2025ರ ಜನವರಿಯಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲಿರುವ Maruti
ಮಾರುತಿ ಸ್ವಿಫ್ಟ್ ಗಾಗಿ gajanan ಮೂಲಕ ಡಿಸೆಂಬರ್ 06, 2024 07:35 pm ರಂದು ಪ್ರಕಟಿಸಲಾಗಿದೆ
- 44 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿಯು ತನ್ನ ಅರೆನಾ ಮತ್ತು ನೆಕ್ಸಾ ಕಾರುಗಳ ಮೊಡೆಲ್‌ಗಳನ್ನು ಒಳಗೊಂಡಂತೆ ಎಲಾ ಕಾರುಗಳ ಮೇಲೆ ನಾಲ್ಕು ಪ್ರತಿಶತದಷ್ಟು ಬೆಲೆ ಏರಿಕೆಯನ್ನು ಮಾಡಲಿದೆ
2025ರ ಜನವರಿಯಿಂದ ಅನ್ವಯವಾಗುವಂತೆ ಮಾರುತಿ ತನ್ನ ಕಾರುಗಳ ಬೆಲೆಯಲ್ಲಿ ಮೇಲ್ಮುಖ ಪರಿಷ್ಕರಣೆಯನ್ನು ಘೋಷಿಸಿದೆ. ಬೆಲೆ ಏರಿಕೆಯ ಪ್ರಮಾಣವು ನಾಲ್ಕು ಪ್ರತಿಶತದವರೆಗೆ ಇರುತ್ತದೆ, ಆದರೆ ಇದು ಮೊಡೆಲ್‌ಗಿಂತ ಮೊಡೆಲ್‌ಗೆ ಬದಲಾಗುತ್ತದೆ. ಪ್ರಮುಖವಾಗಿ, ಬೆಲೆ ಏರಿಕೆಯು ಅರೆನಾ ಮತ್ತು ನೆಕ್ಸಾ ಡೀಲರ್‌ಶಿಪ್‌ಗಳಲ್ಲಿ ಮಾರಾಟವಾಗುವ 17 ಮೊಡೆಲ್‌ಗಳನ್ನು ಒಳಗೊಂಡಿರುವ ಕಾರು ತಯಾರಕರ ಸಂಪೂರ್ಣ ಕಾರುಗಳ ಪಟ್ಟಿಗೆ ಅನ್ವಯಿಸುತ್ತದೆ.
ಬೆಲೆ ಏರಿಕೆ ಏಕೆ?
ಮಾರುತಿ ಪ್ರಕಾರ, ಮುಂಬರುವ ಬೆಲೆ ಏರಿಕೆಯು ಉತ್ಪಾದನಾ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳ ಹೆಚ್ಚಳವನ್ನು ಸರಿದೂಗಿಸುವ ಗುರಿಯನ್ನು ಹೊಂದಿದೆ. ಬೆಲೆ ಏರಿಕೆಯಿಂದ ಪ್ರಭಾವಿತವಾಗಿರುವ ಮಾರುತಿ ಮೊಡೆಲ್‌ಗಳೆಂದರೆ ಆಲ್ಟೊ ಕೆ10, ಡಿಜೈರ್, ಸ್ವಿಫ್ಟ್, ಬ್ರೆಝಾ, ಫ್ರಾಂಕ್ಸ್, ಎರ್ಟಿಗಾ, ಬಲೆನೊ, ವ್ಯಾಗನ್ ಆರ್, ಸೆಲೆರಿಯೊ, ಎಕ್ಸ್‌ಎಲ್ 6, ಇಗ್ನಿಸ್, ಇಕೊ, ಜಿಮ್ನಿ, ಗ್ರ್ಯಾಂಡ್ ವಿಟಾರಾ, ಎಸ್-ಪ್ರೆಸ್ಸೊ, ಸಿಯಾಜ್, ಮತ್ತು ಇನ್ವಿಕ್ಟೊ. ಉಲ್ಲೇಖಿಸಲಾದ ಹೆಚ್ಚಿನ ಕಾರುಗಳು ಸಿಎನ್‌ಜಿ ಆವೃತ್ತಿಯ ಆಯ್ಕೆಯೊಂದಿಗೆ ಲಭ್ಯವಿದೆ.
ಮಾರುತಿಯ ಅಸ್ತಿತ್ವದಲ್ಲಿರುವ ಕಾರುಗಳ ಬೆಲೆಗಳನ್ನು ಇಲ್ಲಿ ನೋಡಿ:
ಅರೆನಾ ಕಾರುಗಳು
ಮಾರುತಿ ಸುಝುಕಿ ಅರೆನಾ |
ಬೆಲೆ ರೇಂಜ್ (ಎಕ್ಸ್-ಶೋರೂಮ್) |
ಆಲ್ಟೊ ಕೆ10 |
3.99 ಲಕ್ಷ ರೂ. ನಿಂದ 5.96 ಲಕ್ಷ ರೂ. |
ಎಸ್-ಪ್ರೆಸ್ಸೊ |
4.27 ಲಕ್ಷ ರೂ. ನಿಂದ 6.12 ಲಕ್ಷ ರೂ. |
ವ್ಯಾಗನ್ ಆರ್ |
5.54 ಲಕ್ಷ ರೂ. ನಿಂದ 7.33 ಲಕ್ಷ ರೂ. |
ಸೆಲೆರಿಯೊ |
4.99 ಲಕ್ಷ ರೂ. ನಿಂದ 7.05 ಲಕ್ಷ ರೂ. |
ಸ್ವಿಫ್ಟ್ |
6.49 ಲಕ್ಷ ರೂ. ನಿಂದ 9.59 ಲಕ್ಷ ರೂ. |
ಡಿಜೈರ್ |
6.79 ಲಕ್ಷ ರೂ. ನಿಂದ 10.14 ಲಕ್ಷ ರೂ. (ಪರಿಚಯಾತ್ಮಕ) |
ಬ್ರೆಝಾ |
8.34 ಲಕ್ಷ ರೂ. ನಿಂದ 14.14 ಲಕ್ಷ ರೂ. |
ಎರ್ಟಿಗಾ |
8.69 ಲಕ್ಷ ರೂ. ನಿಂದ 13.03 ಲಕ್ಷ ರೂ. |
ಈಕೊ |
5.32 ಲಕ್ಷ ರೂ. ನಿಂದ 6.58 ಲಕ್ಷ ರೂ. |
ಇದನ್ನೂ ಓದಿ: ಹಳೆಯ ಮೊಡೆಲ್‌ಗಿಂತ ಹೊಸ Honda Amazeನಲ್ಲೇ ಹೆಚ್ಚು ಮೈಲೇಜ್.. ಇಲ್ಲಿದೆ ಹೋಲಿಕೆ
ನೆಕ್ಸಾ ಕಾರುಗಳು
ಮಾರುತಿ ನೆಕ್ಸಾ ಕಾರುಗಳು |
ಬೆಲೆ (ಎಕ್ಸ್-ಶೋರೂಮ್) |
ಫ್ರಾಂಕ್ಸ್ |
7.52 ಲಕ್ಷ ರೂ. ನಿಂದ 13.04 ಲಕ್ಷ ರೂ. |
ಜಿಮ್ನಿ |
12.74 ಲಕ್ಷ ರೂ. ನಿಂದ 14.95 ಲಕ್ಷ ರೂ. |
ಇಗ್ನಿಸ್ |
5.84 ಲಕ್ಷ ರೂ. ನಿಂದ 8.06 ಲಕ್ಷ ರೂ. |
ಬಲೆನೊ |
6.66 ಲಕ್ಷ ರೂ. ನಿಂದ 9.83 ಲಕ್ಷ ರೂ. |
ಸಿಯಾಝ್ |
9.40 ಲಕ್ಷ ರೂ. ನಿಂದ 12.30 ಲಕ್ಷ ರೂ. |
ಎಕ್ಸ್‌ಎಲ್6 |
11.61 ಲಕ್ಷ ರೂ. ನಿಂದ 14.77 ಲಕ್ಷ ರೂ. |
ಗ್ರ್ಯಾಂಡ್ ವಿಟಾರ |
10.99 ಲಕ್ಷ ರೂ. ನಿಂದ 20.09 ಲಕ್ಷ ರೂ. |
ಇನ್ವಿಕ್ಟೋ |
25.21 ಲಕ್ಷ ರೂ. ನಿಂದ 28.92 ಲಕ್ಷ ರೂ. |
ಮಾರುತಿಯು ಮಾಸ್ ಮಾರ್ಕೆಟ್‌ನ ವಿಭಾಗದಲ್ಲಿ ಪ್ರತಿ ಬಜೆಟ್ ಬೆಲೆಗೆ ಕಾರುಗಳನ್ನು ನೀಡುತ್ತದೆ, ಇದರ ಅತ್ಯಂತ ಕೈಗೆಟಕುವ ಕಾರು ಎಂದರೆ ಆಲ್ಟೊ ಕೆ 10 (3.99 ಲಕ್ಷ ರೂ.ಗಳಿಂದ) ಆಗಿದ್ದು, ಆದರೆ ಅತ್ಯಂತ ದುಬಾರಿ ಕೊಡುಗೆಯೆಂದರೆ ಇನ್ವಿಕ್ಟೊ (ರೂ. 28.92 ಲಕ್ಷದವರೆಗೆ) ಆಗಿದೆ.
2025ಕ್ಕೆ ಮಾರುತಿಯ ಯೋಜನೆಗಳು ಏನು?
ಮುಂಬರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ, ಮಾರುತಿ ತನ್ನ eವಿಟಾರಾ (ಔಪಚಾರಿಕವಾಗಿ ಇವಿಎಕ್ಸ್) ನ ಉತ್ಪಾದನಾ ಆವೃತ್ತಿಯನ್ನು ಒಳಗೊಂಡಂತೆ ಕೆಲವು ಹೊಸ ಕಾರುಗಳನ್ನು ಪ್ರದರ್ಶಿಸುವ ಸಾಧ್ಯತೆಯಿದೆ. ಮಾರುತಿಯ ಮೊಟ್ಟ ಮೊದಲ ಎಲೆಕ್ಟ್ರಿಕ್ ಕಾರನ್ನು (ಇವಿ) 2025ರ ಆರಂಭದಲ್ಲಿ ಮಾರಾಟಕ್ಕೆ ತರಬಹುದೆಂದು ನಿರೀಕ್ಷಿಸಲಾಗಿದೆ.
ಕಾರುಗಳ ಲೋಕದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ WhatsApp ಚಾನಲ್ ಅನ್ನು ಮಿಸ್ ಮಾಡದೇ ಫಾಲೋ ಮಾಡಿ
ಇನ್ನಷ್ಟು ಓದಿ: ಮಾರುತಿ ಸ್ವಿಫ್ಟ್ ಎಎಮ್‌ಟಿ