Mahindra Bolero Neo Plus ನ ಬಣ್ಣ ಆಯ್ಕೆಗಳ ವಿವರಗಳು
ಮಹೀಂದ್ರ ಬೊಲೆರೊ ನಿಯೋ ಪ್ಲಸ್ ಗಾಗಿ rohit ಮೂಲಕ ಏಪ್ರಿಲ್ 19, 2024 08:17 pm ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ಇದು P4 ಮತ್ತು P10 ಎಂಬ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ
-
TUV300 ಪ್ಲಸ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯೇ ಬೊಲೆರೊ ನಿಯೋ ಪ್ಲಸ್ ಆಗಿದೆ.
-
ಮೆಜೆಸ್ಟಿಕ್ ಸಿಲ್ವರ್, ಡೈಮಂಡ್ ವೈಟ್ ಮತ್ತು ನಾಪೋಲಿ ಬ್ಲ್ಯಾಕ್ ಎಂಬ ನಾಲ್ಕು ಬಾಡಿ ಕಲರ್‌ನ ಆಯ್ಕೆಗಳಿವೆ
-
6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಒಂದೇ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿದೆ.
-
ಭಾರತದಾದ್ಯಂತ 11.39 ಲಕ್ಷ ರೂ.ನಿಂದ 12.49 ಲಕ್ಷ ರೂ.ವರೆಗೆ ಎಕ್ಸ್ ಶೋರೂಂ ಬೆಲೆಗಳು ಇರಲಿದೆ.
Mahindra Bolero Neo Plus (TUV300 ಪ್ಲಸ್‌ನ ಫೇಸ್‌ಲಿಫ್ಟೆಡ್ ಆವೃತ್ತಿ) ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು P4 ಮತ್ತು P10 ಎಂಬ ಆವೃತ್ತಿಗಳಲ್ಲಿ ಲಭ್ಯವಿದೆ. ಇದು 7-ಆಸನದ ಬೊಲೆರೊ ನಿಯೊದಂತೆ ಕಾಣುತ್ತದೆ. ಆದರೆ ಒಟ್ಟಾರೆ ಉದ್ದ ಮತ್ತು ಇನ್-ಕ್ಯಾಬಿನ್ ವೈಶಿಷ್ಟ್ಯಗಳು ಮತ್ತು ಆಸನ ವಿನ್ಯಾಸದ ರೂಪದಲ್ಲಿ ಕೆಲವು ಗಮನಾರ್ಹ ವ್ಯತ್ಯಾಸಗಳನ್ನು ಹೊಂದಿದೆ. ನೀವು ಹೊಸ ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಖರೀದಿಸಲು ಯೋಜಿಸುತ್ತಿದ್ದರೆ, ಅದು ಲಭ್ಯವಿರುವ ಎಲ್ಲಾ ಬಣ್ಣ ಆಯ್ಕೆಗಳನ್ನು ನೋಡೋಣ:
-
ಮೆಜೆಸ್ಟಿಕ್ ಸಿಲ್ವರ್
-
ಡೈಮಂಡ್ ವೈಟ್
-
ನಪೋಲಿ ಬ್ಲ್ಯಾಕ್
ಬೊಲೆರೊ ನಿಯೊ ಪ್ಲಸ್ ಬೊಲೆರೊ ನಿಯೊದಂತೆಯೇ ಮೇಲೆ ತಿಳಿಸಿದ ಮೂರು ಬಾಡಿ ಕಲರ್‌ಗಳನ್ನು ಪಡೆದರೆ, ರಾಕಿ ಬೀಜ್ ಮತ್ತು ಹೈವೇ ರೆಡ್ ಬಣ್ಣಗಳು ಬೊಲೆರೊ ನಿಯೊದಲ್ಲಿ ಮಾತ್ರ ಲಭ್ಯವಿರಲಿದೆ. ಎರಡು ಎಸ್‌ಯುವಿಗಳ ನಡುವಿನ ಏಕೈಕ ವ್ಯತ್ಯಾಸವೆಂದರೆ ನಂತರದ ಸಿಲ್ವರ್ ಪೇಂಟ್ ಆಯ್ಕೆಯನ್ನು ಬೊಲೆರೊ ನಿಯೋ ಪ್ಲಸ್ ಮೆಜೆಸ್ಟಿಕ್ ಸಿಲ್ವರ್ ಎಂದು ಕರೆದರೆ, ನಿಯೋದಲ್ಲಿ 'ಡಿಸ್ಯಾಟ್ ಸಿಲ್ವರ್' ಎಂದು ಕರೆಯಲಾಗುತ್ತದೆ. ಎರಡೂ SUV ಗಳು ಯಾವುದೇ ಡ್ಯುಯಲ್-ಟೋನ್ ಪೇಂಟ್ ಆಯ್ಕೆಯನ್ನು ಪಡೆಯುವುದಿಲ್ಲ.
ಸಂಬಂಧಿತ: ಮಹೀಂದ್ರಾ ಬೊಲೆರೊ ನಿಯೊ ಪ್ಲಸ್ Vs ಮಹೀಂದ್ರಾ ಬೊಲೆರೊ ನಿಯೊ: 3 ಪ್ರಮುಖ ವ್ಯತ್ಯಾಸಗಳ ವಿವರ
ಡೀಸೆಲ್ ಎಂಜಿನ್ ಆಯ್ಕೆ ಮಾತ್ರ
ಮಹೀಂದ್ರಾ ಇದನ್ನು 2.2-ಲೀಟರ್ ಡೀಸೆಲ್ ಎಂಜಿನ್ (120 PS/280 Nm) ನೊಂದಿಗೆ ಮಾತ್ರ ನೀಡಲಾಗುತ್ತಿದ್ದು, 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಈ ಫ್ಯಾಮಿಲಿ-ಕೇಂದ್ರಿತ ಎಸ್‌ಯುವಿಯು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಪಡೆಯುವುದಿಲ್ಲ ಮತ್ತು ಇದು ರಿಯರ್ ವೀಲ್-ಡ್ರೈವ್ (RWD) ಎಸ್‌ಯುವಿ ಆಗಿದೆ.
ವೈಶಿಷ್ಟ್ಯಗಳು ಮತ್ತು ಸುರಕ್ಷತಾ ತಂತ್ರಜ್ಞಾನ
ಬೊಲೆರೊ ನಿಯೋ ಪ್ಲಸ್ ಬ್ಲೂಟೂತ್, ಆಕ್ಸ್ ಮತ್ತು ಯುಎಸ್‌ಬಿ ಕನೆಕ್ಷನ್‌ನೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್ ಯುನಿಟ್ ಅನ್ನು ಒದಗಿಸಲಾಗಿದೆ ಆದರೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಪಡೆಯುವುದಿಲ್ಲ. ಇದು 6-ಸ್ಪೀಕರ್ ಸೌಂಡ್ ಸಿಸ್ಟಮ್, ಎಲ್ಲಾ ನಾಲ್ಕು ಪವರ್ ವಿಂಡೋಗಳು, ಮ್ಯಾನುಯಲ್ ಎಸಿ ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್‌ನೊಂದಿಗೆ ಬರುತ್ತದೆ. ಇದರ ಸುರಕ್ಷತಾ ಕ್ರಮವು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಮುಂಭಾಗದ ಫಾಗ್ ಲ್ಯಾಂಪ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.
ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ಭಾರತದಾದ್ಯಂತ ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಎಕ್ಸ್ ಶೋರೂಂ ಬೆಲೆಯು 11.39 ಲಕ್ಷ ರೂ.ನಿಂದ 12.49 ಲಕ್ಷ ರೂ.ವರೆಗೆ ನಿಗದಿಪಡಿಸಿದೆ. ಇದು ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದನ್ನು ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಸ್ಕಾರ್ಪಿಯೋ ಎನ್‌ಗೆ ಕೈಗೆಟುಕುವ ಆಯ್ಕೆಯಾಗಿ ಪರಿಗಣಿಸಬಹುದು.
ಇನ್ನಷ್ಟು ಓದಿ: ಬೊಲೆರೊ ನಿಯೋ ಪ್ಲಸ್ ಡೀಸೆಲ್