟ್ಯಗಳು.

  • ಈಗ ಇದು ಆರು ಏರ್‌ಬ್ಯಾಗ್‌ಗಳು, ಇಎಸ್‌ಸಿ, ವಾಹನ ಸ್ಥಿರತೆ ನಿರ್ವಹಣೆ ಮತ್ತು ಟೈರ್ ಒತ್ತಡ ಮಾನಿಟರಿಂಗ್‌ನೊಂದಿಗೆ ಹೆಚ್ಚು ಸುರಕ್ಷಿತವಾಗಿದೆ.

  • ಮೊದಲಿನಂತೆಯೇ 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯನ್ನು ಹೊಂದಿದೆ. 

ಹ್ಯುಂಡೈ ನವೀಕೃತ  ಗ್ರ್ಯಾಂಡ್ i10 ನಿಯೋಸ್ ಬೆಲೆಯನ್ನು ಬಹಿರಂಗಪಡಿಸಿದ್ದು, ಇದು ರೂ. 5.69 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್-ಶೋರೂಂ ದೆಹಲಿ). ರೂ. 11,000 ಟೋಕನ್ ಮೊತ್ತಕ್ಕೆ ಬುಕಿಂಗ್ ಈಗಾಗಲೇ ನಡೆಯುತ್ತಿದೆ.

 

ಬೆಲೆ ಪರಿಶೀಲನೆ

ವೇರಿಯೆಂಟ್‌ಗಳು

ಪೆಟ್ರೋಲ್-MT

ಪೆಟ್ರೋಲ್ AMT

ಸಿಎನ್‌ಜಿ

ಎರಾ

ರೂ. 5.69 ಲಕ್ಷ

-

-

ಮ್ಯಾಗ್ನಾ

ರೂ. 6.61 ಲಕ್ಷ

ರೂ. 7.23 ಲಕ್ಷ

ರೂ 7.56 ಲಕ್ಷ

ಸ್ಪೋರ್ಟ್ಸ್

ರೂ . 7.20 ಲಕ್ಷ

ರೂ. 7.74 ಲಕ್ಷ

ರೂ 8.11 ಲಕ್ಷ

ಆ್ಯಸ್ಟಾ

ರೂ 7.93 ಲಕ್ಷ

ರೂ 8.47 ಲಕ್ಷ

-

ಗ್ರ್ಯಾಂಡ್  i10 ನಿಯೋಸ್ ತನ್ನ ನಾಲ್ಕು-ವೇರಿಯೆಂಟ್ ಶ್ರೇಣಿಯೊಂದಿಗೆ ಮುಂದುವರಿದಿದ್ದು ಪೂರ್ವ-ನವೀಕೃತ ಮಾಡೆಲ್‌ಗಿಂತ ರೂ.33,000 ನಷ್ಟು ಅಧಿಕವಾಗಿದೆ. AMT ವೇರಿಯೆಂಟ್‌ಗಳು ಮ್ಯಾನ್ಯುವಲ್ ವೇರಿಯೆಂಟ್‌ಗಳಿಗಿಂತ ರೂ. 62,000 ವರೆಗೆ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದರೆ ಸಿಎನ್‌ಜಿ ವೇರಿಯೆಂಟ್‌ಗಳು ರೂ. 95,000 ವರೆಗೆ ದುಬಾರಿಯಾಗಿದೆ.

ತಾಜಾ ಸ್ಟೈಲಿಂಗ್

2023 Hyundai Grand i10 Nios

ನವೀಕೃತ ಗ್ರ್ಯಾಂಡ್ i10 ನಿಯೋಸ್ ಗಮನಾರ್ಹವಾಗಿ ವಿಭಿನ್ನತೆಯನ್ನು ಹೊಂದಿದ್ದು, ಕನಿಷ್ಠ ಫ್ರಂಟ್ ಮತ್ತು ರಿಯರ್ ಬದಲಾದ ನೋಟವನ್ನು ಪಡೆದಿದೆ. ಮೆಶ್‌ನಂತಹ ಲೋ-ಪ್ಲೇಸ್ಡ್ ಗ್ರಿಲ್‌ಗಳು, ಸ್ಪೋರ್ಟಿಯರ್ ಫ್ರಂಟ್ ಬಂಪರ್ ಮತ್ತು ಹೊಸ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಮುಂಭಾಗದ ನೋಟವನ್ನು ಸಂಪೂರ್ಣವಾಗಿ ಮರು-ವಿನ್ಯಾಸಗೊಳಿಸಲಾಗಿದೆ.

ಹೊಸ 15-ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊರತುಪಡಿಸಿದರೆ ಸೈಡ್ ಪ್ರೊಫೈಲ್ ಮೊದಲಿನಂತೆಯೇ ಇದೆ. ಹಿಂಭಾಗದಲ್ಲಿ ಹೊಸ ನಿಯೋಸ್ ಸಂಪರ್ಕಿತ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಬೂಟ್ ಲಿಡ್‌ ಅನ್ನು ಹೊಂದಿದೆ. ಇದನ್ನು ಹೊಸ ಸ್ಪಾರ್ಕ್ ಗ್ರೀನ್ ಬಣ್ಣದಲ್ಲಿ ಸಿಂಗಲ್-ಟೋನ್ ಮತ್ತು ಡ್ಯುಯಲ್-ಟೋನ್ ಆಯ್ಕೆಗಳಲ್ಲಿ ಸಹ ಪಡೆಯಬಹುದಾಗಿದ್ದು ಈಗಾಗಲೇ ಅಸ್ತಿತ್ವದಲ್ಲಿರುವ ಬಣ್ಣಗಳೆಂದರೆ – ಪೋಲಾರ್ ಬಿಳಿ, ಟೈಟಾನ್ ಗ್ರೇ, ಅಕ್ವಾ ಟೀಲ್, ಫೇರಿ ರೆಡ್ ಮತ್ತು ಟೈಫೂನ್ ಸಿಲ್ವರ್‌ಗಳಾಗಿವೆ.

ಬದಲಾಗದೆ ಉಳಿದ ಇಂಟೀರಿಯರ್

2023 Hyundai Grand i10 Nios

ನವೀಕೃತ ಗ್ರ್ಯಾಂಡ್ i10 ನಿಯೋಸ್‌ನ ಕ್ಯಾಬಿನ್ ಲೇಔಟ್ ಬದಲಾಗದೇ ಉಳಿದಿದ್ದರೂ ಮುಂಭಾಗದ ಹೆಡ್‌ರೆಸ್ಟ್‌ಗಳಲ್ಲಿ ಲೈಟ್ ಗ್ರೇ ಬಣ್ಣದಿಂದ ‘Nios’ ಎಂದು ಬರೆದಿರುವುದನ್ನು ಕಾಣಬಹುದು. 

ಇನ್ನಷ್ಟು ವೈಶಿಷ್ಟ್ಯಗಳು

ಅಪ್‌ಡೇಟ್ ಆದ ಹ್ಯಾಚ್‌ಬ್ಯಾಕ್‌ನಿಂದ ಪ್ಯಾಕ್ ಮಾಡಲಾಗಿರುವ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್, ಸೂಕ್ಷ್ಮವಾಗಿ ಹೊಂದಿಸಲಾದ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ಯುಎಸ್‌ಬಿ ಟೈಪ್-ಸಿ ಚಾರ್ಜರ್‌ ಮತ್ತು ಬ್ಲ್ಯೂ ಫೂಟ್‌ವೆಲ್ ಆವೃತ ಲೈಟಿಂಗ್ ಇವುಗಳು ಗ್ರ್ಯಾಂಡ್ i10 ನಿಯೋಸ್ ನವೀಕೃತದ ಭಾಗವಾಗಿ ಪಡೆದ ಹೆಚ್ಚಿನ ವೈಶಿಷ್ಟ್ಯಗಳಾಗಿವೆ.

ಇದು, ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಎಸಿ, ಸ್ಟೀರಿಂಗ್-ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್-ಬಟನ್ ಇಂಜಿನ್ ಸ್ಟಾರ್ಟ್-ಸ್ಟಾಪ್‌ಗಳೊಂದಿಗೆ ಎಂಟು-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಒಳಗೊಂಡು ಈಗಾಗಲೇ ನೀಡಲಾಗಿತ್ತು.

ಈಗ ಇದು ಸುರಕ್ಷಿತ

ಸುರಕ್ಷತೆಯ ದೃಷ್ಟಿಯಿಂದ, 2023 ಗ್ರ್ಯಾಂಡ್ i10 ನಿಯೋಸ್ ನಾಲ್ಕು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಪಡೆಯುತ್ತದೆ ಆದರೆ ಟಾಪ್-ಸ್ಪೆಕ್ ವೇರಿಯೆಂಟ್‌ಗಳು ಆರು ಏರ್‌ಬ್ಯಾಗ್‌ಗಳನ್ನು ಹೊಂದಿವೆ. ಹಿಂಭಾಗದ ಪಾರ್ಕಿಂಗ್ ಕ್ಯಾಮರಾ ಜೊತೆಗೆ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್, ವಾಹನ ಸ್ಟೆಬಿಲಿಟಿ ನಿರ್ವಹಣೆ, ISOFIX ಆಂಕರೇಜ್‌ಗಳು ಮತ್ತು ಟೈರ್ ಒತ್ತಡ ಮಾನಿಟರಿಂಗ್ ಸಿಸ್ಟಮ್(TPMS) ಅನ್ನು ಹೆಚ್ಚುವರಿಯಾಗಿ ಪಡೆದಿದೆ.

2023 Hyundai Grand i10 Nios

ಬಾನೆಟ್ ಕೆಳಗೆ ಯಾವುದೇ ವ್ಯತ್ಯಾಸವಿಲ್ಲ

ಹ್ಯಾಚ್ ತನ್ನ 83PS 1.2-ಲೀಟರ್ ಪೆಟ್ರೋಲ್ ಇಂಜಿನ್‌ನೊಂದಿಗೆ ಮುಂದುವರಿದಿದ್ದು ಫೈವ್-ಸ್ಪೀಡ್ ಮ್ಯಾನ್ಯುವಲ್ ಮತ್ತು ಎಎಂಟಿ ಟ್ರಾನ್ಸ್‌ಮಿಷನ್‌ಗೆ ಜೊತೆಯಾಗಿದೆ. ನೀವು, ಪರ್ಯಾಯ ಇಂಧನದಲ್ಲಿ ಚಾಲನೆಯಲ್ಲಿರುವಾಗ 69PS ಅನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಫೈವ್-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಲಭ್ಯವಿರುವ ಸಿಎನ್‌ಜಿ ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು.

2022 ರಲ್ಲಿ, ಹ್ಯುಂಡೈ, ನಿಯೋಸ್‌ನ ಹೆಚ್ಚು ಪರಿಣಾಮಕಾರಿಯಾದ ಡಿಸೇಲ್ ವೇರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ್ದು ಮಾತ್ರವಲ್ಲದೇ 100PS 1-ಲೀಟರ್ ಟರ್ಬೋ ಪೆಟ್ರೋಲ್ ಇಂಚಿನ್ ಅನ್ನು ಸದ್ಯಕ್ಕೆ ಕೈಬಿಟ್ಟಿದೆ.

ಪ್ರತಿಸ್ಪರ್ಧಿಗಳು

ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್, ಮಾರುತಿ ಸುಝುಕಿ ಸ್ವಿಫ್ಟ್ ಮತ್ತು ಇಗ್ನಿಸ್ ನೊಂದಿಗೆ ತನ್ನ ದೀರ್ಘಾವಧಿಯ ಪೈಪೋಟಿಯನ್ನು ಮುಂದುವರಿಸಿದ್ದರೂ, ಸರಿಸುಮಾರು ಒಂದೇ ರೀತಿಯ ಬೆಲೆಯನ್ನು ಹೊಂದಿರುವ ಥ್ರೀ-ರೋ ರೆನಾಲ್ಟ್ ಟ್ರೈಬರ್  ಮತ್ತು ಕ್ರಾಸ್ಓವರ್ ವಿನ್ಯಾಸದ ಟಾಟಾ ಪಂಚ್ ಹಾಗೂ ಸಿಟ್ರೊಯೆನ್ C3 ಅನ್ನು ಸಹ ನೋಡಬಹುದು.

ಇನ್ನಷ್ಟು ತಿಳಿಯಿರಿ : ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai Grand ಐ10 Nios

Read Full News

explore ಇನ್ನಷ್ಟು on ಹುಂಡೈ ಗ್ರ್ಯಾಂಡ್ ಐ 10 ನಿಯೋಸ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • Kia Syros
    Kia Syros
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮಾರಚ್‌, 2025
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವ, 2025
  • ಎಂಜಿ 3
    ಎಂಜಿ 3
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ಲೆಕ್ಸಸ್ lbx
    ಲೆಕ್ಸಸ್ lbx
    Rs.45 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಡಿಸಂಬರ್, 2024
  • ನಿಸ್ಸಾನ್ ಲೀಫ್
    ನಿಸ್ಸಾನ್ ಲೀಫ್
    Rs.30 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
×
We need your ನಗರ to customize your experience