2024ರ ಮೇನಲ್ಲಿ ಅತಿ ಹೆಚ್ಚು ಕಾರುಗಳ ಮಾರಾಟ ಮಾಡುವ ಮೂಲಕ Tata, Mahindra ಮತ್ತು ಇತರ ಬ್ರಾಂಡ್‌ಗಳನ್ನು ಹಿಂದಿಕ್ಕಿದ Maruti ಮತ್ತು Hyundai
ಜೂನ್ 12, 2024 06:13 am ರಂದು ansh ಮೂಲಕ ಪ್ರಕಟಿಸಲಾಗಿದೆ
- 39 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ, ಮಹೀಂದ್ರಾ ಮತ್ತು ಹ್ಯುಂಡೈನ ಮಾರಾಟದ ಸಂಖ್ಯೆಯನ್ನು ಒಟ್ಟು ಮಾಡಿದರೂ ಮಾರುತಿಯು ಹೆಚ್ಚಿನ ಮಾರಾಟದೊಂದಿಗೆ ಮುನ್ನಡೆಯಲ್ಲಿದೆ
2024ರ ಮೇ ತಿಂಗಳ ಮಾರಾಟದ ವರದಿಯು ಹೊರಬಿದ್ದಿದೆ, ಮತ್ತು ಎಂದಿನಂತೆ, ಮಾರುತಿ, ಹ್ಯುಂಡೈ ಮತ್ತು ಟಾಟಾ ಮೊದಲ ಮೂರು ಸ್ಥಾನಗಳಲ್ಲಿದ್ದು, ಮಾರುತಿ ಮುಂಚೂಣಿಯಲ್ಲಿದೆ. ಟಾಪ್ 10 ಕಾರು ತಯಾರಕರಲ್ಲಿ ಹೆಚ್ಚಿನ ಬ್ರಾಂಡ್ ಗಳು ತಮ್ಮ ಮಾಸಿಕ ಮತ್ತು ವಾರ್ಷಿಕ ಮಾರಾಟದಲ್ಲಿ ಬೆಳವಣಿಗೆಯನ್ನು ಕಂಡಿವೆ, ಹಾಗೆಯೇ ಕೆಲವು ನಷ್ಟವನ್ನು ಕೂಡ ಅನುಭವಿಸಿವೆ. ಬನ್ನಿ, ಮೇ 2024 ರಲ್ಲಿ ಈ ಬ್ರ್ಯಾಂಡ್‌ಗಳ ಮಾರಾಟದ ವಿವರಗಳನ್ನು ನೋಡೋಣ.
ಕಾರು ತಯಾರಕರು |
ಮೇ 2024 |
ಏಪ್ರಿಲ್ 2024 |
MoM ಬೆಳವಣಿಗೆ % |
ಮೇ 2023 |
YYY ಬೆಳವಣಿಗೆ % |
ಮಾರುತಿ |
1,44,002 |
1,37,952 |
4.4 % |
1,43,708 |
0.2 % |
ಹುಂಡೈ |
49,151 |
50,201 |
- 2.1 % |
48,601 |
1.1 % |
ಟಾಟಾ |
46,700 |
47,885 |
- 2.5 % |
45,880 |
1.8 % |
ಮಹೀಂದ್ರಾ |
43,218 |
41,008 |
5.4 % |
32,883 |
31.4 % |
ಟೊಯೋಟಾ |
23,959 |
18,700 |
28.1 % |
19,379 |
23.6 % |
ಕಿಯಾ |
19,500 |
19,968 |
- 2.3 % |
18,766 |
3.9 % |
ಹೋಂಡಾ |
4,822 |
4,351 |
10.8 % |
4,660 |
3.5 % |
MG |
4,769 |
4,485 |
6.3 % |
5,006 |
- 4.7 % |
ರೆನಾಲ್ಟ್ |
3,709 |
3,707 |
0.1 % |
4,625 |
- 19.8 % |
ಫೋಕ್ಸ್‌ವ್ಯಾಗನ್ |
3,273 |
3,049 |
7.3 % |
3,286 |
- 0.4 % |
ಪ್ರಮುಖ ಟೇಕ್ಅವೇಗಳು
-
ಟಾಟಾ, ಹ್ಯುಂಡೈ ಮತ್ತು ಮಹೀಂದ್ರಾ - ಈ ಮೂರು ಬ್ರಾಂಡ್ ಸೇರಿಸಿ ಒಟ್ಟು ಹೆಚ್ಚು ಮಾರಾಟ ಮಾಡುವ ಮೂಲಕ ಮಾರುತಿ ಇಲ್ಲಿ ಅಗ್ರಸ್ಥಾನದಲ್ಲಿದೆ. ಮಾರುತಿಯು ಮಾಸಿಕ ಮತ್ತು ವಾರ್ಷಿಕ ಮಾರಾಟದಲ್ಲಿ ಕೂಡ ಬೆಳವಣಿಗೆಯನ್ನು ಕಂಡಿದೆ.
-
ಹುಂಡೈನ ವಾರ್ಷಿಕ ಮಾರಾಟವು ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ, ಆದರೆ ಅದರ ಮಾಸಿಕ ಮಾರಾಟವು 2 ಪ್ರತಿಶತದಷ್ಟು ಕಡಿಮೆಯಾಗಿದೆ.
-
ಟಾಟಾದ ಮಾರಾಟವು ಹುಂಡೈನಂತೆಯೇ ಇತ್ತು, ವಾರ್ಷಿಕ ಮಾರಾಟವು ಸುಮಾರು 2 ಪ್ರತಿಶತದಷ್ಟು ಹೆಚ್ಚಾಗಿದೆ ಆದರೆ ಮಾಸಿಕ ಮಾರಾಟವು 2.5 ಶೇಕಡಾ ಕಡಿಮೆಯಾಗಿದೆ.
ಇದನ್ನು ಕೂಡ ಓದಿ: ಟಾಟಾ ಆಲ್ಟ್ರೋಜ್ ರೇಸರ್ ವರ್ಸಸ್ ಟಾಟಾ ಆಲ್ಟ್ರೋಜ್: 5 ಪ್ರಮುಖ ವ್ಯತ್ಯಾಸಗಳ ವಿವರ
-
ಮಹೀಂದ್ರಾದ ಮಾಸಿಕ ಮಾರಾಟವು ಕೇವಲ 5 ಪ್ರತಿಶತದಷ್ಟು ಹೆಚ್ಚಾಗಿದೆ, ಆದರೆ ಅದರ ವಾರ್ಷಿಕ ಮಾರಾಟವು 31.4 ಪ್ರತಿಶತದಷ್ಟು ಮೇಲೇರಿದೆ, ಇದು ಮೇ 2024 ರಲ್ಲಿ ಯಾವುದೇ ಕಾರು ತಯಾರಕರಿಗೆ ಹೋಲಿಸಿದರೆ ಅತ್ಯಧಿಕವಾಗಿದೆ.
-
ಟೊಯೋಟಾ ಕೂಡ ಮೇ 2024 ರಲ್ಲಿ ಉತ್ತಮ ಮಾರಾಟವನ್ನು ಮಾಡಿದೆ, ಮಾಸಿಕ ಮಾರಾಟವು 28 ಪ್ರತಿಶತದಷ್ಟು ಮತ್ತು ವಾರ್ಷಿಕ ಮಾರಾಟವು ಸುಮಾರು 24 ಪ್ರತಿಶತದಷ್ಟು ಹೆಚ್ಚಾಗಿದೆ.
-
ಕಿಯಾ ಮಾಸಿಕ ಮಾರಾಟವು ಕುಸಿದಿದೆ, ಆದರೆ ಮೇ 2023 ಕ್ಕೆ ಹೋಲಿಸಿದರೆ, ಅದರ ವಾರ್ಷಿಕ ಮಾರಾಟವು ಸುಮಾರು 4 ಪ್ರತಿಶತದಷ್ಟು ಹೆಚ್ಚಾಗಿದೆ. ಇದು 10,000 ಯುನಿಟ್‌ಗಳನ್ನು ಮಾರಾಟ ಮಾಡುವ ಪಟ್ಟಿಯಲ್ಲಿನ ಕೊನೆಯ ಬ್ರ್ಯಾಂಡ್ ಆಗಿದೆ.
-
ಹೋಂಡಾ, ಇಲ್ಲಿ ಮಾಸಿಕ ಮತ್ತು ವಾರ್ಷಿಕ ಮಾರಾಟದಲ್ಲಿ ಬೆಳವಣಿಗೆಯನ್ನು ನೋಡಿರುವ ಕೊನೆಯ ಕಂಪನಿಯಾಗಿದೆ. ಇದರ ಮಾಸಿಕ ಮಾರಾಟವು ಸುಮಾರು 11 ಪ್ರತಿಶತದಷ್ಟು ಏರಿದೆ, ಮತ್ತು ವಾರ್ಷಿಕ ಮಾರಾಟವು 3.5 ಪ್ರತಿಶತದಷ್ಟು ಹೆಚ್ಚಾಗಿದೆ.
-
MG ಏಪ್ರಿಲ್‌ಗಿಂತ ಮೇ 2024 ರಲ್ಲಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ, ಆದರೆ ಅದರ ವಾರ್ಷಿಕ ಮಾರಾಟವು ಸುಮಾರು 5 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಒಟ್ಟು ಮಾರಾಟವು 5,000 ಯುನಿಟ್‌ಗಳಿಗಿಂತ ಕಡಿಮೆಯಾಗಿದೆ.
ಇದನ್ನು ಕೂಡ ಓದಿ: MG ಗ್ಲೋಸ್ಟರ್ ಡೆಸರ್ಟ್‌ಸ್ಟಾರ್ಮ್ ವರ್ಷನ್ ನ 7 ಶೋರೂಮ್ ಚಿತ್ರಗಳು
-
ಹಿಂದಿನ ತಿಂಗಳಿಗಿಂತ ಮೇ 2024 ರಲ್ಲಿ ರೆನಾಲ್ಟ್ ಕೇವಲ ಎರಡು ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ, ಅದರ ವಾರ್ಷಿಕ ಮಾರಾಟವು ಸುಮಾರು 20 ಪ್ರತಿಶತದಷ್ಟು ಕುಸಿದಿದೆ.
-
ಅಂತಿಮವಾಗಿ, ಫೋಕ್ಸ್‌ವ್ಯಾಗನ್ ಈ ತಿಂಗಳು 10 ನೇ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಅದರ ಮಾಸಿಕ ಮಾರಾಟವು 7 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ವಾರ್ಷಿಕ ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡಿದೆ.
0 out of 0 found this helpful