Login or Register ಅತ್ಯುತ್ತಮ CarDekho experience ಗೆ
Login

Hyundai Venue Knight ಆವೃತ್ತಿ ಬಿಡುಗಡೆ,10 ಲಕ್ಷ ರೂ. ಬೆಲೆ ನಿಗದಿ

ಹುಂಡೈ ವೆನ್ಯೂ ಗಾಗಿ tarun ಮೂಲಕ ಆಗಸ್ಟ್‌ 18, 2023 07:23 pm ರಂದು ಪ್ರಕಟಿಸಲಾಗಿದೆ

ವೆನ್ಯೂ ನೈಟ್ ಆವೃತ್ತಿಯು ಹಲವಾರು ವಿಶುಯಲ್ ಅಪ್ಡೇಟ್ ಗಳನ್ನು ಪಡೆಯುತ್ತಿದೆ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ 'ನಿಖರವಾದ' ಮಾನ್ಯುಯಲ್ ಗೇರ್ ಬಾಕ್ಸ್ ನ್ನು ಮರಳಿ ತರುತ್ತಿದೆ

  • ವೆನ್ಯೂ ನೈಟ್ ಆವೃತ್ತಿಯ ಎಕ್ಸ್ ಶೋರೂಂ ಬೆಲೆ 10 ಲಕ್ಷದಿಂದ 13.48 ಲಕ್ಷ ವರೆಗೆ ಇದೆ.

  • ಕಪ್ಪು, ಬಿಳಿ, ಗ್ರೇ, ಕೆಂಪು ಬಣ್ಣಗಳಲ್ಲಿ ಹಾಗು ಕೆಂಪು ಬಣ್ಣದೊಂದಿಗೆ ಬ್ಲಾಕ್ ರೂಫ್ ಸೇರಿ ಒಟ್ಟು ಐದು ಕಲರ್ ಗಳ ಆಯ್ಕೆಯಲ್ಲಿ ಲಭ್ಯವಿದೆ.

  • ಹೊರಭಾಗದ ಸುತ್ತಲೂ ಬ್ಲ್ಯಾಕ್ಡ್-ಔಟ್ ಫಿನಿಶ್ ಮತ್ತು ಹಿತ್ತಾಳೆ ಬಣ್ಣವನ್ನು ಸೇರಿಸಲಾಗಿದೆ.

  • ಒಳಭಾಗವು ಹಿತ್ತಾಳೆಯ ಬಣ್ಣದೊಂದಿಗೆ ಸಂಪೂರ್ಣ ಕಪ್ಪು ಥೀಮ್‌ನಲ್ಲಿ ಮುಚ್ಚಲ್ಪಟ್ಟಿದೆ.

  • ಹೊಸ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಕ್ಯಾಮೆರಾ ಡ್ಯಾಶ್ ಕ್ಯಾಮ್ ಮತ್ತು ಎಲೆಕ್ಟ್ರೋಕ್ರೊಮಿಕ್ ಐಆರ್‌ವಿಎಂ ಸೇರಿವೆ.

  • 1.2-ಲೀಟರ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಹೊಸ ನೈಟ್ ಆವೃತ್ತಿಯೊಂದಿಗೆ ಹ್ಯುಂಡೈ ವೆನ್ಯೂ ಆಲ್-ಬ್ಲ್ಯಾಕ್ ಕಾರ್ ಕ್ಲಬ್‌ಗೆ ಸೇರುತ್ತದೆ. ಕ್ರೆಟಾದ ನಂತರ ಹ್ಯುಂಡೈನಿಂದ ಸಂಪೂರ್ಣ ಕಪ್ಪು ಬಣ್ಣ ಪಡೆದ ಎರಡನೇ ಕಾರು ಇದು. ಆದಾಗ್ಯೂ, ಸಾಮಾನ್ಯ ಕ್ರೋಮ್ ಟ್ರೀಟ್ಮೆಂಟ್ ನ ಬದಲಾಗಿ ಕಾಂಟ್ರಾಸ್ಟ್ ಕಪ್ಪು ಸೌಂದರ್ಯಕ್ಕಾಗಿ ಇದನ್ನು ನಾಲ್ಕು ಇತರ ಬಣ್ಣಗಳಲ್ಲಿ ನೀಡಲಾಗುತ್ತದೆ. ಹುಂಡೈ ವೆನ್ಯೂ ನೈಟ್ ಆವೃತ್ತಿಯನ್ನು ಬಹು ಪೆಟ್ರೋಲ್ ಎಂಜಿನ್‌ಗಳು ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ನೀಡುತ್ತಿದೆ ಮತ್ತು ಅದನ್ನು ಕೇವಲ ಟಾಪ್-ಎಂಡ್ ವೇರಿಯೆಂಟ್ ಗಳಿಗೆ ಸೀಮಿತಗೊಳಿಸಿಲ್ಲ.

ವೇರಿಯಂಟ್-ವಾರು ಬೆಲೆಗಳು

ವೇರಿಯೆಂಟ್

ಸಾಮಾನ್ಯ ಬೆಲೆ

ನೈಟ್ ಆವೃತ್ತಿ

ವ್ಯತ್ಯಾಸ

S (O) ಮಾನ್ಯುಯಲ್ 1.2 ಪೆಟ್ರೋಲ್

9.76 ಲಕ್ಷ ರೂ

10 ಲಕ್ಷ ರೂ

24,000 ರೂ

SX ಮಾನ್ಯುಯಲ್ 1.2 ಪೆಟ್ರೋಲ್

10.93 ಲಕ್ಷ ರೂ

11.26 ಲಕ್ಷ ರೂ

33,000 ರೂ

SX ಮಾನ್ಯುಯಲ್ 1.2 ಪೆಟ್ರೋಲ್ ಡ್ಯುಯಲ್ ಟೋನ್

11.08 ಲಕ್ಷ ರೂ

11.41 ಲಕ್ಷ ರೂ

33,000 ರೂ

SX (O) ಮಾನ್ಯುಯಲ್ 1.0 ಟರ್ಬೊ ಪೆಟ್ರೋಲ್

-

12.65 ಲಕ್ಷ ರೂ

SX (O) ಮಾನ್ಯುಯಲ್ 1.0 ಟರ್ಬೊ ಪೆಟ್ರೋಲ್ ಡ್ಯುಯಲ್ ಟೋನ್

-

12.80 ಲಕ್ಷ ರೂ

SX (O) ಡುಯೆಲ್ ಕ್ಲಚ್ 1.0 ಟರ್ಬೊ

13.03 ಲಕ್ಷ ರೂ

13.33 ಲಕ್ಷ ರೂ

30,000 ರೂ

SX (O) ಡುಯೆಲ್ ಕ್ಲಚ್ 1.0 ಟರ್ಬೊ ಡ್ಯುಯಲ್ ಟೋನ್

13.18 ಲಕ್ಷ ರೂ

13.48 ಲಕ್ಷ ರೂ

30,000 ರೂ

ತಿಳಿಸಿರುವ ಎಲ್ಲಾವು ಎಕ್ಸ್ ಶೋರೂಂ ಬೆಲೆಗಳು

ವೆನ್ಯೂ ನೈಟ್ ಆವೃತ್ತಿಯ ಬೆಲೆಯು 10 ಲಕ್ಷ ರೂ.ನಿಂದ 13.48 ಲಕ್ಷ ರೂ.ವರೆಗೆ ಇರುತ್ತದೆ. ವೇರಿಯೆಂಟ್ ಗಳಿಗೆ ಅನುಗುಣವಾಗಿ 33,000 ರೂ.ವರೆಗೆ ಹೆಚ್ಚುವರಿ ಬೆಲೆಗಳು ಸೇಪಡೆಯಾಗುತ್ತದೆ.

ಬಾಹ್ಯ ವಿಶುಯಲ್ ನ ಬದಲಾವಣೆಗಳು

ನೈಟ್ ಆವೃತ್ತಿಯಲ್ಲಿನ ಬದಲಾವಣೆಗಳು ಗ್ರಿಲ್, ಲೋಗೋ, ರೂಫ್ ರೈಲ್ಸ್, ಶಾರ್ಕ್-ಫಿನ್ ಆಂಟೆನಾ, ORVM ಗಳು, ಸ್ಕಿಡ್ ಪ್ಲೇಟ್‌ಗಳು ಮತ್ತು ಅಲಾಯ್ ವೀಲ್ ಗಳಲ್ಲಿ ಬ್ಲಾಕ್ ಫಿನಿಷ್ ನ್ನು ಒಳಗೊಂಡಿವೆ. ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಮುಂಭಾಗದ ಚಕ್ರಗಳು ಮತ್ತು ರೂಫ್ ನ ಕಪ್ಪು ಪಟ್ಟಿಯಲ್ಲಿ ಹಿತ್ತಾಳೆಯನ್ನು ಸೇರಿಸಲಾಗಿದೆ. ಮುಂಭಾಗದ ಬ್ರೇಕ್ ಕ್ಯಾಲಿಪರ್‌ಗಳನ್ನು ಕೆಂಪು ಬಣ್ಣದಿಂದ ಚಿತ್ರಿಸಲಾಗಿದೆ ಮತ್ತು ಬೋರ್ಡ್ ನಲ್ಲಿ 'ನೈಟ್' ಲಾಂಛನವಿದೆ. ಎಸ್ (O) ವೇರಿಯೆಂಟ್ ಅಲಾಯ್ ವೀಲ್ ಗಳನ್ನು ಪಡೆಯುವುದಿಲ್ಲ, ಆದರೆ ಚಕ್ರಗಳಿಗೆ ಸ್ಪೋರ್ಟ್ ಬ್ಲಾಕ್ ಕವರ್‌ಗಳನ್ನು ಹೊಂದಿದೆ.

ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಮತ್ತು ಫಿಯರಿ ರೆಡ್ ಎಂಬ ನಾಲ್ಕು ಸಿಂಗಲ್-ಟೋನ್ ಶೇಡ್‌ ಗಳಾದರೆ ಫಿಯರಿ ರೆಡ್ ವಿತ್ ಅಬಿಸ್ ಬ್ಲ್ಯಾಕ್ ಎಂಬ ಡ್ಯುಯಲ್-ಟೋನ್ ಶೇಡ್ ನಲ್ಲಿ ಬಣ್ಣಗಳನ್ನು ಪಡೆಯಬಹುದು.

ಇದನ್ನೂ ಓದಿ: ಹುಂಡೈ ಎಕ್ಸ್‌ಟರ್ ಟಾಪ್-ಸ್ಪೆಕ್ ಆಟೋಮ್ಯಾಟಿಕ್ Vs ಹುಂಡೈ ಐ20 ಸ್ಪೋರ್ಟ್ಸ್ ಟರ್ಬೊ-ಪೆಟ್ರೋಲ್ ಡಿಸಿಟಿ - ಯಾವುದನ್ನು ಆರಿಸಬೇಕು?

ಇಂಟೀರಿಯರ್ ನ ವಿಶುಯಲ್ ನಲ್ಲಿ ಬದಲಾವಣೆಗಳು

ವೆನ್ಯೂನ ಡ್ಯುಯಲ್-ಟೋನ್ ಒಳಭಾಗವನ್ನು ನೈಟ್ ಆವೃತ್ತಿಯಲ್ಲಿ ಸಂಪೂರ್ಣ ಕಪ್ಪು ಥೀಮ್‌ನಿಂದ ಬದಲಾಯಿಸಲಾಗಿದೆ. ಇದು ಕ್ರೋಮ್ ಗೆ ಸರಿಹೊಂದುವ ಕಪ್ಪು ಸೀಟ್ ಅಪ್ಹೋಲ್ಸ್ಟರಿ ಸೇರಿದಂತೆ ಕ್ಯಾಬಿನ್‌ನಾದ್ಯಂತ ಹಿತ್ತಾಳೆಯ ಬಣ್ಣವನ್ನು ಬಳಸಲಾಗಿದೆ. ಒಳಗೆ ಸ್ಪೋರ್ಟಿಯರ್ ಮತ್ತು ಪ್ರೀಮಿಯಂ ನೋಟಕ್ಕಾಗಿ, ಪೆಡಲ್‌ಗಳು ಮೆಟಲ್ ಫಿನಿಶ್ ಅನ್ನು ಪಡೆಯುತ್ತವೆ. ಹಾಗೆಯೇ 3D ಡಿಸೈನರ್ ಮ್ಯಾಟ್‌ಗಳನ್ನು ಸಹ ಹೊಂದಿದೆ.

ಹೊಸ ವೈಶಿಷ್ಟ್ಯಗಳು ಕೂಡ

ವಿಶೇಷವಾಗಿ ನೈಟ್ ಆವೃತ್ತಿಯ ವೇರಿಯೆಂಟ್ ಗಳಿಗಾಗಿ ವೆನ್ಯೂ ಎನ್ ಲೈನ್‌ನಿಂದ ಡ್ಯುಯಲ್ ಕ್ಯಾಮೆರಾ ಡ್ಯಾಶ್‌ಕ್ಯಾಮ್ ಅನ್ನು ತರಲಾಗಿದೆ. S(O) ಮಾನ್ಯುಯಲ್ ವೇರಿಯೆಂಟ್, ಎಲೆಕ್ಟ್ರೋಕ್ರೊಮಿಕ್ IRVM ಅನ್ನು ಸಹ ಹೊಂದಿರಲಿದೆ, ಇದನ್ನು SX ವೇರಿಯೆಂಟ್ ನಿಂದ ಸೇರಿಸಲಾಗಿದೆ.

ವೆನ್ಯೂನ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾಗಳು ಒಳಗೊಂಡಿವೆ.

ಪವರ್ಟ್ರೇನ್ ಆಯ್ಕೆಗಳು

ವೆನ್ಯೂ ನೈಟ್ ಆವೃತ್ತಿಯನ್ನು ಅಸ್ತಿತ್ವದಲ್ಲಿರುವ 1.2-ಲೀಟರ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ಗಳೊಂದಿಗೆ ಆಯ್ಕೆ ಮಾಡಬಹುದು. ಪೆಟ್ರೋಲ್ ಎಂಜಿನ್ 83PS ಮತ್ತು 114Nm ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಇದನ್ನು 5-ಸ್ಪೀಡ್ ಮ್ಯಾನುವಲ್ 'ಬಾಕ್ಸ್'ನೊಂದಿಗೆ ಜೋಡಿಸಲಾಗಿದೆ.

ನೈಟ್ ಆವೃತ್ತಿಗೆ ಆಶ್ಚರ್ಯಕರವಾದ ಅಪ್‌ಡೇಟ್ ಎಂದರೆ ಸಾಮಾನ್ಯ ವೇರಿಯೆಂಟ್ ಗಳಲ್ಲಿ ನೀಡಲಾದ iMT (ಕ್ಲಚ್ ಪೆಡಲ್ ಇಲ್ಲದೆ ಮಾನ್ಯುಯಲ್) ಗೆ ವಿರುದ್ಧವಾಗಿ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್‌ನ ಸೇರ್ಪಡೆಯಾಗಿದೆ.ಟರ್ಬೊ-ಪೆಟ್ರೋಲ್ ಎಂಜಿನ್ 120PS ಮತ್ತು 172Nm ನಷ್ಟು ಪವರ್ ನ್ನು ಉತ್ಪಾದಿಸುತ್ತದೆ ಮತ್ತು 7-ಸ್ಪೀಡ್ DCT ಆಯ್ಕೆಯನ್ನು ಸಹ ಹೊಂದಿದೆ.

115PS 1.5-ಲೀಟರ್ ಡೀಸೆಲ್ ಎಂಜಿನ್ ಸಹ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ವೆನ್ಯೂನಲ್ಲಿ ಲಭ್ಯವಿದೆ, ಆದರೆ ನೈಟ್ ಆವೃತ್ತಿಯಲ್ಲಿ ಇಲ್ಲ.

ಇದನ್ನೂ ಓದಿ: ಇವುಗಳು ಕಡಿಮೆ ಬಜೆಟ್ ನ ಅತ್ಯುತ್ತಮ-ಸುಸಜ್ಜಿತ 10 ಸಿಎನ್‌ಜಿ ಕಾರುಗಳು

ಪ್ರತಿಸ್ಪರ್ಧಿಗಳು

ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್ ಯುವಿ300, ಟಾಟಾ ನೆಕ್ಸನ್, ಮಾರುತಿ ಸುಜುಕಿ ಬ್ರೆಝಾ, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಾರುತಿ ಫ್ರಾಂಕ್ಸ್‌ಗೆ ಹ್ಯುಂಡೈ ವೆನ್ಯೂ ಪ್ರತಿಸ್ಪರ್ಧಿಯಾಗಿದೆ. ಆದರೆ ನೈಟ್ ಆವೃತ್ತಿಯ ಪ್ರತಿಸ್ಪರ್ಧಿ ಎಂದರೆ ಟಾಟಾ ನೆಕ್ಸಾನ್ ಮತ್ತು ಕಿಯಾ ಸೋನೆಟ್ ಎಕ್ಸ್-ಲೈನ್‌ನ ಡಾರ್ಕ್ ವೇರಿಯೆಂಟ್ ಗಳಾಗಿವೆ.

ಇನ್ನಷ್ಟು ಓದಿ: ಹ್ಯುಂಡೈ ವೆನ್ಯೂನ ಆನ್ ರೋಡ್ ಬೆಲೆ

Share via

Write your Comment on Hyundai ವೆನ್ಯೂ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ಹೊಸ ವೇರಿಯೆಂಟ್
Rs.21.90 - 30.50 ಲಕ್ಷ*
Rs.9 - 17.80 ಲಕ್ಷ*
ಹೊಸ ವೇರಿಯೆಂಟ್
Rs.44.90 - 55.90 ಲಕ್ಷ*
Rs.75.80 - 77.80 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ