ICOTY 2024 ಸ್ಪರ್ಧಿಗಳ ಹೆಸರು ಬಹಿರಂಗ: ಹ್ಯುಂಡೈ ವೆರ್ನಾ, ಸಿಟ್ರನ್ C3 ಏರ್ ಕ್ರಾಸ್, ಬಿಎಮ್‌ಡಬ್ಲ್ಯೂ i7 ಇತ್ಯಾದಿ
ಮಾರುತಿ ಜಿಮ್ನಿ ಗಾಗಿ sonny ಮೂಲಕ ಡಿಸೆಂಬರ್ 06, 2023 10:46 am ರಂದು ಮಾರ್ಪಡಿಸಲಾಗಿದೆ
- 45 Views
- ಕಾಮೆಂಟ್ ಅನ್ನು ಬರೆಯಿರಿ
ಈ ವರ್ಷದ ಪಟ್ಟಿಯು MG ಕೋಮೆಟ್ EV ಯಿಂದ ಹಿಡಿದು BMW M2 ತನಕ ಎಲ್ಲಾ ವರ್ಗಗಳ ಕಾರುಗಳನ್ನು ಒಳಗೊಂಡಿದೆ
ಭಾರತದ ಕಾರು ಮಾರುಕಟ್ಟೆಯಲ್ಲಿ EV ಸೇರಿದಂತೆ ವಿವಿಧ ಆಕರ್ಷಕ ಕಾರುಗಳು ಕಾಣಿಸಿಕೊಂಡು ಒಂದು ವರ್ಷವೇ ಕಳೆದಿದೆ. ಇದೀಗ ಆನುವಲ್ ಇಂಡಿಯನ್ ಕಾರ್ ಆಫ್ ದ ಈಯರ್ (ICOTY) ಪ್ರಶಸ್ತಿಗಾಗಿ ಅತ್ಯುತ್ತಮ ಕಾರುಗಳನ್ನು ಆರಿಸಿಕೊಳ್ಳುವ ಸಮಯ ಬಂದಿದೆ. ICOTY 2024ರ ಮೂರು ವರ್ಗಗಳಲ್ಲಿ ಅಂತಿಮವಾಗಿ ನಾಮನಿರ್ದೇಶನಗೊಂಡಿರುವ ಕಾರುಗಳನ್ನು ನೋಡೋಣ:
ಇಂಡಿಯನ್ ಕಾರ್ ಆಫ್ ದ ಈಯರ್ (ಒಟ್ಟಾರೆ) |
ಪ್ರೀಮಿಯಂ ಕಾರ್ ಅವಾರ್ಡ್ (ICOTY) |
ಗ್ರೀನ್ ಕಾರ್ ಅವಾರ್ಡ್ (ICOTY) |
BMW 7 ಸೀರೀಸ್ |
ಹ್ಯುಂಡೈ ಅಯಾನಿಕ್ 5 |
|
ಹ್ಯುಂಡೈ ಅಯಾನಿಕ್ 5 |
ಸಿಟ್ರಾನ್ eC3 |
|
ಲೆಕ್ಸಸ್ LX |
ಮಹೀಂದ್ರಾ XUV400 |
|
ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ |
MG ಕೋಮೆಟ್ |
|
ಮರ್ಸಿಡಿಸ್-ಬೆಂಜ್ GLC |
BMW i7 |
|
ವೋಲ್ವೊ C40 ರೀಚಾರ್ಜ್ |
BYD ಅಟ್ಟೊ 3 |
|
BMW M2 |
ವೋಲ್ವೊ C40 ರೀಚಾರ್ಜ್ |
|
BMW X1 |
ಮರ್ಸಿಡಿಸ್-ಬೆಂಜ್ EQE (SUV) |
BMW ಸಂಸ್ಥೆಯು ಅತ್ಯಂತ ಹೆಚ್ಚಿನ ಮಾದರಿಗಳಲ್ಲಿ ನಾಮನಿರ್ದೇಶನಗೊಂಡಿದ್ದು, ಇದರ ಮುಂಚೂಣಿಯ EV ಎನಿಸಿರುವ i7 ಸೇರಿದಂತೆ ಒಟ್ಟು 5 ಸ್ಪರ್ಧಿಗಳನ್ನು ಹೊಂದಿದೆ. ಪ್ರಮುಖ ICOTY ಸ್ಪರ್ಧಿಗಳ ಪಟ್ಟಿಯಲ್ಲಿ SUVಗಳು ಪ್ರಾಬಲ್ಯವನ್ನು ಮೆರೆದಿದ್ದು, 1 ಸೆಡಾನ್, 1 ಹೈಬ್ರೀಡ್ MPV, ಮತ್ತು ಒಂದು ಕಾಂಪ್ಯಾಕ್ಟ್ 2-ಡೋರ್ EV ಸಹ ಇದರಲ್ಲಿ ಸೇರಿದೆ.
ICOTY 2024 ಪ್ರಶಸ್ತಿಗಳ ವಿಜೇತರನ್ನು ನಿರ್ಧರಿಸುವುದಕ್ಕಾಗಿ ಕಾರ್ ದೇಖೊ ಸಂಸ್ಥೆಯ ಅಮೇಯಾ ದಾಂಡೇಕರ್ ಸೇರಿದಂತೆ ವಿವಿಧ ಅಟೋಮೋಟಿವ್ ಪ್ರಕಟಣೆಗಳ ಸುಮಾರು 20 ಸದಸ್ಯರನ್ನು ಒಳಗೊಂಡ ತೀರ್ಪುದಾರರ ತಂಡವು ಮೇಲೆ ಉಲ್ಲೇಖಿಸಿದ ಎಲ್ಲಾ ಕಾರುಗಳ ಮೌಲ್ಯಮಾಪನವನ್ನು ನಡೆಸಲಿದೆ. ಪ್ರತಿ ವರ್ಗದಲ್ಲಿ ಯಾವ ಕಾರು ಗೆಲುವು ಸಾಧಿಸಲಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಇಲ್ಲಿ ಭೇಟಿ ನೀಡುತ್ತಲೇ ಇರಿ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ಜಿಮ್ನಿ ಆನ್ ರೋಡ್ ಬೆಲೆ