MG Gloster Desertstorm ಎಡಿಷನ್‌ನ 7 ಶೋರೂಮ್ ಚಿತ್ರಗಳಲ್ಲಿ ಸಂಪೂರ್ಣ ಚಿತ್ರಣ
ಎಂಜಿ ಗ್ಲೋಸ್ಟರ್ ಗಾಗಿ shreyash ಮೂಲಕ ಜೂನ್ 10, 2024 07:25 pm ರಂದು ಪ್ರಕಟಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
MG ಗ್ಲೋಸ್ಟರ್ ಡೆಸರ್ಟ್‌ಸ್ಟಾರ್ಮ್ ಡೀಪ್ ಗೋಲ್ಡನ್ ಎಕ್ಸ್‌ಟಿರೀಯರ್ ಶೇಡ್ ಅನ್ನು ಪಡೆಯುತ್ತದೆ
MG ಗ್ಲೋಸ್ಟರ್ ಇತ್ತೀಚೆಗೆ ಎರಡು ಹೊಸ ವಿಶೇಷ ಎಡಿಷನ್ ಗಳನ್ನು ಬಿಡುಗಡೆ ಮಾಡಿದೆ- ಡೆಸರ್ಟ್‌ಸ್ಟಾರ್ಮ್ ಮತ್ತು ಸ್ನೋಸ್ಟಾರ್ಮ್ - ಇವು ಆಲ್ ಬ್ಲಾಕ್ ಇಂಟೀರಿಯರ್ ನೊಂದಿಗೆ ಹೊಸ ಸ್ಟೈಲ್ ಫೀಚರ್ ಗಳನ್ನು ಒಳಗೊಂಡಿದೆ. ಗ್ಲೋಸ್ಟರ್‌ನ ಈ ಎರಡೂ ವಿಶೇಷ ಎಡಿಷನ್ ಗಳು ಈಗಾಗಲೇ ಡೀಲರ್‌ಶಿಪ್‌ಗಳನ್ನು ತಲುಪಿವೆ. SUV ಯ ಡೆಸರ್ಟ್‌ಸ್ಟಾರ್ಮ್ ಎಡಿಷನ್ ನ 7 ರಿಯಲ್ ಲೈಫ್ ಚಿತ್ರಗಳು ಇಲ್ಲಿವೆ.
MG ಗ್ಲೋಸ್ಟರ್ ಡೆಸರ್ಟ್‌ಸ್ಟಾರ್ಮ್ ಎಡಿಷನ್ ಸಿಂಗಲ್-ಟೋನ್ ಡೀಪ್ ಗೋಲ್ಡನ್ ಕಲರ್ ನಲ್ಲಿ ಲಭ್ಯವಿದೆ. SUV ಯ ಇತರ ಎರಡು ಸ್ಟಾರ್ಮ್ ಎಡಿಷನ್ ಗಳಾದ ಸ್ನೋಸ್ಟಾರ್ಮ್ ಮತ್ತು ಬ್ಲ್ಯಾಕ್‌ಸ್ಟಾರ್ಮ್ ನಂತೆಯೇ, ಗ್ಲೋಸ್ಟರ್ ಡೆಸರ್ಟ್‌ಸ್ಟಾರ್ಮ್ ಕೂಡ ಹೊಸ ಮೆಶ್ ಜಾಲರಿ ಮಾದರಿಯೊಂದಿಗೆ ಬ್ಲಾಕ್ ಆಗಿರುವ ಗ್ರಿಲ್ ಅನ್ನು ಹೊಂದಿದೆ, ಜೊತೆಗೆ ಮುಂಭಾಗದ ಲಿಪ್ ನಲ್ಲಿ ಮತ್ತು ಫಾಗ್ ಲ್ಯಾಂಪ್ ಹೌಸಿಂಗ್‌ನ ಸುತ್ತಲೂ ಕ್ರೋಮ್ ಫಿನಿಷ್ ಅನ್ನು ಹೊಂದಿದೆ. ಇದು ಹೆಡ್‌ಲೈಟ್‌ಗಳಲ್ಲಿ ರೆಡ್ ಇನ್ಸರ್ಟ್ ಅನ್ನು ಕೂಡ ಪಡೆದಿದೆ.
ಸೈಡ್ ನಲ್ಲಿ, ಗ್ಲೋಸ್ಟರ್ ಡೆಸರ್ಟ್‌ಸ್ಟಾರ್ಮ್ ಬ್ಲಾಕ್ ಆಗಿರುವ ಡೋರ್ ಹ್ಯಾಂಡಲ್ ಗಳು ಮತ್ತು ಕ್ರೋಮ್ ಫಿನಿಷ್ ನೊಂದಿಗೆ ಬ್ಲಾಕ್ ಆಗಿರುವ ORVMಗಳನ್ನು ಹೊಂದಿದೆ. SUV ಯ ಈ ವಿಶೇಷ ಎಡಿಷನ್ ನಲ್ಲಿ ವಿಂಡೋ ಲೈನ್ ಗೆ ಕೂಡ ಬ್ಲ್ಯಾಕ್ ಕಲರ್ ನೀಡಲಾಗಿದೆ, ಇದು ಸ್ಟ್ಯಾಂಡರ್ಡ್ MG ಗ್ಲೋಸ್ಟರ್ ನಲ್ಲಿ ಇಲ್ಲ. ಗ್ಲೋಸ್ಟರ್ ಡೆಸರ್ಟ್‌ಸ್ಟಾರ್ಮ್ ಗೆ ಸ್ಪೋರ್ಟಿ ಲುಕ್ ಅನ್ನು ನೀಡಲು, 19-ಇಂಚಿನ ಬ್ಲಾಕ್ ಅಲೊಯ್ ವೀಲ್ಸ್ ಮತ್ತು ರೆಡ್ ಬ್ರೇಕ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ.
ಗ್ಲೋಸ್ಟರ್ ಡೆಸರ್ಟ್‌ಸ್ಟಾರ್ಮ್ ಎಡಿಷನ್ ಹಿಂಭಾಗದಿಂದ ಅದರ ರೆಗ್ಯುಲರ್ ವೇರಿಯಂಟ್ ಅನ್ನು ಹೋಲುತ್ತದೆ, ಆದರೆ ಇಲ್ಲಿ ಬ್ಯಾಡ್ಜ್‌ಗಳನ್ನು ಬ್ಲಾಕ್ ಮಾಡಲಾಗಿದೆ.
ಗ್ಲೋಸ್ಟರ್ ಡೆಸರ್ಟ್‌ಸ್ಟಾರ್ಮ್ ಎಡಿಷನ್, ಸ್ನೋಸ್ಟಾರ್ಮ್ ಎಡಿಷನ್ ನಲ್ಲಿ ಇರುವ ಹಾಗೆ ಸೆಂಟರ್ ಕನ್ಸೋಲ್‌ನಲ್ಲಿ, AC ವೆಂಟ್‌ಗಳ ಸುತ್ತಲೂ ಮತ್ತು ಸ್ಟೀರಿಂಗ್ ವೀಲ್‌ನಲ್ಲಿ ಸಿಲ್ವರ್ ಇನ್ಸರ್ಟ್ ಬ್ರಷ್ ಮಾಡಿರುವ ಆಲ್ ಬ್ಲಾಕ್ ಇಂಟೀರಿಯರ್ ಅನ್ನು ಹೊಂದಿದೆ.
SUV ಯ ಈ ವಿಶೇಷ ಎಡಿಷನ್ ಕಾಂಟ್ರಾಸ್ಟ್ ವೈಟ್ ಸ್ಟಿಚಿಂಗ್‌ನೊಂದಿಗೆ ಬ್ಲಾಕ್ ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿಯನ್ನು ಪಡೆಯುತ್ತದೆ. MG ತನ್ನ SUV ಯ ಡೆಸರ್ಟ್‌ಸ್ಟಾರ್ಮ್ ಎಡಿಷನ್ ಅನ್ನು 6 ಮತ್ತು 7-ಸೀಟರ್ ಕಾನ್ಫಿಗರೇಶನ್‌ಗಳಲ್ಲಿ ನೀಡುತ್ತಿದೆ.
ಗ್ಲೋಸ್ಟರ್‌ನ ಡೆಸರ್ಟ್‌ಸ್ಟಾರ್ಮ್ ಎಡಿಷನ್ ಟಾಪ್-ಸ್ಪೆಕ್ ಸ್ಯಾವಿ ವೇರಿಯಂಟ್ ಅನ್ನು ಆಧರಿಸಿರುವುದರಿಂದ, ಇದು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 12-ಸ್ಪೀಕರ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಮೂರು-ಜೋನ್ ಕ್ಲೈಮೇಟ್ ಕಂಟ್ರೋಲ್, ಮೆಮೊರಿ, ಮಸಾಜ್, ಹೀಟಿಂಗ್ ಮತ್ತು ವೆಂಟಿಲೇಷನ್ ಫಂಕ್ಷನ್ ನೊಂದಿಗೆ 12-ವೇ ಪವರ್ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟು ಮತ್ತು 8-ವೇ ಪವರ್ ಮಾಡುವ ಕೋ-ಡ್ರೈವರ್ ಸೀಟ್ ನಂತಹ ಸೌಕರ್ಯಗಳನ್ನು ಹೊಂದಿದೆ.
ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಮತ್ತು ಲೆವೆಲ್ 2 ADAS (ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್) ಫೀಚರ್ ಗಳಾದ ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್ ಗಳನ್ನು ಒಳಗೊಂಡಿದೆ.
ಎಂಜಿನ್ ಮತ್ತು ಟ್ರಾನ್ಸ್‌ಮಿಷನ್
MG ಗ್ಲೋಸ್ಟರ್ ಡೆಸರ್ಟ್‌ಸ್ಟಾರ್ಮ್ ಆಲ್-ವೀಲ್-ಡ್ರೈವ್ (AWD) ಮತ್ತು ರಿಯರ್-ವೀಲ್-ಡ್ರೈವ್ (RWD) ಈ ಎರಡೂ ವೇರಿಯಂಟ್ ಗಳಲ್ಲಿ ಬರುತ್ತದೆ. AWD ವರ್ಷನ್ 215 PS ಮತ್ತು 478 Nm ಉತ್ಪಾದಿಸುವ 2-ಲೀಟರ್ ಟ್ವಿನ್-ಟರ್ಬೋ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ, ಮತ್ತು ಇದನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗೆ ಜೋಡಿಸಲಾಗಿದೆ, ಹಾಗೆಯೇ RWD ವರ್ಷನ್ ಗೆ 2-ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದೆ, ಇದು 161 PS ಮತ್ತು 373 Nm ಅನ್ನು ಉತ್ಪಾದಿಸುತ್ತದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
MG ಗ್ಲೋಸ್ಟರ್ ಡೆಸರ್ಟ್‌ಸ್ಟಾರ್ಮ್ ಬೆಲೆಯು ರೂ. 41.05 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಶುರುವಾಗುತ್ತದೆ. ಇದು ಟೊಯೋಟಾ ಫಾರ್ಚುನರ್, ಜೀಪ್ ಮೆರಿಡಿಯನ್ ಮತ್ತು ಸ್ಕೋಡಾ ಕೊಡಿಯಾಕ್ ನಂತಹ SUV ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಇನ್ನಷ್ಟು ಓದಿ: MG ಗ್ಲೋಸ್ಟರ್ ಡೀಸೆಲ್