• English
  • Login / Register

2024ರಲ್ಲಿ ಬಿಡುಗಡೆಯ ನಿರೀಕ್ಷೆಯಲ್ಲಿವೆ ಮಹೀಂದ್ರಾದ ಈ 5 SUV ಗಳು

ಮಹೀಂದ್ರ XUV400 EV ಗಾಗಿ shreyash ಮೂಲಕ ಡಿಸೆಂಬರ್ 22, 2023 04:29 pm ರಂದು ಪ್ರಕಟಿಸಲಾಗಿದೆ

  • 204 Views
  • ಕಾಮೆಂಟ್‌ ಅನ್ನು ಬರೆಯಿರಿ

2024ನೇ ಇಸವಿಯಲ್ಲಿ ಥಾರ್ 5-ಡೋರ್ ಮತ್ತು XUV.e8 ಸೇರಿದಂತೆ ಕೆಲವು ಅತ್ಯಂತ ನಿರೀಕ್ಷಿತ ಮಹೀಂದ್ರಾ SUVಗಳ ಬಿಡುಗಡೆಯನ್ನು ನೋಡಲಿದ್ದೇವೆ

Mahindra Thar 5-door, Bolero Neo Plus, XUV.e8, XUV400EV2023ರಲ್ಲಿ, XUV400 EV ಎಂಬ ಒಂದು ಹೊಸ SUV ಅನ್ನು ಮಹೀಂದ್ರಾ ಬಿಡುಗಡೆ ಮಾಡಿತು. ಉಳಿದಂತೆ ವರ್ಷಪೂರ್ತಿ, ಈ ಭಾರತೀಯ ಕಾರುತಯಾರಕ ಸಂಸ್ಥೆಯು ಈಗಾಗಲೇ ಜನಪ್ರಿಯವಾದ ಮಾಡೆಲ್‌ಗಳಾದ XUV700 ಮತ್ತು ಸ್ಕಾರ್ಪಿಯೋ Nನ ಬಾಕಿ ಉಳಿದಿರುವ ಆರ್ಡರ್‌ಗಳ ಬ್ಯಾಕ್‌ಲಾಗ್ ಅನ್ನು ಪರಿಹರಿಸಲು ತನ್ನ SUVಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನ ಕೇಂದ್ರೀಕರಿಸಿತು. ಈಗ, 2024ರಲ್ಲಿ, ಮಹೀಂದ್ರಾ 5 ಹೊಸ SUVಗಳನ್ನು ಪರಿಚಯಿಸಲು ಸಿದ್ಧವಾಗಿದ್ದು,ಇದರಲ್ಲಿ ಫೇಸ್‌ಲಿಫ್ಟ್‌ಗಳು ಮತ್ತು INGLO ಪ್ಲಾಟ್‌ಫಾರ್ಮ್ ಆಧರಿಸಿದ ಹೊಚ್ಚ ಹೊಸ EV ಕೂಡಾ ಸೇರಿದೆ. 2024ರಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಈ ಹೊಸ ಮಹೀಂದ್ರಾ SUVಗಳ ವಿವರಗಳನ್ನು ಹತ್ತಿರದಿಂದ ನೋಡೋಣ.

 

ಮಹೀಂದ್ರಾ ಥಾರ್ 5-ಡೋರ್

ನಿರೀಕ್ಷಿತ ಬಿಡುಗಡೆ: 2024ರ ಉತ್ತರಾರ್ಧ

ನಿರೀಕ್ಷಿತ ಬೆಲೆ: ರೂ 15 ಲಕ್ಷದಿಂದ ಪ್ರಾರಂಭ

Mahindra Thar 5-door Spied

ಮಹೀಂದ್ರಾ ಥಾರ್ 5-ಡೋರ್ 2024ರಲ್ಲಿ ಬಿಡುಗಡೆಯಾಗಲಿರುವ ಅತ್ಯಂತ ನಿರೀಕ್ಷಿತ SUVಗಳಲ್ಲಿ ಒಂದು. ಈ SUVಯ ಪರೀಕ್ಷಾರ್ಥ ಕಾರನ್ನು ಅನೇಕ ಬಾರಿ ಗುರುತಿಸಲಾಗಿದ್ದು, ಸನ್‌ರೂಫ್‌ ಜೊತೆಗೆ ಫಿಕ್ಸ್ ಮಾಡಲಾದ ಮೆಟಲ್ ರೂಫ್ ಮತ್ತು LED ಲೈಟಿಂಗ್‌ ಸೆಟಪ್‌ ಮುಂತಾದ ಅನೇಕ ವಿವರಗಳನ್ನು ಬಹಿರಂಗಪಡಿಸುತ್ತದೆ. ಮಹೀಂದ್ರಾದ ಈ ಉದ್ದನೆಯ ಥಾರ್ 2-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಮತ್ತು 2.2 ಲೀಟರ್ ಡೀಸೆಲ್ ಇಂಜಿನ್ ಜೊತೆಗೆ 3-ಡೋರ್ ಆವೃತ್ತಿಯ ಇಂಜಿನ್ ಆಯ್ಕೆಯನ್ನು ಹೊಂದಿ ತುಸು ವಿಭಿನ್ನವಾಗಿ ತೋರುತ್ತದೆ. ಎರಡೂ ಇಂಜಿನ್‌ಗಳಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡೂ ಟ್ರಾನ್ಸ್‌ಮಿಶನ್‌ಗಳು ಲಭ್ಯವಿರುತ್ತದೆ. ಈ ಮಹೀಂದ್ರಾ SUV ರಿಯರ್ ವ್ಹೀಲ್ ಡ್ರೈವ್ (RWD) ಮತ್ತು ಫೋರ್-ವ್ಹೀಲ್-ಡ್ರೈವ್ (4WD) ಕಾನ್ಫಿಗರೇಷನ್‌ಗಳೆರಡರಲ್ಲೂ ಲಭ್ಯವಿದೆ.

ಇದನ್ನೂ ಪರಿಶೀಲಿಸಿ:  2024ರಲ್ಲಿ ಬಿಡುಗಡೆಯನ್ನು ದೃಢಪಡಿಸಿದ 7 ಹೊಸ ಟಾಟಾ ಕಾರುಗಳು

 

ಮಹೀಂದ್ರಾ XUV300 ಫೇಸ್‌ಲಿಫ್ಟ್

 ನಿರೀಕ್ಷಿತ ಬಿಡುಗಡೆ: ಮಾರ್ಚ್ 2024

ನಿರೀಕ್ಷಿತ ಬೆಲೆ: ರೂ 9 ಲಕ್ಷದಿಂದ ಪ್ರಾರಂಭ

Facelifted Mahindra XUV300 Caught On Camera Again Revealing Two New Details

 ಬಹುದಿನಗಳಿಂದ ನಿರೀಕ್ಷಿತ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಮಹೀಂದ್ರಾ, ಈ ಮಹೀಂದ್ರಾ XUV300 ಸಬ್-4m SUV. ಅಪ್‌ಡೇಟ್ ಮಾಡಲಾದ ಈ ಸಬ್‌ಕಾಂಪ್ಯಾಕ್ಟ್ ಮಹೀಂದ್ರಾ ಆಫರಿಂಗ್ ಹೊಸ LED DRLಗಳು ಮತ್ತು ಹೆಡ್‌ಲೈಟ್‌ಗಳು, ಹೊಸ ಅಲಾಯ್ ವ್ಹೀಲ್‌ಗಳು ಮತ್ತು ಸಂಪರ್ಕಿತ LED ಟೇಲ್‌ಲ್ಯಾಂಪ್ ಸೆಟಪ್ ಸೇರಿದಂತೆ ಹೊಸ ಫ್ರಂಟ್ ಫೇಸಿಯಾ ಹೊಂದಿರುವುದನ್ನು ಇದರ ಕೆಲವು ಸ್ಪೈಶಾಟ್‌ಗಳಲ್ಲಿ ಕಂಡುಬಂದಿದೆ.

 ನವೀಕೃತ ಮಹೀಂದ್ರಾ XUV300 ನ ಕ್ಯಾಬಿನ್ ಫ್ಲೋಟಿಂಗ್ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನೂ ಹೊಂದಿರುವ ನಿರೀಕ್ಷೆ ಇದೆ. ಇದು ತನ್ನ ವಿಭಾಗದ ಪ್ರತಿಸ್ಪರ್ಧಿಗಳಾದ ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೋನೆಟ್‌ಗೆ ಪೈಪೋಟಿ ನೀಡಲು ADAS ಅನ್ನೂ ನೀಡಿರಬಹುದಾದ ನಿರೀಕ್ಷೆ ಇದೆ. ಮಹೀಂದ್ರಾವು ಪ್ರಸ್ತುತ ಆವೃತ್ತಿಯ SUVಯಲ್ಲಿರುವ ಪವರ್‌ಟ್ರೇನ್ ಆಯ್ಕೆಯನ್ನು ಉಳಿಸಿಕೊಂಡಿರುವ ಸಾಧ್ಯತೆ ಇದ್ದು ಇದರಲ್ಲಿ ಎರಡು ಟರ್ಬೋ ಇಂಜಿನ್‌ಗಳಾದ– 1.2-ಲೀಟರ್ MPFi (ಮಲ್ಟಿ-ಪಾಯಿಂಟ್ ಫ್ಯೂಲ್ ಇಂಜೆಕ್ಷನ್) ಮತ್ತು 1.2-ಲೀಟರ್ T-GDi (ಗ್ಯಾಸೋಲಿನ್ ಡೈರೆಕ್ಟ್ ಇಂಜೆಕ್ಷನ್) – ಮತ್ತು 1.5-ಲೀಟರ್ ಡೀಸೆಲ್ ಇಂಜಿನ್ ಸೇರಿದೆ.

 

ಮಹಿಂದ್ರಾ XUV400 ಇವಿ ಫೇಸ್‌ಲಿಫ್ಟ್

 ನಿರೀಕ್ಷಿತ ಬಿಡುಗಡೆ: ಏಪ್ರಿಲ್ 2024

 ನಿರೀಕ್ಷಿತ ಬೆಲೆ : ರೂ 16 ಲಕ್ಷ

Mahindra XUV400 EV

 ಮಹೀಂದ್ರಾ XUV400 ಇವಿ ತನ್ನ ಪ್ರತಿರೂಪ XUV300‌ನ ಇಂಟರ್ನಲ್ ಕಂಬಶನ್ ಇಂಜಿನ್ (ICE)ಗೆ ಮಾಡಲಾದ ಅಪ್‌ಡೇಟ್ ಅನ್ನೇ ಹೋಲುವ ನವೀಕರಣಕ್ಕೆ ಒಳಗಾಗಲು ನಿರ್ಧರಿಸಿದೆ. ಈ ಇಲೆಕ್ಟ್ರಿಕ್ SUVಯು ಮರುವಿನ್ಯಾಸಗೊಳಿಸಿದ ಫ್ರಂಟ್ ಫೇಸಿಯಾ, ಅಪ್‌ಡೇಟ್ ಮಾಡಲಾದ ಅಲಾಯ್ ವ್ಹೀಲ್‌ಗಳು ಮತ್ತು ಇನ್ನಷ್ಟು ಕ್ಯಾಬಿನ್ ಕಂಫರ್ಟ್‌ಗಳನ್ನು ಹೊಂದಿರುವ ನಿರೀಕ್ಷೆ ಇದೆ. ಈ ನವೀಕೃತ XUV400 ಇವಿ ಅದೇ ಬ್ಯಾಟರಿ ಪ್ಯಾಕ್ ಆಯ್ಕೆಗಳು – 34.5 kWh ಮತ್ತು 39.4 kWh – ಅನ್ನು ಉಳಿಸಿಕೊಂಡಿದ್ದು ಸುಧಾರಿತ ಡ್ರೈವಿಂಗ್ ರೇಂಜ್ ಅನ್ನು ಹೊಂದಿರುವ ಸಾಧ್ಯತೆ ಇದೆ.

 ಇದನ್ನೂ ಪರಿಶೀಲಿಸಿ: ಮೈಡೆನ್ ಭಾರತ್ NCAP ಔಟಿಂಗ್‌ನಲ್ಲಿ ಟಾಟಾ ಹ್ಯಾರಿಯರ್ ಮತ್ತು ಸಫಾರಿಗೆ 5-ಸ್ಟಾರ್ ರೇಟಿಂಗ್

 

ಮಹೀಂದ್ರಾ XUV.e8

ನಿರೀಕ್ಷಿತ ಬಿಡುಗಡೆ: ಡಿಸೆಂಬರ್ 2024

ನಿರೀಕ್ಷಿತ ಬೆಲೆ: ರೂ 35 ಲಕ್ಷದಿಂದ ಪ್ರಾರಂಭ

Mahindra XUV700 EV

 ಇನ್ನೊಂದು ಅತ್ಯಂತ ನಿರೀಕ್ಷಿತ ಹೊಚ್ಚ ಹೊಸ ಇಲೆಕ್ಟ್ರಿಕ್ SUV ಮಹೀಂದ್ರಾ XUV.e8, 2024ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇದು ಅವಶ್ಯವಾಗಿ ಮಹೀಂದ್ರಾ XUV700 ನ ಸಂಪೂರ್ಣ ಇಲೆಕ್ಟ್ರಿಕ್ ವೇರಿಯೆಂಟ್ ಆಗಿದ್ದು, ಮೊದಲಿಗೆ 2022ರಲ್ಲಿ ತನ್ನ ಉತ್ಪಾದನಾ ಪೂರ್ವ ಪರಿಕಲ್ಪನೆಯನ್ನು ಪ್ರದರ್ಶಿಸಿತು. ಈ ಇಲೆಕ್ಟ್ರಿಕ್ SUV ಅನ್ನು ಮಹೀಂದ್ರಾದ INGLO ಪ್ಲಾಟ್‌ಫಾರ್ಮ್ ಆಧರಿಸಿ ನಿರ್ಮಿಸಲಾಗಿದ್ದು, 60 kWh ಮತ್ತು 80 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ ಮತ್ತು 175 kW ತನಕ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಪಡೆದಿದೆ. ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯು 450 km ತನಕ WLTP-ಪ್ರಮಾಣಿತ ರೇಂಜ್ ಅನ್ನು ಕ್ಲೈಮ್ ಮಾಡುತ್ತದೆ.

 ಇದು ರಿಯರ್-ವ್ಹೀಲ್-ಡ್ರೈವ್ (RWD) ಮತ್ತು ಆಲ್-ವ್ಹೀಲ್-ಡ್ರೈವ್ (AWD) ಆಯ್ಕೆಗಳೆರಡನ್ನೂ ಹೊಂದಿದ್ದು, ಇಲೆಕ್ಟ್ರಿಕ್ ಪವರ್‌ಟ್ರೇನ್‌ಗಳು RWD ಮಾಡೆಲ್‌ಗಳಿಗೆ  285 PS ತನಕ ಮತ್ತು AWD ಮಾಡೆಲ್‌ಗಳಿಗೆ 394 PS ತನಕ ನೀಡುತ್ತವೆ.

 

ಮಹೀಂದ್ರಾ ಬೊಲೆರೋ ನಿಯೋ ಪ್ಲಸ್

 ನಿರೀಕ್ಷಿತ ಬಿಡುಗಡೆ:  ಜನವರಿ 2024

 ನಿರೀಕ್ಷಿತ ಬೆಲೆ:  ರೂ 10 ಲಕ್ಷದಿಂದ ಪ್ರಾರಂಭ

Mahindra Bolero Neo Plus Front

 ಮಹೀಂದ್ರಾ ಅಂತಿಮವಾಗಿ 9 ಜನರ ತನಕ ಆಸನ ಸಾಮರ್ಥ್ಯದ ಬೊಲೆರೋ ನಿಯೋದ ವಿಸ್ತೃತ ಆವೃತ್ತಿಯನ್ನು 'ಪ್ಲಸ್' ಪ್ರತ್ಯಯದೊಂದಿಗೆ ಬಿಡುಗಡೆಗೆ ಸಿದ್ಧಪಡಿಸಿದೆ. ಬೊಲೆರೋ ನಿಯೋ ಪ್ಲಸ್  ಈ ಹಿಂದೆ ಲಭ್ಯವಿದ್ದ TUV300 ಪ್ಲಸ್ ಅನ್ನು ಹೊಸ ಹೆಸರಿನೊಂದಿಗೆ ಮತ್ತೆ ತರುತ್ತಿದ್ದು, ಇದು ಬೊಲೆರೋ ನಿಯೋ ಅನ್ನೇ ಹೋಲುತ್ತದೆ. 130 PS ಮತ್ತು 300 Nm ಅನ್ನು ಉತ್ಪಾದಿಸುವ 2.2-ಲೀಟರ್ ಡೀಸೆಲ್ ಇಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್‌ಗೆ ಜೋಡಿಸಿರುವ ನಿರೀಕ್ಷೆ ಇದೆ. ಈ ಬೊಲೆರೋ ನಿಯೋ ಪ್ಲಸ್ ಮಹೀಂದ್ರಾ ಸ್ಕಾರ್ಪಿಯೋ Nಗೆ ಅಗ್ಗದ ಬದಲಿ ಪರ್ಯಾಯವಾಗಲಿದೆ.

 ಆದ್ದರಿಂದ ಈ 5 SUVಗಳನ್ನು ಮಹೀಂದ್ರಾ 2024ರಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಯಲ್ಲಿದೆ. ಈ ಭಾರತೀಯ ಕಾರು ತಯಾರಕ ಸಂಸ್ಥೆಯು ಮುಂಬರುವ ವರ್ಷಗಳಲ್ಲಿ XUV ಮತ್ತು BE ಬ್ರ್ಯಾಂಡ್‌ಗಳ ಅಡಿಯಲ್ಲಿ ಇಲೆಕ್ಟ್ರಿಕ್ ಆವೃತ್ತಿಯ ಥಾರ್ ಸೇರಿದಂತೆ ಇನ್ನಷ್ಟು ಇವಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ನೀವು ಯಾವ ಮಹೀಂದ್ರಾ SUVಗಾಗಿ ಕಾತರದಿಂದ ಕಾಯುತ್ತಿದ್ದೀರಿ? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ.

ಇನ್ನಷ್ಟು ಓದಿ: XUV400 EV ಆಟೋಮ್ಯಾಟಿಕ್

was this article helpful ?

Write your Comment on Mahindra XUV400 EV

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ e vitara
    ಮಾರುತಿ e vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience