• English
  • Login / Register

ಕಿಯಾದಿಂದ ಭಾರತದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಎಲೆಕ್ಟ್ರಿಕ್ ಕಾರು ನಿರ್ಮಾಣ, ಪ್ರತ್ಯೇಕ EV ಶೋರೂಂ ಪ್ರಾರಂಭ

ಕಿಯಾ ಇವಿ5 ಗಾಗಿ rohit ಮೂಲಕ ಅಕ್ಟೋಬರ್ 16, 2023 12:04 pm ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಇತ್ತೀಚೆಗೆ ಅನಾವರಣಗೊಂಡ EV3 ಎಲೆಕ್ಟ್ರಿಕ್ ಎಸ್‌ಯುವಿಯ ಪರಿಕಲ್ಪನೆಗಳನ್ನು ಹೊಸ-ಪೀಳಿಗೆಯ ಸೆಲ್ಟೋಸ್‌ನಲ್ಲಿ ಬಳಸುವ ಮತ್ತು ಅದರ ಎಲೆಕ್ಟ್ರಿಕ್ ಡೆರೈವೇಟಿವ್‌ಗಳು ಭಾರತದಲ್ಲಿ ಪಾದಾರ್ಪಣೆಗೊಳ್ಳುವ ಸಾಧ್ಯತೆ.

Kia EVs

 ಕಿಯಾ ಮೋಟಾರ್ಸ್ ಇತ್ತೀಚೆಗೆ ತನ್ನ 'ಕಿಯಾ EV ದಿನ'ವನ್ನು ಆಚರಿಸಿತು ಮತ್ತು ಈ ಸಮಯದಲ್ಲಿ, ಕಿಯಾ EV5 ನ ವಿಶೇಷಣಗಳ ಬಗ್ಗೆ ಹಂಚಿಕೊಳ್ಳುವುದರೊಂದಿಗೆ, ಕಂಪನಿಯು EV3 ಎಸ್‌ಯುವಿ ಮತ್ತು EV4 ಸೆಡಾನ್‌ನ ಪರಿಕಲ್ಪನೆಯ ಮಾಡೆಲ್‌ಗಳನ್ನು ಸಹ ಪ್ರದರ್ಶಿಸಿತು. ಈ ವಿಶೇಷ ದಿನದ ಸಂದರ್ಭದಲ್ಲಿ, ಕಂಪನಿಯು ಇನ್ನೂ ಅನೇಕ ಪ್ರಕಟಣೆಗಳನ್ನು ಮಾಡಿತು, ಅವುಗಳಲ್ಲಿ ಕೆಲವು ನಮ್ಮ ಗಮನ ಸೆಳೆದವು. ಕಿಯಾದ ಜಾಗತಿಕ EV ಪ್ಲ್ಯಾನ್ ಭಾರತದಲ್ಲಿ EV ಗಳನ್ನು ಉತ್ಪಾದಿಸುವುದು ಮತ್ತು ಅವುಗಳನ್ನು ವಿದೇಶಗಳಿಗೆ ರಫ್ತು ಮಾಡುವುದು ಮತ್ತು ಇಲ್ಲಿ ಎಲೆಕ್ಟ್ರಿಕ್ ಕಾರುಗಳಿಗಾಗಿ ವಿಶೇಷ ಶೋರೂಮ್‌ಗಳನ್ನು ತೆರೆಯುವುದನ್ನು ಒಳಗೊಂಡಿದೆ.

 

ಕಿಯಾದ ಹೊಚ್ಚಹೊಸ EV ರೇಂಜ್

Kia EV4

 ಕಿಯಾ ಮೋಟಾರ್ಸ್ ಪ್ರಪಂಚದಾದ್ಯಂತ ಅತಿ ಹೆಚ್ಚು ಮಾರುಕಟ್ಟೆಗಳಲ್ಲಿ ಎಲೆಕ್ಟ್ರಿಕ್ ಕಾರುಗಳೊಂದಿಗೆ ತನ್ನ ಹಿಡಿತವನ್ನು ಬಲಪಡಿಸಲು ಬಯಸಿದೆ ಮತ್ತು ಕಂಪನಿಯು ಇದನ್ನು ಕಿಯಾ EV6, ಕಿಯಾ EV9 ಮತ್ತು ಕಿಯಾ EV5 ನೊಂದಿಗೆ ಪ್ರಾರಂಭಿಸಿದೆ. ಈ ಮೂರು ಎಲೆಕ್ಟ್ರಿಕ್ ವಾಹನಗಳು E-GMP ಪ್ಲೇಟ್ ಅನ್ನು ಆಧರಿಸಿವೆ. ಈ ಪ್ಲಾಟ್‌ಫಾರ್ಮ್ ಅನ್ನು ವಿಶೇಷವಾಗಿ ಎಲೆಕ್ಟ್ರಿಕ್ ಕಾರುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ, ಅದರ ಮೇಲೆ ಗ್ರಾಹಕರ ಅಗತ್ಯತೆಗಳಿಗೆ ಅನುಗುಣವಾಗಿ ವಿವಿಧ ಗಾತ್ರದ ವಾಹನಗಳನ್ನು ತಯಾರಿಸಬಹುದು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ EV6 ಮತ್ತು EV9 ಅನ್ನು ಹೆಚ್ಚಿನ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ, ಆದರೆ ಕಂಪನಿಯು ಶೀಘ್ರದಲ್ಲೇ EV5, EV4 ಮತ್ತು EV3 ಅನ್ನು ತನ್ನ ಪ್ಲ್ಯಾನ್‌ಗಳ ಅಡಿಯಲ್ಲಿ ಬಿಡುಗಡೆ ಮಾಡಲಿದೆ.

ಹಾಗೆಯೇ, ಕಿಯಾ EV ದಿನ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ "ಉದಯೋನ್ಮುಖ ಮಾರುಕಟ್ಟೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ EV ಮಾಡೆಲ್‌ಗಳನ್ನು ಭಾರತದಲ್ಲಿ ಉತ್ಪಾದಿಸಲಾಗುವುದು" ಎಂದು ತಿಳಿಸಿದೆ. ಪ್ರಸ್ತುತ, ಕಿಯಾ EV6 ಒಂದೇ ಭಾರತದಲ್ಲಿ ಮಾರಾಟವಾಗುತ್ತಿರುವ ಕೊರಿಯನ್ ಬ್ರ್ಯಾಂಡ್‌ ಆಗಿದ್ದು, ಇದನ್ನು CBU ರೂಪದಲ್ಲಿ ಆಮದು ಮಾಡಿಕೊಂಡು ಮಾರಾಟ ಮಾಡುವುದರಿಂದ ಅದರ ಬೆಲೆ ಸಾಕಷ್ಟು ಹೆಚ್ಚಾಗಿದೆ. ಇದರ ಬೆಲೆ ರೂ. 60.95 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಆದರೆ, ಸೂಕ್ತವಾದ ಉತ್ಪನ್ನದೊಂದಿಗೆ, ಸ್ಥಳೀಯವಾಗಿ ತಯಾರಿಸುವ ಮೂಲಕ ಮತ್ತು ಹೇಳಿದಂತೆ, ಇತರ ಉದಯೋನ್ಮುಖ ಮಾರುಕಟ್ಟೆಗಳಿಗೆ ರಫ್ತು ಮಾಡುವ ಮೂಲಕ ಕಿಯಾ ಸುಮಾರು 20-25 ಲಕ್ಷ ರೂ.ಗಳ ಆರಂಭಿಕ ಬೆಲೆಯೊಂದಿಗೆ ಶ್ರೀಸಾಮಾನ್ಯ ಮಾರುಕಟ್ಟೆಯ EV ವಿಭಾಗವನ್ನು ಪ್ರವೇಶಿಸಬಹುದು. ಈ ಯೋಜನೆಯ ಅಡಿಯಲ್ಲಿ ಕಂಪನಿಯು ಇತ್ತೀಚೆಗೆ ಪ್ರದರ್ಶಿಸಲಾದ EV ಪರಿಕಲ್ಪನೆಗಳಲ್ಲಿ ಒಂದನ್ನು ಇಲ್ಲಿ ಪರಿಚಯಿಸಬಹುದು ಎಂಬುದು ನಮ್ಮ ನಂಬಿಕೆಯಾಗಿದೆ.

ಜೊತೆಗೆ, ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲು ಭಾರತದಲ್ಲಿ ಪ್ರತ್ಯೇಕ EV ಶೋರೂಮ್ ಅನ್ನು ತೆರೆಯುವುದಾಗಿ ದೃಢಪಡಿಸಿದೆ. ಟಾಟಾ EV ಮತ್ತು ಮಹೀಂದ್ರಾ ಸಹ ಭಾರತದಲ್ಲಿ ಇದೇ ರೀತಿಯ ಗ್ರಾಹಕ ಅನುಭವವನ್ನು ನೀಡುತ್ತಿವೆ ಮತ್ತು ಈಗ ಕಿಯಾ ಈ ಪಟ್ಟಿಯಲ್ಲಿ ಸೇರುವ ಸಾಧ್ಯತೆಯಿದೆ.

ಇದನ್ನೂ ಓದಿ: ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಯೋಜಿಸುತ್ತಿರುವ ವಿನ್‌ಫಾಸ್ಟ್ ಬ್ರ್ಯಾಂಡ್ ಮತ್ತು ಅದರ ಕಾರುಗಳ ಬಗ್ಗೆ ತಿಳಿಯಿರಿ

ಮುನ್ನೋಟ

Kia EV3
Kia Seltos

 ಕಿಯಾ EV3 ಎಸ್‌ಯುವಿ ಪರಿಕಲ್ಪನೆಯನ್ನು ಅನಾವರಣಗೊಳಿಸಿದೆ ಮತ್ತು ನಾವು ಗಮನಿಸಿದ ಒಂದು ವಿಷಯವೆಂದರೆ ಅದು ಕಿಯಾ ಸೆಲ್ಟೋಸ್‌ ಅನ್ನು ಹೋಲುತ್ತದೆ. ಇತ್ತೀಚೆಗೆ, ಈ ಕಾಂಪ್ಯಾಕ್ಟ್ ಎಸ್‌ಯುವಿಗೆ ಮಿಡ್-ಲೈಫ್ ಮೇಕ್‌ಓವರ್ ಮಾಡಲಾಗಿರುವುದರಿಂದ ಕಾರು ತಯಾರಕರು ಭಾರತದಲ್ಲಿ ಹೊಸ-ಪೀಳಿಗೆಯ ಸೆಲ್ಟೋಸ್‌ಗೆ EV3 ಅನ್ನು ಆಧಾರವಾಗಿ ಬಳಸಿಕೊಳ್ಳಬಹುದು, ಇದು ಈ ಎಲೆಕ್ಟ್ರಿಕ್ ಎಸ್‌ಯುವಿಯ ICE ಆವೃತ್ತಿಯಾಗಿದೆ. ಎರಡೂ ಕಾರುಗಳ ಗಾತ್ರವೂ ಸಮನಾಗಿರುತ್ತದೆ.

 ಇದನ್ನೂ ಓದಿ:  ಭಾರತದಲ್ಲಿ ಲಭ್ಯವಿರುವ ಈ 11 ಎಲೆಕ್ಟ್ರಿಕ್ ಕಾರುಗಳ ಕ್ಲೈಮ್ ಮಾಡಲಾದ ರೇಂಜ್ 500km ಗಿಂತ ಹೆಚ್ಚು! 

 

ಭಾರತಕ್ಕಾಗಿ EVಗಳು

ಕಿಯಾ ಮೋಟಾರ್ಸ್ ತನ್ನ ಮುಂಬರುವ ಎಲೆಕ್ಟ್ರಿಕ್ ಕಾರನ್ನು 2025 ರ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಈಗಾಗಲೇ ಹಂಚಿಕೊಂಡಿದೆ. EV3 ಆಧಾರಿತ ಸೆಲ್ಟೋಸ್ ಸರತಿಯಲ್ಲಿರುವ ಮುಂದಿನ ಕಾರು  ಎಂಬುದು ನಮ್ಮ ನಂಬಿಕೆಯಾಗಿದೆ. ಇದು ಭಾರತದಲ್ಲಿ ಕಂಪನಿಯ ಎರಡನೇ ಎಲೆಕ್ಟ್ರಿಕ್ ಕಾರ್ ಆಗಲಿದ್ದು, ಇದು ರೂ. 30 ಲಕ್ಷಕ್ಕಿಂತ (ಎಕ್ಸ್ ಶೋ ರೂಂ) ಕಡಿಮೆ ಬೆಲೆಯನ್ನು ಹೊಂದಿರಬಹುದು. ಪ್ರಸ್ತುತ, ಕಿಯಾ EV6 ಭಾರತದಲ್ಲಿ ಮಾರಾಟವಾಗುತ್ತಿರುವ ಕಂಪನಿಯ ಏಕೈಕ ಎಲೆಕ್ಟ್ರಿಕ್ ಕಾರು ಆಗಿದೆ. ಇದು ವೋಲ್ವೋ XC40 ರೀಚಾರ್ಜ್ ಮತ್ತು C40 ರೀಚಾರ್ಜ್‌ನೊಂದಿಗೆ ಸ್ಪರ್ಧಿಸುತ್ತದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Kia ಇವಿ55

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience