ಈ ಹಬ್ಬದ ಸೀಸನ್‌ನಲ್ಲಿ ಹೋಂಡಾ ಕಾರುಗಳ ಮೇಲೆ ರೂ 1 ಲಕ್ಷಕ್ಕಿಂತ ಹೆಚ್ಚು ಡಿಸ್ಕೌಂಟ್ ಪಡೆಯಿರಿ
ಹೊಂಡಾ ಇಲೆವಟ್ ಗಾಗಿ yashika ಮೂಲಕ ಅಕ್ಟೋಬರ್ 04, 2024 03:48 pm ರಂದು ಪ್ರಕಟಿಸಲಾಗಿದೆ
- 94 Views
- ಕಾಮೆಂಟ್ ಅನ್ನು ಬರೆಯಿರಿ
ಹೆಚ್ಚುವರಿಯಾಗಿ, ಹೋಂಡಾ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಸುಧಾರಿತ ವಾರಂಟಿ ವಿಸ್ತರಣೆಯನ್ನು ಪರಿಚಯಿಸಿದೆ, 7 ವರ್ಷಗಳವರೆಗೆ ಅಥವಾ ಅನಿಯಮಿತ ಕಿಲೋಮೀಟರ್‌ಗಳವರೆಗೆ ವಾರಂಟಿ ಕವರೇಜ್ ನೀಡುತ್ತದೆ
-
ಐದನೇ ತಲೆಮಾರಿನ ಹೋಂಡಾ ಸಿಟಿಯಲ್ಲಿ ಗರಿಷ್ಠ 1.14 ಲಕ್ಷ ರೂ.ಗಳವರೆಗೆ ಡಿಸ್ಕೌಂಟ್‌ಗಳು ಲಭ್ಯವಿವೆ.
-
ಅಮೇಜ್ 1.12 ಲಕ್ಷ ರೂ.ವರೆಗಿನ ಪ್ರಯೋಜನಗಳೊಂದಿಗೆ ಬರುತ್ತದೆ.
-
ಹೋಂಡಾ ಎಲಿವೇಟ್ 75,000 ರೂ.ವರೆಗಿನ ಒಟ್ಟು ಪ್ರಯೋಜನಗಳನ್ನು ಪಡೆಯುತ್ತದೆ.
-
ಹೋಂಡಾ ಸಿಟಿ ಹೈಬ್ರಿಡ್ 90,000 ರೂ.ವರೆಗಿನ ಆಫರ್‌ಗಳನ್ನು ಹೊಂದಿದೆ.
-
ಆಫರ್‌ಗಳು 2024ರ ಅಕ್ಟೋಬರ್ ಅಂತ್ಯದವರೆಗೆ ಮಾತ್ರ ಮಾನ್ಯವಾಗಿರುತ್ತವೆ.
ಹಬ್ಬದ ಸೀಸನ್‌ನ ಆಫರ್‌ಗಳು ಪ್ರಾರಂಭವಾಗಿವೆ ಮತ್ತು ಹೋಂಡಾ ಸಿಟಿ ಹೈಬ್ರಿಡ್ ಸೇರಿದಂತೆ ತನ್ನ ಸಂಪೂರ್ಣ ಕಾರುಗಳ ಪಟ್ಟಿಯಲ್ಲಿ ಹಬ್ಬದ ಸೀಸನ್‌ನ ಮಾರಾಟವನ್ನು ಲಾಭ ಮಾಡಿಕೊಳ್ಳಲು ಹೋಂಡಾ ವಿವಿಧ ಆಫರ್‌ಗಳನ್ನು ಪರಿಚಯಿಸಿದೆ. ಆದರೆ, ಈ ಪ್ರಯೋಜನಗಳನ್ನು ಕ್ಯಾಶ್ ಡಿಸ್ಕೌಂಟ್‌ಗಳು, ಕಾರ್ಪೊರೇಟ್ ಡಿಸ್ಕೌಂಟ್‌ಗಳು ಮತ್ತು ಅದರ ಯಾವುದೇ ಮೊಡೆಲ್‌ಗಳಿಗೆ ಎಕ್ಸ್‌ಚೇಂಜ್ ಬೋನಸ್‌ಗಳಾಗಿ ಹೇಗೆ ವಿಂಗಡಿಸಲಾಗಿದೆ ಎಂಬುದರ ಕುರಿತು ಹೋಂಡಾ ಯಾವುದೇ ವಿವರಗಳನ್ನು ಒದಗಿಸಿಲ್ಲ. ಈ ಕೆಳಗೆ ಮಾಡೆಲ್-ವಾರು ಆಫರ್ ವಿವರಗಳನ್ನು ನೀಡಲಾಗಿದ್ದು, ಅಕ್ಟೋಬರ್ ಅಂತ್ಯದವರೆಗೆ ಇದು ಮಾನ್ಯವಾಗಿರುತ್ತವೆ.
ಗಮನಿಸಿ: ಹೋಂಡಾ ಅಕ್ಟೋಬರ್ ಆಫರ್‌ಗಳ ಭಾಗವಾಗಿ 3-ವರ್ಷದ ಉಚಿತ ನಿರ್ವಹಣೆ ಪ್ಯಾಕೇಜ್ ಅನ್ನು ನೀಡುತ್ತಿದ್ದು, 3 ವರ್ಷಗಳವರೆಗೆ ಅಥವಾ 30,000 ಕಿಮೀ.ವರೆಗೆ (ಈ ಎರಡರಲ್ಲಿ ಯಾವುದು ಮೊದಲು ಬರುತ್ತದೋ ಅಲ್ಲಿಯವರೆಗೆ) ಮಾನ್ಯವಾಗಿರುತ್ತದೆ
ಹೋಂಡಾ ಅಮೇಜ್
ಆಫರ್‌ಗಳು |
ಮೊತ್ತ |
ಒಟ್ಟು ಲಾಭಗಳು |
1.12 ಲಕ್ಷ ರೂ.ವರೆಗೆ |
-
ಹೋಂಡಾ ಅಮೇಜ್‌ನ ಟಾಪ್-ಸ್ಪೆಕ್ ವಿಎಕ್ಸ್ ಮತ್ತು ಎಲೈಟ್ ವೇರಿಯೆಂಟ್‌ಗಳನ್ನು ಹುಡುಕುತ್ತಿರುವ ಗ್ರಾಹಕರು ಮೇಲೆ ತಿಳಿಸಲಾದ ಆಫರ್‌ಗಳನ್ನು ಪಡೆಯಬಹುದು.
-
ಬೇಸ್-ಸ್ಪೆಕ್ ಇ ಮತ್ತು ಮಿಡ್-ಸ್ಪೆಕ್ ಎಸ್ ವೇರಿಯೆಂಟ್‌ಗಳನ್ನು ಆಯ್ಕೆ ಮಾಡುವ ಗ್ರಾಹಕರು ಕ್ರಮವಾಗಿ 82,000 ರೂ. ಮತ್ತು 92,000 ರೂ.ಗಳ ಒಟ್ಟು ಆಫರ್‌ಗಳನ್ನು ಪಡೆಯಬಹುದು.
-
ಹೋಂಡಾದ ಸಬ್-4ಎಮ್ ಸೆಡಾನ್‌ನ ಬೆಲೆ 7.20 ಲಕ್ಷ ರೂ.ನಿಂದ 9.96 ಲಕ್ಷ ರೂ.ವರೆಗೆ ಇದೆ.
ಹೊಂಡಾ ಸಿಟಿ ಹೈಬ್ರಿಡ್
ಆಫರ್‌ಗಳು |
ಮೊತ್ತ |
ಒಟ್ಟು ಲಾಭಗಳು |
90,000 ರೂ.ವರೆಗೆ |
-
ಹೋಂಡಾವು ಹೋಂಡಾ ಸಿಟಿ ಹೈಬ್ರಿಡ್ ಅನ್ನು ಒಟ್ಟು ರೂ 90,000 ವರೆಗೆ ರಿಯಾಯಿತಿಯೊಂದಿಗೆ ನೀಡುತ್ತಿದೆ, ಇದು ಆಯ್ಕೆ ಮಾಡಲಾದ ಮೊಡೆಲ್‌ಗಳು ಅಥವಾ ವೇರಿಯೆಂಟ್‌ಗಳನ್ನು ಅವಲಂಬಿಸಿರುತ್ತದೆ.
-
ಹೋಂಡಾ ಸಿಟಿ ಹೈಬ್ರಿಡ್‌ನ ಬೆಲೆಗಳು 19 ಲಕ್ಷ ರೂ.ನಿಂದ 20.55 ಲಕ್ಷ ರೂ.ಗಳವರೆಗೆ ಇರುತ್ತದೆ.
ಐದನೇ ಜನರೇಶನ್‌ನ ಹೋಂಡಾ ಸಿಟಿ
ಆಫರ್‌ಗಳು |
ಮತ್ತ |
ಒಟ್ಟು ಲಾಭಗಳು |
1.14 ಲಕ್ಷ ರೂ.ವರೆಗೆ |
-
ಕಾರು ತಯಾರಕರು ಹೋಂಡಾ ಸಿಟಿ ಸೆಡಾನ್ ಅನ್ನು ಒಟ್ಟು 1.14 ಲಕ್ಷ ರೂ.ವರೆಗಿನ ರಿಯಾಯಿತಿಯೊಂದಿಗೆ ನೀಡುತ್ತಿದ್ದಾರೆ, ಆದರೆ ಇದು ಆಯ್ಕೆ ಮಾಡಲಾದ ಮೊಡೆಲ್‌ಗಳು ಅಥವಾ ವೇರಿಯೆಂಟ್‌ಗಳನ್ನು ಅವಲಂಬಿಸಿದೆ.
-
ಇದರ ಬೆಲೆ 11.82 ಲಕ್ಷ ರೂ.ನಿಂದ 16.35 ಲಕ್ಷ ರೂ.ವರೆಗೆ ಇರಲಿದೆ.
ಹೋಂಡಾ ಎಲಿವೇಟ್
ಆಫರ್‌ಗಳು |
ಮೊತ್ತ |
ಒಟ್ಟು ಲಾಭಗಳು |
75,000 ರೂ.ವರೆಗೆ |
-
ಹೋಂಡಾ ಎಲಿವೇಟ್ ಎಸ್‌ಯುವಿಯನ್ನು ಒಟ್ಟು 75,000 ರೂ.ವರೆಗಿನ ಪ್ರಯೋಜನಗಳೊಂದಿಗೆ ನೀಡುತ್ತಿದೆ. ಆಯ್ಕೆ ಮಾಡಿದ ಮೊಡೆಲ್ ಅಥವಾ ವೇರಿಯೆಂಟ್‌ನ ಮೇಲೆ ಡಿಸ್ಕೌಂಟ್‌ಗಳು ಬದಲಾಗಬಹುದು.
-
ಹೋಂಡಾ ಎಲಿವೇಟ್‌ನ ಬೆಲೆ 11.69 ಲಕ್ಷ ರೂ.ನಿಂದ 16.43 ಲಕ್ಷ ರೂ.ವರೆಗೆ ಇದೆ.
ಇದನ್ನೂ ಓದಿ: 12.86 ಲಕ್ಷ ರೂ. ಬೆಲೆಗೆ Honda Elevate ಅಪೆಕ್ಸ್ ಎಡಿಷನ್ ಬಿಡುಗಡೆ
ವಿಸ್ತೃತ ವಾರಂಟಿ ಅವಧಿಗಳು
ಹೋಂಡಾ ಹೊಸ ಮತ್ತು ಅಸ್ತಿತ್ವದಲ್ಲಿರುವ ಹೋಂಡಾ ಗ್ರಾಹಕರಿಗೆ ಸುಧಾರಿತ ವಾರಂಟಿ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ನೀವು ಈಗ ವಾರಂಟಿ ವಿಸ್ತರಣೆಯನ್ನು 7 ವರ್ಷಗಳವರೆಗೆ/ಅನಿಯಮಿತ ಕಿಮೀವರೆಗೆ ಪಡೆಯಬಹುದು. ಈ ಯೋಜನೆಯು ಹೋಂಡಾ ಎಲಿವೇಟ್, ಸಿಟಿ, ಸಿವಿಕ್, ಸಿಟಿ ಹೈಬ್ರಿಡ್, ಅಮೇಜ್, ಜಾಝ್ ಮತ್ತು WR-V ನ ಎಲ್ಲಾ ಪೆಟ್ರೋಲ್ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತದೆ.
ಗಮನಿಸಿ
-
ಮೇಲೆ ತಿಳಿಸಿದ ಆಫರ್‌ಗಳು ಸ್ಟಾಕ್ ಇರುವವರೆಗೆ ಮಾನ್ಯವಾಗಿರುತ್ತವೆ.
-
ಮೇಲೆ ತಿಳಿಸಲಾದ ಡಿಸ್ಕೌಂಟ್‌ಗಳು ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಹೋಂಡಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.
-
ಉಲ್ಲೇಖಿಸಲಾದ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂ ಬೆಲೆಗಳಾಗಿವೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ : ಹೋಂಡಾ ಎಲಿವೆಟ್ ಆನ್ ರೋಡ್ ಬೆಲೆ