ಜಪಾನ್‌ನಲ್ಲಿ ದಾಖಲೆಯ 50,000 ಬುಕಿಂಗ್‌ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್
ಜಪಾನ್‌ನಲ್ಲಿ ಜಿಮ್ನಿ ನೊಮೇಡ್ ಆರ್ಡರ್‌ಗಳನ್ನು ಸ್ವೀಕರಿಸುವುದನ್ನು ಸುಜುಕಿ ತಾತ್ಕಾಲಿಕವಾಗಿ ನಿಲ್ಲಿಸಿದೆ
-
ಭಾರತದಲ್ಲಿ ತಯಾರಾಗಿರುವ 5-ಡೋರ್ ಮಾರುತಿ ಜಿಮ್ನಿಯನ್ನು ಜಪಾನ್‌ನಲ್ಲಿ 'ಜಿಮ್ನಿ ನೊಮೇಡ್' ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.
-
ಇದು ಜಪಾನ್‌ನಲ್ಲಿ ಎರಡು ಹೊಸ ಹೊರಭಾಗದ ಕಲರ್ ಆಯ್ಕೆಗಳನ್ನು ಪಡೆದಿದೆ: ಚಿಫೋನ್ ಐವರಿ ಮೆಟಾಲಿಕ್ ಮತ್ತು ಜಂಗಲ್ ಗ್ರೀನ್.
-
ಒಳಭಾಗದಲ್ಲಿ, ಇದು ಬ್ಲಾಕ್ ಮತ್ತು ಗ್ರೇ ಬಣ್ಣದ ಡ್ಯುಯಲ್-ಟೋನ್ ಸೀಟುಗಳನ್ನು ಹೊಂದಿದೆ, ಆದರೆ ಉಳಿದ ಕ್ಯಾಬಿನ್ ವಿನ್ಯಾಸವು ಭಾರತ-ಸ್ಪೆಕ್ ಜಿಮ್ನಿಯಂತೆಯೇ ಇದೆ.
-
ಜಪಾನ್-ಸ್ಪೆಕ್ ಜಿಮ್ನಿ ಭಾರತ-ಸ್ಪೆಕ್ ವರ್ಷನ್‌ನಲ್ಲಿ ಇಲ್ಲದಿರುವ ಹೀಟೆಡ್ ORVM ಗಳು, ಹೀಟೆಡ್ ಮುಂಭಾಗದ ಸೀಟುಗಳು ಮತ್ತು ADAS ನಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ.
-
ಜಪಾನ್-ಸ್ಪೆಕ್ 5-ಡೋರ್ ಜಿಮ್ನಿಯ ಬೆಲೆಯು 2,651,000 ಯೆನ್ ನಿಂದ 2,750,000 ಯೆನ್ (ಸರಿಸುಮಾರು ರೂ. 14.86 ಲಕ್ಷದಿಂದ ರೂ. 15.41 ಲಕ್ಷ) ವರೆಗೆ ಇರುತ್ತದೆ.
5-ಡೋರ್ ಮಾರುತಿ ಸುಜುಕಿ ಜಿಮ್ನಿಯನ್ನು ಇತ್ತೀಚೆಗೆ ಜಪಾನ್‌ನಲ್ಲಿ 'ಜಿಮ್ನಿ ನೊಮೇಡ್' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು. ಜಪಾನ್‌ನಲ್ಲಿ ಮಾರಾಟವಾಗುವ 5-ಡೋರ್ ಜಿಮ್ನಿ ಭಾರತದಲ್ಲಿ ತಯಾರಾಗಿದ್ದು, ಭಾರತ-ಸ್ಪೆಕ್ ಆವೃತ್ತಿಗಿಂತ ಹೆಚ್ಚುವರಿ ಫೀಚರ್‌ಗಳು ಮತ್ತು ವಿಭಿನ್ನ ಕಲರ್ ಆಯ್ಕೆಗಳೊಂದಿಗೆ ಬರುತ್ತದೆ. ಜಪಾನ್‌ನಲ್ಲಿ ಬಿಡುಗಡೆಯಾದ ಕೇವಲ ಒಂದು ವಾರದಲ್ಲಿ, ಜಿಮ್ನಿ ನೊಮೇಡ್ ಸುಮಾರು 50,000 ಬುಕಿಂಗ್‌ಗಳನ್ನು ಪಡೆದುಕೊಂಡಿದೆ.
ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಸುಜುಕಿ ಜಪಾನ್ ತನ್ನ ಜಿಮ್ನಿ ನೊಮೇಡ್ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಬುಕಿಂಗ್‌ಗಳನ್ನು ಮತ್ತೆ ತೆರೆಯುವ ಮೊದಲು ಬುಕ್ ಮಾಡಿದ ಯೂನಿಟ್‌ಗಳನ್ನು ಆದಷ್ಟು ಬೇಗ ಗ್ರಾಹಕರಿಗೆ ನೀಡಲು ಕಂಪನಿಯು ಕೆಲಸ ಮಾಡುತ್ತಿದೆ.
ಜಿಮ್ನಿ ನೊಮೇಡ್ ಬಗ್ಗೆ ಇನ್ನಷ್ಟು ವಿವರಗಳು
5-ಡೋರ್ ಜಿಮ್ನಿ ನೊಮೇಡ್ ಅನ್ನು ಭಾರತದಿಂದ ಜಪಾನ್‌ಗೆ ರಫ್ತು ಮಾಡಲಾಗುವುದರಿಂದ, ಅದರ ಡಿಸೈನ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಜಪಾನ್-ಸ್ಪೆಕ್ ಜಿಮ್ನಿ ಎರಡು ಹೊಸ ಕಲರ್ ಆಯ್ಕೆಗಳನ್ನು - ಚಿಫೋನ್ ಐವರಿ ಮೆಟಾಲಿಕ್ (ಬ್ಲಾಕ್ ರೂಫ್‌ನೊಂದಿಗೆ) ಮತ್ತು ಜಂಗಲ್ ಗ್ರೀನ್ ಅನ್ನು ಹೊಂದಿದೆ ಎಂಬುದನ್ನು ಹೊರತುಪಡಿಸಿ, ಹೊರಭಾಗದ ಡಿಸೈನ್‌ನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ. ಜಪಾನ್-ಸ್ಪೆಕ್ ಜಿಮ್ನಿಯಲ್ಲಿ ಸುಜುಕಿ ಭಾರತ-ಸ್ಪೆಕ್ ಮಾಡೆಲ್‌ನಲ್ಲಿರುವ ಕೈನೆಟಿಕ್ ಯೆಲ್ಲೋ ಕಲರ್ ಅನ್ನು ನೀಡುತ್ತಿಲ್ಲ.
ಜಪಾನ್-ಸ್ಪೆಕ್ 5-ಡೋರ್ ಜಿಮ್ನಿ ಭಾರತ-ಸ್ಪೆಕ್ ವರ್ಷನ್‌ನಂತೆಯೇ ಡ್ಯಾಶ್‌ಬೋರ್ಡ್ ಡಿಸೈನ್ ಅನ್ನು ಹೊಂದಿದೆ, ಆದರೆ ಸೀಟುಗಳು ಗ್ರೇ ಮತ್ತು ಬ್ಲಾಕ್ ಕಲರ್ ಅಪ್ಹೋಲಿಸ್ಟ್ರೀಯನ್ನು ಹೊಂದಿದೆ. ಒಳಗಡೆ ಇರುವ ಒಂದೇ ವ್ಯತ್ಯಾಸವೆಂದರೆ ಟಚ್‌ಸ್ಕ್ರೀನ್ ಭಾರತ-ಸ್ಪೆಕ್ ವರ್ಷನ್‌ಗಿಂತ ಚಿಕ್ಕದಾಗಿದೆ.
ನೀಡಲಾಗುತ್ತಿರುವ ಫೀಚರ್‌ಗಳು
ಸುಜುಕಿ ಜಿಮ್ನಿ ನೊಮೇಡ್ ಹೀಟೆಡ್ ORVM ಗಳು (ಹೊರಗಿನ ರಿಯರ್ ವ್ಯೂ ಮಿರರ್) ಮತ್ತು ಮುಂಭಾಗದ ಸೀಟುಗಳು, 4-ಸ್ಪೀಕರ್ ಸೌಂಡ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ AC ನಂತಹ ಫೀಚರ್‌ಗಳನ್ನು ಹೊಂದಿದೆ. ಸುರಕ್ಷತಾ ಸೂಟ್ ಭಾರತ-ಸ್ಪೆಕ್ ವರ್ಷನ್ ಅನ್ನು ಹೋಲುತ್ತದೆ, ಅಂದರೆ, ಇದು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಹಿಲ್-ಹೋಲ್ಡ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಸೆನ್ಸರ್‌ಗಳೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ. ಇದರ ಜೊತೆಗೆ ಜಪಾನ್-ಸ್ಪೆಕ್ ಜಿಮ್ನಿ ಹೆಚ್ಚುವರಿಯಾಗಿ ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ತಂತ್ರಜ್ಞಾನವನ್ನು ಪಡೆಯುತ್ತದೆ.
ಭಾರತ-ಸ್ಪೆಕ್ ಜಿಮ್ನಿಯಲ್ಲಿರುವ ಅದೇ ಎಂಜಿನ್ ಅನ್ನು ನೀಡಲಾಗಿದೆ
ಸುಜುಕಿ ಜಿಮ್ನಿ ನೊಮೇಡ್ ಭಾರತ-ಸ್ಪೆಕ್ ಮಾರುತಿ ಜಿಮ್ನಿಯಂತೆಯೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ, ಆದರೆ ಜಪಾನ್-ಸ್ಪೆಕ್ 5-ಡೋರ್ ಜಿಮ್ನಿ ಕಡಿಮೆ ಕಾರ್ಯಕ್ಷಮತೆಯನ್ನು ಹೊಂದಿದೆ. ಅದರ ಸ್ಪೆಸಿಫಿಕೇಷನ್‌ಗಳು ಈ ಕೆಳಗಿನಂತಿವೆ:
ಮಾಡೆಲ್ |
ಜಪಾನ್-ಸ್ಪೆಕ್ ಜಿಮ್ನಿ ನೊಮೇಡ್ |
ಭಾರತ-ಸ್ಪೆಕ್ ಮಾರುತಿ ಜಿಮ್ನಿ |
ಎಂಜಿನ್ |
1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ |
|
ಪವರ್ |
102 PS |
105 PS |
ಟಾರ್ಕ್ |
130 Nm |
134 Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT, 4-ಸ್ಪೀಡ್ AT |
|
ಡ್ರೈವ್ ಪ್ರಕಾರ |
4-ವೀಲ್-ಡ್ರೈವ್ |
AT - ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಜಪಾನ್-ಸ್ಪೆಕ್ ಜಿಮ್ನಿ ನೊಮೇಡ್ |
ಭಾರತ-ಸ್ಪೆಕ್ ಮಾರುತಿ ಜಿಮ್ನಿ |
2,651,000 ಯೆನ್ ನಿಂದ 2,750,000 ಯೆನ್ (ರೂ. 14.86 ಲಕ್ಷದಿಂದ ರೂ. 15.41 ಲಕ್ಷ) |
ರೂ. 12.74 ಲಕ್ಷದಿಂದ ರೂ.14.95 ಲಕ್ಷ |
ಭಾರತದಲ್ಲಿ, ಜಿಮ್ನಿಯು ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾದಂತಹ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.