Login or Register ಅತ್ಯುತ್ತಮ CarDekho experience ಗೆ
Login

Land Rover Defender Sedona ಎಡಿಷನ್‌ ಅನಾವರಣ, ಅತ್ಯಂತ ಶಕ್ತಿಯುತ ಎಂಜಿನ್‌ ಜೊತೆಗೆ ಈಗ ಲಭ್ಯ

published on ಮೇ 09, 2024 08:52 pm by rohit for ಲ್ಯಾಂಡ್ ರೋವರ್ ಡಿಫೆಂಡರ್

ಸೀಮಿತ ಆವೃತ್ತಿಯ ಈ ಮಾದರಿಯನ್ನು ಡಿಫೆಂಡರ್‌ 110 ಜೊತೆಗೆ ಮಾತ್ರವೇ ನೀಡಲಾಗುತ್ತಿದ್ದು, ಇದನ್ನು ವೈದೃಶ್ಯ ಬ್ಲ್ಯಾಕ್ಡ್‌ ಔಟ್‌ ಎಲಿಮೆಂಟ್‌ ಗಳ ಜೊತೆಗೆ ಹೊಸ ಕೆಂಪು ಬಣ್ಣದ ಆಯ್ಕೆಯೊಂದಿಗೆ ಪಡೆಯಬಹುದು

ಐಷಾರಾಮಿ ಆಫ್‌ ರೋಡರ್‌ ಗಳಲ್ಲಿ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಲ್ಯಾಂಡ್‌ ರೋವರ್‌ ಡಿಫೆಂಡರ್ ಕಾರು ಈಗ ಒಂದಷ್ಟು ಪರಿಷ್ಕರಣೆಗಳನ್ನು ಪಡೆದಿದೆ. ಇದು 110 ಬಾಡಿ ಸ್ಟೈಲ್‌ ಗೆ ಹೊಸ ಸೀಮಿತ ಆವೃತ್ತಿಯನ್ನು ಪಡೆದಿದ್ದು, ಉದ್ದನೆಯ 130 ಬಾಡಿ ಸ್ಟೈಲ್‌ ವೇರಿಯಂಟ್‌ ಗಳಲ್ಲಿ ಎರಡನೇ ಸಾಲಿನಲ್ಲಿ ಕ್ಯಾಪ್ಟನ್‌ ಸೀಟುಗಳ ಆಯ್ಕೆಯನ್ನು ಸಹ ನೀಡಲಾಗಿದೆ. ಈ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ.

ಡಿಫೆಂಡರ್‌ ಸೆಡೋನಾ ಆವೃತ್ತಿ

ಲ್ಯಾಂಡ್‌ ರೋವರ್‌ ಸಂಸ್ಥೆಯು ಹೊಸ ಸೆಡೋನಾ ಆವೃತ್ತಿಯನ್ನು ಡಿಫೆಂಡರ್‌ 110 ವೇರಿಯಂಟ್‌ ಜೊತೆಗೆ ನೀಡುತ್ತಿದ್ದು, ಇದು ಒಂದು ವರ್ಷದ ಕಾಲ ಮಾತ್ರವೇ ಲಭ್ಯ. ಇದು ಅರಿಜೋನಾದ ಸೆಡೋನಾದಲ್ಲಿನ ಮರಳ ಶಿಲೆಯಿಂದ ಪ್ರೇರಿತಗೊಂಡ ಹೊಸ ಕೆಂಪು ಹೊರಾಂಗಣವನ್ನು ಪಡೆದಿದೆ. ʻಸೆಡೋನಾ ರೆಡ್‌ʼ ಬಣ್ಣವು ಈ ಹಿಂದೆ ಡಿಫೆಂಡರ್‌ 130 ಮಾದರಿಗೆ ಮಾತ್ರವೇ ಸೀಮಿತವಾಗಿತ್ತು. ಹೊಸ ಸೀಮಿತ ಆವೃತ್ತಿಯು ಡಿಫೆಂಡರ್‌ 110ನ ಟಾಪ್‌ ಸ್ಪೆಕ್ X-ಡೈನಾಮಿಕ್ HSE ವೇರಿಯಂಟ್‌ ಅನ್ನು ಆಧರಿಸಿದೆ.

ಹೊಸ ಕೆಂಪು ಛಾಯೆಯ ಬಣ್ಣದೊಂದಿಗೆ ಹುಡ್‌ ನಲ್ಲಿ ʻಡಿಫೆಂಡರ್‌ʼ ಮಾನಿಕರ್‌ ಗೆ ಬ್ಲ್ಯಾಕ್ಡ್‌ ಔಟ್‌ ಟ್ರೀಟ್ಮೆಂಟ್‌, 20 ಇಂಚಿನ ಅಲೋಯ್‌ ವೀಲ್‌ ಗಳು, ಸೈಡ್‌ ಸ್ಟೆಪ್‌ ಗಳು ಮತ್ತು ಗ್ರಿಲ್‌ ಅನ್ನು ಕಾಣಬಹುದು. ಜತೆಗೆ, ಟೇಲ್‌ ಗೇಟ್‌ ಮೇಲೆ ಇರಿಸಿದ ಹೆಚ್ಚುವರಿ ಚಕ್ರದ ಹೊದಿಕೆಯು, ಈ SUVಯ ಹೊರಾಂಗಣದ ಬಣ್ಣದಂತೆಯೇ ಕೆಂಪು ಬಣ್ಣದ ಫಿನಿಶ್‌ ಅನ್ನು ಹೊಂದಿದೆ.

ಲ್ಯಾಂಡ್‌ ರೋವರ್‌ ಸಂಸ್ಥೆಯು ಸೆಡೋನಾ ಆವೃತ್ತಿಯಲ್ಲಿ ಹೊಸ ಐಚ್ಛಿಕ ಬೋನೆಟ್‌ ಡಿಕಾಲ್‌ ಅನ್ನು ಒದಗಿಸಿದ್ದು, ಇದು ಸೆಡೋನಾದ ಭೂದೃಶ್ಯವನ್ನು ಬಿಂಬಿಸುತ್ತದೆ. ಇದರಲ್ಲಿ ಸೈಡ್‌ ಮೌಂಟೆಡ್‌ ಗೇರ್‌ ಕ್ಯಾರಿಯರ್‌ ಅನ್ನು ಒದಗಿಸಲಾಗಿದ್ದು, ಇದು ಆಫ್‌ ರೋಡ್‌ ಗೆ ಬೇಕಾಗುವ ಸಾಮಗ್ರಿ ಮತ್ತು ಒದ್ದೆ ಅಥವಾ ಮಣ್ಣಿನಿಂದ ಕೊಳೆಯಾದ ಬಟ್ಟೆಯನ್ನು ಕೊಂಡೊಯ್ಯಲು ಸಹಕಾರಿಯಾಗಿದೆ.

ಬೂದು ಬಣ್ಣದ ಹೊಸ ಕ್ಯಾಬಿನ್‌ ಥೀಮ್‌ ಮತ್ತು ಸೀಟ್‌ ಅಫೋಲ್ಸ್ಟರಿಯು ಒಳಾಂಗಣದಲ್ಲಿ ಮಾಡಲಾಗಿರುವ ಪ್ರಮುಖ ಬದಲಾವಣೆಯಾಗಿದೆ. ಪರಿಷ್ಕರಣೆಯ ಅಂಗವಾಗಿ ಈ SUV ಯ ಸೀಮಿತ ಆವೃತ್ತಿಯು ಮುಂಭಾಗದ ಪ್ರಯಾಣಿಕರಿಗಾಗಿ ಸಾಕಷ್ಟು ವ್ಯವಸ್ಥಿತವಾಗಿ ಒದಗಿಸಿದ ಸ್ಟೋರೇಜ್‌ ಕಂಪಾರ್ಟ್‌ ಮೆಂಟ್‌ ಗಳನ್ನು ಹೊಂದಿದೆ. ಈ ಡಿಫೆಂಡರ್‌ 110 ನ ವೈಶಿಷ್ಟ್ಯತೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಡಿಫೆಂಡರ್‌ 130ಗಾಗಿ ಕ್ಯಾಪ್ಟನ್‌ ಚೇರ್‌ ಗಳು

ತನ್ನ ಜಾಗತಿಕ ಬಿಡುಗಡೆಯ ನಂತರ, ಲ್ಯಾಂಡ್‌ ರೋವರ್‌ ಡಿಫೆಂಡರ್‌ 130 ವಾಹನವು, ಎಂಟು ಪ್ರಯಾಣಿಕರು ಕುಳಿತುಕೊಳ್ಳಲು ಅನುವಾಗುವಂತೆ 3 ಸಾಲುಗಳ ಆಸನ ವ್ಯವಸ್ಥೆಯನ್ನು ಹೊಂದಿತ್ತು. ಈಗ ಇದು ಎರಡನೇ ಸಾಲಿನಲ್ಲಿ ಕ್ಯಾಪ್ಟನ್‌ ಚೇರ್‌ ಗಳ ಆಯ್ಕೆಯನ್ನು ನೀಡಿದ್ದು, ಹೀಟಿಂಗ್‌ ಮತ್ತು ಕೂಲಿಂಗ್‌ ಕಾರ್ಯಗಳೆರಡನ್ನೂ ಇದು ಒದಗಿಸಲಿದೆ. ಡಿಫೆಂಡರ್ X ಮತ್ತು V8 ವೇರಿಯಂಟ್‌ ಗಳ ಕ್ಯಾಪ್ಟನ್‌ ಚೇರ್‌ ಸೀಟುಗಳಲ್ಲಿ ವಿಂಗ್ಡ್‌ ಹೆಡ್‌ ರೆಸ್ಟ್‌ ಗಳನ್ನು ಹೊಂದಬಹುದು. ಪ್ರಾಯೋಗಿಕತೆಗೆ ಇಲ್ಲಿ ಒತ್ತು ನೀಡಲಾಗಿದ್ದು, ಫ್ರಂಟ್‌ ಸೆಂಟರ್‌ ಕನ್ಸೋಲ್‌ ನ ಹಿಂದೆಯೇ ಮಧ್ಯದ ಸಾಲಿನ ಪ್ರಯಾಣಿಕರಿಗಾಗಿ ಎರಡು ಕಪ್‌ ಹೋಲ್ಡರ್‌ ಗಳನ್ನು ನೀಡಲಾಗಿದೆ.

ಪರಿಷ್ಕೃತ ಡೀಸೆಲ್‌ ಎಂಜಿನ್‌

ಪರಿಷ್ಕೃತ ಡಿಫೆಂಡರ್‌ ವಾಹನವು D350 ಡೀಸೆಲ್‌ ಮೈಲ್ಡ್‌ ಹೈಬ್ರೀಡ್‌ ಎಂಜಿನ್‌ ಜೊತೆಗೆ ಬರಲಿದ್ದು, ಇದು ಈ ಹಿಂದಿನ D300 ಮೈಲ್ಡ್‌ ಹೈಬ್ರೀಡ್‌ ಡೀಸೆಲ್‌ ಪವರ್‌ ಟ್ರೇನ್‌ ನ ಸ್ಥಾನವನ್ನು ಇದು ಆಕ್ರಮಿಸಲಿದೆ. ಇದರ 3 ಲೀಟರ್‌ ಡೀಸೆಲ್‌ ಎಂಜಿನ್‌ ಈಗ 350 PS ಮತ್ತು 700 Nm ಉಂಟು ಮಾಡಲಿದ್ದು, ಕ್ರಮವಾಗಿ 50 PS ಮತ್ತು Nm ನಷ್ಟು ಹೆಚ್ಚಳ ಉಂಟಾಗಿದೆ. ಇದು ಈ ಹಿಂದಿನಂತೆಯೇ 8-ಸ್ಪೀಡ್‌ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಮತ್ತು ಆಲ್‌ ವೀಲ್‌ ಡ್ರೈವ್ (AWD)‌ ಆಯ್ಕೆಯನ್ನು ಪಡೆಯಲಿದೆ.

ಲ್ಯಾಂಡ್‌ ರೋವರ್‌ ಡಿಫೆಂಡರ್‌ ನಲ್ಲಿರುವ ಇತರ ಅಯ್ಕೆಗಳೆಂದರೆ 2-ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್ (300 PS), 5-ಲೀಟರ್ V8 ಪೆಟ್ರೋಲ್‌ ಎಂಜಿನ್ (425 PS) ಮತ್ತು 5-ಲೀಟರ್‌ ಸೂಪರ್‌ ಚಾರ್ಜ್ಡ್ V8 ಪೆಟ್ರೋಲ್‌ ಎಂಜಿನ್ (525 PS).

ಇದನ್ನು ಸಹ ಓದಿರಿ: ಪರಿಷ್ಕೃತ ರೋಲ್ಸ್-ರಾಯ್ಸ್‌ ಕಲಿನನ್‌ ಅನಾವರಣ, ಭಾರತದಲ್ಲಿ 2024 ಕೊನೆಗೆ ಬಿಡುಗಡೆಯಾಗುವ ಸಾಧ್ಯತೆ

ವರ್ಧಿತ ಒಳಾಂಗಣ ಪ್ಯಾಕೇಜ್

ಬ್ರಿಟೀಷ್‌ ಕಾರು ತಯಾರಕ ಸಂಸ್ಥೆಯ ಈ ಅತ್ಯಂತ ಒರಟಾದ SUVಯು ಹೊಸ ಒಳಾಂಗಣ ಪ್ಯಾಕ್‌ ಜೊತೆಗೆ ಲಭ್ಯವಿದ್ದು, ಡಿಫೆಂಟರ್ X ಮತ್ತು V8 ಯಲ್ಲಿ ಪ್ರಮಾಣಿತ ಆಯ್ಕೆಯಾಗಿ ದೊರೆತರೆ, X-ಡೈನಾಮಿಕ್ HSE‌ ವೇರಿಯಂಟ್‌ ನಲ್ಲಿ ಐಚ್ಛಿಕ ಆಯ್ಕೆಯಾಗಿ ಲಭಿಸಲಿದೆ. ಮುಂದಿನ ಸಾಲಿನಲ್ಲಿ ಇದು ಹೀಟಿಂಗ್‌, ಕೂಲಿಂಗ್‌ ಮತ್ತು ಮೆಮೊರಿ ಆಯ್ಕೆಗಳೊಂದಿಗೆ 14 ವೇ ಪವರ್‌ ಅಡ್ಜಸ್ಟೇಬಲ್‌ ಸೀಟುಗಳನ್ನು ಒದಗಿಸುತ್ತದೆ. ಇದು ಡಿಫೆಂಡರ್ 110 ಮತ್ತು 130 ವೇರಿಯಂಟ್‌ ಗಳಲ್ಲಿ ವಿಂಗ್ಡ್‌ ಹೆಡ್‌ ರೆಸ್ಟ್‌ ಮತ್ತು ಹೀಟೆಡ್‌ ಸೀಟುಗಳನ್ನು ಸೇರಿಸಿದೆ. ಈ ಪ್ಯಾಕ್‌ ನ ಅಂಗವಾಗಿ SUV ಯು ಡ್ಯುವಲ್‌ ಟೋನ್‌ ಕ್ಯಾಬಿನ್‌ ಥೀಮ್‌ ಗಳ ಆಯ್ಕೆಯನ್ನು ಹೊಂದಿದೆ.

ಐಚ್ಛಿಕ ಪ್ಯಾಕ್‌ ಗಳ ಶ್ರೇಣಿ

ಲ್ಯಾಂಡ್‌ ರೋವರ್‌ ಸಂಸ್ಥೆಯು ಡಿಫೆಂಡರ್‌ ಅನ್ನು ಈ ಕೆಳಗೆ ಉಲ್ಲೇಖಿಸಿದ ಐಚ್ಛಿಕ ಪ್ಯಾಕ್‌ ಗಳ ಶ್ರೇಣಿಯೊಂದಿಗೆ ಒದಗಿಸಲಿದೆ:

  • ಚಾಲನೆ ಮತ್ತು ADAS ಪ್ಯಾಕ್‌ ಗಳು

  1. ಆಫ್‌ ರೋಡ್‌ ಪ್ಯಾಕ್‌ - ಎಲೆಕ್ಟ್ರಾನಿಕಲಿ ಆಕ್ಟಿವೇಟೆಡ್‌ ಡಿಫೆರೆನ್ಶಿಯಲ್‌, ಕಪ್ಪು ಬಣ್ಣದ ರೂಫ್‌ ರೇಲ್‌ ಗಳು, ಆಲ್‌ ಟೆರೆನ್‌ ಟೈರ್‌ ಗಳು, ಡೊಮೆಸ್ಟಿಕ್‌ ಪ್ಲಗ್‌ ಸೋಕೆಟ್‌, ಮತ್ತು ಸೆನ್ಸಾರ್‌ ಆಧರಿತ ವಾಟರ್‌ ವೇಡಿಂಗ್‌ ಸಾಮರ್ಥ್ಯ.
  2. ಅಡ್ವಾನ್ಸ್ಡ್‌ ಆಫ್‌ ರೋಡ್‌ ಪ್ಯಾಕ್‌ - ಟೆರೆನ್‌ ರಿಸ್ಪೋನ್ಸ್‌ 2 ಜೊತೆಗೆ ಅತ್ಯಾಧುನಿಕ ಆಫ್‌ ರೋಡಿಂಗ್‌ ವ್ಯವಸ್ಥೆಗಳು, ಏರ್‌ ಸಸ್ಪೆನ್ಶನ್‌, ಅಡಾಪ್ಟಿವ್‌ ಡೈನಾಮಿಕ್ಸ್‌ ಮತ್ತು ಅಟೋ ಹೆಡ್‌ ಲೈಟ್‌ ಲೆವೆಲಿಂಗ್
  3. ಏರ್‌ ಸಸ್ಪೆನ್ಶನ್‌ ಪ್ಯಾಕ್‌ - ಏರ್‌ ಸಸ್ಪೆನ್ಶನ್‌, ಅಡಾಪ್ಟಿವ್‌ ಡೈನಾಮಿಕ್ಸ್‌, ಅಟೋಮ್ಯಾಟಿಕ್‌ ಹೆಡ್‌ ಲೈಟ್‌ ಲೆವೆಲಿಂಗ್
  • ಶೀತ ಹವಾಮಾನ ಮತ್ತು ಟೋಯಿಂಗ್ ಪ್ಯಾಕ್‌ ಗಳು

  • ಶೀತ ಹವಾಮಾನದ ಪ್ಯಾಕ್‌ - ಹೀಟೆಡ್‌ ವಿಂಡ್‌ ಸ್ಕ್ರೀನ್‌, ವಾಶರ್‌ ಜೆಟ್‌ ಗಳು ಮತ್ತು ಸ್ಟೀಯರಿಂಗ್‌ ವೀಲ್‌ ಮತ್ತು ಹೆಡ್‌ ಲೈಟ್‌ ವಾಶರ್
  • ಟೋಯಿಂಗ್‌ ಪ್ಯಾಕ್‌ (90 ಮತ್ತು 110) - ಟೋ ಅಸಿಸ್ಟ್‌, ಎಲೆಕ್ಟ್ರಾನಿಕಲಿ ಡೀಪ್ಲೋಯೇಬಲ್‌ ಟೋ ಬಾರ್‌ ಅಥವಾ ಟೋ ಹಿಚ್‌ ರಿಸೀವರ್‌, ಅಡ್ವಾನ್ಸ್ಡ್‌ ಆಫ್‌ ರೋಡಿಂಗ್‌ ಸಿಸ್ಟಂಗಳು, ಮತ್ತು ಈ ಹಿಂದೆ ಉಲ್ಲೇಖಿಸಲಾದ ಏರ್‌ ಸಸ್ಪೆನ್ಶನ್‌ ನಲ್ಲಿರುವ ಅದೇ ವೈಶಿಷ್ಟ್ಯಗಳು
  • ಟೋಯಿಂಗ್‌ ಪ್ಯಾಕ್‌ 2 (130) - ಮೇಲೆ ತಿಳಿಸಿದಂತೆಯೇ, ಆದರೆ ಡಿಟಾಚೇಬಲ್‌ ಟೋ ಬಾರ್‌ ಅಥವಾ ಟೋ ಹಿಚ್‌ ರಿಸೀವರ್‌ ಜೊತೆಗೆ
  • ಒಳಾಂಗಣದ ಪ್ಯಾಕ್‌ ಗಳು

  • ಸಿಗ್ನೇಚರ್‌ ಇಂಟೀರಿಯರ್‌ ಪ್ಯಾಕ್‌ - ಮುಂದಿನ ಸಾಲಿನಲ್ಲಿ ವಿಂಗ್ಡ್‌ ಹೆಡ್‌ ರೆಸ್ಟ್‌ ಗಳ ಜೊತೆಗೆ ಹೀಟೆಡ್‌ ಮತ್ತು ಕೂಲ್ಡ್‌ ಎಲೆಕ್ಟ್ರಿಕ್‌ ಮೆಮೊರಿ ಸೀಟುಗಳು, ಎರಡನೇ ಸಾಲಿನಲ್ಲಿ ವಿಂಗ್ಡ್‌ ಹೆಡ್‌ ರೆಸ್ಟ್‌ ಗಳ ಜೊತೆಗೆ ಕ್ಲೈಮೇಟ್‌ ಸೀಟುಗಳು, ಸ್ವೇಡ್‌ ಕ್ಲೋತ್‌ ಹೆಡ್‌ ಲೈನಿಂಗ್‌, ಲೆದರ್‌ ಸ್ಟೀಯರಿಂಗ್‌ ವೀಲ್‌, ವಿಂಡ್ಸರ್‌ ಲೆದರ್‌ ಮತ್ತು ಕ್ವಾಡ್ರಟ್‌ ಅಥವಾ ಅಲ್ಟ್ರಾ ಫ್ಯಾಬ್ರಿಕ್ಸ್‌ ಸೀಟುಗಳು
  • ಕ್ಯಾಪ್ಟನ್‌ ಚೇರ್‌ ಪ್ಯಾಕ್‌ ಜೊತೆಗೆ ಸಿಗ್ನೇಚರ್‌ ಒಳಾಂಗಣ ಪ್ಯಾಕ್‌ - ಮೇಲೆ ಹೇಳಿದಂತೆಯೇ, ಆದರೆ ಎರಡನೇ ಸಾಲಿನಲ್ಲಿ ಹೀಟಿಂಗ್‌ ಹಾಗೂ ಕೂಲಿಂಗ್‌ ಮತ್ತು ವಿಂಗ್ಡ್‌ ಹೆಡ್‌ ರೆಸ್ಟ್‌ ಗಳ ಜೊತೆಗೆ ಕ್ಯಾಪ್ಟನ್‌ ಚೇರ್‌ ಗಳು

ಮೂರನೇ ಸಾಲಿನ ಸೀಟಿಂಗ್‌ ಪ್ಯಾಕ್

  1. ಫ್ಯಾಮಿಲಿ ಪ್ಯಾಕ್‌ (110) - ಈ ಹಿಂದೆ ಉಲ್ಲೇಖಿಸಿದ ಏರ್‌ ಸಸ್ಪೆನ್ಶನ್‌ ಪ್ಯಾಕ್‌ ಜೊತೆಗೆ, 3 ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ಗಾಳಿಯ ಗುಣಮಟ್ಟದ ಸೆನ್ಸಾರ್‌ ಮತ್ತು ಏರ್‌ ಪ್ಯೂರಿಫೈರ್‌, ಮತ್ತು ಮೂರನೇ ಸಾಲಿನ ಮ್ಯಾನುವಲ್‌ ಸೀಟುಗಳು

  2. ಫ್ಯಾಮಿಲಿ ಕಂಫರ್ಟ್‌ ಪ್ಯಾಕ್‌ (110) - ಮೇಲೆ ತಿಳಿಸಿದಂತೆಯೇ, ಆದರೆ ಮೂರನೇ ಸಾಲಿನ ಹೀಟೆಡ್‌ ಸೀಟುಗಳು ಮತ್ತು ರಿಯರ್‌ ಕೂಲಿಂಗ್‌ ಅಸಿಸ್ಟ್‌ ಜೊತೆಗೆ 3 ಝೋನ್‌ ಕ್ಲೈಮೇಟ್‌ ಕಂಟ್ರೋಲ್


ಭಾರತದಲ್ಲಿ ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ

ಲ್ಯಾಂಡ್‌ ರೋವರ್‌ ಡಿಫೆಂಡರ್‌ ನ ಸೆಡೋನಾ ಆವೃತ್ತಿಯು ಭಾರತದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಇದ್ದರೂ, ಕ್ಯಾಪ್ಟನ್‌ ಚೇರ್‌ ಗಳ ಆಯ್ಕೆಯು ಇಲ್ಲಿ ದೊರೆಯಬಹುದು. ಭಾರತದಲ್ಲಿ ದೊರೆಯುತ್ತಿರುವ ಡಿಫೆಂಡರ್‌ ಕಾರು ರೂ. 97 ರಿಂದ ರೂ. 2.35 ಕೋಟಿಯ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-‌ಶೋರೂಂ ದೆಹಲಿ). ಇದು ಜೀಪ್‌ ವ್ರ್ಯಾಂಗ್ಲರ್ ಬದಲಿಗೆ ಪ್ರೀಮಿಯಂ ಆಯ್ಕೆ ಎನಿಸಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಲ್ಯಾಂಡ್‌ ರೋವರ್‌ ಡಿಫೆಂಡರ್‌ ಅಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 27 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ Land Rover ಡಿಫೆಂಡರ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.86.92 - 97.84 ಲಕ್ಷ*
Rs.68.50 - 87.70 ಲಕ್ಷ*
ಫೇಸ್ ಲಿಫ್ಟ್
Rs.1.36 - 2 ಸಿಆರ್*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ