• English
  • Login / Register

2024ರಲ್ಲಿ ಭಾರತದಲ್ಲಿ ಕಾಣಿಸಿಕೊಳ್ಳಲಿರುವ ಅತ್ಯಂತ ನಿರೀಕ್ಷೆಯ 10 SUV ಗಳು

ಮಾರುತಿ ಇವಿಎಕ್ಸ್ ಗಾಗಿ shreyash ಮೂಲಕ ಡಿಸೆಂಬರ್ 29, 2023 03:08 pm ರಂದು ಪ್ರಕಟಿಸಲಾಗಿದೆ

  • 80 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಪಟ್ಟಿಯಲ್ಲಿ ಟಾಟಾ, ಮಹೀಂದ್ರಾ ಮತ್ತು ಮಾರುತಿಯ ಹೊಸ ಎಲೆಕ್ಟ್ರಿಕ್‌ SUV ಗಳು ಒಳಗೊಂಡಿವೆ

Top 10 Most Awaited SUVs Coming In 2024

ಹೋಂಡಾ ಎಲೆವೇಟ್‌ ಮತ್ತು ಟಾಟಾ ನೆಕ್ಸನ್‌ ಮತ್ತು ಹ್ಯಾರಿಯರ್‌ ಗಳ ಪರಿಷ್ಕೃತ ಆವೃತ್ತಿಗಳ ಪ್ರವೇಶದೊಂದಿಗೆ 2023ರಲ್ಲಿ SUV ವಿಭಾಗದಲ್ಲಿ ಸಾಕಷ್ಟು ಚಟುವಟಿಕೆಗಳು ನಡೆದಿವೆ. ಈಗ 2024 ಅನ್ನು ಸ್ವಾಗತಿಸಲು ಕ್ಷಣಗಣಗೆ ಆರಂಭಗೊಂಡಿದ್ದು, ಈ ವರ್ಷದಲ್ಲಿ ಇಂಟರ್ನಲ್‌ ಕಂಬಷನ್‌ ಎಂಜಿನ್‌ (ICE) ಮತ್ತು ಎಲೆಕ್ಟ್ರಿಕ್‌ (EV) ಮಾದರಿಗಳು ಸೇರಿದಂತೆ ಮಹೀಂದ್ರಾ, ಟಾಟಾ, ಮಾರುತಿ ಮತ್ತು ಹ್ಯುಂಡೈ ಸೇರಿದಂತೆ ವಿವಿಧ ಕಾರು ತಯಾರಕ ಸಂಸ್ಥೆಗಳಿಂದ ಇನ್ನೂ ಅನೇಕ SUV ಗಳನ್ನು ನಿರೀಕ್ಷಿಸುತ್ತಿದ್ದೇವೆ. ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿರುವ ಅತ್ಯಂತ ನಿರೀಕ್ಷೆಯ 10 SUV ಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಕಿಯಾ ಸೋನೆಟ್‌ ಫೇಸ್‌‌ ಲಿಫ್ಟ್

ನಿರೀಕ್ಷಿತ ಬಿಡುಗಡೆ: ಜನವರಿ 2024

ನಿರೀಕ್ಷಿತ ಬೆಲೆ: ರೂ 8 ಲಕ್ಷದಿಂದ ಪ್ರಾರಂಭ

Kia Sonet facelift

 ಕಿಯಾ ಸೋನೆಟ್‌ ಫೇಸ್‌ ಲಿಫ್ಟ್ ವಾಹನವು 2024ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ. ಈ ಸಬ್‌ ಕಾಂಪ್ಯಾಕ್ಟ್ SUV‌ ಯ ಹೊರಾಂಗಣಕ್ಕೆ ಹೊಸತನವನ್ನು ನೀಡಲಾಗಿದ್ದು, ಲೆವೆಲ್ 1 ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಸೇರಿದಂತೆ ಹೊಸ ವಿಶೇಷತೆಗಳನ್ನು ಸೇರಿಸಲಾಗಿದೆ. ಪರಿಷ್ಕೃತ ಕಿಯಾ ಸೋನೆಟ್‌ ವಾಹನವು ಮೊದಲಿನ ಎಂಜಿನ್‌ ಆಯ್ಕೆಯನ್ನೇ ಬಳಸಲಿದ್ದು, ಈ ಕಾರು ತಯಾರಕ ಸಂಸ್ಥೆಯು ಇದರಲ್ಲಿ ಡೀಸೆಲ್‌ - ಮ್ಯಾನುವಲ್‌ ಸಂಯೋಜನೆಯನ್ನು ಮರುಪರಿಚಯಿಸಿದೆ.

ಗ್ರಾಹಕರು ರೂ. 25,000 ದಷ್ಟು ಟೋಕನ್‌ ಮೊತ್ತದ ಮೂಲಕ ಸೋನೆಟ್‌ ಫೇಸ್‌ ಲಿಫ್ಟ್‌ ಅನ್ನು ಕಾಯ್ದಿರಿಸಲು ಕಿಯಾ ಸಂಸ್ಥೆಯು ವ್ಯವಸ್ಥೆ ಮಾಡಿದೆ. ಇದರ ವಿತರಣೆಯು 2024ರ ಜನವರಿಯಲ್ಲಿ ಪ್ರಾರಂಭಗೊಳ್ಳಲಿದೆ.

 

ಹ್ಯುಂಡೈ ಕ್ರೆಟಾ ಫೇಸ್‌ ಲಿಫ್ಟ್

ನಿರೀಕ್ಷಿತ ಬಿಡುಗಡೆ: ಜನವರಿ 2024

ನಿರೀಕ್ಷಿತ ಬೆಲೆ: ರೂ 10.50 ಲಕ್ಷದಿಂದ ಪ್ರಾರಂಭ

Hyundai Creta facelift

2024ರಲ್ಲಿ ಪರಿಷ್ಕರಣೆಗೆ ಒಳಗಾಗಲಿರುವ ಇನ್ನೊಂದು ಜನಪ್ರಿಯ SUV ಎಂದರೆ ಅದು ಹ್ಯುಂಡೈ ಕ್ರೆಟಾ. ಕ್ರೆಟಾವು ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟಗೊಳ್ಳುವ ಕಾಂಪ್ಯಾಕ್ಟ್ SUVಗಳಲ್ಲಿ ಒಂದಾಗಿದ್ದು, ಕೊನೆಯದಾಗಿ 2020ರಲ್ಲಿ ಪ್ರಮುಖ ಪರಿಷ್ಕರಣೆಗೆ ಒಳಗಾಗಿತ್ತು. ಈ ಪರಿಷ್ಕರಣೆಯೊಂದಿಗೆ ಕ್ರೆಟಾವು ಪರಿಷ್ಕೃತ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆಯಲಿದ್ದು, ಪರಿಷ್ಕೃತ ಕಿಯಾ ಸೆಲ್ಟೋಸ್‌ ನಲ್ಲಿರುವಂತೆ 1.5-ಲೀಟರ್‌ ಪೆಟ್ರೋಲ್‌ ಎಂಜಿನ್ (115 PS/144 Nm), 1.5-ಲೀಟರ್‌ ಡೀಸೆಲ್ (116 PS/250 Nm) ‌ ಮತ್ತು ಈ ವಿಭಾಗದ ಅತ್ಯಂತ ಶಕ್ತಿಯುತ 1.5-ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ (160 PS/253 Nm) ಆಯ್ಕೆಗಳನ್ನು ಮುಂದುವರಿಸಲಿದೆ.

ಇದನ್ನು ಸಹ ನೋಡಿರಿ: 2023ರ ನಿಮ್ಮ ಅತ್ಯಂತ ಅಚ್ಚುಮೆಚ್ಚಿನ (ಅತ್ಯಂತ ಹೆಚ್ಚು ವೀಕ್ಷಿಸಿದ) ಕಾರ್‌ ದೇಖೊ ವೀಡಿಯೋಗಳಿವು

 

ಮಾರುತಿ eVX

ನಿರೀಕ್ಷಿತ ಬಿಡುಗಡೆ: 2024ರ ಉತ್ತರಾರ್ಧ

ನಿರೀಕ್ಷಿತ ಬೆಲೆ: ರೂ 22 ಲಕ್ಷದಿಂದ ಪ್ರಾರಂಭ

Maruti eVX

ಮಾರುತಿ ಸಂಸ್ಥೆಯು ತನ್ನ ಸಂಪೂರ್ಣ ಎಲೆಕ್ಟ್ರಿಕ್‌ ವಾಹನವಾದ eVX ಅನ್ನು 2024ರಲ್ಲಿ ಹೊರತರಲಿದೆ.  ಮಾರುತಿ ಸುಜುಕಿ eVX ಅನ್ನು ಮೊದಲ ಬಾರಿಗೆ ಪರಿಕಲ್ಪನೆಯ ರೂಪದಲ್ಲಿ ಭಾರತದಲ್ಲಿ 2023 ಅಟೋ ಎಕ್ಸ್ಪೊ ದಲ್ಲಿ ಪ್ರದರ್ಶಿಸಲಾಗಿದ್ದು, ಈ ಎಲೆಕ್ಟ್ರಿಕ್ SUVಯ ಉತ್ಪಾದನೆಗೆ ಸಿದ್ಧಗೊಂಡ ಆವೃತ್ತಿಯನ್ನು ಜಪಾನ್‌ ಮೊಬಿಲಿಟಿ ಶೋ 2023ರಲ್ಲಿ ತೋರಿಸಲಾಗಿತ್ತು. ಮಾರುತಿ ಸಂಸ್ಥೆಯು eVX ನಲ್ಲಿ ಡ್ಯುವಲ್‌ ಮೋಟಾರ್ AWD (ಆಲ್-ವೀಲ್-ಡ್ರೈವ್) ಆಯ್ಕೆಯೊಂದಿಗೆ 60 kWh ಬ್ಯಾಟರಿಯನ್ನು ಬಳಸಲಿದ್ದು, 550 km ನಷ್ಟು ಶ್ರೇಣಿಯನ್ನು ಒದಗಿಸಲಿದೆ. ಮಾರುತಿಯ ಎಲೆಕ್ಟ್ರಿಕ್ SUV ಯನ್ನು ಈಗಾಗಲೇ ಭಾರತದಲ್ಲಿ ಪರೀಕ್ಷಿಸಲಾಗಿದೆ.

ಟಾಟಾ ಪಂಚ್ EV

ನಿರೀಕ್ಷಿತ ಬಿಡುಗಡೆ: 2024ರ ಆರಂಭದಲ್ಲಿ

ನಿರೀಕ್ಷಿತ ಬೆಲೆ: ರೂ 12 ಲಕ್ಷದಿಂದ ಪ್ರಾರಂಭ

Tata Punch EV

ಟಾಟಾ ಪಂಚ್‌ EV ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಟಿಯಾಗೊ EV ಮತ್ತು ನೆಕ್ಸನ್ EV‌ ಜೊತೆಗೆ ಈ ಕಾರು ತಯಾರಕ ಸಂಸ್ಥೆಯ ಇನ್ನೊಂದು EV ಎನಿಸಲಿದೆ. ಪಂಚ್ EV‌ ಯ ಪರೀಕ್ಷಾರ್ಥ ವಾಹನವು ಈಗಾಗಲೇ ಅನೇಕ ಬಾರಿ ಕಾಣಿಸಿಕೊಂಡಿದ್ದು, ಟಾಟಾದ ಇತರ EV ಗಳಲ್ಲಿ ಕಂಡಂತೆ, EV ವಾಹನಕ್ಕೆ ಅಗತ್ಯವಿರುವ ಸಣ್ಣಪುಟ್ಟ ಪರಿಷ್ಕರಣೆಗಳಿಗೆ ಒಳಪಡಲಿದೆ. ಪಂಚ್ EV‌ ಯನ್ನು ಸ್ಟ್ಯಾಂಡರ್ಡ್‌ ಮತ್ತು ಲಾಂಗ್‌ ರೇಂಜ್‌ ವೇರಿಯಂಟ್‌ ಗಳಲ್ಲಿ ಹೊರತರುವ ಯೋಜನೆ ಇದ್ದು, 500 km ನಷ್ಟು ಶ್ರೇಣಿಯನ್ನು ನೀಡುವ ನಿರೀಕ್ಷೆ ಇದೆ.

 

ಟಾಟಾ ಕರ್ವ್ / ಟಾಟಾ ಕರ್ವ್ EV

Tata Curvv
Tata Curvv EV

ಟಾಟಾ ಕರ್ವ್‌ ನಿರೀಕ್ಷಿತ ಬಿಡುಗಡೆ: 2024ರ ಮಧ್ಯದಲ್ಲಿ / ಕರ್ವ್ EV ನಿರೀಕ್ಷಿತ ಬಿಡುಗಡೆ: ಮಾರ್ಚ್‌ 2024

ಟಾಟಾ ಕರ್ವ್‌ ನಿರೀಕ್ಷಿತ ಬೆಲೆ: ರೂ. 10.50 ಲಕ್ಷದಿಂದ ಪ್ರಾರಂಭ / ಕರ್ವ್ EV ನಿರೀಕ್ಷಿತ ಬೆಲೆ: ರೂ 20 ಲಕ್ಷದಿಂದ ಪ್ರಾರಂಭ

ಟಾಟಾ ಕರ್ವ್ ಮತ್ತು ಇದರ ಎಲೆಕ್ಟ್ರಿಕ್‌ ಆವೃತ್ತಿಯಾಗಿರುವ  ಟಾಟಾ ಕರ್ವ್‌ EV - ಇವೆರಡೂ ಸಹ ಕಾಂಪ್ಯಾಕ್ಟ್ SUV‌ ವಿಭಾಗದಲ್ಲಿ ಈ ಕಾರು ತಯಾರಕ ಸಂಸ್ಥೆಗೆ ಪ್ರವೇಶ ದ್ವಾರವನ್ನು ತೆರೆಯಲಿವೆ. ಟಾಟಾ ಕರ್ವ್ EV‌ ಮೊದಲಿಗೆ ರಸ್ತೆಗಿಳಿಯಲಿದ್ದು, 500 km ನಷ್ಟು ಶ್ರೇಣಿಯನ್ನು ನೀಡಲಿದೆ. ಇದರ ಬ್ಯಾಟರಿ ಮತ್ತು ಎಲೆಕ್ಟ್ರಿಕ್‌ ಮೋಟಾರ್‌ ವಿವರಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಇನ್ನೊಂದೆಡೆ ಟಾಟಾ ಕರ್ವ್‌ ವಾಹನವು ಇದರ ಎಲೆಕ್ಟ್ರಿಕ್‌ ಆವೃತ್ತಿಯ ಬಿಡುಗಡೆಯ ನಂತರ ಹೊರಬರಲಿದ್ದು, ಇದು ಹೊಸ 1.2-ಲೀಟರ್ T-GDi (ಟರ್ಬೊ) ಪೆಟ್ರೋಲ್‌ ಎಂಜಿನ್ (125 PS / 225 Nm)‌ ಅನ್ನು ಬಳಸಲಿದೆ. ಎರಡೂ ವಾಹನಗಳು ಆಧುನಿಕ ವೈಶಿಷ್ಟ್ಯಗಳು ಮತ್ತು ಅನುಕೂಲತೆಗಳೊಂದಿಗೆ ಬರಲಿವೆ.

ಇದನ್ನು ಸಹ ನೋಡಿರಿ: ಟ್ರಾಫಿಕ್‌ ನಲ್ಲಿ ಸಿಲುಕಿಕೊಂಡಾಗ ನಿಮ್ಮ ಕಾರನ್ನು ರಕ್ಷಿಸಲು ಇರುವ 7 ಸಲಹೆಗಳು

ಟಾಟಾ ಹ್ಯಾರಿಯರ್ EV

ನಿರೀಕ್ಷಿತ ಬಿಡುಗಡೆ: 2024ರ ಉತ್ತರಾರ್ಧ

ನಿರೀಕ್ಷಿತ ಬೆಲೆ: ರೂ 30 ಲಕ್ಷದಿಂದ ಪ್ರಾರಂಭ

Tata Harrier EV

ಸಂಪೂರ್ಣ ಎಲೆಕ್ಟ್ರಿಕ್‌ ಟಾಟಾ ಹ್ಯಾರಿಯರ್‌ ವಾಹನವು 2024ರಲ್ಲಿ ಬಿಡುಗಡೆಯಾಗಲಿದೆ.  ಹ್ಯಾರಿಯರ್‌ EV ಯನ್ನು ಮೊದಲ ಬಾರಿಗೆ ಅದರ ಪರಿಕಲ್ಪನೆಯ ರೂಪದಲ್ಲಿ ನವದೆಹಲಿಯಲ್ಲಿ 2023 ಅಟೋ ಎಕ್ಸ್ಪೊ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು. ಇದು ಇತ್ತೀಚೆಗೆ ಬಿಡುಗಡೆಯಾದ  ಟಾಟಾ ಹ್ಯಾರಿಯರ್ನ ವಿನ್ಯಾಸವನ್ನೇ ಹೊಂದಿದ್ದರೂ, EV ವಾಹನಕ್ಕೆ ಅಗತ್ಯವಿರುವ ಸಾಧನಗಳನ್ನು ಇದರಲ್ಲಿ ಅಳವಡಿಸಲಾಗುತ್ತದೆ. ಹ್ಯಾರಿಯರ್‌ EV ಯನ್ನು ಅನೇಕ ಪವರ್‌ ಟ್ರೇನ್‌ ಆಯ್ಕೆಗಳೊಂದಿಗೆ ಹೊರತರಲು ಉದ್ದೇಶಿಸಲಾಗಿದ್ದು, 500 km ನಷ್ಟು ಗರಿಷ್ಠ ಚಾಲನಾ ಶ್ರೇಣಿಯನ್ನು ಒದಗಿಸಲಿದೆ. 

ಮಹೀಂದ್ರಾ ಥಾರ್‌ 5 ಡೋರ್

ನಿರೀಕ್ಷಿತ ಬಿಡುಗಡೆ: 2024ರ ದ್ವಿತೀಯಾರ್ಧ

ನಿರೀಕ್ಷಿತ ಬೆಲೆ: ರೂ 15 ಲಕ್ಷದಿಂದ ಪ್ರಾರಂಭ

Mahindra Thar 5-door Spied

 ಮಹೀಂದ್ರಾ ಥಾರ್ 5-ಡೋರ್ ವಾಹನವು ಪರೀಕ್ಷೆಯ ವೇಳೆ ಅನೇಕ ಬಾರಿ ಕಾಣಿಸಿಕೊಂಡಿದ್ದು, 2024ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ. ಇದು ಥಾರ್‌ ಆಫ್‌ ರೋಡರ್‌ ನ ಉದ್ದನೆಯ ಆವೃತ್ತಿಯಾಗಿದ್ದು, ಫಿಕ್ಸ್ಡ್‌ ಮೆಟಲ್‌ ರೂಫ್‌, ಸನ್‌ ರೂಫ್‌, ಕ್ಯಾಬಿನ್‌ ನಲ್ಲಿ ಇನ್ನಷ್ಟು ಅನುಕೂಲತೆಗಳು ಮತ್ತು LED ಲೈಟಿಂಗ್‌ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಈ ವಾಹನವು 2 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಮತ್ತು 2.2 ಲೀಟರ್‌ ಡೀಸೆಲ್‌ ಎಂಜಿನ್‌ ಸೇರಿದಂತೆ ಈಗಿನ ಥಾರ್‌ ನಲ್ಲಿರುವ ಎಂಜಿನ್‌ ಆಯ್ಕೆಗಳನ್ನೇ ಬಳಸಲಿದೆ. ಎರಡೂ ಎಂಜಿನ್‌ ಆಯ್ಕೆಗಳು ಮ್ಯಾನುವಲ್‌ ಮತ್ತು ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಆಯ್ಕೆಗಳೊಂದಿಗೆ ಬರಲಿದ್ದು, ಕಾರ್ಯಕ್ಷಮತೆಯಲ್ಲಿ ಒಂದಷ್ಟು ಸುಧಾರಣೆ ಕಾಣಿಸಿಕೊಳ್ಳಲಿದೆ. ಐದು ಬಾಗಿಲುಗಳ ಈ ಆಫ್‌ ರೋಡ್‌ SUV ಯು ರಿಯರ್‌ ವೀಲ್‌ ಡ್ರೈವ್ (RWD) ಮತ್ತು 4 ವೀಲ್‌ ಡ್ರೈವ್ (4WD) ಇವೆರಡೂ ಆಯ್ಕೆಗಳೊಂದಿಗೆ ದೊರೆಯಲಿದೆ.

 

ಮಹೀಂದ್ರಾ XUV300 ಫೇಸ್‌ ಲಿಫ್ಟ್

ನಿರೀಕ್ಷಿತ ಬಿಡುಗಡೆ: ಮಾರ್ಚ್‌ 2024

ನಿರೀಕ್ಷಿತ ಬೆಲೆ: ರೂ 9 ಲಕ್ಷದಿಂದ ಪ್ರಾರಂಭ

Facelifted Mahindra XUV300 Caught On Camera Again Revealing Two New Details

 2019ರಲ್ಲಿ ಮಾರುಕಟ್ಟೆಗೆ ಕಾಲಿಟ್ಟ ಮಹೀಂದ್ರಾ XUV300 ವಾಹನವು ಮೊದಲ ಬಾರಿಗೆ ಗಣನೀಯ ಪ್ರಮಾಣದಲ್ಲಿ ಪರಿಷ್ಕರಣೆಗೆ ಒಳಗಾಗಲಿದೆ. ಕಳೆದ ಕೆಲವು ತಿಂಗಳುಗಳಿಂದ  ಮಹೀಂದ್ರಾ XUV300 ಫೇಸ್‌ ಲಿಫ್ಟ್ ನ ಪರೀಕ್ಷಾರ್ಥ ವಾಹನವನ್ನು ಗಮನಿಸಲಾಗಿದ್ದು, ಇದು 2024ರಲ್ಲಿ ಬಿಡುಗಡೆಯಾಗುವ ಸಂಭವವಿದೆ. ಪರಿಷ್ಕೃತ XUV300 ವಾಹನವು ಹೊಸ LED DRL ಗಳು ಮತ್ತು ಹೆಡ್‌ ಲೈಟ್‌ ಗಳೊಂದಿಗೆ ಹೊಸ ಫೇಶಿಯಾ, ಹೊಸ ಅಲೋಯ್‌ ವೀಲ್‌ ಗಳು ಮತ್ತು ಸಂಪರ್ಕಿತ LED ಟೇಲ್‌ ಲ್ಯಾಂಪ್‌ ಗಳನ್ನು ಹೊಂದಿರಲಿದೆ. ಇದು ಇನ್ನೂ ಉತ್ಕೃಷ್ಟ ವೈಶಿಷ್ಟ್ಯಗಳೊಂದಿಗೆ ಪರಿಷ್ಕೃತ ಕ್ಯಾಬಿನ್‌ ಅನ್ನು ಸಹ ಪಡೆಯಲಿದೆ. 2024 XUV300 ಕಾರು ತನ್ನ ಈಗಿನ ಮಾದರಿಯಲ್ಲಿ ಇರುವ ಎಂಜಿನ್‌ ಆಯ್ಕೆಗಳನ್ನೇ (1.2-ಲೀಟರ್ MPFi (ಮಲ್ಟಿ ಪಾಯಿಂಟ್‌ ಫ್ಯೂಯೆಲ್‌ ಎಂಜೆಕ್ಷನ್), 1.2-ಲೀಟರ್ T-GDi (ಗ್ಯಾಸೊಲಿನ್‌ ಡೈರೆಕ್ಟ್‌ ಇಂಜೆಕ್ಷನ್) ಮತ್ತು 1.5-ಲೀಟರ್‌ ಡೀಸೆಲ್‌ ಎಂಜಿನ್)‌ ಪಡೆಯಲಿದೆ.

ಮಹೀಂದ್ರಾ XUV.e8

ನಿರೀಕ್ಷಿತ ಬಿಡುಗಡೆ: ಡಿಸೆಂಬರ್‌ 2024

ನಿರೀಕ್ಷಿತ ಬೆಲೆ: ರೂ 35 ಲಕ್ಷದಿಂದ ಪ್ರಾರಂಭ

Mahindra XUV700 EV

ಮಾರುತಿ ಸಂಸ್ಥೆಯು 2024ರಲ್ಲಿ XUV.e8 ಹೆಸರಿನ ಸಂಪೂರ್ಣ ಹೊಸ  EV ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.  ಮಹೀಂದ್ರಾ XUV.e8 ಎನ್ನುವುದು XUV700 ವಾಹನದ ಎಲೆಕ್ಟ್ರಿಕ್‌ ಆವೃತ್ತಿ ಎನಿಸಿದ್ದು, ಇದು ಈ ಕಾರು ತಯಾರಕ ಸಂಸ್ಥೆಯ ಹೊಸ INGLO ಪ್ಲಾಟ್‌ ಫಾರ್ಮ್‌ ಅನ್ನು ಆಧರಿಸಿದೆ. ಇದು ICE SUV ಯಂತೆಯೇ ಕಾಣಿಸುತ್ತಿದ್ದು, EV ವಾಹನಕ್ಕೆ ಅಗತ್ಯವಿರುವ ಬದಲಾವಣೆಗಳು ಮತ್ತು ಆಧುನಿಕ ಒಳಾಂಗಣವನ್ನು ಹೊಂದಿರಲಿದೆ. ಈ ಪ್ಲಾಟ್‌ ಫಾರ್ಮ್‌, 60 kWh ಮತ್ತು 80 kWh ಸಾಮರ್ಥ್ಯದ ಬ್ಯಾಟರಿಗಳನ್ನು ಹೊಂದುವ ಕ್ಷಮತೆಯನ್ನು ಪಡೆದಿದೆ. WLTP ಪ್ರಕಾರ ದೊಡ್ಡ ಬ್ಯಾಟರಿಯು 450 km ತನಕದ ಶ್ರೇಣಿಯನ್ನು ನೀಡಲಿದೆ. ಮಹೀಂದ್ರಾದ ಈ ಹೊಸ SUV ಯು 175 kW ತನಕದ DC ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ.

ಮಹೀಂದ್ರಾವು XUV.e8 ಅನ್ನು ರಿಯರ್‌ ವೀಲ್‌ ಡ್ರೈವ್‌ (RWD) ಆಲ್‌ ವೀಲ್‌ ಡ್ರೈವ್ (AWD) ಸೌಲಭ್ಯಗಳೊಂದಿಗೆ ಒದಗಿಸಲಿದೆ. RWD ವೇರಿಯಂಟ್‌ ಗಳು 285 PS ತನಕದ ಔಟ್ಪುಟ್‌ ಅನ್ನು ಹೊಂದಿದ್ದರೆ, AWD ವೇರಿಯಂಟ್‌ ಗಳು 394 PS ತನಕದ ಶಕ್ತಿಯನ್ನುಂಟು ಮಾಡಬಲ್ಲವು.

 

ಹೊಸ ತಲೆಮಾರಿನ ರೆನೋ ಡಸ್ಟರ್

ನಿರೀಕ್ಷಿತ ಬಿಡುಗಡೆ: 2024ರ ದ್ವಿತೀಯಾರ್ಧ

ನಿರೀಕ್ಷಿತ ಬೆಲೆ: ರೂ 10 ಲಕ್ಷ

New Renault Duster

 ರೆನೋ ಡಸ್ಟರ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ 2012ರಲ್ಲಿ ಬಿಡುಗಡೆ ಮಾಡಲಾಗಿದ್ದು, 2022ರಲ್ಲಿ ಇದರ ಮಾರಾಟವನ್ನು ನಿಲ್ಲಿಸುವ ತನಕ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಇದು ಪ್ರಮುಖ ವಾಹನವಾಗಿ ನೆಲೆಗೊಂಡಿತ್ತು. ಇತ್ತೀಚೆಗೆ ಹೊಸ ತಲೆಮಾರಿನ SUV ಯ ಜಾಗತಿಕ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಇದನ್ನು ರೆನೋ ಸಂಸ್ಥೆಯ ಬಜೆಟ್‌ ಆಧರಿತ ಮಾದರಿ ಆಗಿರುವ ಡೇಶಿಯ ಡಸ್ಟರ್‌ ಎಂಬ ಹೆಸರಿನಿಂದ ಮಾರಾಟ ಮಾಡಲಾಗುವುದು. ಹೊಸ ಡಸ್ಟರ್‌ ವಾಹನವು CMF-B ಪ್ಲಾಟ್‌ ಫಾರ್ಮ್‌ ಅನ್ನು ಆಧರಿಸಿದ್ದು, ಇದರ ವಿನ್ಯಾಸವು ಡೇಶಿಯ ಬಿಗ್‌ ಸ್ಟರ್‌ ಪರಿಕಲ್ಪನೆಯಿಂದ ಪ್ರೇರಣೆಯನ್ನು ಪಡೆದಿದೆ.

 ಯೂರೋಪ್‌ ನಲ್ಲಿ ಹೊಸ ತಲೆಮಾರಿನ ಡಸ್ಟರ್‌ ವಾಹನವು ಪೆಟ್ರೋಲ್‌, ಟರ್ಬೊ ಪೆಟ್ರೋಲ್‌, ಸ್ಟ್ರಾಂಗ್‌ ಹೈಬ್ರೀಡ್‌ ಮತ್ತು LPG ಸೇರಿದಂತೆ ಅನೇಕ ಪವರ್‌ ಟ್ರೇನ್‌ ಆಯ್ಕೆಗಳೊಂದಿಗೆ ಬರುತ್ತಿದೆ. ಇದರ ಟರ್ಬೋ ಎಂಜಿನ್‌, ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ನೊಂದಿಗೆ AWD ಸಿಸ್ಟಂ ನೊಂದಿಗೆ ಬರಲಿದೆ. ಭಾರತದಲ್ಲಿ ಕಾಣಿಸಿಕೊಳ್ಳಲಿರುವ ರೆನೋ ಡಸ್ಟರ್‌ ನ ವಿವರಗಳು ಇನ್ನೂ ದೃಢಪಟ್ಟಿಲ್ಲ. ಆದರೆ ಇದು ಯಾವುದೇ ಡೀಸೆಲ್‌ ಎಂಜಿನ್‌ ಆಯ್ಕೆಯನ್ನು ಹೊಂದಿರದು.

ಇವು 2024ರಲ್ಲಿ ಬಿಡುಗಡೆಯಾಗಲಿರುವ ಅತ್ಯಂತ ನಿರೀಕ್ಷೆಯ 10 SUV ಗಳಾಗಿವೆ. ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು ಮತ್ತು ಏಕೆ? ನಿಮ್ಮ ಪ್ರತಿಕ್ರಿಯೆಗಳನ್ನು ಈ ಕೆಳಗೆ ಹಂಚಿಕೊಳ್ಳಿರಿ.

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಇವಿಎಕ್ಸ್

1 ಕಾಮೆಂಟ್
1
D
dr william thomas
Jan 1, 2024, 3:01:47 PM

It's sad that dustur has only petrol engines ,dustur captured thr hearts of Indians because of ots diesel engines a d that was a perfect combination, the body dynamics and an efficient long hauling diesel

Read More...
    ಪ್ರತ್ಯುತ್ತರ
    Write a Reply
    Read Full News

    explore similar ಕಾರುಗಳು

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience