ಮುಂಬರುವ ಮಹೀಂದ್ರಾ EVಯ ಶ್ರೇಣಿಗಳಿಗೆ ಬದಲಾಗಿದೆ ಬ್ರ್ಯಾಂಡ್ ಗುರುತು
ಈ ಹೊಸ್ ಬ್ರ್ಯಾಂಡ್ ಗುರುತು ಮಾಹೀಂದ್ರಾ ಥಾರ್.e ಕಾನ್ಸೆಪ್ಟ್‌ನೊಂದಿಗೆ ಪ್ರಾರಂಭಗೊಂಡಿದ್ದು, ಮುಂಬರುವ ಎಲ್ಲಾ EVಯಲ್ಲೂ ಇರಲಿವೆ.
-
ಈ ಹೊಸ ಬ್ರ್ಯಾಂಡ್ ಗುರುತು ಮಹೀಂದ್ರಾದ ಮುಂಬರುವ XUV ಮತ್ತು BE (ಬಾರ್ನ್ ಇಲೆಕ್ಟ್ರಿಕ್) ಶ್ರೇಣಿಯಲ್ಲಿ ಇರಲಿವೆ.
-
ಮಹೀಂದ್ರಾದ ಈ ಹೊಸ ಲೋಗೋ ‘ಅನಂತ ಸಾಧ್ಯತೆಗಳ' ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕಾರುತಯಾರಕರ ರೇಸಿಂಗ್ ಪರಂಪರೆಗೆ ಒಂದು ನಮನವಾಗಿದೆ.
-
ಈ ಕಾರುತಯಾರಕರು ಹೊಸ ಬ್ರ್ಯಾಂಡ್ ಮತ್ತು ಎ.ಆರ್.ರೆಹಮಾನ್ ಅವರು ರಚಿಸಿರುವ ‘ಲೆ ಚಲಾಂಗ್' ಎಂಬ ಆಡಿಯೋ ಆ್ಯಂಥಮ್ ಅನ್ನೂ ಅನಾವರಣಗೊಳಿಸಿದ್ದಾರೆ.
-
ಹೊಸ EV ಗಳ ಶ್ರೇಣಿಯು ಸೀಟ್‌ಬೆಲ್ಟ್ ಅಲರ್ಟ್‌ಗಳು ಮತ್ತು ಟರ್ನ್ ಇಂಡಿಕೇಟರ್‌ಗಳು ಮುಂತಾದ ವಿವಿಧ ಕಾರ್ಯಗಳನ್ನು ಸೂಚಿಸಲು ಸುಮಾರು 75ಕ್ಕೂ ಹೆಚ್ಚಿನ ಸೌಂಡ್‌ಗಳನ್ನು ಹೊಂದಿವೆ.
-
ಹೊಸ ಮಹೀಂದ್ರಾ EV ಅಫೆನ್ಸಿವ್ 2024ರಲ್ಲಿ XUV.e8 ನೊಂದಿಗೆ (XUV700ಯ EV ಆವೃತ್ತಿ) ಪ್ರಾರಂಭವಾಗಲಿದ್ದು, BE ಶ್ರೇಣಿಯು 2025ರಿಂದ ಬಿಡುಗಡೆಯಾಗಲಿದೆ.
2023ನೇ ಸ್ವಾತಂತ್ರ್ಯದಿನದಂದು ಇದರ ಪ್ರಸ್ತುತಿಯ ಭಾಗವಾಗಿ ಮಹೀಂದ್ರಾ ತನ್ನ ಮುಂಬರುವ ಶ್ರೇಣಿಯ ಇಲೆಕ್ಟ್ರಿಕ್ ವಾಹನಗಳಿಗೆ (EVಗಳು) ಹೊಸ ಬ್ರ್ಯಾಂಡ್ ಗುರುತನ್ನು ಅನಾವರಣಗೊಳಿಸಿದೆ, ಇದು XUV ಮತ್ತು BE (ಬಾರ್ನ್ ಇಲೆಕ್ಟ್ರಿಕ್) ಪೋರ್ಟ್‌ಫೋಲಿಯೋಗಳಲ್ಲಿ EVಗಳನ್ನು ಒಳಗೊಂಡಂತೆ INGLO ಮಾಡ್ಯುಲಾರ್ ಪ್ಲಾಟ್‌ಫರ್ಮ್‌ನಿಂದ ಆಧಾರಿತವಾಗಿದೆ. ಮಹೀಂದ್ರಾ XUV700 ಆಗಮನಕ್ಕೂ ಮೊದಲು 2021ರಲ್ಲಿ ತನ್ನ ಲೋಗೋಗೆ ಪರಿಷ್ಕರಣೆ ಮಾಡಿದ ನಂತರ ಇದು ಕಾರುತಯಾರಕರ ಎರಡನೇ ಗುರುತಿನ ಅಪ್‌ಡೇಟ್ ಆಗಿದೆ. ಅದಕ್ಕಿಂತಲೂ ನಂತರ, ಇತ್ತೀಚೆಗೆ ಮಹೀಂದ್ರಾ ‘XUV' ಯ ಪ್ರಸ್ತುತ ಇರುವ ಮಾಡೆಲ್‌ಗಳ EV ಉತ್ಪನ್ನಗಳು ಮತ್ತು ಹೊಸ ಇಲೆಕ್ಟ್ರಿಕ್ ಕಾರುಗಳ ‘BE' ಬ್ರ್ಯಾಂಡ್‌ಗಳ ನಡುವೆ ವ್ಯತ್ಯಾಸವನ್ನು ತೋರಿಸಿದೆ.
ಹೊಸ ಲೋಗೋದ ವಿವರಗಳು
ಈ ಹೊಸ ಲೋಗೋ ಕಾರುತಯಾರಕರ ‘ಟ್ವಿನ್ ಪೀಕ್ಸ್'ನ ಹೊಸತಾದ ಲಾಂಛನವಾಗಿದ್ದು, ‘ಅನಂತ ಸಾಧ್ಯತೆಗಳನ್ನು' ಸೂಚಿಸುತ್ತದೆ ಮತ್ತು ಇದು ರೇಸ್ ಟ್ರ್ಯಾಕ್ ಅನ್ನು ಹೋಲುವುದರಿಂದ ಕಾರುತಯಾರಕರ ರೇಸಿಂಗ್ ಪರಂಪರೆಗೆ ಒಂದು ಮೆಚ್ಚುಗೆಯಾಗಿದೆ. ಅಲ್ಲದೇ ಇದು ಮಾದರಿಯ ಸಾಂಪ್ರದಾಯಿಕ ‘M' ಅನ್ನು ಆಧುನಿಕವಾಗಿ ಸಂಯೋಜಿಸುವುದರೊಂದಿಗೆ ಕಾರುತಯಾರಕರು ಸುಸ್ಥಿರತೆಯನ್ನೂ ಕಾಪಾಡಿಕೊಂಡಿದ್ದಾರೆ ಎಂದು ಮಹೀಂದ್ರಾ ಹೇಳುತ್ತದೆ.
ಥಾರ್.e ಕಾನ್ಸೆಪ್ಟ್‌ನಲ್ಲಿ ಪಾದಾರ್ಪಣೆಗೊಂಡ ಈ ಹೊಸ ಗುರುತನ್ನು ಮಹೀಂದ್ರಾ ಇಲೆಕ್ಟ್ರಿಕ್ ಆಟೋಮೊಬೈಲ್ಸ್ ಲಿಮಿಟಡ್ (MEAL) ಎಂಬ ಮಹಿಂದ್ರಾದ ಹೊಸ EV ಅಂಗಸಂಸ್ಥೆಯು ಅನಾವರಣಗೊಳಿಸಿತು. 2024ರಲ್ಲಿ ಬಿಡುಗೆಯಾಗಲಿರುವ ಮಹೀಂದ್ರಾ XUV.e8 ನೊಂದಿಗೆ, ಇದು ತನ್ನ ಹೊಸ ಲೋಗೋ ಅನ್ನು ಮುಂಬರುವ EV ಶ್ರೇಣಿಯ ಮೊದಲ ಮಾಡೆಲ್‌ನಲ್ಲಿ ಪಡೆಯಲಿದೆ.
ಮಹೀಂದ್ರಾದ ಹೊಸ ಆಡಿಯೋ ಗುರುತು
ಹೊಸ ಗುರುತನ್ನು ಅನಾವರಣಗೊಳಿಸುವುದರೊಂದಿಗೆ, ಮಹೀಂದ್ರಾವು ಬಾಲಿವುಡ್ ಸಂಗೀತ ನಿರ್ದೇಶಕರು ಮತ್ತು ಹಾಡುಗಾರರಾದ ಎ. ಆರ್. ರೆಹಮಾನ್ ಅವರ ಸಹಯೋಗದೊಂದಿಗೆ ಸಿದ್ಧಪಡಿಸಿದ ‘ಲೆ ಚಲಾಂಗ್' ಎಂಬ ಹೊಸ ಬ್ರ್ಯಾಂಡ್ ಮತ್ತು ಸೋನಿಕ್ ಆ್ಯಂಥಮ್ ಅನ್ನೂ ಅನಾವರಣಗೊಳಿಸಿದೆ. ಇದು ಒಳಗೂ ಹೊರಗೂ ಡ್ರೈವ್ ಸೌಂಡ್‌ಗಳು, ಸೀಟ್‌ಬೆಲ್ಟ್ ಅಲರ್ಟ್‌ಗಳು ಮತ್ತು ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಂತೆ ಅನೇಕ ಕಾರ್ಯಗಳನ್ನು ಸೂಚಿಸುವ 75 ಕ್ಕೂ ಹೆಚ್ಚು ಸೌಂಡ್‌ಗಳನ್ನು ಒಳಗೊಂಡಿರುತ್ತದೆ.
ಮಹೀಂದ್ರಾ ತನ್ನ EV ಆಟವನ್ನು ಪ್ರಾರಂಭಿಸಿದ್ದು ಹಾರ್ಮನ್ ಮತ್ತು ಡಾಲ್ಬಿ ಅಟ್ಮೋಸ್‌ನಂತಹ ಇಕಾನಿಕ್ ಮಾರ್ಕ್‌ಗಳ ಸಹಯೋಗದೊಂದಿಗೆ ಮುಂಬರುವ EV ಲೈನ್‌ಅಪ್‌ನಲ್ಲಿ 360-ಡಿಗ್ರಿ ಸುತ್ತುವರಿದ ಸೌಂಡ್ ಎಕ್ಸ್‌ಪೀರಿಯನ್ಸ್ ಅನ್ನು ನೀಡಲಿದೆ. ಆ್ಯಕ್ಟಿವ್ ಆ್ಯಂಬಿಯೆಂಟ್ ಲೈಟಿಂಗ್ ಮತ್ತು ಹೈ-ರೆಸಲ್ಯೂಶನ್ ಅನಿಮೇಷನ್‌ಗಳಂತಹ ದೃಶ್ಯ ವರ್ಧನೆಗಳಿಂದ ಈ ಸೌಂಡ್‌ಗಳು ಪೂರಕವಾಗಿರುತ್ತವೆ.
ಇದನ್ನೂ ಓದಿ: ಈ 15 ವಿವರವಾದ ಚಿತ್ರಗಳಿಂದ ಪರಿಶೀಲಿಸಿ ಮಹೀಂದ್ರಾ ಥಾರ್ EV
EVಗಳ ಬಿಡುಗಡೆಯ ಸಮಯ
2024ರ ಅಂತ್ಯದಲ್ಲಿ XUV.e8 ಎಂದು ಕರೆಯಲ್ಪಡುವ XUV700 ನ EV ಆವೃತ್ತಿಯನ್ನು ನಂತರ XUV.e9 (XUV.e8ನ ಕೂಪ್ ಪರ್ಯಾಯ) ಬಿಡುಗಡೆಯೊಂದಿಗೆ ಮಹೀಂದ್ರಾ ಮೊದಲು ತನ್ನ ಮುಂಬರುವ EV ಯನ್ನು ಪ್ರಾರಂಭಿಸುತ್ತದೆ. ನೀವು BE ರೇಂಜ್‌ಗಾಗಿ ಇನ್ನೂ ಕಾಯುತ್ತಿದ್ದರೆ, ಇದು 2025 ರಿಂದ ಮಾತ್ರವೇ ಲಭ್ಯವಿರುತ್ತದೆ ಮತ್ತು ಅಕ್ಟೋಬರ್ 2025ರಿಂದ BE.05 ಲೈನ್ ಅಪ್‌ನಲ್ಲಿ ಲಭ್ಯವಿರುತ್ತದೆ.
ಇದನ್ನೂ ಓದಿ: ಮಹೀಂದ್ರಾ ಅನಾವರಣಗೊಳಿಸಿದೆ ಸ್ಕಾರ್ಪಿಯೋ N-ಆಧಾರಿತ ಗ್ಲೋಬಲ್ ಪಿಕಪ್ ಕಾನ್ಸೆಪ್ಟ್