Cardekho.com

ICOTY 2025: ಯಾವುದು ಈ ವರ್ಷದ ಬೆಸ್ಟ್‌ ಕಾರು? ಇಲ್ಲಿದೆ ಎಲ್ಲಾ ವಿಭಾಗಗಳ ನಾಮಿನಿಗಳ ಪಟ್ಟಿ

ಡಿಸೆಂಬರ್ 18, 2024 06:53 pm ರಂದು dipan ಮೂಲಕ ಪ್ರಕಟಿಸಲಾಗಿದೆ
111 Views

ಸ್ಪರ್ಧಿಗಳು ಮಹೀಂದ್ರಾ ಥಾರ್ ರಾಕ್ಸ್‌ನಂತಹ ಮಾಸ್‌-ಮಾರ್ಕೆಟ್‌ ಕಾರುಗಳಿಂದ ಹಿಡಿದು ಬಿಎಮ್‌ಡಬ್ಲ್ಯೂi5 ಮತ್ತು ಮರ್ಸಿಡೀಸ್‌-ಬೆಂಝ್‌ ಇಕ್ಯೂಎಸ್‌ ಎಸ್‌ಯುವಿಯಂತಹ ಐಷಾರಾಮಿ ಇವಿಗಳವರೆಗೆ ಕಾರುಗಳನ್ನು ಒಳಗೊಂಡಿದೆ

ICOTY 2025 contenders

ಭಾರತೀಯ ವಾಹನ ಕ್ಷೇತ್ರವು ಈ ವರ್ಷ ಹಲವು ಸೆಗ್ಮೆಂಟ್‌ಗಳಲ್ಲಿ ಬಹಳಷ್ಟು ಕಾರುಗಳ ಬಿಡುಗಡೆಯನ್ನು ಕಂಡಿತು. ವರ್ಷದ ಅಂತ್ಯವು ಹತ್ತಿರವಾಗುತ್ತಿದ್ದಂತೆ, ವಾರ್ಷಿಕ ಇಂಡಿಯನ್ ಕಾರ್ ಆಫ್ ದಿ ಇಯರ್ (ICOTY) ಪ್ರಶಸ್ತಿಗಳ ಮತ್ತೊಂದು ಪುನರಾವರ್ತನೆಯ ಸಮಯ ಬಂತು ಎನ್ನಬಹುದು. ಈ ಅವಾರ್ಡ್‌ಗಳಲ್ಲಿ, ಉದ್ಯಮ ತಜ್ಞರು ಮೂರು ವಿಭಾಗಗಳಲ್ಲಿ ಅತ್ಯುತ್ತಮವಾದ ಮೂರು ಕಾರುಗಳನ್ನು ಗುರುತಿಸುತ್ತಾರೆ, ಅವುಗಳೆಂದರೆ ಎಲ್ಲಾ ಕಾರುಗಳು, ಪ್ರೀಮಿಯಂ ಕಾರು ಸೆಗ್ಮೆಂಟ್‌ ಮತ್ತು ಇಲೆಕ್ಟ್ರಿಕ್‌ ಕಾರುಗಳು (EV). ICOTY 2025 ರ ಪ್ರತಿ ಮೂರು ವಿಭಾಗಗಳಿಗೆ ಸ್ಪರ್ಧಿಗಳ ಅಂತಿಮ ಪಟ್ಟಿಯನ್ನು ನಾವು ನೋಡೋಣ:

ವರ್ಷದ ಭಾರತೀಯ ಕಾರು (ಒಟ್ಟಾರೆ)

ಪ್ರೀಮಿಯಂ ಕಾರು ಪ್ರಶಸ್ತಿ (ICOTY)

ಗ್ರೀನ್ ಕಾರ್ ಪ್ರಶಸ್ತಿ (ICOTY)

ಮಹೀಂದ್ರಾ ಥಾರ್ ರೋಕ್ಸ್

ಕಿಯಾ ಕಾರ್ನೀವಲ್

ಟಾಟಾ ಪಂಚ್ ಇವಿ

ಮಾರುತಿ ಡಿಜೈರ್

BYD ಸೀಲ್

ಟಾಟಾ ಕರ್ವ್ ಇವಿ

ಮಾರುತಿ ಸ್ವಿಫ್ಟ್

ಮಿನಿ ಕೂಪರ್ ಎಸ್

ಎಂಜಿ ವಿಂಡ್ಸರ್ ಇವಿ

ಎಂಜಿ ವಿಂಡ್ಸರ್ ಇವಿ

ಮರ್ಸಿಡೀಸ್‌ ಬೆಂಝ್‌-ಇ-ಕ್ಲಾಸ್‌

ಬಿವೈಡಿ ಇಮ್ಯಾಕ್ಸ್ 7

ಸಿಟ್ರೊಯೆನ್ ಬಸಾಲ್ಟ್

ಮರ್ಸಿಡೀಸ್‌ ಬೆಂಝ್‌ ಇಕ್ಯೂಎಸ್‌ ಎಸ್‌ಯುವಿ ಮತ್ತು ಮೇಬ್ಯಾಕ್ ಇಕ್ಯೂಎಸ್‌ ಎಸ್‌ಯುವಿ

ಬಿವೈಡಿ ಸೀಲ್

ಟಾಟಾ ಕರ್ವ್ ಮತ್ತು ಟಾಟಾ ಕರ್ವ್ ಇವಿ

ಬಿಎಂಡಬ್ಲ್ಯು 5 ಸೀರೀಸ್

ಮಿನಿ ಕಂಟ್ರಿಮ್ಯಾನ್ ಇವಿ

ಟಾಟಾ ಪಂಚ್ ಇವಿ

ಬಿಎಂಡಬ್ಲ್ಯು ಐ5

ಬಿಎಂಡಬ್ಲ್ಯು ಐ5

ಬಿವೈಡಿ ಇಮ್ಯಾಕ್ಸ್ 7

ಬಿಎಂಡಬ್ಲ್ಯು ಎಂ5

ಮರ್ಸಿಡೀಸ್‌ ಬೆಂಝ್‌ ಇಕ್ಯೂಎಸ್‌ ಎಸ್‌ಯುವಿ ಮತ್ತು ಮೇಬ್ಯಾಕ್ ಇಕ್ಯೂಎಸ್‌ ಎಸ್‌ಯುವಿ

Green Car Award contenders in ICOTY 2025

ಟಾಟಾ, ಮರ್ಸಿಡೀಸ್‌ ಬೆಂಝ್‌ ಮತ್ತು ಬಿಎಮ್‌ಡಬ್ಲ್ಯೂ ಮೂರು ಸ್ಪರ್ಧಿಗಳನ್ನು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿವೆ, ಇದು ಸ್ಪರ್ಧಿಗಳ ಪಟ್ಟಿಯಲ್ಲಿ ಹೆಚ್ಚು ಆಗಿದೆ. ಮಾರುತಿ, ಬಿವೈಡಿ ಮತ್ತು ಮಿನಿ ವಾರ್ಷಿಕ ಸ್ಪರ್ಧೆಯಲ್ಲಿ ತಲಾ ಎರಡು ಕಾರುಗಳೊಂದಿಗೆ ಸ್ಪರ್ಧಿಸುತ್ತಿವೆ. ಈ ವರ್ಷದ ICOTY ನಲ್ಲಿ ಮಹೀಂದ್ರಾ, ಕಿಯಾ, ಎಮ್‌ಜಿ ಮತ್ತು ಸಿಟ್ರೊಯೆನ್ ತಲಾ ಒಬ್ಬ ಸ್ಪರ್ಧಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ: 2024ರ Toyota Camry ಭಾರತದಲ್ಲಿ ಬಿಡುಗಡೆ, 48 ಲಕ್ಷ ರೂ.ನಿಂದ ಬೆಲೆ ಪ್ರಾರಂಭ

ICOTY ಕುರಿತು ಇನ್ನಷ್ಟು ಮಾಹಿತಿ

ಮೊದಲೇ ಹೇಳಿದಂತೆ, ICOTY ವಾರ್ಷಿಕ ಈವೆಂಟ್ ಆಗಿದ್ದು, ಭಾರತದಲ್ಲಿನ ಎಲ್ಲಾ ಪ್ರಮುಖ ಮಾಧ್ಯಮಗಳಲ್ಲಿರುವ 20 ಪತ್ರಕರ್ತರ ತೀರ್ಪುಗಾರರು ಎಲ್ಲಾ ಕಾರುಗಳನ್ನು ಗಮನಿಸುತ್ತಾರೆ ಮತ್ತು ಮೂರು ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಕಾರ್‌ದೇಖೋದ ಪ್ರಧಾನ ಸಂಪಾದಕ ಅಮೇಯಾ ದಾಂಡೇಕರ್ ಕೂಡ ಮೇಲೆ ತಿಳಿಸಲಾದ ಕಾರುಗಳನ್ನು ಮೌಲ್ಯಮಾಪನ ಮಾಡುವ ತೀರ್ಪುಗಾರರ ತಂಡದ ಭಾಗವಾಗಿದ್ದಾರೆ. ಬೆಲೆ, ಇಂಧನ ದಕ್ಷತೆ, ವಿನ್ಯಾಸ, ಸೌಕರ್ಯ, ಸುರಕ್ಷತೆ ಮತ್ತು ಪರ್ಫಾರ್ಮೆನ್ಸ್‌ ಸೇರಿದಂತೆ (ಆದರೆ ಸೀಮಿತವಾಗಿಲ್ಲ) ಮಾನದಂಡಗಳ ಮೇಲೆ ಮತದಾನದ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಗರಿಷ್ಠ ಓಟ್‌ಗಳನ್ನು ಗಳಿಸುವ ಕಾರು ಅದರ ಆಯಾ ವಿಭಾಗದಲ್ಲಿ ವಿಜೇತರಾಗಿ ಕಿರೀಟವನ್ನು ಪಡೆಯುತ್ತದೆ.

ಪ್ರತಿ ವಿಭಾಗದಲ್ಲಿ ಯಾವ ಕಾರು ವಿಜಯಿಯಾಗಿ ಹೊರಹೊಮ್ಮುತ್ತದೆ ಎಂಬುದನ್ನು ಕಂಡುಹಿಡಿಯಲು ಕಾರ್‌ದೇಖೋಗೆ ಟ್ಯೂನ್ ಮಾಡಿ.

ಈ ವರ್ಷ ICOTY ಪ್ರಶಸ್ತಿಗಳನ್ನು ಯಾವ ಕಾರು ಪಡೆಯಬೇಕೆಂದು ನೀವು ಯೋಚಿಸುತ್ತೀರಿ? ಕೆಳಗಿನ ಕಾಮೆಂಟ್‌ ಬಾಕ್ಸ್‌ನಲ್ಲಿ ನಮಗೆ ತಿಳಿಸಿ.

ವಾಹನ ಜಗತ್ತಿನ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

ಇದರ ಬಗ್ಗೆ ಇನ್ನಷ್ಟು ಓದಲು : ಡಿಜೈರ್ ಎಎಮ್‌ಟಿ

Share via

Write your Comment on Maruti ಡಿಜೈರ್

explore similar ಕಾರುಗಳು

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ