ಈ 5 ಚಿತ್ರಗಳಲ್ಲಿ Mahindra Bolero Neo Plus ಬೇಸ್ ವೇರಿಯಂಟ್ ನ ವಿವರಗಳು
ಬೇಸ್-ಸ್ಪೆಕ್ ವೇರಿಯಂಟ್ ಆಗಿರುವ ಕಾರಣ, ಮಹೀಂದ್ರ ಬೊಲೆರೊ ನಿಯೋ ಪ್ಲಸ್ P4 ಮುಂಭಾಗದ ಫಾಗ್ ಲ್ಯಾಂಪ್ ಗಳು, ಟಚ್‌ಸ್ಕ್ರೀನ್ ಮತ್ತು ಮ್ಯೂಸಿಕ್ ಸಿಸ್ಟಮ್ ಅನ್ನು ಪಡೆಯುವುದಿಲ್ಲ.
ಒಂದೆರಡು ವರ್ಷಗಳಿಂದ ರಹಸ್ಯವಾಗಿ ತಯಾರಾಗುತ್ತಿದ್ದ ಮಹೀಂದ್ರ ಬೊಲೆರೊ ನಿಯೋ ಪ್ಲಸ್ (ಇದು ಮೂಲತಃ ಅಪ್ಡೇಟ್ ಆಗಿರುವ TUV300 ಪ್ಲಸ್ ಆಗಿದೆ), ಈಗ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಎರಡು ವೇರಿಯಂಟ್ ಗಳಲ್ಲಿ ಲಭ್ಯವಿದೆ - P4 ಮತ್ತು P10 - ಮತ್ತು, ಕ್ರಮವಾಗಿ ರೂ 11.39 ಲಕ್ಷ ಮತ್ತು ರೂ 12.49 ಲಕ್ಷ ಬೆಲೆಯನ್ನು (ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ) ಹೊಂದಿದೆ. ನೀವು ಈ ಎಂಟ್ರಿ ಲೆವೆಲ್ P4 ವೇರಿಯಂಟ್ ಅನ್ನು ಖರೀದಿಸಲು ನೋಡುತ್ತಿದ್ದರೆ, ಕೆಳಗೆ ನೀಡಿರುವ ಕೆಲವು ಚಿತ್ರಗಳಲ್ಲಿ ವಿವರಗಳನ್ನು ಪಡೆಯಬಹುದು:
ಹೊರಭಾಗ
ಬೊಲೆರೊ ನಿಯೋ ಪ್ಲಸ್‌ನ P4 ವರ್ಷನ್ ನ ಮುಂಭಾಗದ ಡಿಸೈನ್ ಟಾಪ್-ಸ್ಪೆಕ್ P10 ವೇರಿಯಂಟ್ ನಂತೆಯೇ ಕಾಣುತ್ತದೆ. ಆದರೆ, ಇದು ಫಾಲೋ-ಮಿ-ಹೋಮ್ ಫೀಚರ್ ಇಲ್ಲದೆ ಸರಳವಾದ ಹ್ಯಾಲೊಜೆನ್ ಹೆಡ್‌ಲೈಟ್‌ಗಳನ್ನು ಹೊಂದಿದೆ ಮತ್ತು ಇದು ಫಾಗ್ ಲ್ಯಾಂಪ್‌ಗಳೊಂದಿಗೆ ಬರುವುದಿಲ್ಲ. ಗ್ರಿಲ್‌ನಲ್ಲಿನ ಸ್ಲ್ಯಾಟ್‌ಗಳು ಟಾಪ್ ವೇರಿಯಂಟ್‌ನಲ್ಲಿ ಕಂಡುಬರುವಂತೆ ಕ್ರೋಮ್ ಬದಲಿಗೆ ಕಪ್ಪು ಬಣ್ಣದಲ್ಲಿರುವುದನ್ನು ನೀವು ಇಲ್ಲಿ ಗಮನಿಸಬಹುದು.
ಬೇಸ್-ಸ್ಪೆಕ್ ವೇರಿಯಂಟ್ ಆಗಿರುವ ಕಾರಣ, ಬೊಲೆರೊ ನಿಯೊ ಪ್ಲಸ್ P4 ಯಾವುದೇ ಕವರ್‌ಗಳಿಲ್ಲದೆ ಸ್ಟೀಲ್ ವೀಲ್ಸ್ ಗಳೊಂದಿಗೆ ಬರುತ್ತದೆ. ಇದು ಕಪ್ಪು ಬಣ್ಣದ ORVM ಅನ್ನು ಹೊಂದಿದೆ (ಇದನ್ನು P10 ವರ್ಷನ್ ನಲ್ಲಿ ಬಾಡಿ ಕಲರ್ ಮಾಡಲಾಗಿದೆ), ಮತ್ತು ಇದು ಟಾಪ್-ಎಂಡ್ ಮಾಡೆಲ್ ನಲ್ಲಿ ಇರುವ ಅದೇ ಕಪ್ಪು ಬಣ್ಣದ ಡೋರ್ ಹ್ಯಾಂಡಲ್ ಅನ್ನು ಕೂಡ ಹೊಂದಿದೆ. ಮಹೀಂದ್ರಾ P10 ನಲ್ಲಿ ಲಭ್ಯವಿರುವ ಸೈಡ್ ಫುಟ್‌ಸ್ಟೆಪ್‌ಗಳನ್ನು P4 ವೇರಿಯಂಟ್ ನಲ್ಲಿ ನೀಡಲಾಗಿಲ್ಲ.
ಹಿಂಭಾಗದಲ್ಲಿ, P4 ವರ್ಷನ್ ಗೆ P10 ವರ್ಷನ್ ನಂತೆಯೇ ಟೈಲ್‌ಗೇಟ್‌ನಲ್ಲಿ ಸ್ಪೇರ್ ವೀಲ್ ಅನ್ನು ನೀಡಲಾಗಿದೆ, ಆದರೆ ಟಾಪ್ ವೇರಿಯಂಟ್ ನಲ್ಲಿ ಇರುವ ಸಿಲ್ವರ್ ಬಣ್ಣದ ಬದಲು ಇದನ್ನು ಬಾಡಿ ಕಲರ್ ನಲ್ಲಿ ಕೊಡಲಾಗಿದೆ. ಹಿಂಭಾಗದಲ್ಲಿ ಕುಳಿತವರಿಗೆ ಸುಲಭವಾಗಿ ಇಳಿಯಲು ಮತ್ತು ಹತ್ತಲು ಮಹೀಂದ್ರ SUVಯಲ್ಲಿ ರಿಯರ್ ಫುಟ್ ಸ್ಟೆಪ್ ಅನ್ನು ಸ್ಟ್ಯಾಂಡರ್ಡ್ ಆಗಿ ಒದಗಿಸಲಾಗಿದೆ.
ಒಳಭಾಗ
ಬೊಲೆರೋ ನಿಯೋ ಪ್ಲಸ್ P4 ನ ಒಳಭಾಗವು ಯಾವುದೇ ಕಾಂಟ್ರಾಸ್ಟ್ ಬಣ್ಣದ ಅಕ್ಸೆಂಟ್ ಇಲ್ಲದೆ ತುಂಬಾ ಸರಳವಾಗಿ ಕಾಣುತ್ತದೆ. ಮ್ಯೂಸಿಕ್ ಸಿಸ್ಟಮ್ ಮತ್ತು ಡೇ/ನೈಟ್ IRVM ನಂತಹ ಸರಳವಾದ ಫೀಚರ್ ಗಳನ್ನು ಕೂಡ ನೀಡಲಾಗಿಲ್ಲ. ಹಿಂಭಾಗದಲ್ಲಿ, ಒಂಬತ್ತು ಜನರ ಪ್ರಯಾಣಕ್ಕಾಗಿ ಲಾಂಗ್ ಸೈಡ್-ಫೇಸಿಂಗ್ ಸೀಟ್ ಗಳನ್ನು (ಮೂರನೇ ಸಾಲಿನಂತೆ) ನೀಡಲಾಗಿದೆ.
ಮಹೀಂದ್ರಾ ತನ್ನ ಬೊಲೆರೊ ನಿಯೋ ಪ್ಲಸ್‌ನಲ್ಲಿ ಎಲ್ಲಾ ನಾಲ್ಕು ಪವರ್ ವಿಂಡೋಗಳು, ಟಿಲ್ಟ್-ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್ ಮತ್ತು ಸೆಂಟ್ರಲ್ ಲಾಕಿಂಗ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ. ಸುರಕ್ಷತೆಯ ವಿಷಯದಲ್ಲಿ, ಬೊಲೆರೊ ನಿಯೋ ಪ್ಲಸ್ P4 ವೇರಿಯಂಟ್ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBDಯೊಂದಿಗೆ ABS ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಹೊಂದಿದೆ.
ಸಂಬಂಧಿಸಿದ ಲೇಖನ: ಮಹೀಂದ್ರ ಬೊಲೆರೊ ನಿಯೊ ಪ್ಲಸ್ Vs ಮಹೀಂದ್ರ ಬೊಲೆರೊ ನಿಯೊ: ಟಾಪ್ 3 ವ್ಯತ್ಯಾಸಗಳ ವಿವರಗಳು ನಿಮಗಾಗಿ
ಮಹೀಂದ್ರ ಬೊಲೆರೊ ನಿಯೋ ಪ್ಲಸ್ P4 ಎಂಜಿನ್
ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಅನ್ನು ಸಿಂಗಲ್ 2.2-ಲೀಟರ್ ಡೀಸೆಲ್ ಎಂಜಿನ್ (120 PS/280 Nm) ಜೊತೆಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡುತ್ತಿದೆ. ಇದು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಥವಾ 4-ವೀಲ್-ಡ್ರೈವ್ (4WD) ಆಯ್ಕೆಯನ್ನು ಪಡೆಯುವುದಿಲ್ಲ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ P4 ಬೆಲೆಯು ರೂ. 11.39 ಲಕ್ಷ, ಹಾಗೂ P10 ವೇರಿಯಂಟ್ ನ ಬೆಲೆಯು 12.49 ಲಕ್ಷವಾಗಿದೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ). ಇದು ಸದ್ಯಕ್ಕೆ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದು ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ಮತ್ತು ಸ್ಕಾರ್ಪಿಯೊ Nಗೆ ಹೋಲಿಸಿದರೆ ಬಜೆಟ್ ಸ್ನೇಹಿ ಪರ್ಯಾಯ ಆಯ್ಕೆಯಾಗಿದೆ.
ಚಿತ್ರ ಕೃಪೆ- ವಿಪ್ರರಾಜೇಶ್ (ಆಟೋ ಟ್ರೆಂಡ್)
ಇನ್ನಷ್ಟು ಓದಿ: ಮಹೀಂದ್ರ ಬೊಲೆರೊ ನಿಯೋ ಪ್ಲಸ್ ಡೀಸೆಲ್