ಇನ್ನೋವಾ ಕ್ರಿಸ್ಟಾ : ಪೆಟ್ರೋಲ್ Vs ಡೀಸೆಲ್ -ಯಾವುದು ಕೊಳ್ಳಬೇಕು?
ಟೊಯೋಟಾ ಇನೋವಾ ಕ್ರಿಸ್ಟಾ 2016-2020 ಗಾಗಿ nabeel ಮೂಲಕ ಮಾರ್ಚ್ 19, 2019 02:46 pm ರಂದು ಪ್ರಕಟಿಸಲಾಗಿದೆ
- 77 Views
- ಕಾಮೆಂಟ್ ಅನ್ನು ಬರೆಯಿರಿ
ಟೊಯೋಟಾ ಇನೋವಾ ಭಾರತದಲ್ಲಿ ಒಂದು ಚಿರಪರಿಚಿತ ಹೆಸರು, ಮತ್ತು ಕ್ರಿಸ್ಟಾ ಅತಿ ಹೆಚ್ಚು ಮಾರಾಟವಾಗುವ SUV/MPV ಗಳಲ್ಲಿ ಒಂದಾಗಿ, ಇನ್ನೋವಾ ಪಡೆಡಿರುವ ಪ್ರಖ್ಯಾತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಪ್ರಾರಂಭದಲ್ಲಿ ಎರೆಡು ಡೀಸೆಲ್ ಆಯ್ಕೆಗಳಲ್ಲಿ ಬರುತ್ತಿತ್ತು. ಟೊಯೋಟಾ ಈಗ ಪೆಟ್ರೋಲ್ MPV ಮಾಡೆಲ್ ಅನ್ನು ಸಹ ಹೊರತಂದಿದೆ. ಪೆಟ್ರೋಲ್ ವೇರಿಯೆಂಟ್ ಬೆಲೆ ರೂ ೧೩,೭೨,೮೦೦ ನಿಂದ ೧೯,೬೨,೩೦೦ (ಎಕ್ಸ್ ಶೋ ರೂಮ್ ಡೆಲ್ಲಿ )ವರೆಗೂ ಇದೆ. ನೀವು ಐಶಾರಾಮಿ ಮತ್ತು ಶಕ್ತಿಯುತ ಮೈಫ್ವ್ ಅನ್ನು ನಿಮ್ಮ ಕುಟುಂಬಕ್ಕಾಗಿ ಕೊಳ್ಳಲು ನೋಡುತ್ತಿದ್ದರೆ ನೀವು ಕ್ರಿಸ್ಟಾ ಕೊಂಡುಕೊಳ್ಳುವಿರಿ. ಹಾಗಾಗಿ , ಯಾವುದು ಉತ್ತಮ ಆಯ್ಕೆ ಪೆಟ್ರೋಲ್ ಅಥವಾ ಡೀಸೆಲ್ ? ನಾವು ನೋಡೋಣ .
ಎಂಜಿನೆಗಳು
ಇನ್ನೋವಾ ಕ್ರಿಸ್ಟಾ ಡೀಸೆಲ್ ವೇರಿಯೆಂಟ್ ಗಳು ಎರೆಡು ಎಂಜಿನ್ ಆಯ್ಕೆ ಗಳಲ್ಲಿ ಬರುತ್ತದೆ 2.4-ಲೀಟರ್ ಮತ್ತು 2.8-ಲೀಟರ್ 2GD-FTV. ಪೆಟ್ರೋಲ್ ವೇರಿಯೆಂಟ್ ಗಳು ಒಂದು ಎಂಜಿನ್ ಆಯ್ಕೆಯಲ್ಲಿ ಬರುತ್ತದೆ 2.7-ಲೀಟರ್ Dual VVT-i. ಪವರ್ ನ ವಿಚಾರದಲ್ಲಿ ಪೆಟ್ರೋಲ್ ಎಂಜಿನ್ ನ ಪವರ್ ಎರೆಡು ಡೀಸೆಲ್ ಗಳ ಮದ್ಯ ಬರುತ್ತದೆ. ಪೆಟ್ರೋಲ್ ಎಂಜಿನ್ ಗರಿಷ್ಟ 166PS ಪವರ್ ನೀಡುತ್ತದೆ, ಹಾಗು ಡೀಸೆಲ್ ಎಂಜಿನ್ ಗಳು 150PS ಮತ್ತು 174PS ನೀಡುತ್ತದೆ (2.4 ಮತ್ತು 2.8-ಲೀಟರ್ ನವುಗಳು). ತಾರ್ಕ್ ನ ಬಗ್ಗೆ ನೋಡಿದಾಗ ಡೀಸೆಲ್ ನಾವುಗಳ ತೋರ್ಕ್ ಪೆಟ್ರೋಲ್ ನದ್ದಕ್ಕಿಂತ ಹೆಚ್ಚಿದೆ, 343Nm ಮತ್ತು 360Nm, ಪೆಟ್ರೋಲ್ ನಲ್ಲಿ 245Nm. ಪೆಟ್ರೋಲ್ ಎಂಜಿನ್ ನ ಕಾರ್ಯ ದಕ್ಷತೆ ಎರೆಡು ಡೀಸೆಲ್ ಎಂಜಿನ್ ಕಾರ್ಯ ದಕ್ಷತೆಯ ಮದ್ಯ ಬರುತ್ತದೆ ಎನ್ನಬಹುದು. ಒಂದು ಮುಖ್ಯವಾದ ವಿಚಾರವೆಂದರೆ ಪೆಟ್ರೋಲ್ ಎಂಜಿನ್ NCR ವ್ಯಾಪಕದಲ್ಲಿ ಇದೆ ಹಾಗು ಎರೆದುವು ಡೀಸೆಲ್ ಎಂಜಿನ್ ಗಳು ದೆಹಲಿ ಡೀಸೆಲ್ ನಿಷೇದ ಪಟ್ಟಿಯಲ್ಲಿ ಇದೆ.
2.4 ಲೀಟರ್ ಡೀಸೆಲ್ ೫-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಜೊತೆಗೆ ಇದೆ, 2.8- ಲೀಟರ್ ಡೀಸೆಲ್ ೬-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನಲ್ಲಿ ಮಾತ್ರ ಇದೆ. 2.7-ಲೀಟರ್ ಪೆಟ್ರೋಲ್ ನಲ್ಲಿ ೫-ಸ್ಪೀಡ್ ಮಾನ್ಯುಯಲ್ ಹಾಗು ೬-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನಲ್ಲಿ ಬರುತ್ತದೆ.
ಮೈಲೇಜ್
ಒಂದು ತಿಳಿದಿರುವ ವಿಚಾರವೆಂದರೆ ಪೆಟ್ರೋಲ್ ಎಂಜಿನ್ ನಾವುಗಳ ಮೈಲೇಜ್ ಡೀಸೆಲ್ ಎಂಜಿನ್ ನವುಗಳಿಗಿಂತ ಕಡಿಮೆ. ಇದು ಒಂದು ಮುಖ್ಯ ಕಾರಣ ಡೀಸೆಲ್ ಕಾರುಗಳ ಮಾರಾಟ ಹೆಚ್ಚಾಗಲು , ಡೀಸೆಲ್ ನಿಷೇದವಾಗುವ ಮುಂಚೆ. ಎರೆಡೂ ಡೀಸೆಲ್ ಎಂಜಿನ್ ಗಳು 14 ನಿಂದ 15kmpl ಕೊಡುತ್ತದೆ, ಮತ್ತು ಪೆಟ್ರೋಲ್ ನಲ್ಲಿ ಆಟೋಮ್ಯಾಟಿಕ್ ವೇರಿಯೆಂಟ್ ಗಳಲ್ಲಿ 10.83 kmpl ಸಿಗುತ್ತದೆ ಎಂದು ಹೇಳಲಾಗಿದೆ, ಮತ್ತು 9.89kmpl ಮಾನ್ಯುಯಲ್ ಟ್ರಾನ್ಸ್ಮಿಷನ್ ನಲ್ಲಿ ಸಿಗುತ್ತದೆ. ಎರೆಡರಲ್ಲೂ eco ಮತ್ತು power drive ಮೋಡ್ ಇರುತ್ತದೆ.
ಬೆಲೆ
ಪೆಟ್ರೋಲ್ ಬೇಸ್ ವೇರಿಯೆಂಟ್ (2.7 GX MT, seven-seater) ಇನ್ನೋವಾ ಕ್ರಿಸ್ಟಾ ಬೆಲೆ ರೂ 13.57 ಲಕ್ಷ, ಹಾಗು ಬೇಸ್ ಡೀಸೆಲ್ (2.4 G MT, seven-seater) ಬೆಲೆ ರೂ 13.83 ಲಕ್ಷ. ಹಾಗಾಗಿ ಡೀಸೆಲ್ ಯೂನಿಟ್ ನ ಬೆಲೆ ರೂ ೩೦,೦೦೦ ಪೆಟ್ರೋಲ್ ಗಿಂತ ಹೆಚ್ಚಾಗುತ್ತದೆ. ಆದರೆ ಅನುಗುಣವಾದ (GX MT, seven-seater) ಡೀಸೆಲ್ ವೇರಿಯೆಂಟ್ ಬೆಲೆ ರೂ 14,69,681, ಇದು ರೂ 1.12 ಲಕ್ಷ ಅಧಿಕ. ಟಾಪ್ ವೇರಿಯೆಂಟ್ ಗಳ ಬೆಲೆ ವೆತ್ಯಾಸ ರೂ 1.31 ಲಕ್ಷ.
ಹಾಗಾಗಿ ಪೆಟ್ರೋಲ್ ಇನ್ನೋವಾ ಕ್ರಿಸ್ಟಾ ಕೊಂಡರೆ ರೂ 1.25 ಲಕ್ಷ ಡೀಸೆಲ್ ಗಿಂತಲೂ ಕಡಿಮೆಯಾಗುತ್ತದೆ. ಆದರೆ , ಅಂದಾಜು 9kmpl ಮೈಲೇಜ್ ಕಡಿಮೆ ಇರುತ್ತದೆ. ಮತ್ತು ಕಾರ್ಯದಕ್ಷತೆ ಯಲ್ಲಿ ಅಷ್ಟೇನೂ ವೆತ್ಯಾಸ ಇರುವುದಿಲ್ಲ . ಒಮ್ಮೆ ಪೆಟ್ರೋಲ್ ಮಾಡೆಲ್ ಅಣು ಡ್ರೈವ್ ಮಾಡಿದಾಗ ಹೆಚ್ಚಿನ ವಿಷಯ ತಿಳಿಯುತ್ತದೆ., ಅಲ್ಲಿಯವರೆಗೆ , ನೀವು Delhi/NCR ನವರಾಗಿದ್ದರೆ ನಿಮಗೆ ಬೇರೆ ಆಯ್ಕೆ ಇರುವುದಿಲ್ಲ.