ಭಾರತದಲ್ಲಿ Lexus LM ಬಿಡುಗಡೆ, ಬೆಲೆಗಳು ರೂ 2 ಕೋಟಿಯಿಂದ ಪ್ರಾರಂಭ

published on ಮಾರ್ಚ್‌ 21, 2024 04:50 pm by rohit for ಲೆಕ್ಸಸ್ ಎಲ್.ಎಂ

 • 31 Views
 • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಲೆಕ್ಸಸ್ ಎಲ್‌ಎಮ್‌ ಐಷಾರಾಮಿ ವ್ಯಾನ್ 2.5-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪೆಟ್ರೋಲ್ ಪವರ್‌ಟ್ರೇನ್ ಮತ್ತು ಆಲ್-ವೀಲ್-ಡ್ರೈವ್ (AWD) ಸೆಟಪ್‌ನಿಂದ ಚಾಲಿತವಾಗಿದೆ.

Lexus LM launched in India

 • ಲೆಕ್ಸಸ್ ಹೊಸ ಟೊಯೋಟಾ ವೆಲ್‌ಫೈರ್ ಆಧಾರಿತ LM ಎಮ್‌ಪಿವಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. 
 • ಇದನ್ನು LM 350h (7-ಸೀಟರ್) ಮತ್ತು LM 350h (4-ಸೀಟರ್) ಎಂಬ ಎರಡು ಆವೃತ್ತಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. 
 • ಭಾರತದಾದ್ಯಂತ ಈ ಎರಡು ಆವೃತ್ತಿಗಳ ಎಕ್ಸ್ ಶೋರೂಂ ಬೆಲೆಗಳು 2 ಕೋಟಿ ರೂ. ಮತ್ತು  2.5 ಕೋಟಿ ರೂ. ಇರಲಿದೆ. 
 • ಹೊರಗಿನ ಹೈಲೈಟ್‌ಗಳು ದೊಡ್ಡ ಸ್ಪಿಂಡಲ್ ಗ್ರಿಲ್, ಎಲೆಕ್ಟ್ರೋನಿಕಲಿ ಸ್ಲೈಡಿಂಗ್ ಮಾಡುವಂತಹ ಹಿಂಬದಿಯ ಬಾಗಿಲುಗಳು ಮತ್ತು ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಒಳಗೊಂಡಿವೆ.
 • ಒಳಗೆ, ಇದು ಎರಡು ದೊಡ್ಡ ಸ್ಕ್ರೀನ್‌ಗಳನ್ನು ಕೇಂದ್ರೀಕರಿಸುವ ಕನಿಷ್ಠ ವಿನ್ಯಾಸವನ್ನು ಹೊಂದಿದೆ.
 • ಎರಡನೇ ಸಾಲಿಗೆ ದೊಡ್ಡ 48-ಇಂಚಿನ ಸ್ಕ್ರೀನ್, 23-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ADAS ಅನ್ನು ಪಡೆಯುತ್ತದೆ.

 2023ರ ಆಗಸ್ಟ್‌ನಲ್ಲಿ  ಬುಕಿಂಗ್ ಅನ್ನು ತೆರೆಯಲಾದ Lexus LM ಅನ್ನು ಅಂತಿಮವಾಗಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದು ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದ ಟೊಯೊಟಾ ವೆಲ್‌ಫೈರ್‌ನ ಹೆಚ್ಚು ಐಷಾರಾಮಿ ಆವೃತ್ತಿಯಾಗಿದೆ.

ವೇರಿಯಂಟ್-ವಾರು ಬೆಲೆಗಳು

ವೇರಿಯಂಟ್

ಬೆಲೆ (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ)

LM 350h (7-ಸೀಟರ್)

2 ಕೋಟಿ ರೂ.

LM 350h (4-ಸೀಟರ್)

2.5 ಕೋಟಿ ರೂ. 

ಲೆಕ್ಸಸ್ ತನ್ನ ಪ್ರಮುಖ ಐಷಾರಾಮಿ ಎಮ್‌ಪಿವಿಯ 4 ಆಸನಗಳ ಕ್ಯಾಪ್ಟನ್ ಸೀಟ್ ಆವೃತ್ತಿಯಲ್ಲಿ ಲಾಂಜ್ ತರಹದ ಅನುಭವಕ್ಕಾಗಿ 7 ಆಸನಗಳ ಆವೃತ್ತಿಗಿಂತ 50 ಲಕ್ಷ ರೂ ವರೆಗೆ ದುಬಾರಿ ಬೆಲೆಯನ್ನು ಹೊಂದಿದೆ. 

ಲೆಕ್ಸಸ್ ಬಾಹ್ಯ ವಿನ್ಯಾಸ

Lexus LM side

ಲೆಕ್ಸಸ್ LM ದೊಡ್ಡ ಮುಂಭಾಗದ ವಿಂಡ್‌ಶೀಲ್ಡ್ ಅನ್ನು ಹೊಂದಿದೆ ಮತ್ತು ದೊಡ್ಡ ಸ್ಪಿಂಡಲ್ ಗ್ರಿಲ್ ಫೆಸಿಯಾದ ಕೆಳಗಿನ ಲಿಪ್‌ವರೆಗೆ ಚಲಿಸುತ್ತದೆ. ಇದರ ಮುಂಭಾಗವು ಸ್ಪೋರ್ಟಿಂಗ್ ಟ್ರೈ-ಪೀಸ್ ಎಲ್ಇಡಿ ಅಂಶಗಳೊಂದಿಗೆ ಸೊಗಸಾದ ಎಲ್ಇಡಿ ಹೆಡ್‌ಲೈಟ್‌ಗಳನ್ನು ಸಹ ಪಡೆಯುತ್ತದೆ. ಸೈಡ್‌ನಿಂದ ಗಮನಿಸುವಾಗ, ನಿಮ್ಮ ಗಮನವು ಮೊದಲು ಈ ಎಮ್‌ಪಿವಿಯ ಬೃಹತ್ ನಿಲುವಿನತ್ತ ಸೆಳೆಯುತ್ತದೆ, ಇದಕ್ಕೆ ಅದರ ಉದ್ದವಾದ ವೀಲ್‌ಬೇಸ್ ಮುಖ್ಯ ಕಾರಣವಾಗಿದೆ. ನಂತರ ಇದರಲ್ಲಿ ಪಾರ್ಟಿ ಪೀಸ್ ಆಗಿರುವುದು ಎಲೆಕ್ಟ್ರೋನಿಕಲಿ ಸ್ಲೈಡಿಂಗ್ ಮಾಡುವಂತಹ ಹಿಂಬದಿಯ ಬಾಗಿಲುಗಳು ಮತ್ತು ಅಂತಿಮವಾಗಿ ಮಲ್ಟಿ-ಸ್ಪೋಕ್ ಅಲಾಯ್ ವೀಲ್‌ಗಳು. ಹಿಂಭಾಗದಲ್ಲಿ, ಇದು ಎತ್ತರದ ಹಿಂಬದಿಯ ವಿಂಡ್‌ಸ್ಕ್ರೀನ್‌ನೊಂದಿಗೆ ಎಲ್ಇಡಿ ಟೈಲ್‌ಲೈಟ್‌ಗಳನ್ನು ಕನೆಕ್ಟ್‌ ಆಗುತ್ತದೆ ಮತ್ತು ಇದು ಈ ಎಮ್‌ಪಿವಿಗೆ ಕ್ಲೀನ್ ನೋಟವನ್ನು ನೀಡುತ್ತದೆ. ಇದು ತನ್ನ ಸೊಬಗಿನಲ್ಲಿ ಕಣ್ಮನ ಸೆಳೆಯುತ್ತದೆ ಮತ್ತು ಸೂಕ್ಷ್ಮವಾಗಿದೆ.

ಕ್ಯಾಬಿನ್ ಮತ್ತು ವೈಶಿಷ್ಟ್ಯಗಳು

Lexus LM cabin

ಲೆಕ್ಸಸ್ ಇದನ್ನು ಕ್ರೀಮ್‌-ಕಲರ್‌ನ ಕ್ಯಾಬಿನ್ ಥೀಮ್ ಮತ್ತು  ಡ್ರೈವರ್‌ಗೆ ಡಿಜಿಟಲ್ ಡಿಸ್‌ಪ್ಲೇ ಮತ್ತು 14-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಎರಡು ದೊಡ್ಡ ಪರದೆಗಳೊಂದಿಗೆ ಕನಿಷ್ಠ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಒದಗಿಸಿದೆ. ಈ ಎಮ್‌ಪಿವಿ ಜಾಗತಿಕವಾಗಿ ವಿವಿಧ ಆಸನ ಆಯ್ಕೆಗಳನ್ನು ಹೊಂದಿದೆ, ಅವುಗಳೆಂದರೆ 4, 6 ಮತ್ತು 7-ಸೀಟರ್‌ ವಿನ್ಯಾಸಗಳು. ಆದರೆ ನಮ್ಮ ಮಾರುಕಟ್ಟೆಯಲ್ಲಿ 4- ಮತ್ತು 7-ಆಸನದ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ.

Lexus LM 48-inch rear TV

ಆದಾಗಿಯೂ, ಮುಖ್ಯ ಕೇಂದ್ರಭಾಗವು ಅದರ ಎರಡನೇ ಸಾಲುಯಾಗಿದ್ದು, ಒರಗಿಸಬಹುದಾದ ಒಟ್ಟೋಮನ್ ಆಸನಗಳು, 23-ಸ್ಪೀಕರ್ ಸರೌಂಡ್ ಸೌಂಡ್ ಸಿಸ್ಟಮ್ ಮತ್ತು ದಿಂಬು-ಶೈಲಿಯ ಹೆಡ್‌ರೆಸ್ಟ್‌ಗಳಂತಹ ಸೌಕರ್ಯ ಮತ್ತು ಅನುಕೂಲತೆಯ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಲೆಕ್ಸಸ್ ಕ್ಯಾಬಿನ್‌ನ ಮುಂಭಾಗ ಮತ್ತು ಹಿಂಭಾಗದ ವಿಭಾಗಗಳಿಗೆ ಅಡ್ಡವಾಗಿರುವ ಎರಡನೇ ಸಾಲಿನ ಭಾಗದ ಮೇಲೆ ಅಳವಡಿಸಲಾಗಿರುವ ಬೃಹತ್ 48-ಇಂಚಿನ ಟಿವಿಯನ್ನು ನೀಡುತ್ತದೆ.

ಕ್ಯಾಬಿನ್‌ನಲ್ಲಿರುವ ಇತರ ತಂತ್ರಜ್ಞಾನಗಳ ಪಟ್ಟಿಯು 64-ಬಣ್ಣದ ಆಂಬಿಯೆಂಟ್ ಲೈಟಿಂಗ್, 10-ಇಂಚಿನ ಹೆಡ್ಸ್‌-ಅಪ್ ಡಿಸ್‌ಪ್ಲೇ, ಬಿಸಿ ಮತ್ತು ವೆಂಟಿಲೇಟೆಡ್‌ ಸೀಟ್‌ಗಳು ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಹೈ-ಬೀಮ್ ಅಸಿಸ್ಟ್ ಅನ್ನು ಒಳಗೊಂಡಿರುವ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ರೇಂಜ್‌ ಅನ್ನು ಒಳಗೊಂಡಿದೆ. 

ಇದನ್ನೂ ಓದಿ: ಚೆಸ್ ಲೋಕದ ಧ್ರುವತಾರೆ ಪ್ರಜ್ಞಾನಂದರಿಗೆ Mahindra XUV400 EVಯನ್ನು ಗಿಫ್ಟ್‌ ಆಗಿ ನೀಡಿದ ಆನಂದ್ ಮಹೀಂದ್ರಾ 

ಬಾನೆಟ್‌ನ ಅಡಿಯಲ್ಲಿ ಇದು ಏನು ಪಡೆಯುತ್ತದೆ?

ಲೆಕ್ಸಸ್ ತನ್ನ ಭಾರತೀಯ ಮಾರುಕಟ್ಟೆ ಆಧಾರಿತ ಸೆಕೆಂಡ್-ಜೆನ್ LM ಅನ್ನು ಒಂದೇ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ನೀಡುತ್ತಿದೆ,. ಇದು 2.5-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಬಳಸುತ್ತದೆ ಮತ್ತು e-CVT ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ಗೆ 250 PS ಸಂಯೋಜಿತ ಉತ್ಪಾದನೆಯಲ್ಲಿ ಜೋಡಿಸಲಾಗಿದೆ. ಈ ಎಮ್‌ಪಿವಿಯು ಆಲ್-ವೀಲ್-ಡ್ರೈವ್ (AWD) ಜೊತೆಗೆ ಬರುತ್ತದೆ.

ವಿಳಂಬವಾದ ಬಿಡುಗಡೆ ಮತ್ತು ಡೆಲಿವರಿಗಳು

ಘೋಷಣೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಲೆಕ್ಸಸ್ ಇಂಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ತನ್ಮಯ್ ಭಟ್ಟಾಚಾರ್ಯ, “ಭಾರತದಲ್ಲಿ ಹೊಸ ಲೆಕ್ಸಸ್ LM ನ ಚೊಚ್ಚಲ ಪ್ರವೇಶವು ನಮಗೆ ಒಂದು ಪ್ರಮುಖ ಕ್ಷಣವಾಗಿದೆ, ಈ ಮೂಲಕ ನಾವು ಅಲ್ಟ್ರಾ-ಲಕ್ಸುರಿ ಮೊಬಿಲಿಟಿ ಕ್ಷೇತ್ರಕ್ಕೆ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ. ಕಳೆದ ವರ್ಷ ತನ್ನ ಬುಕಿಂಗ್‌ಗಳ ಪ್ರಾರಂಭವನ್ನು ಘೋಷಿಸಿದ ನಂತರ, ಹೊಸ ಲೆಕ್ಸಸ್ LM ದೇಶದಲ್ಲಿ ವೇಗವಾಗಿ ಜನಪ್ರೀಯತೆಯನ್ನು ಪಡೆಯಿತು. ನಮ್ಮ ಗ್ರಾಹಕರಿಗೆ ಅವರ ತಾಳ್ಮೆ ಮತ್ತು ಬ್ರ್ಯಾಂಡ್‌ನಲ್ಲಿ ಅವರಿಟ್ಟ ನಂಬಿಕೆಗಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಮತ್ತು ಈ ವರ್ಷದ ಮಧ್ಯಭಾಗದಲ್ಲಿ ನಾವು ಭವ್ಯವಾದ ಹೊಸ LM ನ ಡೆಲಿವರಿಯನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ" ಎಂದು ಅವರು ಹೇಳಿದರು.

ಇದನ್ನು ಓದಿ: 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದ  ದಿನಾಂಕಗಳು ಬಹಿರಂಗ 

ಪ್ರತಿಸ್ಪರ್ಧಿಗಳ ಕುರಿತು

Lexus LM rear

ಹೊಸ ಲೆಕ್ಸಸ್ LM ಎಮ್‌ಪಿವಿಯು ಟೊಯೋಟಾ ವೆಲ್‌ಫೈರ್‌ಗೆ ಐಷಾರಾಮಿ ಪರ್ಯಾಯವಾಗಿದೆ ಮತ್ತು BMW X7 ಮತ್ತು Mercedes-Benz GLS ನಂತಹ 3-ಸಾಲಿನ SUV ಗಳಿಗೆ ಐಷಾರಾಮಿ ಎಮ್‌ಪಿವಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಮುಂಬರುವ Mercedes-Benz V-Class ಗೆ ಸಹ ಪ್ರತಿಸ್ಪರ್ಧಿಯಾಗಿದೆ.

ಹೆಚ್ಚು ಓದಿ: ಲೆಕ್ಸಸ್ LM ಆಟೋಮ್ಯಾಟಿಕ್‌

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಲೆಕ್ಸಸ್ ಎಲ್.ಎಂ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

 • ಟ್ರೆಂಡಿಂಗ್ ಸುದ್ದಿ
 • ಇತ್ತಿಚ್ಚಿನ ಸುದ್ದಿ

trendingಎಮ್‌ಯುವಿ ಕಾರುಗಳು

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience