Login or Register ಅತ್ಯುತ್ತಮ CarDekho experience ಗೆ
Login

ಡೀಸೆಲ್‌ ಎಂಜಿನ್‌ ನಲ್ಲಿ ಇನ್ನೂ ಸೈ ಎನಿಸಿರುವ ಹ್ಯುಂಡೈ ವೆನ್ಯು, ಕ್ರೆಟಾ, ಅಲ್ಕಜಾರ್‌, ಮತ್ತು ಟಕ್ಸನ್

published on ಸೆಪ್ಟೆಂಬರ್ 08, 2023 04:45 pm by tarun for ಹುಂಡೈ ವೆನ್ಯೂ

ಡೀಸೆಲ್‌ ಆಯ್ಕೆಗಳು ಕುಗ್ಗುತ್ತಿದ್ದರೂ, ಹ್ಯುಂಡೈ ಸಂಸ್ಥೆಯ SUV ಗಳು ಗ್ರಾಹಕರ ಅಗತ್ಯತೆಗೆ ತಕ್ಕುದಾಗಿ ಸೇವೆಯನ್ನು ಒದಗಿಸುತ್ತಿವೆ

  • ಹ್ಯುಂಡೈ ಕಾರು ತಯಾರಕ ಸಂಸ್ಥೆಯು ಡೀಸೆಲ್‌ ವಾಹನಗಳನ್ನು ಮಾರುವುದನ್ನು ಮುಂದುವರಿಸಲಿದೆ ಎಂದು ಹ್ಯುಂಡೈ ಇಂಡಿಯಾ ಸಿ.ಒ.ಒ ತರುಣ್‌ ಗರ್ಗ್‌ ದೃಢೀಕರಿಸಿದ್ದಾರೆ.
  • ವೆನ್ಯು ಕಾರಿನ ಮಾರಾಟದಲ್ಲಿ 21 ಶೇಕಡಾದಷ್ಟು ಖರೀದಿದಾರರು ಡೀಸೆಲ್‌ ವಾಹನವನ್ನು ಹೊಂದಿದ್ದರೆ, ಕ್ರೆಟಾದಲ್ಲಿ ಡೀಸೆಲ್‌ ಕಾರುಗಳ ಪಾಲು ಶೇಕಡಾ 42ರಷ್ಟು ಇದೆ.
  • ಬಹುಪಾಲು ಅಲ್ಕಜಾರ್‌ ಮತ್ತು ಟಕ್ಸನ್‌ ಖರೀದಿದಾರರು ಡೀಸೆಲ್‌ ವೇರಿಯಂಟ್‌ ಗಳನ್ನು ಇಷ್ಟಪಡುತ್ತಾರೆ.
  • ವೆನ್ಯು, ಕ್ರೆಟಾ ಮತ್ತು ಅಲ್ಕಜಾರ್‌ ಮಾದರಿಗಳು 1.5 ಲೀಟರಿನ ಡೀಸೆಲ್‌ ಎಂಜಿನ್‌ ಅನ್ನು ಹೊಂದಿದ್ದರೆ, ಟಕ್ಸನ್‌ ಕಾರು 2 ಲೀಟರಿನ ಯೂನಿಟ್‌ ಅನ್ನು ಹೊಂದಿದೆ.
  • ಹ್ಯುಂಡೈ ಸಂಸ್ಥೆಯು ಭವಿಷ್ಯದಲ್ಲಿ EV ಗಳ ಜೊತೆಗೆ ಇನ್ನಷ್ಟು ಡೀಸೆಲ್‌ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.

ಮಾಲಿನ್ಯದ ಮಾನದಂಡಗಳು ಇನ್ನಷ್ಟು ಬಿಗಿಗೊಳ್ಳುತ್ತಿರುವ ಸಂದರ್ಭದಲ್ಲಿ ಕಾರು ತಯಾರಕರು ಮೆಲ್ಲನೆ ತಮ್ಮ ಡೀಸೆಲ್‌ ಕಾರುಗಳ ಉತ್ಪಾದನೆಯನ್ನು ನಿಲ್ಲಿಸುತ್ತಿದ್ದಾರೆ. ಆದರೆ, ಹ್ಯುಂಡೈ ಸಂಸ್ಥೆಯು ತನ್ನ ಬಹುಪಾಲು ಕಾರುಗಳಾದ SUV ಗಳಲ್ಲಿ ಡೀಸೆಲ್‌ ಆಯ್ಕೆಯನ್ನು ಒದಗಿಸುವ ಕುರಿತು ಬಿಗಿ ಪಟ್ಟನ್ನು ಹಿಡಿದೆ. ಏಕೆಂದರೆ ಡೀಸೆಲ್‌ ಕಾರುಗಳಿಗೆ ಸಾಕಷ್ಟು ಬೇಡಿಕೆ ಇರುವುದನ್ನು ಇದು ಮನಗಂಡಿದೆ.

ಇತ್ತೀಚಿನ ವರದಿಯೊಂದರಲ್ಲಿ ಹ್ಯುಂಡೈ ಇಂಡಿಯಾದ ಸಿ.ಒ.ಒ ಆಗಿರುವ ತರುಣ್‌ ಗರ್ಗ್‌ ಅವರು ಡೀಸೆಲ್‌ ಆಯ್ಕೆಯನ್ನು ಒದಗಿಸುತ್ತಿರುವ ವೆನ್ಯು, ಅಲ್ಕಜಾರ್‌ ಮತ್ತು ಟಕ್ಸನ್‌ ನಡುವೆ ಪೆಟ್ರೋಲ್‌ ಮತ್ತು ಡೀಸೆಲ್‌ ಕಾರುಗಳ ನಡುವಿನ ಮಾರಾಟದ ಅಂಕಿಅಂಶಗಳನ್ನು ಒದಗಿಸಿದ್ದಾರೆ.

ಮಾದರಿ

ಡೀಸೆಲ್‌ ಮಾರಾಟ

ಪೆಟ್ರೋಲ್‌ ಮಾರಾಟ

ಹ್ಯುಂಡೈ ವೆನ್ಯು

21 ಶೇಕಡಾ

79 ಶೇಕಡಾ

ಹ್ಯುಂಡೈ ಕ್ರೆಟಾ

42 ಶೇಕಡಾ

58 ಶೇಕಡಾ

ಹ್ಯುಂಡೈ ಅಲ್ಕಜಾರ್

66 ಶೇಕಡಾ

34 ಶೇಕಡಾ

ಹ್ಯುಂಡೈ ಟಕ್ಸನ್

61 ಶೇಕಡಾ

39 ಶೇಕಡಾ

ಈ ಅಂಕಿಅಂಶಗಳ ಪ್ರಕಾರ ಇನ್ನೂ ಸಹ ದೊಡ್ಡ SUV ಗಳ ಪೈಕಿ ಡೀಸೆಲ್‌ ಎಂಜಿನ್‌ ಗಳಿಗೆ ಸಾಕಷ್ಟು ಬೇಡಿಕೆ ಇದೆ. ಡೀಸೆಲ್‌ ಕಾರಿನ ಪ್ರಬಲ ಆರಂಭಿಕ ಟಾರ್ಕ್‌ ಮತ್ತು ಹೆಚ್ಚುವರಿ ಇಂಧನ ದಕ್ಷತೆಯು, ದೀರ್ಘ ಪ್ರಯಾಣ ಕೈಗೊಳ್ಳುವ ಖರೀದಿದಾರರು ಡೀಸೆಲ್‌ ಕಾರಿನತ್ತ ಆಕರ್ಷಿಸುವಂತೆ ಮಾಡಿದೆ. ಹೀಗಾಗಿ ಇವರು ತಮ್ಮ ಈ SUV ಗಳ ಮೂಲಕ ಆಫ್‌ ರೋಡಿಂಗ್‌ ಗೆ ಹೋಗುತ್ತಾರೆ.

ಆದರೆ ಒಟ್ಟಾರೆಯಾಗಿ ನೋಡಿದರೆ, ಡೀಸೆಲ್‌ ಎಂಜಿನ್‌ ಹೊಂದಿರುವ SUV ಗಳ ಮಾರಾಟವು ಹ್ಯುಂಡೈ ಪಾಲಿಗೆ ಇನ್ನೂ ದೊಡ್ಡ ಬೇಡಿಕೆಯನ್ನುಂಟು ಮಾಡಿಲ್ಲ. ಇದೇ ವರದಿಯ ಪ್ರಕಾರ, ಈ ಬ್ರಾಂಡಿನ ಒಟ್ಟು ಮಾರಾಟದ ಪೈಕಿ ಡೀಸೆಲ್‌ ಮಾದರಿಗಳ ಮಾರಾಟದ ಪಾಲು 20 ಶೇಕಡಾ ಮಾತ್ರ.

ಇದನ್ನು ಸಹ ಓದಿರಿ: ADAS ಪಡೆಯುವ ಮೊದಲ ಸಬ್-4m SUV ಎನಿಸಲಿರುವ ಹ್ಯುಂಡೈ ವೆನ್ಯು

ಡೀಸೆಲ್‌ ವಾಹನಗಳ ಪ್ರತಿಸ್ಪರ್ಧಿಗಳು

ಹ್ಯುಂಡೈ ವೆನ್ಯು ಕಾರಿನೊಂದಿಗೆ, ಸಬ್‌ ಕಾಂಪ್ಯಾಕ್ಟ್‌ SUV ವಿಭಾಗದಲ್ಲಿ ಡೀಸೆಲ್‌ ಮೋಟಾರ್‌ ಒದಗಿಸುತ್ತಿರುವ ಟಾಟಾ ನೆಕ್ಸನ್‌, ಕಿಯಾ ಸೊನೆಟ್‌, ಮತ್ತು ಮಹೀಂದ್ರಾ XUV300 ಇತ್ಯಾದಿ ವಾಹನಗಳು ಸ್ಪರ್ಧಿಸುತ್ತಿವೆ. ಆದರೆ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ (ಈ ವಿಭಾಗದಲ್ಲಿ ಬರುವ ಮಾದರಿಗಳು)‌ ಕಾರುಗಳು ಕಾಂಪ್ಯಾಕ್ಟ್ SUV ಮಾದರಿಯ ವಿಚಾರದಲ್ಲಿ ಡೀಸೆಲ್‌ ಆಯ್ಕೆಯಲ್ಲಿ ಏಕಸ್ವಾಮ್ಯವನ್ನು ಹೊಂದಿವೆ.

ದೊಡ್ಡ SUVಗಳಾದ ಹ್ಯುಂಡೈ ಅಲ್ಕಜಾರ್ ಮತ್ತು ಹ್ಯುಂಡೈ ಟಕ್ಸನ್ ವಿಚಾರದಲ್ಲಿಯೂ ಡೀಸೆಲ್‌ ವೇರಿಯಂಟ್‌ ಗಳಿಗೆ ಬಹುಪಾಲು ಬೇಡಿಕೆ ಇದೆ. ಈ ವರದಿಯ ಪ್ರಕಾರ, ಪೆಟ್ರೋಲ್‌ ಕಾರುಗಳಿಗಿಂತಲೂ ಡೀಸೆಲ್‌ ಕಾರುಗಳಿಗೆ ಹೆಚ್ಚು ಕಾಲ ಕಾಯಬೇಕಾಗುತ್ತದೆ. ಅಂದರೆ ಡೀಸೆಲ್‌ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಹ್ಯುಂಡೈ ಡೀಸೆಲ್‌ ಎಂಜಿನ್‌ ಗಳು

ಮಾದರಿಗಳು

ವೆನ್ಯು, ಕ್ರೆಟಾ, ಮತ್ತು ಅಲ್ಕಜಾರ್

ಟಕ್ಸನ್

ಎಂಜಿನ್

1.5-ಲೀಟರ್ ಡೀಸೆಲ್

2-ಲೀಟರ್ ಡೀಸೆಲ್

ಪವರ್

115PS

186PS

ಟಾರ್ಕ್

250Nm

416Nm

ವೆನ್ಯು ಕಾರು ಡೀಸೆಲ್-ಮ್ಯಾನುವಲ್‌ ಸಂಯೋಜನೆಯನ್ನು ಮಾತ್ರವೇ ಹೊಂದಿದ್ದರೆ, ಕ್ರೆಟಾ ಮತ್ತು ಅಲ್ಕಜಾರ್ ಗಳು‌ ಅಟೋಮ್ಯಾಟಿಕ್‌ ಚಾಲನೆಯ ಆಯ್ಕೆಯನ್ನು ಸಹ ಹೊಂದಿವೆ. ಹ್ಯುಂಡೈ ಸಂಸ್ಥೆಯು ಎಲ್ಲಾ ಮೂರು ಮಾದರಿಗಳಿಗೆ ಒಂದೇ ಎಂಜಿನ್‌ ಅನ್ನು ಬಳಸುವುದರಿಂದ ಸುಲಭವಾಗಿ ಅದನ್ನು ಪರಿಷ್ಕರಿಸಲು ಸಾಧ್ಯ.

ಇದನ್ನು ಸಹ ಓದಿರಿ: ಕ್ರೆಟಾ EV ವಾಹನವು ಭಾರತದ ಪಾಲಿಗೆ ಹ್ಯುಂಡೈಯ ಮೊದಲ ಮಾಸ್‌ ಮಾರ್ಕೆಟ್‌ ಎಲೆಕ್ಟ್ರಿಕ್‌ ಕಾರು ಎನಿಸಲಿದೆಯೇ?

ಹ್ಯುಂಡೈ ಸಂಸ್ಥೆಯು ಗ್ರಾಂಡ್‌ i10 Nios ಮತ್ತು i20 ಹ್ಯಾಚ್‌ ಬ್ಯಾಕ್‌ ಮುಂತಾದ ತನ್ನ ಸಣ್ಣ ಕಾರುಗಳಲ್ಲಿ ಡೀಸೆಲ್‌ ಆಯ್ಕೆಯನ್ನು ನಿಲ್ಲಿಸಿದ್ದರೂ, ಈ ಸಂಸ್ಥೆಯು ಇನ್ನಷ್ಟು ಡೀಸೆಲ್‌ ಕಾರುಗಳನ್ನು ರಸ್ತೆಗಿಳಿಸುವ ಉದ್ದೇಶವನ್ನು ಹೊಂದಿದೆ. ಜೊತೆಗೆ ಈಗಿರುವ ಮಾದರಿಗಳನ್ನು ಡೀಸೆಲ್‌ ಕಾರುಗಳಾಗಿ ಪರಿವರ್ತಿಸುವ ಯೋಜನೆಯನ್ನೂ ಹೊಂದಿದೆ. ಇದೇ ವೇಳೆ, ಸ್ಥಳೀಯ ಉತ್ಪಾದನೆಗಾಗಿ ದೊಡ್ಡ ಪ್ರಮಾಣದ ಹೂಡಿಕೆ ಮತ್ತು ಚಾರ್ಜಿಂಗ್‌ ಮೂಲಸೌಕರ್ಯಗಳ ಅಭಿವೃದ್ಧಿಯ ಮೂಲಕ ಭಾರತದಲ್ಲಿ ಸ್ವಚ್ಛ ಇಂಧನದ ಮಾದರಿಗಳು ಮತ್ತು EV ಗಳನ್ನು ಪರಿಚಯಿಸುವ ಬದ್ಧತೆಯನ್ನು ಕೊರಿಯಾದ ಈ ಕಾರು ತಯಾರಕ ಸಂಸ್ಥೆಯು ತೋರಿದೆ.

ಮೂಲ:

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ವೆನ್ಯು ಆನ್‌ ರೋಡ್‌ ಬೆಲೆ

t
ಅವರಿಂದ ಪ್ರಕಟಿಸಲಾಗಿದೆ

tarun

  • 38 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ವೆನ್ಯೂ

explore similar ಕಾರುಗಳು

ಹುಂಡೈ ಕ್ರೆಟಾ

ಡೀಸಲ್21.8 ಕೆಎಂಪಿಎಲ್
ಪೆಟ್ರೋಲ್17.4 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಹುಂಡೈ ಅಲ್ಕಝರ್

ಡೀಸಲ್24.5 ಕೆಎಂಪಿಎಲ್
ಪೆಟ್ರೋಲ್18.8 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಹುಂಡೈ ವೆನ್ಯೂ

ಡೀಸಲ್24.2 ಕೆಎಂಪಿಎಲ್
ಪೆಟ್ರೋಲ್20.36 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ