ಭಾರತದಲ್ಲಿ 1,700 ಕ್ಕೂ ಹೆಚ್ಚು Ioniq 5 ಕಾರುಗಳನ್ನು ವಾಪಾಸ್ ಪಡೆದ Hyundai!
ಹುಂಡೈ ಅಯಾನಿಕ್ 5 ಗಾಗಿ shreyash ಮೂಲಕ ಜೂನ್ 07, 2024 09:35 pm ರಂದು ಪ್ರಕಟಿಸಲಾಗಿದೆ
- 33 Views
- ಕಾಮೆಂಟ್ ಅನ್ನು ಬರೆಯಿರಿ
ಇಂಟಿಗ್ರೇಟೆಡ್ ಚಾರ್ಜಿಂಗ್ ಕಂಟ್ರೋಲ್ ಯೂನಿಟ್ (ICCU) ನಲ್ಲಿರುವ ಸಮಸ್ಯೆಯಿಂದಾಗಿ ಐಯೋನಿಕ್ 5 ಅನ್ನು ವಾಪಾಸ್ ಕರೆಯಲಾಗಿದೆ
-
ಲಾಂಚ್ ಮಾಡಿದ ದಿನದಿಂದ ಏಪ್ರಿಲ್ 2024 ರವರೆಗೆ ತಯಾರಿಸಲಾದ ಯೂನಿಟ್ ಗಳನ್ನು ಹಿಂಪಡೆಯಲಾಗಿದೆ
-
ಇದು ಎಲೆಕ್ಟ್ರಿಕ್ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಭಾಗಗಳಿಗೆ ಶಕ್ತಿ ನೀಡುವ 12V ಬ್ಯಾಟರಿಯನ್ನು ಡಿಸ್ಚಾರ್ಜ್ ಮಾಡಬಹುದು.
-
ಹುಂಡೈ ಐಯೋನಿಕ್ 5 ಮಾಲೀಕರು ತಮ್ಮ ಕಾರನ್ನು ತಪಾಸಣೆಗಾಗಿ ಹತ್ತಿರದ ಅಧಿಕೃತ ಹುಂಡೈ ವರ್ಕ್ ಶಾಪ್ ಗೆ ತೆಗೆದುಕೊಂಡು ಹೋಗಿ ತೋರಿಸಬಹುದು.
-
ಯಾವುದೇ ದೋಷಯುಕ್ತ ಭಾಗ ಕಂಡುಬಂದರೆ, ಅದನ್ನು ಉಚಿತವಾಗಿ ಬದಲಾಯಿಸಲಾಗುತ್ತದೆ.
-
ಇದು 72.6 kWh ಬ್ಯಾಟರಿಯನ್ನು ಬಳಸುತ್ತದೆ ಮತ್ತು ARAI ಕ್ಲೈಮ್ ಮಾಡಿರುವ 631 ಕಿಮೀ ರೇಂಜ್ ಅನ್ನು ನೀಡುತ್ತದೆ.
-
ಐಯೋನಿಕ್ 5 ಬೆಲೆ ರೂ 46.05 ಲಕ್ಷವಾಗಿದೆ (ಎಕ್ಸ್ ಶೋರೂಂ ದೆಹಲಿ).
ಹುಂಡೈ ಐಯೋನಿಕ್ 5 ಅನ್ನು ಜನವರಿ 2023 ರಲ್ಲಿ ಭಾರತೀಯ ಮಾರುಕಟ್ಟೆಗೆ ಕಂಪ್ಲೀಟ್ಲಿ ನಾಕ್ಡ್ ಡೌನ್ (CKD) ಅಥವಾ ಸ್ಥಳೀಯವಾಗಿ ಜೋಡಿಸಲಾದ ಯೂನಿಟ್ ಆಗಿ ಪರಿಚಯಿಸಲಾಯಿತು. ಇಂಟಿಗ್ರೇಟೆಡ್ ಚಾರ್ಜಿಂಗ್ ಕಂಟ್ರೋಲ್ ಯೂನಿಟ್ (ICCU) ನಲ್ಲಿ ಸಮಸ್ಯೆಯಿರುವ ಕಾರಣ ಕಾರು ತಯಾರಕರು 1,744 ಐಯೋನಿಕ್ 5 ಎಲೆಕ್ಟ್ರಿಕ್ SUV ಗಳನ್ನು ತಾವಾಗಿಯೇ ವಾಪಾಸ್ ಪಡೆಯಲು ಘೋಷಣೆ ಮಾಡಿದ್ದಾರೆ. ಈ ಹಿಂಪಡೆಯುವಿಕೆಯು ಮಾರುಕಟ್ಟೆಗೆ ಬಂದಾಗಿನಿಂದ ಏಪ್ರಿಲ್ 2024 ರವರೆಗೆ ಇರುವ ಎಲ್ಲಾ ಯೂನಿಟ್ ಗಳನ್ನು ಒಳಗೊಂಡಿದೆ.
ICCU ಎಂದರೇನು?
ಇಂಟಿಗ್ರೇಟೆಡ್ ಚಾರ್ಜಿಂಗ್ ಕಂಟ್ರೋಲ್ ಯುನಿಟ್ (ICCU) 12V ಬ್ಯಾಟರಿಯನ್ನು (ಸೆಕೆಂಡರಿ ಬ್ಯಾಟರಿ) ಚಾರ್ಜ್ ಮಾಡಲು ಮುಖ್ಯ ಬ್ಯಾಟರಿಯ ಹೆಚ್ಚಿನ ವೋಲ್ಟೇಜ್ ಅನ್ನು ಸೂಕ್ತವಾದ ಕಡಿಮೆ ವೋಲ್ಟೇಜ್‌ಗೆ ಪರಿವರ್ತಿಸುವ ಕಂಟ್ರೋಲರ್ ಆಗಿ ಕೆಲಸ ಮಾಡುತ್ತದೆ. V2L (ವೆಹಿಕಲ್ ಟು ಲೋಡ್) ಫೀಚರ್ ಅನ್ನು ಬಳಸಿಕೊಂಡು ಕಾರ್‌ಗೆ ಕನೆಕ್ಟ್ ಆಗಿರುವ ಹೆಚ್ಚುವರಿ ಸಾಧನಗಳನ್ನು ಪವರ್ ಮಾಡಲು ICCU ಸಹಾಯ ಮಾಡುತ್ತದೆ. ICCU ಯುನಿಟ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ, ಇದು ಎಲೆಕ್ಟ್ರಿಕ್ ಕಾರ್‌ನ ಪ್ರಮುಖ ಎಲೆಕ್ಟ್ರಾನಿಕ್ ಭಾಗಗಳಾದ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಸ್ಪೀಕರ್‌ಗಳು ಮತ್ತು ಕ್ಲೈಮೇಟ್ ಕಂಟ್ರೋಲ್ ಗೆ ಶಕ್ತಿಯನ್ನು ನೀಡುವ 12V ಬ್ಯಾಟರಿಯನ್ನು ಡಿಸ್ಚಾರ್ಜ್ ಮಾಡುತ್ತದೆ.
ಕಾರು ಮಾಲೀಕರು ಏನು ಮಾಡಬೇಕು?
ಹುಂಡೈ ಐಯೋನಿಕ್ 5 ಮಾಲೀಕರು ತಮ್ಮ ಕಾರನ್ನು ಹತ್ತಿರದ ಅಧಿಕೃತ ಹ್ಯುಂಡೈ ವರ್ಕ್ ಶಾಪ್ ಗೆ ತೆಗೆದುಕೊಂಡು ಹೋಗಿ ಈ ಭಾಗವನ್ನು ಪರಿಶೀಲಿಸಬಹುದು. ತಪಾಸಣೆಗಳನ್ನು ನಿಗದಿಪಡಿಸಲು ಕಾರು ತಯಾರಕರು ಬಹುಶಃ ಸಮಸ್ಯೆಯಿರುವ ವಾಹನಗಳ ಮಾಲೀಕರನ್ನು ಸಂಪರ್ಕಿಸಬಹುದು. ಭಾಗವು ದೋಷಯುಕ್ತವಾಗಿದ್ದರೆ, ಅದನ್ನು ಉಚಿತವಾಗಿ ಬದಲಾಯಿಸಲಾಗುತ್ತದೆ.
ಇದನ್ನು ಕೂಡ ಓದಿ: ಭಾರತದಲ್ಲಿನ ಟಾಪ್ 5 ಅತ್ಯಂತ ವೇಗದ EV ಚಾರ್ಜರ್‌ಗಳು
ಐಯೋನಿಕ್ 5 ಬಗ್ಗೆ ಇನ್ನಷ್ಟು ಮಾಹಿತಿ
ಹ್ಯುಂಡೈ ಐಯೋನಿಕ್ 5 ಭಾರತದಲ್ಲಿ ಒಂದೇ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಲಭ್ಯವಿದೆ ಮತ್ತು ಅದರ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ನೀಡಲಾಗಿದೆ:
ಬ್ಯಾಟರಿ ಪ್ಯಾಕ್ |
72.6 kWh |
ಪವರ್ |
217 PS |
ಟಾರ್ಕ್ |
350 Nm |
ಕ್ಲೇಮ್ ಮಾಡಿರುವ ರೇಂಜ್ (ARAI) |
631 ಕಿ.ಮೀ |
ಐಯೋನಿಕ್ 5 ಡ್ಯುಯಲ್ 12.3-ಇಂಚಿನ ಡಿಸ್ಪ್ಲೇಗಳು (ಒಂದು ಇನ್ಫೋಟೈನ್ಮೆಂಟ್ ಗಾಗಿ ಮತ್ತು ಇನ್ನೊಂದು ಡಿಜಿಟಲ್ ಡ್ರೈವರ್ ಡಿಸ್ಪ್ಲೇಗಾಗಿ), ವೈರ್ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ಪನರೋಮಿಕ್ ಸನ್ರೂಫ್ ಮತ್ತು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ನಂತಹ ಫೀಚರ್ ಗಳೊಂದಿಗೆ ಲೋಡ್ ಆಗಿದೆ. ಇದರ ಸುರಕ್ಷತಾ ಫೀಚರ್ ಗಳಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಸೇರಿವೆ.
ಇದನ್ನು ಕೂಡ ಓದಿ: ನಿಮ್ಮ ಪೆಟ್ರೋಲ್ ಅಥವಾ ಡೀಸೆಲ್ ಕಾರನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಿ: ಪ್ರಕ್ರಿಯೆ, ಕಾನೂನು, ಪ್ರಯೋಜನಗಳು ಮತ್ತು ವೆಚ್ಚಗಳು ಇಲ್ಲಿವೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಐಯೋನಿಕ್ 5 ಬೆಲೆಯು ರೂ 46.05 ಲಕ್ಷವಾಗಿದೆ (ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ). ಇದು BYD ಸೀಲ್ ಮತ್ತು ಕಿಯಾ EV6 ಗೆ ಪ್ರತಿಸ್ಪರ್ಧಿಯಾಗಿದೆ ಮತ್ತು ವೋಲ್ವೋ XC40 ರೀಚಾರ್ಜ್‌ಗೆ ಹೋಲಿಸಿದರೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಿ ಕೂಡ ಇದನ್ನು ಪರಿಗಣಿಸಬಹುದು.
ಇನ್ನಷ್ಟು ಓದಿ: ಹುಂಡೈ ಐಯೋನಿಕ್ 5 ಆಟೋಮ್ಯಾಟಿಕ್