Mahindra XUV300ಗಿಂತ ಈ 5 ವೈಶಿಷ್ಟ್ಯಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಿರುವ Mahindra XUV 3XO
ಮಹೀಂದ್ರ ಎಕ್ಸ್‌ಯುವಿ300 ಗಾಗಿ ansh ಮೂಲಕ ಏಪ್ರಿಲ್ 12, 2024 08:49 pm ರಂದು ಮಾರ್ಪಡಿಸಲಾಗಿದೆ
- 86 Views
- ಕಾಮೆಂಟ್ ಅನ್ನು ಬರೆಯಿರಿ
ಇದು ಹೆಚ್ಚು ಟೆಕ್ನಾಲಾಜಿ ಸಮೃದ್ಧವಾಗಿರುತ್ತದೆ ಮತ್ತು ಈ ಸೆಗ್ಮೆಂಟ್‌ನಲ್ಲಿ ಪನೋರಮಿಕ್ ಸನ್‌ರೂಫ್ ಅನ್ನು ನೀಡುವ ಮೊದಲ ಮೊಡೆಲ್ ಆಗಲಿದೆ
ಈ ಏಪ್ರಿಲ್ 29 ರಂದು ಪ್ರಸ್ತುತ ಮಹೀಂದ್ರಾ XUV 3XO ಎಂದು ಕರೆಯಲ್ಪಡುವ ಫೇಸ್‌ಲಿಫ್ಟೆಡ್ ಮಹೀಂದ್ರಾ XUV300, ಹೊಚ್ಚ ಹೊಸ ವಿನ್ಯಾಸ ಮತ್ತು ನವೀಕರಿಸಿದ ಕ್ಯಾಬಿನ್‌ನೊಂದಿಗೆ ಅನಾವರಣಗೊಳ್ಳಲಿದೆ. ಈ ಬಹು ನಿರೀಕ್ಷಿತ ಫೇಸ್‌ಲಿಫ್ಟ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು ನೋಟವನ್ನು ಬದಲಾಯಿಸುವುದು ಮಾತ್ರವಲ್ಲದೆ, ಇದರಲ್ಲಿ ಹೊಸ ವೈಶಿಷ್ಟ್ಯಗಳನ್ನು ಸಹ ನೀಡಲಿದೆ. ಈವರೆಗೆ ಬಿಡುಗಡೆಯಾಗಿರುವ ಟೀಸರ್‌ಗಳನ್ನು ಆಧರಿಸಿ, ಮಹೀಂದ್ರಾ ಎಕ್ಸ್‌ಯುವಿ 3XOವು ಮಹೀಂದ್ರಾ ಎಕ್ಸ್‌ಯುವಿ300 ಗಿಂತ ಹೆಚ್ಚುವರಿಯಾಗಿ ಈ 5 ವೈಶಿಷ್ಟ್ಯಗಳನ್ನು ಪಡೆಯುತ್ತದೆ.
ಪನೋರಮಿಕ್ ಸನ್‌ರೂಫ್
ಟೀಸರ್‌ನಿಂದ ನಾವು ಗಮನಿಸಿದ ಮೊದಲ ಮತ್ತು ಪ್ರಮುಖ ಅಪ್‌ಡೇಟ್ ಎಂದರೆ ಪನೋರಮಿಕ್ ಸನ್‌ರೂಫ್ ಇರುವಿಕೆ. ಪ್ರಸ್ತುತ ಎಕ್ಸ್‌ಯುವಿ 300 ಜೊತೆಗೆ ಈ ಸೆಗ್ಮೆಂಟ್‌ನಲ್ಲಿರುವ ಸಬ್‌ಕಾಂಪಕ್ಟ್ ಎಸ್‌ಯುವಿಗಳು ಕೇವಲ ಸಿಂಗಲ್ ಪೇನ್ ಸನ್‌ರೂಫ್ ಅನ್ನು ಹೊಂದಿದೆ. ಮಹೀಂದ್ರಾ XUV 3XO ಪನೋರಮಿಕ್ ಯುನಿಟ್ ಅನ್ನು ನೀಡುವ ಈ ಸೆಗ್ಮೆಂಟ್‌ನ ಮೊದಲನೆಯ ಕಾರು ಆಗಲಿದೆ.
ದೊಡ್ಡದಾದ ಟಚ್‌ಸ್ಕ್ರೀನ್
ಪ್ರಸ್ತುತ ಎಕ್ಸ್‌ಯುವಿ300 ವರರ್‌ನಿಂದ ಕನೆಕ್ಟ್ ಮಾಡುವಂತಹ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಆದರೆ, ಮಹೀಂದ್ರಾ ಎಕ್ಸ್‌ಯುವಿ 3XO ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಷನ್‌ಗ್ ಸಪೋರ್ಟ್ ಆಗುವ 10.25-ಇಂಚಿನ ಡಿಸ್‌ಪ್ಲೇಯನ್ನು ಪಡೆಯುತ್ತದೆ ಮತ್ತು ಹೆಚ್ಚು ಕನೆಕ್ಟೆಡ್ ಕಾರ್ ಟೆಕ್ ವೈಶಿಷ್ಟ್ಯಗಳೊಂದಿಗೆ ಬರುವ ಸಾಧ್ಯತೆಯಿದೆ. ಈ ಡಿಸ್‌ಪ್ಲೇಯನ್ನು ಮಹೀಂದ್ರಾ ಎಕ್ಸ್‌ಯುವಿ400 (ಮಹೀಂದ್ರಾ ಎಕ್ಸ್‌ಯುವಿ300ನ ಎಲೆಕ್ಟ್ರಿಕ್ ಆವೃತ್ತಿ) ನಲ್ಲಿಯೂ ಸಹ ಕಾಣಬಹುದು, ಇದರ ಮೊಡೆಲ್‌ವಾರ್ಷಿಕ ಆಪ್‌ಡೇಟ್ ಪಡೆದ ನಂತರ ಇದು ಲಭ್ಯವಾಗಿದೆ.
ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ
ರೆಫೆರೆನ್ಸ್‌ಗಾಗಿ ಮಹೀಂದ್ರ ಎಕ್ಸ್‌ಯುವಿ400 ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇಯ ಚಿತ್ರವನ್ನು ಬಳಸಲಾಗಿದೆ
ದೊಡ್ಡದಾದ ಟಚ್‌ಸ್ಕ್ರೀನ್‌ನ ಜೊತೆಯಲ್ಲಿ, ಎಕ್ಸ್‌ಯುವಿ 3XO 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಯನ್ನು ಸಹ ಪಡೆಯುತ್ತದೆ, ಇದು ಹೊಸ XUV400 ನಲ್ಲಿಯೂ ಲಭ್ಯವಿರುವ ಮತ್ತೊಂದು ಸಾಮಾನ್ಯ ವೈಶಿಷ್ಟ್ಯವಾಗಿದೆ. ಪ್ರಸ್ತುತವಿರುವ ಸೆಮಿ-ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್‌ಗೆ ಹೋಲಿಸಿದರೆ ಇದು ದೊಡ್ಡ ಅಪ್‌ಡೇಟ್ ಆಗಿರುತ್ತದೆ, ಏಕೆಂದರೆ ಈ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ನಿಮ್ಮ ಡ್ರೈವ್‌ನ ಮಾಹಿತಿಯನ್ನು ಪ್ರದರ್ಶಿಸುವುದಲ್ಲದೆ, ಇದು ಸಂಯೋಜಿತ ನ್ಯಾವಿಗೇಷನ್ ಅನ್ನು ಸಹ ಹೊಂದಿದೆ, ಇದು ಸಾಕಷ್ಟು ಉಪಯುಕ್ತ ಸೌಕರ್ಯವಾಗಿದೆ.
ಇದನ್ನೂ ಓದಿ: MG Hector Blackstorm Editionನ ಟೀಸರ್ ಔಟ್, ಏಪ್ರಿಲ್ 10 ರಂದು ಬಿಡುಗಡೆ
ಈ ಹೊಸ ಡಿಸ್‌ಪ್ಲೇಗಳು ಸೆಗ್ಮೆಂಟ್‌ನಲ್ಲಿನ ಸ್ಕ್ರೀನ್ ಸೆಟಪ್‌ಗಳ ವಿಷಯದಲ್ಲಿ ಫೇಸ್‌ಲಿಫ್ಟೆಡ್ ಟಾಟಾ ನೆಕ್ಸಾನ್‌ನೊಂದಿಗೆ ಸಮವಾಗಿರುತ್ತದೆ ಮತ್ತು ಹ್ಯುಂಡೈ ವೆನ್ಯೂ ಮತ್ತು ಮಾರುತಿ ಬ್ರೆಝಾ ಮುಂತಾದವುಗಳಿಗಿಂತ ಮುಂದಿದೆ.
ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು
ಈ ಕಾರಿನಲ್ಲಿರುವ ಸೌಕರ್ಯವನ್ನು ಒಂದು ಹಂತ ಮೇಲಕ್ಕೆ ಕೊಂಡೊಯ್ಯಲು, ಮಹೀಂದ್ರಾ ಎಕ್ಸ್‌ಯುವಿ 3XO ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಸಹ ನೀಡುತ್ತದೆ. ಈ ಸೆಗ್‌ಮೆಂಟ್‌ನಲ್ಲಿರುವ ನೆಕ್ಸಾನ್ ಮತ್ತು ಸೋನೆಟ್‌ನಂತಹ ಕೆಲವು ಕಾರುಗಳಲ್ಲಿ ಈಗಾಗಲೇ ಈ ವೈಶಿಷ್ಟ್ಯವು ಲಭ್ಯವಿದೆ ಮತ್ತು ಸ್ಪರ್ಧೆಯನ್ನು ಮುಂದುವರಿಸಲು ನವೀಕರಿಸಿದ ಮಹೀಂದ್ರಾ ಸಬ್-4ಎಮ್ ಎಸ್‌ಯುವಿಯಲ್ಲಿ ಇದು ಅಗತ್ಯ ಸೇರ್ಪಡೆಯಾಗಿದೆ.
ವೈರ್‌ಲೆಸ್ ಫೋನ್ ಚಾರ್ಜರ್
ಕೊನೆಯದಾಗಿ, XUV 3XO ನ ವೈಶಿಷ್ಟ್ಯಗಳ ಪಟ್ಟಿಗೆ ಮಹೀಂದ್ರಾ ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಕೂಡ ಸೇರಿಸಬಹುದು. ಈ ವೈಶಿಷ್ಟ್ಯವನ್ನು XUV400 ಗೆ ಅದರ ಮೊಡೆಲ್‌ವಾರ್ಷಿಕ ಆಪ್‌ಡೇಟ್‌ನಲ್ಲಿ ಸೇರಿಸಲಾಗಿದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಕನೆಕ್ಷನ್‌ನೊಂದಿಗೆ ಚಾರ್ಜಿಂಗ್ ಅನ್ನು ಹೆಚ್ಚು ಅನುಕೂಲಕರವಾಗಿಸುವುದು ಮಾತ್ರವಲ್ಲದೆ, ಇದು ನಿಮ್ಮ ಕ್ಯಾಬಿನ್‌ನ ಮುಂಭಾಗದ ಕನ್ಸೋಲ್ ಅನ್ನು ವೈರ್-ಫ್ರೀ ಮಾಡುತ್ತದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ XUV 3XO ಅನ್ನು ಏಪ್ರಿಲ್ 29 ರಂದು ಅನಾವರಣಗೊಳಿಸಲಾಗುವುದು ಮತ್ತು ಅದು ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ. 9 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಬೆಲೆಯು ಪ್ರಾರಂಭವಾಗಬಹುದೆಂದು ನಾವು ನಿರೀಕ್ಷಿಸುತ್ತೇವೆ ಮತ್ತು ಇದು ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ ಮತ್ತು ಮಾರುತಿ ಬ್ರೆಝಾ ಮುಂತಾದವುಗಳೊಂದಿಗೆ ತನ್ನ ಪೈಪೋಟಿಯನ್ನು ಮುಂದುವರೆಸುತ್ತದೆ.
ಇನ್ನಷ್ಟು ಓದಿ : ಮಹೀಂದ್ರಾ XUV300 AMT