7-ಸೀಟರ್ ರೆನಾಲ್ಟ್ ಡಸ್ಟರ್ ಜಾಗತಿಕವಾಗಿ ಡೇಸಿಯಾ ಬಿಗ್‌ಸ್ಟರ್ ಆಗಿ ಅನಾವರಣ
ರೆನಾಲ್ಟ್ ಡಸ್ಟರ್ 2025 ಗಾಗಿ dipan ಮೂಲಕ ಅಕ್ಟೋಬರ್ 10, 2024 07:10 pm ರಂದು ಪ್ರಕಟಿಸಲಾಗಿದೆ
- 79 Views
- ಕಾಮೆಂಟ್ ಅನ್ನು ಬರೆಯಿರಿ
ಬಿಗ್‌ಸ್ಟರ್ ಮೊಡೆಲ್ ಡಸ್ಟರ್‌ನಂತೆಯೇ ವಿನ್ಯಾಸವನ್ನು ಪಡೆಯುತ್ತದೆ ಮತ್ತು 4x4 ಪವರ್‌ಟ್ರೇನ್ ಆಯ್ಕೆಯನ್ನು ಸಹ ಹೊಂದಿದೆ
-
ರೆನಾಲ್ಟ್ ಡಸ್ಟರ್ 7-ಸೀಟರ್ ಅನ್ನು ಜಾಗತಿಕವಾಗಿ ಡೇಸಿಯಾ ಬಿಗ್‌ಸ್ಟರ್ ಎಂದು ಅನಾವರಣಗೊಳಿಸಲಾಗಿದೆ.
-
ಎಕ್ಸ್‌ಟಿರಿಯರ್ ವಿನ್ಯಾಸವು 2025 ರ ಡಸ್ಟರ್ ಅನ್ನು ಹೋಲುವ ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳನ್ನು ಹೊಂದಿದೆ.
-
ಇದು 19-ಇಂಚಿನವರೆಗಿನ ಅಲಾಯ್ ವೀಲ್‌ಗಳು ಮತ್ತು ದೊಡ್ಡ ಮುಂಭಾಗದ ಬಂಪರ್ ಅನ್ನು ಹೊಂದಿದೆ.
-
ಇದು 10.1-ಇಂಚಿನ ಟಚ್‌ಸ್ಕ್ರೀನ್, 10-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಹೊಂದಿದೆ.
-
ಇದು ನಾಲ್ಕು ಎಂಜಿನ್ ಆಯ್ಕೆಗಳನ್ನು ಹೊಂದಿದೆ, ಅದರಲ್ಲಿ ಒಂದು ನಾಲ್ಕು-ವೀಲ್ ಡ್ರೈವ್ (4WD) ಸೆಟಪ್ ಅನ್ನು ಹೊಂದಿದೆ.
-
ಇದು 2025ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ಇದರ ಬೆಲೆ ಸುಮಾರು 12 ಲಕ್ಷ ರೂಪಾಯಿ (ಎಕ್ಸ್ ಶೋರೂಂ).
2025ರ ರೆನಾಲ್ಟ್ ಡಸ್ಟರ್‌ನ ವಿಸ್ತೃತ ಆವೃತ್ತಿಯನ್ನು ಡೇಸಿಯಾ ಬಿಗ್‌ಸ್ಟರ್ ಎಂದು ಕರೆಯಲಾಗುತ್ತದೆ, ಇದನ್ನು ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ ಮತ್ತು 2025 ರಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ರೆನಾಲ್ಟ್‌ನ ಅಂಗಸಂಸ್ಥೆಯಾದ ಡೇಸಿಯಾ, ಅದರ ಉತ್ಪಾದನೆ-ಸಿದ್ಧ ಆವೃತ್ತಿಯನ್ನು ಇಂದು ಅನಾವರಣಗೊಳಿಸುವ ಮೊದಲು 2021ರಲ್ಲಿ ಬಿಗ್‌ಸ್ಟರ್‌ನ ಪರಿಕಲ್ಪನೆಯನ್ನು ಪ್ರದರ್ಶಿಸಿತ್ತು. ಇದಕ್ಕೂ ಮೊದಲು, ರೆನಾಲ್ಟ್ 2025 ರಲ್ಲಿ ಭಾರತದಲ್ಲಿ ಡಸ್ಟರ್ ಅನ್ನು ಬಿಡುಗಡೆ ಮಾಡುವ ಯೋಜನೆಯನ್ನು ದೃಢಪಡಿಸಿತ್ತು, ಇದರಿಂದಾಗಿ ಬಿಗ್‌ಸ್ಟರ್ ಡಸ್ಟರ್‌ನ 7-ಆಸನಗಳ ಆವೃತ್ತಿಯಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯಿದೆ. ಡೇಸಿಯಾ ಬಿಗ್‌ಸ್ಟರ್‌ನಲ್ಲಿ ಯಾವೆಲ್ಲಾ ಆಫರ್‌ಗಳನ್ನು ಒಳಗೊಂಡಿದೆ ಎಂಬುದರ ಅವಲೋಕನ ಇಲ್ಲಿದೆ:
ಎಕ್ಸ್‌ಟಿರಿಯರ್
ಡೇಸಿಯಾ ಬಿಗ್‌ಸ್ಟರ್‌ನ ಮುಂಭಾಗದ ವಿನ್ಯಾಸವು ಡೇಸಿಯಾ ಡಸ್ಟರ್‌ನ ವಿನ್ಯಾಸವನ್ನು ಹೋಲುತ್ತದೆ, ವೈ-ಆಕಾರದ ಅಂಶಗಳೊಂದಿಗೆ ನಯವಾದ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಹೊಂದಿದೆ. ಡಸ್ಟರ್‌ನೊಂದಿಗಿನ ಒಂದು ಗಮನಾರ್ಹ ವ್ಯತ್ಯಾಸವೆಂದರೆ ಕೆಳಗಿನ ಗ್ರಿಲ್‌ನ ಸುತ್ತಲೂ ಪ್ಲಾಸ್ಟಿಕ್ ಹೊದಿಕೆ ಇಲ್ಲದಿರುವುದು. ಫಾಗ್ ಲ್ಯಾಂಪ್‌ಗಳನ್ನು ಬಂಪರ್ ಪಕ್ಕದಲ್ಲಿ ಇರಿಸಲಾಗಿದೆ ಮತ್ತು ಇದು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಸಹ ಹೊಂದಿದೆ.
ಬದಿಯಿಂದ ಗಮನಿಸುವಾಗ, ಬಿಗ್‌ಸ್ಟರ್ 19-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು, ಷಡ್ಭುಜೀಯ ವೀಲ್ ಆರ್ಚ್‌ಗಳು ಮತ್ತು ಕಪ್ಪು ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ, ಅದು ಇದರ ರಗಡ್ ಆದ ಎಸ್‌ಯುವಿ ಲುಕ್ ಅನ್ನು ಹೆಚ್ಚಿಸುತ್ತದೆ. ಟರ್ನ್ ಇಂಡಿಕೇಟರ್‌ಗಳನ್ನು ಸೈಡ್ ಮಿರರ್‌ಗಳಲ್ಲಿ ಸಂಯೋಜಿಸಲಾಗಿದೆ ಮತ್ತು ಹಿಂಭಾಗದ ಬಾಗಿಲಿನ ಹಿಡಿಕೆಗಳನ್ನು ಸಿ-ಪಿಲ್ಲರ್‌ನಲ್ಲಿ ಇರಿಸಲಾಗುತ್ತದೆ. ಇದು ಸಿಲ್ವರ್ ರೂಫ್ ರೇಲ್ಸ್ ಮತ್ತು ಕಪ್ಪು ರೂಫ್‌ನ ಆಯ್ಕೆಯನ್ನು ಸಹ ಹೊಂದಿದೆ.
ಹಿಂಭಾಗದಲ್ಲಿ, ವಿ-ಆಕಾರದ ಎಲ್ಇಡಿ ಟೈಲ್ ಲೈಟ್‌ಗಳು ಡಸ್ಟರ್‌ನಂತೆಯೇ ಇರುತ್ತವೆ. ಬೂಟ್ ಡೋರ್ ಕಾರ್ಬನ್-ಫೈಬರ್ ಸ್ಟ್ರಿಪ್ ಮೇಲೆ 'ಡೇಸಿಯಾ' ಅಕ್ಷರವನ್ನು ಹೊಂದಿದೆ ಮತ್ತು ಇದು ಲೈಟ್ ಕಲರ್‌ನ ಸ್ಕಿಡ್ ಪ್ಲೇಟ್‌ನೊಂದಿಗೆ ದಪ್ಪನಾದ ಹಿಂಭಾಗದ ಬಂಪರ್ ಅನ್ನು ಪಡೆಯುತ್ತದೆ. ಹಿಂಭಾಗವು ಒಟ್ಟಾರೆ ಫ್ಲಾಟ್ ವಿನ್ಯಾಸವನ್ನು ಹೊಂದಿದೆ, ಮತ್ತು ಇದು ನೋಟವನ್ನು ಪೂರ್ಣಗೊಳಿಸಲು ಸಂಯೋಜಿತ ಹಿಂಭಾಗದ ಸ್ಪಾಯ್ಲರ್ ಅನ್ನು ಪಡೆಯುತ್ತದೆ.
ಇಂಟಿರಿಯರ್, ಫೀಚರ್‌ಗಳು ಮತ್ತು ಸುರಕ್ಷತೆ
ಡೇಸಿಯಾ ಬಿಗ್‌ಸ್ಟರ್ ಡ್ಯುಯಲ್-ಟೋನ್ ಗ್ರೇ ಮತ್ತು ಕಪ್ಪು ಇಂಟಿರಿಯರ್ ಅನ್ನು ಹೊಂದಿದೆ, ಕ್ಯಾಬಿನ್‌ನಾದ್ಯಂತ ಸುಸ್ಥಿರ ಮೆಟಿರಿಯಲ್‌ಗಳನ್ನು ಬಳಸಲಾಗಿದೆ.
ಡ್ಯಾಶ್‌ಬೋರ್ಡ್ ಡಸ್ಟರ್‌ನಂತೆಯೇ ಇದೆ, ಇದರಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್ ಇದ್ದು, ಡ್ರೈವರ್‌ನ ಕಡೆಗೆ ವಾಲಿದೆ ಮತ್ತು 10-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ ಇರುತ್ತದೆ. ಇದು 6-ಸ್ಪೀಕರ್ ಅರ್ಕಾಮಿಸ್ ಸೌಂಡ್ ಸಿಸ್ಟಮ್, ಪನರೋಮಿಕ್ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ.
ಡ್ರೈವರ್ ಸೀಟ್ ಇಲೆಕ್ಟ್ರಿಕ್ ಎಡ್ಜಸ್ಟೇಬಲ್ ಆಗಿದ್ದು, ಮ್ಯಾನುವಲ್ ಲಂಬರ್ ಸಪೋರ್ಟ್ ಅನ್ನು ಹೊಂದಿದೆ. ಮಧ್ಯದ ಆರ್ಮ್‌ರೆಸ್ಟ್ ತಂಪಾಗುವ ಸ್ಟೋರೇಜ್ ಬಾಕ್ಸ್, ಚಾರ್ಜಿಂಗ್ ಸ್ಪೇಸ್ ಮತ್ತು ಹಿಂಭಾಗದ ಎಸಿ ವೆಂಟ್ಸ್‌ಗಳನ್ನು ಒಳಗೊಂಡಿದೆ.
ಎರಡನೇ ಸಾಲಿನಲ್ಲಿ, ಇದು 40:20:40 ಅನುಪಾತದಲ್ಲಿ ಮಡಚಬಹುದಾದ ಬೆಂಚ್ ಸೀಟ್ ಅನ್ನು ಪಡೆಯುತ್ತದೆ. ಎಲ್ಲಾ ಮೂರು ಸೀಟ್‌ಗಳು ಸರಿಹೊಂದಿಸಬಹುದಾದ ಹೆಡ್‌ರೆಸ್ಟ್‌ಗಳನ್ನು ಹೊಂದಿವೆ, ಮತ್ತು ಮಧ್ಯದ ಆಸನವು ಕಪ್‌ಹೋಲ್ಡರ್‌ಗಳೊಂದಿಗೆ ಆರ್ಮ್‌ರೆಸ್ಟ್‌ನಂತೆ ಕಾರ್ಯನಿರ್ವಹಿಸಲು ಮಡಚಬಹುದು.
ಜಾಗತಿಕ ಮೊಡೆಲ್ ಮೂರನೇ ಸಾಲನ್ನು ಪಡೆಯುವುದಿಲ್ಲ, ಇದು 667 ಲೀಟರ್ ಬೂಟ್ ಸ್ಪೇಸ್ ಅನ್ನು ಒದಗಿಸುತ್ತದೆ. ಹಾಗೆಯೇ, ಭಾರತೀಯ ಆವೃತ್ತಿಯು ಮೂರನೇ ಸಾಲನ್ನು ಒಳಗೊಂಡಿರುವ ನಿರೀಕ್ಷೆಯಿದೆ, ಆದರೆ ಇದು ಬೂಟ್ ಲೋಡಿಂಗ್ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ಸುರಕ್ಷತೆಗಾಗಿ, ಬಿಗ್‌ಸ್ಟರ್ ಬಹು ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ಸಜ್ಜುಗೊಂಡಿದೆ.
ಇದನ್ನೂ ಓದಿ: ಈ ಹಬ್ಬದ ಸೀಸನ್‌ನಲ್ಲಿ ಹೋಂಡಾ ಕಾರುಗಳ ಮೇಲೆ ರೂ 1 ಲಕ್ಷಕ್ಕಿಂತ ಹೆಚ್ಚು ಡಿಸ್ಕೌಂಟ್ ಪಡೆಯಿರಿ
ಪವರ್‌ಟ್ರೈನ್ ಆಯ್ಕೆಗಳು
ಡೇಸಿಯಾ ಬಿಗ್‌ಸ್ಟರ್ ಅನ್ನು ವಿದೇಶದಲ್ಲಿ ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ, ಅದರ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ ಹೆಸರು |
ಹೈಬ್ರಿಡ್ 155 |
ಟಿಸಿಇ 140 |
ಟಿಸಿಇ 130 4x4 |
ಎಂಜಿನ್ ಸಾಮರ್ಥ್ಯ |
ಸ್ಟ್ರಾಂಗ್-ಹೈಬ್ರಿಡ್ 4-ಸಿಲಿಂಡರ್ ಪೆಟ್ರೋಲ್ (ಎಂಜಿನ್ ಸಾಮರ್ಥ್ಯವನ್ನು ಬಹಿರಂಗಪಡಿಸಲಾಗಿಲ್ಲ) |
1.2 ಲೀಟರ್ 3-ಸಿಲಿಂಡರ್ 48V ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಹೊಂದಿರುವ ಟರ್ಬೊ-ಪೆಟ್ರೋಲ್ ಎಂಜಿನ್ |
1.2 ಲೀಟರ್ 3-ಸಿಲಿಂಡರ್ 48V ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಹೊಂದಿರುವ ಟರ್ಬೊ-ಪೆಟ್ರೋಲ್ ಎಂಜಿನ್ |
ಪವರ್ |
157 ಪಿಎಸ್ |
142 ಪಿಎಸ್ |
132 ಪಿಎಸ್ |
ಟಾರ್ಕ್ |
170 ಎನ್‌ಎಮ್ |
230 ಎನ್‌ಎಮ್ |
230 ಎನ್‌ಎಮ್ |
ಗೇರ್‌ಬಾಕ್ಸ್ |
ಇನ್ನೂ ಘೋಷಣೆಯಾಗಿಲ್ಲ |
6-ಸ್ಪೀಡ್ ಮ್ಯಾನುವಲ್ |
6-ಸ್ಪೀಡ್ ಮ್ಯಾನುವಲ್ |
ಡ್ರೈವ್‌ಟ್ರೈನ್* |
FWD |
FWD |
4WD |
FWD = ಫ್ರಂಟ್-ವೀಲ್-ಡ್ರೈವ್
4WD = 4 ವೀಲ್ ಡ್ರೈವ್
ಪೆಟ್ರೋಲ್-ಎಲ್‌ಪಿಜಿ ಚಾಲಿತ Eco-G 140, ಇದು 1.2-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಇಂಜಿನ್ ಆಗಿದ್ದು, ಜಾಗತಿಕ-ಸ್ಪೆಕ್ ಬಿಗ್‌ಸ್ಟರ್‌ನೊಂದಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಭಾರತದಲ್ಲಿ, ಬಿಗ್‌ಸ್ಟರ್ 2025 ರ ರೆನಾಲ್ಟ್ ಡಸ್ಟರ್‌ನಂತೆಯೇ ಅದೇ ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯುವ ನಿರೀಕ್ಷೆಯಿದೆ, ಅದು ಇನ್ನೂ ಬಹಿರಂಗವಾಗಿಲ್ಲ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
7-ಸೀಟರ್ ರೆನಾಲ್ಟ್ ಡಸ್ಟರ್ ಮೊಡೆಲ್ 2025ರ ರೆನಾಲ್ಟ್ ಡಸ್ಟರ್‌ಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರುತ್ತದೆ, ಇದು ರೂ 10 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿರಬಹುದೆಂದು ನಿರೀಕ್ಷಿಸಲಾಗಿದೆ. ಇದು ಟಾಟಾ ಸಫಾರಿ, ಎಮ್‌ಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಜರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ700ನಂತಹ ಮಧ್ಯಮ ಗಾತ್ರದ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ